ಇಂದಿನ ತಂತ್ರಜ್ಞಾನದ ಯುಗದಲ್ಲಿ ಎಲ್ಲ ಸ್ಮಾರ್ಟ್‌ ಆಗುತ್ತಾ ಹೊರಟಿದೆ. ಈಗ ಬಹಳಷ್ಟು ಜನರ ಬಳಿ ಸ್ಮಾರ್ಟ್‌ ವಾಚಸ್‌, ಸ್ಮಾರ್ಟ್‌ ಬ್ರೇಸ್‌ಲೆಟ್ಸ್ ನಂತಹ ಡಿವೈಸ್‌ಗಳಿರಬಹುದು. ಈಗ ಹೊಸ ಹೊಸ ಡಿವೈಸ್‌ಗಳು ಮಾರುಕಟ್ಟೆಗೆ ಬರುತ್ತಲಿವೆ. ಅವುಗಳ ಮುಖಾಂತರ ಈ ಸಲದ ದೀಪಾವಳಿಗೆ ನಿಮ್ಮ ಮನೆ ಕೂಡ ಸ್ಮಾರ್ಟ್‌ ಹೋಮ್ ಆಗಬಹುದು. ಅಂತಹ ಡಿವೈಸ್‌ಗಳ ಮೇಲೊಮ್ಮೆ ದೃಷ್ಟಿಹರಿಸಿ :

ರೊಬೋಟ್‌ ಕ್ಲೀನರ್‌

ನೀವು ನಿಮ್ಮ ಮನೆಯನ್ನು ಸದಾ ಸ್ವಚ್ಛವಾಗಿಡಲು ಬಯಸುವಿರಿ. ಯಾವುದೊ ಒಂದು ದಿನ ಮನೆಗೆಲಸದವಳು ಬರದೇ ಇದ್ದಾಗ ನಿಮಗೆ ಬಹಳ ತೊಂದರೆ ಆಗುತ್ತದೆ. ಕೆಲಸದವಳು ಮನೆಯಿಂದ ಹೊರಟುಹೋದ ನಂತರ ಮಕ್ಕಳು ಏನಾದರೂ ಗಲೀಜು ಮಾಡಿದರೆ ಅಥವಾ ಯಾರಾದರೂ ಅತಿಥಿಗಳು ಬರುವವರಿದ್ದರೆ, ವ್ಯಸ್ತತೆಯಿಂದಾಗಿ ನೀವು ಮನೆಯನ್ನು ಸ್ವಚ್ಛಗೊಳಿಸದೆ ಇದ್ದರೆ, ನೀವು ಬಹಳ ಮುಜುಗರ ಅನುಭವಿಸಬೇಕಾಗುತ್ತದೆ. ಇಂತಹ ಸ್ಥಿತಿಯಲ್ಲಿ ರೊಬೋಟ್‌ ಕ್ಲೀನರ್‌ ನಿಮ್ಮ ನೆರವಿಗೆ ಬರಬಹುದು. ಅದು ಡನ್‌, ಮಾರ್ಬಲ್ ಎಲ್ಲ ಬಗೆಯ ನೆಲವನ್ನು ಸ್ವಚ್ಛಗೊಳಿಸುತ್ತದೆ. ಅದು ನಿಮ್ಮ ಮನೆಯ ಉದ್ದ ಅಗಲವನ್ನು ನೆನಪಿಟ್ಟುಕೊಂಡು ತನ್ನ ಕೆಲಸ ಮಾಡುತ್ತದೆ. ಅದಕ್ಕಾಗಿ ನಾವು ಅದರಲ್ಲಿ ಪ್ರೀಸೆಟ್‌ ಮಾಡಿಡಬೇಕಾಗುತ್ತದೆ. ಅದರ ದಾರಿಯಲ್ಲಿ ಏನಾದರೂ ಅಡೆತಡೆ ಉಂಟಾದರೆ ಅದು ತನ್ನ ದಾರಿ ಬದಲಿಸುತ್ತದೆ. ಅದರ ಒಳಭಾಗದಲ್ಲಿ ರೀಚಾರ್ಜೆಬಲ್ ಬ್ಯಾಟರಿ ಅಳವಡಿಸಲಾಗಿರುತ್ತದೆ.

ಸ್ಮಾರ್ಟ್‌ ಅಲಾರ್ಮ್

ನಿಮ್ಮ ಗಂಡ ಅಥವಾ ಮಕ್ಕಳು ಬೆಳಗ್ಗೆ ಹಾಸಿಗೆ ಬಿಟ್ಟು ಎದ್ದೇಳದಿದ್ದರೆ, ಗಡಿಯಾರ ಅಥವಾ ಮೊಬೈಲ್‌ ಫೋನ್‌ನ ಅಲಾರ್ಮ್ ಬಂದ್‌ ಮಾಡಿದ್ದರೆ ನೀವು ಅವರನ್ನು ಎಬ್ಬಿಸಲು ಇಂತಹ ಸ್ಥಿತಿಯಲ್ಲಿ ಸ್ಮಾರ್ಟ್‌ ಅಲಾರ್ಮ್ ನಿಮ್ಮ ನೆರವಿಗೆ ಬರುತ್ತದೆ. ಈ ಸ್ಮಾರ್ಟ್‌ ಅಲಾರ್ಮ್ ನಲ್ಲಿ ಗಡಿಯಾರದ ಜೊತೆಗೆ ಇರುವ ಮತ್ತೊಂದು ವಿಶೇಷತೆ ಏನೆಂದರೆ, ನೀವು ಇದನ್ನು ಆಫ್‌ ಮಾಡಲು ಬಯಸಿದರೂ ಆಫ್‌ ಆಗುವುದಿಲ್ಲ. ಇದು ಅಲಾರ್ಮ್ ಸದ್ದು ಹೊಡೆಯುತ್ತ ಕತ್ತಲೆಯ ಒಂದು ಮೂಲೆಯಲ್ಲಿ ಹೋಗಿ ಕುಳಿತುಬಿಡುತ್ತದೆ. ನೀವು ಹಾಸಿಗೆಯಿಂದ ಎದ್ದೇಳುವ ತನಕ ಅದು ಬಂದ್‌ ಆಗುವುದೇ ಇಲ್ಲ. ಇದು ಅತ್ತಿತ್ತ ಓಡುವುದರಿಂದ, ಅಡಗಿಸಿಕೊಳ್ಳುವ ಅಭ್ಯಾಸದಿಂದ ಒಡೆದು ಹೋಗುವ ಸಾಧ್ಯತೆಯೂ ಇರುತ್ತದೆ.

ಸ್ಮಾರ್ಟ್‌ ಗಾರ್ಡನ್‌ ಲೈಟ್ಸ್

ನೀವು ನಿಮ್ಮ ಲಾನ್‌ನ ಗಾರ್ಡನ್‌ ಅಥವಾ ಛಾವಣಿಯ ಮುಕ್ತ ಜಾಗದಲ್ಲಿ ಯಾವುದೇ ವೈರಿಂಗ್‌ ಸ್ವಿಚ್‌ ಅಥವಾ ಬ್ಯಾಟರಿಯ ಬೆಳಕು ಇಚ್ಛಿಸುವಿರಾದರೆ, ಇದು ಅತ್ಯಂತ ಉಪಯುಕ್ತ ಎನಿಸುತ್ತದೆ.

ಗಾರ್ಡನ್‌ ಲೈಟ್‌ ಅನೇಕ ಪ್ರಕಾರದಲ್ಲಿ ದೊರೆಯುತ್ತವೆ. ಇದನ್ನು ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ಮಣ್ಣಿನಲ್ಲಿ ಅಥವಾ ಕುಂಡದಲ್ಲಿ ಹುದುಗಿಸಿ ಇಡಬಹುದು. ಇದನ್ನು ನಿಮಗೆ ಬೇಕೆಂದಾಗ ಹೊರಗೆ ತೆಗೆದುಕೊಂಡು ಹೋಗಬಹುದು. ಇದು ಪುಟ್ಟ ಆಕಾರದ್ದಾಗಿದ್ದು, ಕೈಯಲ್ಲಿ ಸುಲಭವಾಗಿ ಹಿಡಿದುಕೊಳ್ಳುವಂಥದ್ದಾಗಿದೆ. ಸನ್‌ಲೈಟ್‌ನಿಂದ ನಡೆಯುವ ಇದು ಕತ್ತಲೆಯಾಗುತ್ತಿದ್ದಂತೆ ತಂತಾನೇ ಉರಿಯುತ್ತದೆ, ಬೆಳಕಾಗುತ್ತಿದ್ದಂತೆ ಆಫ್‌ ಆಗುತ್ತದೆ. ಇದನ್ನು ನಿಮ್ಮ ಮನೆಯ ಡ್ರೈವ್ ವೇಯ ಅಂಚಿಗೆ ಅಥವಾ ಗೇಟ್‌ನಿಂದ ಮನೆಯ ಹೆಬ್ಬಾಗಿಲಿನ ರಸ್ತೆಯಲ್ಲಿ ಅಳವಡಿಸಬಹುದು. ಏಕೆಂದರೆ ಕತ್ತಲೆಯಲ್ಲಿ ಹೋಗಲು ನಿಮಗೇನೂ ಸಮಸ್ಯೆ ಆಗಬಾರದು.

– ಶಕುಂತಲಾ ರಾವ್

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ