ಧಾವಂತದ ಈ ಬದುಕಿನಲ್ಲಿ ಕೆಲವು ಕ್ಷಣಗಳನ್ನು ನಿಮ್ಮವರೊಂದಿಗೆ ಖುಷಿಯಿಂದ ಕಳೆಯುವಂತಾದರೆ ಎಷ್ಟು ಸೊಗಸು? ಹಬ್ಬಗಳ ಸೀಸನ್ ತನ್ನೊಂದಿಗೆ ಇಂತಹ ಅನೇಕ ಕ್ಷಣಗಳನ್ನು ಹೊತ್ತು ತರುತ್ತದೆ. ಕುಟುಂಬದ ಎಲ್ಲ ಸದಸ್ಯರೂ ಒಟ್ಟಿಗೇ ಸೇರಿ ಮನೆಯನ್ನು ಅಲಂಕರಿಸುತ್ತಾರೆ ಮತ್ತು ಸಂತಸದ ಸವಿ ಕ್ಷಣಗಳ ಆನಂದ ಹೊಂದುತ್ತಾರೆ.
ಈಗ ಹಬ್ಬಗಳ ಸೀಸನ್ ಆಗಿದ್ದು ಶುಭಾಶಯಗಳನ್ನು, ಅಭಿನಂದನೆಗಳನ್ನು ತಿಳಿಸಲು ಅತಿಥಿಗಳು ಖಂಡಿತಾ ಬರುತ್ತಾರೆ. ಅವರನ್ನು ಸ್ವಾಗತಿಸಲು ನಿಮ್ಮ ಮನೆಯನ್ನು ಸುಂದರವಾಗಿ ಅಲಂಕರಿಸಿದರೆ ಸಂತೋಷದ ಜೊತೆಗೆ ಪ್ರಶಂಸೆಗಳ ರಂಗೂ ಸೇರಿಕೊಳ್ಳುತ್ತದೆ.
ಈವೆಂಟ್ ಕ್ರಿಯೇಶನ್ಸ್ ನ ಕವಿತಾ ಗುಪ್ತಾ ಇಂತಹ ಅನೇಕ ಸಲಹೆಗಳನ್ನು ಕೊಟ್ಟಿದ್ದಾರೆ. ಅವುಗಳ ಸಹಾಯದಿಂದ ನೀವು ಬಹಳ ಸುಂದರವಾಗಿ ನಿಮ್ಮ ಮನೆಯ ರೂಪುರೇಷೆಗಳನ್ನು ಬದಲಿಸಬಹುದು. ಹಬ್ಬಗಳಲ್ಲಿ ಮನೆಯ ಶೋಭೆ ಹೆಚ್ಚುತ್ತದೆ. ಜೊತೆಗೆ ಪರಸ್ಪರ ಪ್ರೀತಿ ಹೆಚ್ಚುತ್ತದೆ. ಇಂತಹ ಅವಕಾಶಗಳನ್ನು ಕಳೆದುಕೊಳ್ಳುವುದು ತಪ್ಪು. ಅತಿಥಿಗಳೂ ನಿಮ್ಮ ಮನೆಯನ್ನು ಕಂಡು, ``ವಾಹ್, ಎಷ್ಟು ಚೆನ್ನಾಗಿ ಇಟ್ಟುಕೊಂಡಿದ್ದೀರಿ,'' ಎನ್ನುತ್ತಾರೆ.
ಮನೆಯ ಸಿಂಗಾರಕ್ಕಾಗಿ ಕವಿತಾ ಕೊಟ್ಟ ಸಲಹೆಗಳು ಹೀಗಿವೆ :
ಗೋಡೆಗಳಿಗೆ ಸಂತಸದ ಬಣ್ಣ ಹಚ್ಚಿ ಹಬ್ಬದ ಸಂದರ್ಭದಲ್ಲಿ ಗೋಡೆಗಳು ನಿರ್ಜೀವವಾಗಿ ಕಾಣುವುದು ಸರಿಯಲ್ಲ. ನಿಮ್ಮ ಮನೆಗೆ ಹೊಸ ಲುಕ್ ಕೊಡಲು ಗೋಡೆಗಳಿಗೆ ಪೇಂಟ್ ಮಾಡಿಸುವುದು ಅಗತ್ಯ. ಪ್ರತಿ ಕೋಣೆಯ ಗೋಡೆಗೂ ಬೇರೆ ಬೇರೆ ಬಣ್ಣ ಹಾಕಿಸಲು ಇಚ್ಛಿಸಿದರೆ ಯಾವುದಾದರೂ ಪೇಂಟ್ ಶಾಪ್ ಗೆ ಹೋಗಿ ಪೇಂಟ್ ಬುಕ್ ಲೆಟ್ ನಿಂದ ಮಾಹಿತಿ ಪಡೆಯಬಹುದು. ಈಗ ಪೇಂಟ್ ನೊಂದಿಗೆ ಅನೇಕ ಟೆಕ್ಸ್ ಚರ್ ಗಳೂ ಚಾಲನೆಯಲ್ಲಿವೆ. ನಿಮಗಿಷ್ಟವಾದ ಥೀಮ್ ನೊಂದಿಗೆ ಸರಿಯಾದ ಟೆಕ್ಸ್ ಚರ್ ನ ಆಯ್ಕೆಯನ್ನು ಸುಲಭವಾಗಿ ಮಾಡಬಹುದು. ಮಾರುಕಟ್ಟೆಯಲ್ಲಿ ಕೆಳಕಂಡ ಟೆಕ್ಸ್ ಚರ್ ಗಳ ವಿಶೇಷ ಟ್ರೆಂಡ್ ಇದೆ :
ಗೋಲ್ಡನ್ ಟಚ್ ಟೆಕ್ಸ್ ಚರ್
ಮಾರ್ಬಲ್ ಸ್ಟೋನ್ ಟೆಕ್ಸ್ ಚರ್
ಆ್ಯಬ್ ಸ್ಟ್ರಾಕ್ಟ್ ಟೆಕ್ಸ್ ಚರ್
ಗ್ಲಾಸಿ ಟೆಕ್ಸ್ ಚರ್
ಪ್ರತಿ ಮೂಲೆಯ ವೈಭವ ಶೋಪೀಸ್ ಆಗಲಿ
ಈ ಎಲ್ಲ ಸಿದ್ಧತೆಗಳಲ್ಲದೆ ಮನೆಯ ಪ್ರತಿ ಮೂಲೆಯ ಶೋಭೆ ಹೆಚ್ಚಿಸಲು ಮಾರುಕಟ್ಟೆಯಿಂದ ಮನಮೋಹಕ ಶೋಪೀಸ್ ತಂದು ಮನೆಯ ಪ್ರತಿ ಮೂಲೆಯನ್ನೂ ಅಲಂಕರಿಸಿ. ಏನೂ ಇಲ್ಲದಿದ್ದರೆ ಸುಂದರವಾದ ಫ್ಲವರ್ ವಾಸ್ ಇಡಬಹುದು.
ಲೈಟ್ ನಿಂದ ಝಗಮಗಿಸುವ ಮನೆ
ಯಾವುದೇ ಸೆಲೆಬ್ರೇಶನ್ ಲೈಟ್ ಹೊಳಪಿಲ್ಲದೆ ಹೇಗೆ ಪೂರ್ಣಗೊಳ್ಳುತ್ತದೆ? ಲೈಟ್ ಝಗಮಗಿಸುತ್ತಿದ್ದರೆ ನಿಮ್ಮ ಸಂತಸಕ್ಕೆ ಇನ್ನೆರಡು ಕೋಡು ಮೂಡುತ್ತದೆ. ಸಂತಸ ನಿಮ್ಮ ಬದುಕಿನಲ್ಲಿ ಬರುವ ಹೊಸ ಪ್ರಕಾಶದ ಸೂಚಕವಾಗಿದೆ. ನಿಮ್ಮ ಗೋಡೆಗಳು, ಕಿಟಕಿಗಳು, ಕೋಣೆಗಳು ಮತ್ತು ಬಾಗಿಲುಗಳನ್ನು ಒಳ್ಳೆಯ ಝಗಮಗಿಸುವ ಸೀರಿಯಲ್ ಸೆಟ್ ಮತ್ತು ಬೆಲ್ಟ್ ಗಳಿಂದ ಅಲಂಕರಿಸಿ. ಛಾವಣಿಯನ್ನು ಅಲಂಕರಿಸಲು ಸುಂದರವಾದ ಝೂಮರ್ ನ್ನೂ ಉಪಯೋಗಿಸಬಹುದು. ನಿಮ್ಮ ಮನೆಯ ಗೋಡೆಗಳು, ಬಾಗಿಲುಗಳ ಬಣ್ಣದೊಂದಿಗೆ ಮ್ಯಾಚ್ ಆಗುವಂತಹ ಲೈಟ್ ಗಳನ್ನು ಅಳವಡಿಸಿ. ಯಾವುದೇ ಡಬಲ್ ಡಾರ್ಕ್ ಶೇಡ್ ನದು ಆಗಿರಬಾರದು. ಅದರಿಂದ ನಿಮ್ಮ ಮನೆಯ ಮೂಲೆಗಳು ನಿರ್ಜೀವವಾಗಿ ಮತ್ತು ಕತ್ತಲಲ್ಲಿ ಇದ್ದಂತೆ ಅನ್ನಿಸುತ್ತದೆ.