ದ. ಭಾರತದಲ್ಲಿ ತಮ್ಮದೇ ಆದ ವಜ್ರಾಭರಣಗಳ ಮಳಿಗೆಗಳಿಂದ ವಿಖ್ಯಾತಗೊಂಡಿರು ಖೇರಾ ಸ್ವರ್ಣಾಭರಣಗಳ ಸಂಸ್ಥೆ 1900ರಿಂದ ಹೆಸರು ಗಳಿಸಿದೆ. ಖೇರಾ ಜ್ಯೂವೆಲರಿ ಬ್ರಾಂಡ್‌ ಇತ್ತೀಚೆಗೆ ಪ್ಲಾಟಿನಂ ಆಭರಣಗಳಲ್ಲಿ ಜಿಂಕ್‌ಗೋ ಲೀಫ್‌ ಮತ್ತು ಬುದ್ಧ ಪಾಡ್‌ ವಿನ್ಯಾಸವನ್ನು ಪ್ರಸ್ತುತಪಡಿಸಿ ಎಲ್ಲೆಲ್ಲೂ ಮನ್ನಣೆ ಗಳಿಸಿದೆ. ಇಂಥ ಡಿಸೈನರ್‌ ಪ್ಲಾಟಿನಂ ಜ್ಯೂವೆಲರಿ ಅತಿ ವಿರಳ ಅನನ್ಯ ಅದ್ಭುತ ಎಂದೇ ಹೇಳಬೇಕು! ತನ್ನ ಅಪರೂಪದ ವಜ್ರಾಭರಣಗಳ ಕರಕೌಶಲಕ್ಕೆ, ವಿಶಿಷ್ಟ ವಿನ್ಯಾಸಕ್ಕೆ ಹೆಸರುವಾಸಿಯಾದ ಖೇರಾ ಇಂಥ ಹೊಸತೊಂದು ಅಮೋಘ ಪ್ರಸ್ತುತಿಗೆ ಮುಂದಾಗಿದೆ.

ಇಂಥ ಒಂದು ಅಭೂತಪೂರ್ವ ಸಂಗ್ರಹವನ್ನು ಚೆನ್ನೈ ನಗರದ ಉನ್ನತ ವರ್ಗದ ಅತಿಥಿಗಳ ನಡುವೆ, ಅಣ್ಣಾಸಾಲೈನ ತಮ್ಮ ವಿಶಿಷ್ಟ ಮಳಿಗೆಯಲ್ಲಿ, ಖೇರಾ ಕ್ರಿಯೇಟಿವ್‌ ಸೆಂಟರ್‌ನ ಮ್ಯಾನೇಜಿಂಗ್‌ ಪಾರ್ಟ್‌ನರ್‌ ಜಿತೇಂದ್ರ ಹಾಗೂ ಮ್ಯಾನೇಜಿಂಗ್‌ ಡೈರೆಕ್ಟರ್‌ ವೈಶಾಲಿ ಬ್ಯಾನರ್ಜಿ ಉದ್ಘಾಟಿಸಿದರು.

ಈ ಕುರಿತಾಗಿ ಮಾತನಾಡುತ್ತಾ ಜಿತೇಂದ್ರ ಅವರು, ಬುದ್ಧ ಪಾಡ್‌  ಜಿಂಕ್‌ಗೋ ಲೀಫ್‌ ಸಂಗ್ರಹ ಪ್ರಸ್ತುತಪಡಿಸಲು ನಮಗೆ ಬಹಳ ಹೆಮ್ಮೆ ಎನಿಸುತ್ತಿದೆ. ಇವು ಪ್ರಕೃತಿಯಿಂದ ಪ್ರೇರಣೆಗೊಂಡ ಉತ್ಕೃಷ್ಟ ಪ್ಲಾಟಿನಂ ರೇಂಜಿನ ಆಭರಣಗಳಾಗಿವೆ. ಇದರ ಸರಳತೆ, ಲೈಟ್‌ ವೆಯ್ಟ್, ಕಾಂಟೆಂಪರರಿ ಸ್ಟೈಲ್ ಒಟ್ಟಾರೆ ಡೇಲಿ ವೇರ್‌ ಮತ್ತು ಆಫೀಸ್‌ಗೂ ಒಪ್ಪುವಂಥದು. ನಮ್ಮ ಗ್ರಾಹಕರು ಇಂಥ ಉತ್ಕೃಷ್ಟ ಪ್ರತ್ಯೇಕ ಸಮಕಾಲೀನ ಸಂಗ್ರಹ ಪಡೆಯಬೇಕೆಂಬುದೇ ನಮ್ಮ ಧ್ಯೇಯ. ಇದು ಮುಖ್ಯವಾಗಿ ನಮ್ಮ ಸಂಗ್ರಹದ ಪ್ಲಾಟಿನಂ ಜ್ಯೂವೆಲರಿಯಲ್ಲಿ ಅವಿಸ್ಮರಣೀಯ ಹಸ್ತಕೌಶಲವುಳ್ಳದ್ದಾಗಿದೆ ಎಂದು ಹೇಳಬಯಸುತ್ತೇನೆ, ಎಂದು ತಿಳಿಸಿದರು.

ಅದೇ ತರಹ ವೈಶಾಲಿಯವರು, ಖೇರಾ ತನ್ನ ಜ್ಯೂವೆಲರಿಯ ಏಸ್ಥೆಟಿಕ್‌  ಎಕ್ಸ್ ಪರ್ಟ್‌ ಕ್ರಾಫ್ಟ್ ಮ್ಯಾನ್‌ಶಿಪ್‌ಗೆ ಅನಾದಿ ಕಾಲದಿಂದಲೂ ಹೆಸರು ಗಳಿಸಿದೆ. ಈಗಷ್ಟೇ ನಾವು ಪ್ಲಾಟಿನಂ ಸಂಗ್ರಹದಲ್ಲೂ ಅಂಥದೇ ಉತ್ಕೃಷ್ಟತೆ ಸಾಧಿಸಿದ್ದೇವೆ ಎಂದು ತಿಳಿಸಲು ಹರ್ಷಿಸುತ್ತೇವೆ. ಇಂಥ ವಿಶಿಷ್ಟ, ಅನುಪಮ ವಿನ್ಯಾಸವನ್ನು ಧರಿಸಿಯೇ ಮಹಿಳೆಯರು ಅದರ ಗುಣಮಟ್ಟ ಅಳೆಯಬಹುದು, ಎಂದು ಅಭಿಪ್ರಾಯಪಟ್ಟರು.

ಕಳೆದ ಆಗಸ್ಟ್ ದಿ ಲ್ಯಾಕ್ಮೆ ಇಂಡಿಯಾ ಫ್ಯಾಷನ್‌ ಪ್ರತಿಷ್ಠಿತ ಪ್ಲಾಟ್‌ಫಾರ್ಮ್ ನಲ್ಲಿ ಅತ್ಯುನ್ನತ ಮಟ್ಟದಲ್ಲಿ ದಿ ಜಿಂಕ್‌ಗೋ ಲೀಫ್‌ ಕಲೆಕ್ಷನ್‌ ಲಾಂಚ್‌ಗೊಂಡಿತು. ಮೂಲತಃ ಇದು ಸೌಂದರ್ಯ ಮತ್ತು ಸ್ಥಿತಿಸ್ಥಾಪಕತ್ವಕ್ಕೆ ಹೆಸರಾದ ಜಿಂಕ್‌ಗೋ ಟ್ರೀಯಿಂದ ಪ್ರೇರಿತಗೊಂಡು ರೂಪಿಸಲಾಗಿದೆ. ಹೆಣ್ಣಿನ ಆಂತರಿಕ ಶಕ್ತಿ ಹಾಗೂ ಧೈರ್ಯಕ್ಕೆ ಇದು ದ್ಯೋತಕ. ಸುದೀರ್ಘ ಬಾಳಿಕೆ, ಜೀವಂತಿಕೆ, ಸಹಿಷ್ಣುತೆಗಳಿಗೆ ಸಾಕಾರವಾದ ಈ ಲೈಟ್‌ವೆಯ್ಟ್ ಪ್ಲಾಟಿನಂ ಜ್ಯೂವೆಲರಿಯು ಸಮಸ್ತ ಸ್ತ್ರೀ ಕುಲಕ್ಕೆ ಸಮರ್ಪಿತ.

ದಿ ಬುದ್ಧ ಪಾಡ್‌ ಕಲೆಕ್ಷನ್‌ನ ವಜ್ರಾಭರಣಗಳು, ಉತ್ಕೃಷ್ಟ ವಜ್ರಗಳಿಂದ ಉನ್ನತ ಪ್ಲಾಟಿನಂನಲ್ಲಿ ಅತಿ ಕುಶಲತೆಯಿಂದ ಹುದುಗಿಸಲ್ಪಟ್ಟಿದೆ. ಅನುಪಮ ಹೃದಯದಾಕಾರದ ಸ್ಪ್ಲಿಟ್‌ ಓಪನ್‌ ಆಗುವ ಬುದ್ಧ ಪಾಡ್‌ ಸೀಡ್‌ನ ನೇರ ಪ್ರೇರಣೆಯಿಂದ ರೂಪುಗೊಂಡಿದೆ. ಮಮತಾಮಯಿ ಮಾತೃಹೃದಯದ ಅಗಣಿತ ವಾತ್ಸಲ್ಯದ ಸಂಕೇತವೇ ಈ ಬುದ್ಧ ಪಾಡ್‌ ಕಲೆಕ್ಷನ್‌.

ಸದಾ ಬ್ಯೂಟಿ, ಎಲಿಗೆನ್ಸ್ ನಿಂದ ಖ್ಯಾತವಾದ ಖೇರಾ ಇಲ್ಲಿ ಅನುಪಮ ಕ್ರಿಯೇಟಿವ್‌ ಪೀಸ್‌ಗಳನ್ನು ಪ್ರಸ್ತುತಪಡಿಸಿದೆ. ಅವುಗಳಲ್ಲಿ ನೆಕ್‌ಪೀಸ್‌, ಕಿವಿಯೋಲೆ, ರಿಂಗ್‌, ಬ್ರೇಸ್ಲೆಟ್‌ ಇತ್ಯಾದಿ ಆಧುನಿಕ ಭಾರತೀಯ ಮಹಿಳೆಯ ಸೌಂದರ್ಯ ಎತ್ತಿತೋರಲು ಅಮೋಘವಾಗಿ ರೂಪುಗೊಂಡಿವೆ. ಬಂಗಾರಕ್ಕಿಂತಲೂ 30 ಪಟ್ಟು ಶ್ರೇಷ್ಠವಾದ, ಅಪರೂಪದ ಈ ಪ್ಲಾಟಿನಂ ಕಲೆಕ್ಷನ್‌, ಸ್ವರ್ಣಾಭರಣಗಳಲ್ಲಿ ಅತಿ ಮಮತೆ ಹೊಂದಿರುವವರಿಗೆ ಉತ್ಕೃಷ್ಟ ಗುಣಮಟ್ಟ ಒದಗಿಸುತ್ತದೆ.

ಖೇರಾರವರ ಇನ್ನಿತರ ಅಪ್ರತಿಮ ಸಂಗ್ರಹಗಳೆಂದರೆ ನವರತ್ನ, ಡೇಲಿಯಾ, ಕಿರಿಗಾಮಿ, ಪರ್ಷಿಯಾನಾ, ಟ್ಯೂಲಿಪ್ಸ್. ಇವುಗಳ ಹಿಂದಿನ ಅಪ್ರತಿಮ ವಿನ್ಯಾಸಗಳು ವಿಶಿಷ್ಟ ಕರಕುಶತೆಯ ಪರಿಪಕ್ವತೆಗೆ ಸಂಕೇತವಾಗಿ, ಪ್ರಕೃತಿ ಮತ್ತು ಕಲೆ ಖೇರಾರ ಕ್ರಿಯೇಟಿವ್ ಸೆಂಟರ್‌ನಲ್ಲಿ ಮೇಳೈಸಿದೆ ಎಂದು ಹೇಳಬಹುದು.

ಇನ್ನೇಕೆ ತಡ? ಇಂದೇ ಖೇರಾ ಮಳಿಗೆಗೆ ಭೇಟಿ ನೀಡಿ ಪ್ಲಾಟಿನಂ ಆಭರಣ ಖರೀದಿಸಿ.

ಹೆಚ್ಚಿನ  ವಿವರಗಳಿಗಾಗಿ ಸಂಪರ್ಕಿಸಿ : ಖೇರಾ, ಪಟ್ಟಾಭಿರಾಮನಗರ, 33ನೇ ಕ್ರಾಸ್‌, 4ನೇ ಬ್ಲಾಕ್‌, ಜಯನಗರ, ಬೆಂಗಳೂರು560 011. ಫೋನ್‌ : 080-46445000

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ