ಕಡಿಮೆ ಖರ್ಚಿನಲ್ಲಿ `ಮದುವೆ' ಎಂಬ ಮಾತು ಕೇಳಿದಾಗ ವಿಚಿತ್ರವೆನಿಸುತ್ತದೆ. ಆದರೆ ಅಂತಹದೊಂದು ಪದ್ಧತಿ ಈಗ ಪ್ರಾರಂಭವಾಗಿದೆ. ಏಕೆಂದರೆ ಇದರಿಂದ ಸಮಯ ಮತ್ತು ಹಣ ಎರಡೂ ಉಳಿತಾಯವಾಗುತ್ತದೆ. ಮದುವೆಯ ಖರ್ಚು ಕಡಿಮೆ ಮಾಡಬೇಕಾದರೆ ಕಡಿಮೆ ಜನರನ್ನು ಆಮಂತ್ರಿಸಿ, ಆಡಂಬರ ರಹಿತವಾಗಿ ಕಾರ್ಯ ನೆರವೇರಿಸಬೇಕಾಗುತ್ತದೆ. ಆದರೆ ಅದು ಹಾಗಲ್ಲ.

ಕಡಿಮೆ ಖರ್ಚಿನ ಮದುವೆಗೆ ನೀವು ಎಲ್ಲವನ್ನೂ ನಿರಾಕರಿಸಬೇಕೆಂದಿಲ್ಲ. ಬದಲಾಗಿ ಅನಗತ್ಯವಾದುದನ್ನು ಮತ್ತು ಕೇವಲ ಪ್ರದರ್ಶನಕ್ಕಾಗಿ ಮಾಡುವಂಥದ್ದನ್ನು ಬಿಟ್ಟು ಮುಖ್ಯವಾದುದಕ್ಕೆ ಗಮನ ನೀಡಬೇಕು. ಹೀಗೆ ಬುದ್ಧಿವಂತಿಕೆಯಿಂದ ಮತ್ತು ಸರಿಯಾದ ಪ್ಲಾನಿಂಗ್‌ನಿಂದ ನೀವು ಮದುವೆಯನ್ನು ಸ್ಮರಣೀಯವಾಗಿಸಬಹುದು.

ವೆಡ್ಡಿಂಗ್‌ ಪ್ಲಾನರ್‌ ಅಶೋಕ್‌ ಶರ್ಮ ಈ ಬಗ್ಗೆ ಹೀಗೆ ಹೇಳುತ್ತಾರೆ, ``ವಿವಾಹ ಸಮಾರಂಭ ಎಲ್ಲರಿಗೂ ಸ್ಮರಣೀಯವಾಗಿರಲೆಂದು ನಾನು ಸದಾ ಪ್ರಯತ್ನಿಸುತ್ತೇನೆ. ಮದುವೆಯ ಖರ್ಚು ವೆಚ್ಚಗಳು ಆಯಾ ವ್ಯಕ್ತಿಯ ಬಜೆಟ್‌ಗೆ ತಕ್ಕಂತೆ ಇರಬೇಕು. ಅದು ಯಾರಿಗೂ ಹೊರೆಯಾಗದಂತೆ ಮಾಡುವುದೇ ನನಗೆ ಚಾಲೆಂಜ್‌. ಅದಕ್ಕಾಗಿ ಈ ಕೆಲವು ವಿಷಯಗಳ ಬಗ್ಗೆ ಗಮನವಿರಿಸಬೇಕು.''

ಅರೇಂಜ್‌ಮೆಂಟ್‌ : ವಿವಾಹ ಸಮಾರಂಭದಲ್ಲಿ ಶಾಸ್ತ್ರವಿಧಿಗಳು ವಧೂವರರ ಕುಟುಂಬಗಳ ಸಂಪ್ರದಾಯಕ್ಕೆ ಅನುಸಾರವಾಗಿ ನಡೆಯುತ್ತವೆ. ಖರ್ಚಿನ ಬಗ್ಗೆ ಅಲ್ಲಿ ಎರಡು ಮಾತಿಲ್ಲ. ನಾವು ಗಮನಿಸಬೇಕಾದ ವಿಷಯಗಳೆಂದರೆ ಇತರೆ ಅರೇಂಜ್‌ಮೆಂಟ್ಸ್ ಬಗ್ಗೆ. ದುಬಾರಿಯಾದ ವೆಡ್ಡಿಂಗ್‌ ಹಾಲ್ಸ್, ದೊಡ್ಡ ದೊಡ್ಡ ಕಲಾಕೃತಿಗಳು, ನೀರಿನ ಬುಗ್ಗೆಗಳು, ಮೂರಾಳೆತ್ತರದ ಕರ್ಟನ್‌ಗಳು ಮುಂತಾದವಕ್ಕೆ ತಗುಲುವ ಅನಗತ್ಯ ವೆಚ್ಚಗಳನ್ನು ಕಡಿತ ಮಾಡಬಹುದು. ವಿವಾಹ ಮಂಟಪ ಯಾವಾಗಲೂ ಪ್ರವೇಶ ದ್ವಾರದ ಎದುರಾಗಿ ಗೋಡೆ ಒತ್ತಟ್ಟಿನಲ್ಲಿ ಇರುವ ಪದ್ಧತಿ ಇತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಅದು ಹಾಲ್‌ನ ಮಧ್ಯಭಾಗಕ್ಕೆ ಸ್ಥಳಾಂತರವಾಗುತ್ತಾ ಬಂದಿದೆ. ಮುಹೂರ್ತ ಮತ್ತು ರಿಸೆಪ್ಶನ್‌ಗಾಗಿ ಅತಿಯಾದ ಆಡಂಬರ ಪ್ರದರ್ಶನ ಬೇಕಿಲ್ಲ.

ಸರಳ ಮತ್ತು ಸುಂದರವಾದ ವಿವಾಹ ಮಂಟಪ ಮನಸ್ಸನ್ನು ಮುದಗೊಳಿಸುತ್ತದೆ. ಸ್ಟೇಜ್‌ ಪ್ರೆಸೆಂಟೇಶನ್‌ ಸರಿಯಾಗಿದ್ದರೆ ಅದು ಅತಿಥಿಗಳನ್ನು ಆಕರ್ಷಿಸುತ್ತದೆ. ಆಹ್ವಾನಿತರ ಆಸನಗಳಿಗೆ ಕೆಂಪು ಮತ್ತು ಬಿಳಿ ಬಣ್ಣದ ಕಾಂಬಿನೇಶನ್‌ ಇರುವ ಸೀಟ್‌ ಕವರ್ಸ್ ಅಥವಾ ಇನ್ನಾವುದೇ ಕಲರ್‌ ಕಾಂಬಿನೇಶನ್‌ನಿಂದ ಮದುವೆ ಮನೆಗೆ ಒಳ್ಳೆಯ ಗೆಟಪ್‌ ದೊರೆಯುತ್ತದೆ.

ಒಂದು ಡಿಸೈನ್‌ ದೊಡ್ಡದಾಗಿರಲಿ : ಮದುವೆ ಮನೆಯಲ್ಲಿ ಬಗೆ ಬಗೆಯ ಅಲಂಕಾರ ಮಾಡುವ ಬದಲು, ಕಡಿಮೆ ಖರ್ಚಿನಲ್ಲಿ ಸುಂದರವಾಗಿಸುವುದಕ್ಕಾಗಿ ಯಾವುದಾದರೂ ಒಂದು ಡಿಸೈನ್‌ ಅಥವಾ ಥೀಮನ್ನು ಆರಿಸಿ ಅದನ್ನು ದೊಡ್ಡದಾಗಿ ಮತ್ತು ವರ್ಣರಂಜಿತವಾಗಿ ತೋರಿಸುವುದು ಸೂಕ್ತ. ಅದು ವಿವಾಹಕ್ಕೆ ಸಂಬಂಧಿಸಿದ ಡಿಸೈನ್‌ ಆಗಿದ್ದು, ಕಲರ್ಸ್ ಮತ್ತು ಲೈಟ್ಸ್ನಿಂದ ಶೋಭಿಸುವಂತಿರಲಿ.

ಫ್ಲವರ್‌ ಪವರ್‌ : ಮದುವೆ ಮನೆಯಲ್ಲಿ ಫ್ಲವರ್‌ ಡೆಕೊರೇಶನ್‌ಗೆ ಬಹಳ ಪ್ರಾಮುಖ್ಯತೆ ಇರುತ್ತದೆ. ಹಾಗೆಂದು ಅದಕ್ಕಾಗಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡುವುದು ಸಲ್ಲದು ಹೂಗಳೊಂದಿಗೆ ನೀವು ವಿಭಿನ್ನ ಎಕ್ಸ್ ಪೆರಿಮೆಂಟ್ಸ್ ಮಾಡಬಹುದು ಎಂದು ಅಶೋಕ್‌ಹೇಳುತ್ತಾರೆ. ವಿವಾಹ ಮಂಟಪದ ಅಲಂಕಾರಕ್ಕೆ, ರಿಸೆಪ್ಶನ್‌ ಸ್ಟೇಜ್‌ ಸೆಟ್ಟಿಂಗ್‌ಗೆ, ವೆಡ್ಡಿಂಗ್‌ ಹಾಲ್‌ನ ಒಳಭಾಗ ಮತ್ತು ಹೊರಭಾಗಗಳ ಡೆಕೋರೇಶನ್‌ಗೆ ಮುಂತಾದ ಎಲ್ಲ ಸ್ಥಳಗಳಲ್ಲಿ ಹೂಗಳ ವಿವಿಧ ಬಗೆ ಜೋಡಣೆಯನ್ನು ಪ್ರಯತ್ನಿಸಬಹುದು. ಕೆಲವು ಕಡೆ ಕೃತಕ ಹೂಗಳನ್ನೂ ಬಳಸಬಹುದು. ಇದರಿಂದಲೂ ಖರ್ಚು ಉಳಿತಾಯವಾಗುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ