ಒಬ್ಬ ಪ್ರಸಿದ್ಧ ಫ್ರೆಂಚ್‌ ಲೇಖಕರು, ನೀವೆಷ್ಟೇ ಬಿಝಿ ಆಗಿರಲಿ, ದಿನದ 24 ಗಂಟೆಗೆಳಲ್ಲಿ ಕನಿಷ್ಠ ಒಂದು ಗಂಟೆ ಕಾಲವನ್ನಾದರೂ ನಿಮಗಾಗಿ ಮೀಸಲಿರಿಸಿಕೊಳ್ಳಲು ಸಾಧ್ಯವಿಲ್ಲ ಎಂದರೆ ಇದೆಂಥ ಯಾಂತ್ರಿಕ ಜೀವನ? ಎಂದಿದ್ದಾರೆ. ಶುಷ್ಕ ಕೈಗಳು, ನಾಜೂಕಲ್ಲದ ಉಗುರು, ಕಳೆಗುಂದಿದ ಮುಖ, ಬಿಂದಿ, ಕಾಡಿಗೆ, ಮೇಕಪ್‌ ಎಳ್ಳಷ್ಟೂ ಇರದ ಕಾಂತಿಹೀನ ಮುಖ ಯಾರಿಗೆ ಇಷ್ಟವಾದೀತು?

ಹೆಂಗಸರು ದಿನವಿಡೀ ಏನಾದರೊಂದು ಕೆಲಸದಲ್ಲಿ ತಲ್ಲೀನರಾಗಿರುತ್ತಾರೆ. ತಮಗಾಗಿ 1-2 ಗಂಟೆ ಕಾಲ ಮೀಸಲಾಗಿ ಇರಿಸಿಕೊಳ್ಳುವುದು ಅಸಾಧ್ಯದ ಮಾತೇನಲ್ಲ. ಇದರಲ್ಲಿ ಲೈಟ್‌ ಮ್ಯೂಸಿಕ್‌, ಭಾವಗೀತೆ, ಚಿತ್ರಗೀತೆಗಳಂಥ ಸ್ವರ ಲಹರಿ ಇದ್ದರೆ ಒಳ್ಳೆಯದು. ತುಸು ಆರಾಮ ಪಡೆಯುವುದು, ರಿಲ್ಯಾಕ್ಸ್ಡ್ ಆಗಿ ಪುಸ್ತಕ ಓದುವುದು, ಮೆನಿಕ್ಯೂರ್‌, ಪೆಡಿಕ್ಯೂರ್‌, ಬಾಡಿ ಮಸಾಜ್‌, ಫೋನ್‌ನಲ್ಲಿ ಮಾತುಕಥೆ..... ಏನೋ ಒಂದು ಮನರಂಜನೆ ಇದ್ದರೆ ಒಳಿತು. ಏನೇ ಆಗಲಿ ಈ 1-2 ಗಂಟೆಗಳ ಕಾಲ, ಅದು ಕೇವಲ ನಿಮಗಾಗಿ ಮೀಸಲಿರಬೇಕು.

ಒಂದು ವಿಷಯಕ್ಕೆ ರೇಖಾಳಿಗೆ ಬಹಳ ಆಶ್ಚರ್ಯವಾಗಿತ್ತು. ತಾನು ಇಮೇಲ್ ‌ಅಕೌಂಟ್‌ ತೆರೆದು 1-2 ತಾಸು ಕೂಡ ಆಗಿಲ್ಲ. ಆಗಲೇ ವಿದೇಶದಲ್ಲಿ ನೆಲೆಸಿದ್ದ ತನ್ನ ಓರಗಿತ್ತಿ ಅತಿ ಮುಖ್ಯವಾದ ವಿಷಯಗಳನ್ನು ಇಮೇಲ್ ‌ಮೂಲಕ ಕಳುಹಿಸಿದ್ದಳು. ಅಲ್ಲಿ ಮನೆಗೆ ಕೆಲಸದವಳೂ ಇರಲಿಲ್ಲ, ಆಕೆ ಹೊರಗಿನ ಆಫೀಸ್‌ ಕೆಲಸಕ್ಕೂ ಹೊರಡಬೇಕಿತ್ತು. ಹಾಗಿರುವಾಗ ತನ್ನ ಮೆಸೇಜ್‌ಗೆ ಇಷ್ಟು ಬೇಗ ಜವಾಬು ಸಿಕ್ಕಿದ್ದು ಹೇಗೆ? ಆಕೆಯನ್ನು ಫೋನ್‌ನಲ್ಲಿ ಸಂಪರ್ಕಿಸಿದಾಗ ಆಫೀಸ್‌ಗೆ ಹೊರಡುವ ಅರ್ಧ ಗಂಟೆ ಮುಂಚೆ ಇಮೇಲ್‌, ಫೇಸ್‌ಬುಕ್‌, ವಾಟ್ಸ್ಆ್ಯಪ್‌ ಗಮನಿಸುತ್ತೇನೆ. ಅದು ನನ್ನ ಫ್ರೆಂಡ್‌ ಸರ್ಕಲ್‌ಗೆ ಹಾಯ್‌ ಹಲೋ ಹೇಳಲು ಸೂಕ್ತ ಅವಕಾಶ ಕಲ್ಪಿಸುತ್ತದೆ, ಅದರಿಂದ ತಾಜಾ ಆಗಿ ಆಫೀಸ್‌ಗೆ ಹೋಗಲು ಅನುಕೂಲ ಎಂದಳು.

ಅದೇ ರೀತಿ ಒಮ್ಮೆ ಭಾನುವಾರ ಮಂಗಳೂರಿನ ಸುನಂದಾ, ಬೀಚ್‌ ಕಾಣುವಂತಿದ್ದ ತನ್ನ ಹೊಸ ಮನೆಯ ಬಾಲ್ಕನಿಯಲ್ಲಿ ಕುಳಿತು, ರಿಲ್ಯಾಕ್ಸ್ ಆಗಿ ಭಾನುವಾರದ ಬೆಳಗಿನ ಚಹಾಗಾಗಿ ಕಾಯುತ್ತಿದ್ದಳು. ಸಮುದ್ರ ತೀರದಿಂದ ಬೀಸಿ ಬಂದ ತಂಗಾಳಿ ಆಹ್ಲಾದಕರ ವಾತಾವರಣ ಸೃಷ್ಟಿಸಿತ್ತು. ಆಗ ಕೆಲಸದ ಕಮಲಾ ನೀಟಾಗಿ ಅಲಂಕರಿಸಿದ್ದ ಟೀ ಸೆಟ್‌ ಇದ್ದ ಟ್ರಾಲಿ ತಳ್ಳಿಕೊಂಡು ಬಾಲ್ಕನಿಗೆ ಬಂದಳು. ಟ್ರಾಲಿಯಲ್ಲಿ ಟೀ ಸೆಟ್‌ ಜೊತೆ ಕನ್ನಡಿ, ಕಾಟನ್‌ ಬಡ್ಸ್, ನೇಲ್ ಕಟರ್‌, ನೇಲ್ ‌ಪಾಲಿಶ್‌ ಇತ್ಯಾದಿ ಇರಿಸಿಕೊಂಡು ಬಂದಿದ್ದಳು.

ಆಗ ಸುನಂದಾ ನಗುತ್ತಾ ಕೇಳಿದಳು, ``ಬೆಳಗ್ಗೆಯೇ ಟೀ ಜೊತೆ ಬ್ಯೂಟಿ ಟ್ರೀಟ್‌ಮೆಂಟ್‌ ಪ್ರೋಗ್ರಾಂ ಇದೆಯೇನು?''

ಕಮಲಾ ನಗುತ್ತಾ ಹೇಳಿದಳು, ``ಹೌದು ಮೇಡಂ, ಇದರಲ್ಲಿ ತಪ್ಪೇನು? ಬೆಳಗ್ಗೆ ಟೀ ಕುಡಿದು ರಿಲ್ಯಾಕ್ಸ್ ಆಗಿ 10 ನಿಮಿಷ ನಿಮ್ಮ ಅಗತ್ಯಗಳನ್ನು ವಿಚಾರಿಸಿಕೊಳ್ಳಬಾರದೇಕೆ? ಎದುರಿನ ಫ್ಲಾಟ್‌ನ ಉಷಾ ಮೇಡಂ ದಿನ 15-20 ನಿಮಿಷ ಹೀಗೇ ಮಾಡುತ್ತಾರೆ.

``ಆ ಸಮಯದಲ್ಲಿ ಎಷ್ಟೋ ಸಲ ಮೊಟ್ಟೆ ಜೇನು ಬೆರೆತ ಪ್ಯಾಕ್‌ನ್ನು ಮುಖಕ್ಕೆ ಹಚ್ಚುತ್ತಾರೆ. ಫೇಶಿಯಲ್ ಜೊತೆ ಟೀ ಕುಡಿದ ಹಾಗೂ ಆಯ್ತು. ನಂತರ ತಣ್ಣೀರಲ್ಲಿ ಮುಖ ತೊಳೆದು ಈ ಬೀಚ್‌ ಹತ್ತಿರ 10 ನಿಮಿಷ ವಾಕ್‌ ಮಾಡಿ ಬಂದರೆ ಫ್ರೆಶ್ ಆಗಿಬಿಡ್ತಾರೆ.''

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ