ಇನ್‌ಕಮ್ ಟ್ಯಾಕ್ಸ್ ಅಥವಾ ಆದಾಯ ತೆರಿಗೆ ಹೆಸರು ಕೇಳುತ್ತಿದ್ದಂತೆಯೇ ಬಹಳಷ್ಟು ಜನ ತೆರಿಗೆ ಉಳಿಸುವುದು ಹೇಗೆ ಎಂಬ ಬಗ್ಗೆ ಹೊಸ ಹೊಸ ವಿಧಾನಗಳನ್ನು ಯೋಚಿಸುತ್ತಾರೆ. ಕೆಲವು ಜನರಂತೂ ತಮ್ಮ ಅರ್ಧಕ್ಕೂ ಹೆಚ್ಚಿನ ಸಮಯವನ್ನು ತೆರಿಗೆ ಉಳಿತಾಯದ ಉಪಾಯ ಕಂಡುಕೊಳ್ಳುವುದರಲ್ಲೇ ಕಳೆಯುತ್ತಾರೆ.

ಒಂದು ಉಪಯುಕ್ತ ಯೋಜನೆ

ಅಂದಹಾಗೆ ಮ್ಯೂಚುವಲ್ ‌ಫಂಡ್‌ನಲ್ಲಿ ಇಎಲ್ಎಸ್‌ಎಸ್‌ ಒಂದು ಪ್ರಭಾವಿ ಯೋಜನೆಯಾಗಿದ್ದು, ಅದರಲ್ಲಿ ಹೂಡಿಕೆ ಮಾಡುವುದರಿಂದ ಉತ್ತಮ ರಿಟರ್ನ್ಸ್ ದೊರೆಯುತ್ತದಲ್ಲದೆ, ನೀವು ಅದರಿಂದ ತೆರಿಗೆಯಲ್ಲಿ ರಿಯಾಯಿತಿ ಕೂಡ ಪಡೆಯಬಹುದು. ಇಎಲ್ಎಸ್‌ಎಸ್‌ ಒಂದು ಡೈವರ್ಸಿಫೈಡ್‌ ಈಕ್ವಿಟಿ ಫಂಡ್‌ ಆಗಿದೆ. ಇದರಲ್ಲಿ  ಒಂದು ನಿರ್ದಿಷ್ಟ ಮೊತ್ತವನ್ನು ಬೇರೆ ಬೇರೆ ಉದ್ಯಮ ಮತ್ತು ಕಂಪನಿಗಳಲ್ಲಿ ಹೂಡಿಕೆ ಮಾಡಲಾಗುತ್ತದೆ. ಇದರಿಂದ ಹೂಡಿಕೆಯಲ್ಲಿ ವೈವಿಧ್ಯತೆ ಇರುತ್ತದೆ. ಇದರಿಂದ 1961ರ ಆದಾಯ ತೆರಿಗೆ ಕಾಯ್ದೆ ಅನುಚ್ಛೇದ 80 `ಸಿ'ಯ ಪ್ರಕಾರ ಒಂದು ಹಣಕಾಸು ವರ್ಷದಲ್ಲಿ ನಿಮ್ಮ ಒಟ್ಟು ಆದಾಯದಲ್ಲಿ ಇಎಲ್ಎಸ್‌ಎಸ್‌ಹೂಡಿಕೆಯ 1.50 ಲಕ್ಷ ರೂ. ತನಕ ರಿಯಾಯಿತಿ ರೂಪದಲ್ಲಿ ಕ್ಲೇಮ್ ಮಾಡಬಹುದು.

ತೆರಿಗೆ ರಿಯಾಯಿತಿಗಾಗಿ ಇರುವ ಇತರೆ ಉಪಾಯಗಳೆಂದರೆ ಬ್ಯಾಂಕ್‌ ಡೆಪಾಸಿಟ್‌, ಪಿಪಿಎಫ್‌ ಅಂಚೆ ಉಳಿತಾಯ ಖಾತೆ. ಇವುಗಳಲ್ಲಿ ಇಎಲ್ಎಸ್‌ಎಸ್‌ ಮುಖಾಂತರ ಅತ್ಯಂತ ಕಡಿಮೆ ಸಮಯಕ್ಕಾಗಿ ಹೂಡಿಕೆ ಮಾಡಬಹುದು.ಇದರನ್ವಯ ಖರೀದಿಸಲಾದ ಯೂನಿಟ್‌ಗಳನ್ನು 3 ವರ್ಷದ ತನಕ ಬೇರೆಯವರಿಗೆ ಹಸ್ತಾಂತರಿಸುವುದಾಗಲಿ, ಅಡ ಇಡುವುದಾಗಲಿ ಅಥವಾ ವಾಪಸ್‌ ಕೊಟ್ಟು ಹಣ ಪಡೆಯಲು ಆಗುವುದಿಲ್ಲ.

ಉತ್ತಮ ರಿಟರ್ನ್ಸ್ ನ ಒಳ್ಳೆಯ ಮಾಧ್ಯಮ ಯಾ ಫಂಡ್‌ನಲ್ಲಿ ಹೂಡಿಕೆ ಮಾಡಬೇಕೆಂದು ನೀವು ಯೋಚಿಸುತ್ತಿರಬಹುದು. ವಿತ್ತ ಮಾರುಕಟ್ಟೆಯಲ್ಲಿ ಹಲವು ಬಗೆಯ ಮ್ಯೂಚುವಲ್ ‌ಫಂಡ್‌ಗಳಿವೆ. ಅವು ತೆರಿಗೆ ರಿಯಾಯಿತಿಗೆ ಅನುಕೂಲ ಕಲ್ಪಿಸುತ್ತವೆ ಇವುಗಳಲ್ಲಿ ಕೆಲವು ಮ್ಯೂಚುವಲ್ ‌ಫಂಡ್‌ ತೆರಿಗೆ ಉಳಿತಾಯದ ಅತ್ಯುತ್ತಮ ಪರ್ಯಾಯಗಳಾಗಿವೆ.

ಮ್ಯೂಚುವಲ್ ‌ಫಂಡ್‌ನಿಂದ ದೊರೆತ ಮೊತ್ತ ತೆರಿಗೆ ರಹಿತ ಮೊತ್ತವಾಗಿರುತ್ತದೆ. ಅಂದರೆ ಅವಧಿ ಮುಗಿದ ಬಳಿಕ ನಿಮಗೆ ಒಟ್ಟು ಎಷ್ಟು ಮೊತ್ತ ಲಭಿಸುತ್ತದೊ, ಅದರ ಮೇಲೆ ನೀವು ಯಾವುದೇ ತೆರಿಗೆ ಕೊಡಬೇಕಾಗಿಲ್ಲ. ಇದರಲ್ಲಿ ಹೂಡಿಕೆದಾರ ಅರ್ಜಿಯಲ್ಲಿ ಡಾಕ್ಯುಮೆಂಟ್‌ನ ಜೊತೆಗೆ ಚೆಕ್‌ನ್ನು ಮ್ಯೂಚುವಲ್ ಫಂಡ್‌ ಆಫೀಸ್‌ ಅಥವಾ ರಿಜಿಸ್ಟ್ರಾರ್‌ ಆಫೀಸ್‌ಗೆ ಕೊಡಬೇಕಾಗುತ್ತದೆ.

ಕನಿಷ್ಠ ಹೂಡಿಕೆಯಿಂದ ಆರಂಭ

ದೊಡ್ಡ ಮೊತ್ತವನ್ನಷ್ಟೇ ಹೂಡಿಕೆ ಮಾಡಿ ತೆರಿಗೆ ರಿಯಾಯಿತಿ ಪಡೆದುಕೊಳ್ಳಬೇಕೆಂದೇನಿಲ್ಲ. ಇದರಲ್ಲಿ ನಿಮ್ಮ ಅನುಕೂಲಕ್ಕೆ ತಕ್ಕಂತೆ ಎಷ್ಟೇ ಮೊತ್ತವನ್ನಾದರೂ ಹೂಡಿಕೆ ಮಾಡಬಹುದು. ಕನಿಷ್ಠ ಹೂಡಿಕೆ ಮೊತ್ತ 500 ರೂ. ಆಗಿದೆ. ಗರಿಷ್ಠ ಮಿತಿ ಇಲ್ಲ. ಅಂದರೆ ನೀವು ಎಷ್ಟು ಮೊತ್ತವನ್ನಾದರೂ ಹೂಡಿಕೆ ಮಾಡಬಹುದು.

ಇದರಲ್ಲಿ ಎಸ್‌ಐಪಿ ಅಂದರೆ ಸಿಸ್ಟಮ್ಯಾಟಿಕ್‌ ಇನ್‌ವೆಸ್ಟ್ ಮೆಂಟ್‌ ಪ್ಲಾನ್‌ ಮುಖಾಂತರ ಮತ್ತು ಒಂದೇ ಸಲಕ್ಕೂ ಹೂಡಿಕೆ ಮಾಡಬಹುದು. ಎಸ್‌ಐಪಿಯಲ್ಲಿ ಸ್ವಲ್ಪ ಸ್ವಲ್ಪ ಮೊತ್ತವನ್ನು ಕಂತುಗಳಲ್ಲಿ ಜಮೆ ಮಾಡಬಹುದು ಮತ್ತು ಜಮೆಯಾದ ಹಣವನ್ನು  ಒಂದೇ ಕಂತಿನಲ್ಲಿ ಪಡೆಯಬಹುದು.

ಇದು ಹೊಸದಾಗಿ ನೌಕರಿ ಸೇರಿದ ಪ್ರತಿಯೊಬ್ಬರಿಗೂ ಉಪಯುಕ್ತ ಹೂಡಿಕೆ ಯೋಜನೆಯಾಗಿದೆ. ಇದರಿಂದ ಅವರಿಗೆ ಉಳಿತಾಯ ಮಾಡುವ ಮನೋಭಾವ ಬರುತ್ತದೆ. 60ಕ್ಕೂ ಮೇಲ್ಪಟ್ಟ ವಯಸ್ಸಿನವರಿಗೆ ಈ ಯೋಜನೆ ಉಪಯುಕ್ತ ಅಲ್ಲ ಎಂದು ಕೆಲವರು ಯೋಚಿಸುತ್ತಾರೆ. ಆದರೆ ಅದು ಹಾಗಲ್ಲ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ