ತರಕಾರಿ ಹೆಚ್ಚುವ ಸರಿಯಾದ ಕ್ರಮ

ನೀವು ಅಡುಗೆಯಲ್ಲಿ ಹೊಸ ಹೊಸ ವ್ಯಂಜನಗಳನ್ನು ಟ್ರೈ ಮಾಡುತ್ತಿದ್ದರೆ, ತರಕಾರಿ ಹೆಚ್ಚುವ ಕ್ರಮವನ್ನೂ ತಿಳಿದುಕೊಳ್ಳಿ. ಅದರಲ್ಲೂ ಈರುಳ್ಳಿ, ಟೊಮೇಟೊ, ಅವಕಾಡೋ ಇತ್ಯಾದಿ. ಪ್ರೊಫೆಶ್‌ನಲಿ ಇವನ್ನು ಹೆಚ್ಚುವುದರಿಂದ ತರಕಾರಿಯೂ ಚಂದ, ಸೇಫ್ಟಿಯೂ ಆಯ್ತು, ಸಮಯ ಉಳಿಯಿತು.

ಕಾಸ್ಟ್ ಐರನ್‌ ಕುಕ್‌ವೇರ್‌ ಬಳಸಿರಿ

ಶೆಫ್‌ ಸದಾ ಈ ಕುರಿತಾಗಿ ಸಲಹೆ ನೀಡುತ್ತಾರೆ. ನಾನ್‌ಸ್ಟಿಕ್‌ಗೆ ಹೋಲಿಸಿದಾಗ ಇವುಗಳ ಮೇಂಟೆನೆನ್ಸ್ ತುಸು ಕಷ್ಟವೇನೋ ನಿಜ, ಆದರೆ ಇವುಗಳಲ್ಲಿ ಹೀಟ್‌ ಕಂಟ್ರೋಲಿಂಗ್‌ ಪವರ್‌ ಹಾಗೂ ಬಾಳಿಕೆ ಹೆಚ್ಚು. ಇವು ಮಲ್ಟಿ ಯುಟಿಲಿಟಿ ಕುಕ್‌ವೇರ್‌ ಆಗಿವೆ. ನೀವು ಇದರಿಂದ ಓವನ್ನಿನಲ್ಲಿ ಏನಾದರೂ ಬೇಕ್‌ ಮಾಡಬಹುದು, ಸ್ಟವ್ ಮೇಲೆ ಇರಿಸಿ ನೇರ ಫ್ರೈ ಮಾಡಬಹುದು. ಇವನ್ನು ಸರಿಯಾಗಿ ಮೇಂಟೇನ್‌ ಮಾಡಿದರೆ ಅನೇಕ ವರ್ಷಗಳ ಬಾಳಿಕೆ ನೀಡುತ್ತವೆ.

ತರಕಾರಿ ಸದಾ ತಾಜಾ ಕಾಣಲಿ

ಬಾಡಿಸಿದ, ಬೆಂದ ನಂತರ ತರಕಾರಿ ತಮ್ಮ ಒರಿಜಿನಲ್ ತಾಜಾತನ ಉಳಿಸಿಕೊಳ್ಳಲು ಅವನ್ನು ಉಪ್ಪು ಹಾಕಿದ ಬಿಸಿ ನೀರಲ್ಲಿ ಬ್ಲ್ಯಾಂಚ್‌ ಮಾಡಿ. ಇವನ್ನು ತುಂಬಾ ಬೆಂದು ಹೋಗದಂತೆ, ತುಸು ಕ್ರಂಚಿ ಇರಿಸಿ. ಹೊರತೆಗೆದ ಮೇಲೆ ಐಸ್‌ ನೀರಿಗೆ ಹಾಕಿ ಪ್ಲಂಜ್ ಮಾಡಿ. ನಂತರ ಸೋಸಿ ಬೇರ್ಪಡಿಸಿ.

ಉಪ್ಪನ್ನು ಗುರುತಿಸಿ

ಮಾಮೂಲಿ ಪುಡಿ ಉಪ್ಪು ಹೊರತಾಗಿಯೂ ಉಪ್ಪು ಹಲವು ಬಗೆಯ ಆಕಾರ ಮತ್ತು ರುಚಿ ಹೊಂದಿರುತ್ತದೆ. ನೀವು ನಿಮ್ಮ ಡಿಶ್‌ನ್ನು ಬೇರೆ ಬೇರೆ ರೀತಿಯಲ್ಲಿ ಗಾರ್ನಿಶ್‌ ಮಾಡಿ ಸರ್ವ್ ‌ಮಾಡಬಯಸಿದರೆ, ಆಗ ನೀವು ವಿಭಿನ್ನ ಬಗೆಯ ಉಪ್ಪು ಬಳಸಬೇಕಾಗುತ್ತದೆ. ಇದರ ಕುರಿತು ಮಾಹಿತಿ ಪಡೆದುಕೊಳ್ಳಿ. ಕಿಚನ್‌ ಗೇಮ್ ಕುಕಿಂಗ್‌ ಸ್ಟೈಲ್‌ನ್ನು ಬದಲಾಯಿಸಲು ಮತ್ತು ಉತ್ತಮಗೊಳಿಸಲು ಉಪ್ಪು ಪ್ರಧಾನ ಪಾತ್ರ ವಹಿಸುತ್ತದೆ.

ಬೀಜದ ಮಸಾಲೆಗಳನ್ನು ಟೋಸ್ಟ್ ಮಾಡಿ

ಜೀರಿಗೆ, ಸೋಂಪು, ಧನಿಯಾ, ಮೆಣಸು ಇತ್ಯಾದಿಗಳ ರುಚಿ ಹೆಚ್ಚಿಸಲು, ಅವನ್ನು ಮೊದಲೇ ಟೋಸ್ಟರ್‌ಗೆ ಹಾಕಿ ಟೋಸ್ಟ್ ಮಾಡಿ ಅಥವಾ ಬಾಣಲೆಯಲ್ಲಿ ಹುರಿದಿಡಿ.

ಇನ್ನಿತರ ಎಣ್ಣೆಗಳು

ಎಕ್ಸ್ ಟ್ರಾ ವರ್ಜಿನ್‌ ಆಯಿಲ್ ಎಲ್ಲಕ್ಕೂ ಹೆಚ್ಚು ಪ್ರಸಿದ್ಧಿಗಳಿಸಿದೆ, ಹೆಚ್ಚು ಬಳಕೆಯಲ್ಲೂ ಇದೆ ಎಂಬುದು ನಿಜವಾದರೂ ಇದರರ್ಥ ಬೇರೆ ಎಣ್ಣೆಗಳಲ್ಲಿ ಅಂಥ ವಿಶೇಷ ಏನೂ ಇಲ್ಲ ಎಂದು ಕಡೆಗಣಿಸುವಂತಿಲ್ಲ. ವೀಟ್‌ ಜರ್ಮ್, ಫ್ಲಾಕ್ಸ್ ಸೀಡ್‌, ಅಖರೋಟ್‌ನಂಥ ಇನ್ನಿತರ ಸ್ವಾದಿಷ್ಟ. ಆರೋಗ್ಯವರ್ಧಕ ಎಣ್ಣೆಗಳನ್ನೂ ನಾವು ಹೆಚ್ಚು ಬಳಸಬೇಕು. ಇದರಲ್ಲಿ ವಿಟಮಿನ್‌ `ಇ', ಒಮೇಗಾ-3, ಫ್ಯಾಟಿ ಆ್ಯಸಿಡ್‌ನ ಸಾಕಷ್ಟು ಅಂಶಗಳಿರುತ್ತವೆ. ಇವನ್ನು ಎಳ್ಳಿನ ತರಹ ಸಲಾಡ್‌ ಮೇಲೆ ನೇರ ಉದುರಿಸಬಹುದು ಅಥವಾ ಚಟ್ನಿ, ಮಸಾಲೆಗೆ ಸೇರಿಸಿ ರುಬ್ಬಿಕೊಳ್ಳಬಹುದು.

ಕಟಿಂಗ್‌ ಬೋರ್ಡ್‌ ದೊಡ್ಡದಿರಲಿ

ನಿಮ್ಮ ಅಡುಗೆಮನೆಯಲ್ಲಿ ಒಂದು ಉತ್ತಮ ಚಾಪಿಂಗ್‌ ಬೋರ್ಡ್‌, ತರಕಾರಿ ಹೆಚ್ಚುವ ಮಣೆ ಇರಲೇಬೇಕು. ಕೈಯಲ್ಲೇ ಹಿಡಿದುಕೊಳ್ಳಬಹುದಾದಂಥ ಕಟಿಂಗ್‌ ಬೋರ್ಡ್‌ ಇದ್ದರೆ, ಈಗ ಅದನ್ನು ತ್ಯಜಿಸಿರಿ. ಚಾಪಿಂಗ್‌ ಬೋರ್ಡ್‌ ಸಾಕಷ್ಟು ದೊಡ್ಡದಿರಬೇಕು. 2-3 ಅಡಿಯ ಬೋರ್ಡ್‌ ಖರೀದಿಸಿ. ನಾನ್‌ವೆಜ್‌ ಬಳಸುವಿರಾದರೆ ಅದಕ್ಕಾಗಿ ಬೇರೆ ಬೋರ್ಡ್‌ಇರಿಸಿಕೊಳ್ಳಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ