ದಿನವಿಡಿಯ ದಣಿವಿನ ಬಳಿಕ ಚೆನ್ನಾಗಿ ಅಲಂಕರಿಸಿದ ತಟ್ಟೆ ಒಬ್ಬರ ಹಸಿವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಅದೇ ಅಸ್ತವ್ಯಸ್ತವಾಗಿರುವ ತಟ್ಟೆ ಹಸಿವನ್ನು ಹಿಂಗಿಸುತ್ತದೆ. ಇದೇ ಕಾರಣದಿಂದ ಜನರು ಹೋಟೆಲ್ ‌ಮತ್ತು ರೆಸ್ಟೋರೆಂಟ್‌ಗಳಿಗೆ ಹೋಗುತ್ತಾರೆ. ಅವರು ಅಲಂಕಾರಿಕವಾಗಿ ಸರ್ವ್ ‌ಮಾಡಿದ ಪ್ಲೇಟ್‌ ಎಂಥವರನ್ನೂ ಆಕರ್ಷಿಸುತ್ತದೆ. ಮಕ್ಕಳಿಂದ ಹಿಡಿದು ವಯಸ್ಸಾದವರೆಲ್ಲರಿಗೂ ಇಂತಹ ಅಲಂಕಾರಿಕ ತಟ್ಟೆ ಇಷ್ಟವಾಗುತ್ತದೆ.

ಸೂಕ್ತ ಪ್ರೆಸೆಂಟೇಶನ್ಅಗತ್ಯ

ಸೆಲೆಬ್ರಿಟಿ ಶೆಫ್‌ ಶೈಲೇಂದ್ರ ಈ ಕುರಿತು ಹೀಗೆ ಹೇಳುತ್ತಾರೆ, ``ಮಹಿಳೆಯರು ಅಡುಗೆಯನ್ನೇನೋ ಮಾಡುತ್ತಾರೆ. ಆದರೆ ಅವರು ಅದನ್ನು ಸೂಕ್ತ ರೀತಿಯಲ್ಲಿ ಪ್ರೆಸೆಂಟ್‌ ಮಾಡುವುದಿಲ್ಲ. ಮಾರುಕಟ್ಟೆಯಲ್ಲಿ ಈಗ ಹಲವು ಬಗೆಯ ಸಾಮಗ್ರಿಗಳು ಲಭಿಸುತ್ತವೆ. ಆದರೆ ಮಹಿಳೆಯರಿಗೆ ಅದರ ಬಳಕೆ ಬಗ್ಗೆ ಎಳ್ಳಷ್ಟೂ ಕಲ್ಪನೆ ಇಲ್ಲ. ಹಾಗಾಗಿ ಕೆಲವು ಬಗೆಯ ಸ್ಪರ್ಧೆಗಳು ಮಹಿಳೆಯರಿಗೆ ಬಹಳಷ್ಟು ಸಂಗತಿಗಳನ್ನು ತಿಳಿದುಕೊಳ್ಳುವಂತೆ ಮಾಡುತ್ತವೆ. ಟಿ.ವಿ ಹಾಗೂ ಪತ್ರಿಕೆಗಳಿಂದಲೂ ಸಾಕಷ್ಟು ಮಾಹಿತಿ ಲಭಿಸುತ್ತದೆ.''

ಆಹಾರ ರುಚಿಯಾಗಿರುವ ಜೊತೆಗೆ ಅದರ ಸರಿಯಾದ ಪ್ರೆಸೆಂಟೇಶನ್‌ ಕೂಡ ಮುಖ್ಯ. ಆಗಲೇ ಒಬ್ಬರ ಗಮನ ಊಟ ತಿಂಡಿಯ ಕಡೆ ಹರಿಯುತ್ತದೆ. ಹೋಟೆಲ್‌ಗಳ ಹಾಗೆ ಮನೆಯಲ್ಲೂ ಆಹಾರದ ತಟ್ಟೆಯ ಅಲಂಕಾರದ ಬಗ್ಗೆ ಗಮನಹರಿಸಬೇಕು. ಸರಿಯಾದ ಪ್ಲೇಟಿಂಗ್‌ಗಾಗಿ ಇಲ್ಲಿವೆ ಕೆಲವು ಉಪಯುಕ್ತ ಟಿಪ್ಸ್ :

ಸರಿಯಾದ ಪ್ಲೇಟ್‌ನ ಆಯ್ಕೆ ಎಲ್ಲಕ್ಕೂ ಮುಖ್ಯ. ವ್ಯಂಜನಗಳಿಗೆ ತಕ್ಕಂತೆ ಪ್ಲೇಟ್‌ನ ಆಯ್ಕೆ ಮಾಡಿ. ಅದು ಅತಿ ದೊಡ್ಡದೂ ಆಗಿರಬಾರದು, ಅಷ್ಟೇ ಚಿಕ್ಕದೂ ಅನಿಸಬಾರದು.

ತಟ್ಟೆಯಲ್ಲಿ ಬಡಿಸುವಾಗ ಎಲ್ಲ ಆಹಾರಗಳನ್ನು ಒಗ್ಗೂಡಿಸಿ ಹಾಕಬೇಡಿ. ಪ್ಲೇಟ್‌ನಲ್ಲಿ ಬೇರೆ ಬೇರೆ ಕಡೆ ಹಾಕಿ. ಇದರಿಂದ ಆಹಾರ ಪದಾರ್ಥಗಳು ಆಕರ್ಷಕವಾಗಿ ಕಂಡುಬರುತ್ತವೆ.

ಆಹಾರದಲ್ಲಿ ಬಣ್ಣಗಳು ಬಗೆಬಗೆಯಾಗಿ ಇರುವುದು ಅವಶ್ಯ. ಬೇರೆ ಬೇರೆ ಬಣ್ಣದ ತರಕಾರಿಗಳನ್ನು ಅಲಂಕರಿಸುವುದರಿಂದ ಆಹಾರ ಪದಾರ್ಥಗಳು ಆಕರ್ಷಕವಾಗಿ ಕಂಡುಬರುತ್ತವೆ.

ನೀವು ಪ್ಲೇಟ್‌ನಲ್ಲಿ ಯಾವುದೇ ಅಲಂಕಾರ ಮಾಡಿದರೂ ಅದು ಕಂಡುಬರಬೇಕಾದುದು ಅತ್ಯವಶ್ಯ. ಇಂಡಿಯನ್‌ ಕರೀ ಎಲ್ಲ ಒಂದೇ ರೀತಿಯಲ್ಲಿ ಕಂಡುಬರುತ್ತವೆ. ಅವನ್ನು ಬೇರೆ ಬೇರೆ ರೀತಿಯಲ್ಲಿ ಅಲಂಕರಿಸಲು ಪ್ರಯತ್ನ ಮಾಡಿ. ಉದಾಹರಣೆಗೆ ಬೆಣ್ಣೆ ಅಥವಾ ತುಪ್ಪದ ಮೇಲೆ ಕೊತ್ತಂಬರಿ ಸೊಪ್ಪು, ಪುದೀನಾ ಎಲೆಗಳಿಂದ ಗಾರ್ನಿಶಿಂಗ್‌ ಮಾಡಿ.  ಡಿಶ್‌ ಎಷ್ಟು ವರ್ಣರಂಜಿತವಾಗಿರುತ್ತದೊ ಅದು ತಿನ್ನಲು ಅಷ್ಟೇ ಆಕರ್ಷಕ ಎನಿಸುತ್ತದೆ.

ಸಲಾಡ್‌ಗಾಗಿ ಪ್ಲೇಟ್‌ನ್ನು ಅಲಂಕರಿಸಲು ಬಗೆಬಗೆಯ ವರ್ಣದ ತರಕಾರಿಗಳನ್ನು ಬಳಸಿ.

ಕರೀ ತೆರನಾದ ಪಲ್ಯಗಳನ್ನು ಸುಂದರ ಹಾಗೂ ಕ್ರಿಯೇಟಿವ್ ರೀತಿಯಲ್ಲಿ ಅಲಂಕರಿಸಿ.

ಗಾರ್ನಿಶಿಂಗ್‌ಗಾಗಿ ನಮ್ಮಲ್ಲಿ ಹಲವು ಬಗೆಯ ಗ್ರೀನ್‌ ಹರ್ಬ್‌ ಅಂದರೆ ಕೊತ್ತಂಬರಿ ಸೊಪ್ಪು, ಪುದೀನಾ ಸೊಪ್ಪು, ಬ್ರೋಕ್ಲಿ, ಪಾರ್ಸ್ಲೆ, ಬೇಸಿಲ್ ‌ಮುಂತಾದವು ದೊರೆಯುತ್ತವೆ. ಆದರೆ ನಾವು ಅವನ್ನು ಕತ್ತರಿಸಿ ನೇರವಾಗಿ ತರಕಾರಿಗಳಲ್ಲಿ ಹಾಕುತ್ತೇವೆ. ಅವನ್ನು ವಿಭಿನ್ನ ರೀತಿಯಲ್ಲಿ ಮೇಲ್ಭಾಗದಲ್ಲಿ ಅಲಂಕರಿಸಿ.

ಇಂದಿನ ಯುವ ಪೀಳಿಗೆ ಆಹಾರ ತಯಾರಿಸುವ ಪ್ರಕ್ರಿಯೆಯಿಂದ ದೂರ ಓಡುತ್ತಿದ್ದಾರೆ. ಹೀಗಾಗಿ ಸಾಕಷ್ಟು ತಪ್ಪುಗಳನ್ನು ಮಾಡುತ್ತಾರೆ. ಅವರಿಗೆ ಒಂದಿಷ್ಟು ಮಾರ್ಗದರ್ಶನದ ಅಗತ್ಯವಿದೆ. ಅವರು ಸಾಮಾನ್ಯವಾಗಿ ಈ ತಪ್ಪುಗಳನ್ನು ಮಾಡುತ್ತಾರೆ :

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ