ನಿಮ್ಮ ಪಡಸಾಲೆ ಅಥವಾ ಲಿವಿಂಗ್‌ ರೂಮ್ ಸುಂದರವಾಗಿ ಕಾಣಬೇಕಾದಲ್ಲಿ ಅತಿಯಾದ ಖರ್ಚಿನ ಅಗತ್ಯವಿಲ್ಲ, ಸರಳವಾಗಿ ಕಡಿಮೆ ವಸ್ತುಗಳಲ್ಲೇ ಅಲಂಕರಿಸುವಿಕೆ ಇರಲಿ ಮತ್ತು ಉಪಯುಕ್ತತೆಯ ಕಡೆಯೂ ಗಮನವಿರಲಿ.

ಒಂದಿಲ್ಲೊಂದು ದಿನ ಸ್ವಂತ ಮನೆ ಮಾಡಿಕೊಳ್ಳಬೇಕೆಂಬುದು ಎಲ್ಲರ ಜೀವನದ ಕನಸಂತೂ ಹೌದು. ಸಣ್ಣದೋ, ಪುಟ್ಟದೋ, ದೊಡ್ಡದೋ, ಊರಾಚೆಯೋ ಅಥವಾ ಊರ ಒಳಗೋ ಎಲ್ಲರಿಗೂ ಒಂದು ಸ್ವಂತ ಮನೆ ಬೇಕೇಬೇಕು. ಇಲ್ಲವಾದಲ್ಲಿ ಬಾಡಿಗೆ ಮನೆಗಳನ್ನು ಬದಲಿಸುವುದರಲ್ಲಿ ಜೀವನ ಕಳೆದು ಹೋಗಿಬಿಡುತ್ತದೆ. ಇಂದು ಇದ್ದ ಬಾಡಿಗೆ ನಾಳೆ ಇಲ್ಲ, ಯಾವಾಗಲಾದರೂ ಮನೆ ಬಿಡಬೇಕಾಗಬಹುದು.

ಇವೆಲ್ಲದರ ಶಾಶ್ವತ ಪರಿಹಾರವೆಂಬಂತೆ ಪ್ರತಿಯೊಬ್ಬರೂ ಜೀವನದಲ್ಲಿ ತಮ್ಮದೇ ಆದ ಮನೆಯನ್ನು ಕಟ್ಟಿಕೊಳ್ಳಲು ಬಯಸುತ್ತಾರೆ. ಮನೆ ಕಟ್ಟುವುದೆಂದಾಗ ಮನೆ ಹೇಗಿರಬೇಕೆನ್ನುವ ರೂಪುರೇಷೆಯ ತಯಾರಿ ಪ್ರಾರಂಭವಾಗುತ್ತದೆ. ಆಗ ಮನೆಯ ಯಾವ ವಿಭಾಗಗಳು ಹೇಗಿರಬೇಕೆಂದು ಯೋಚಿಸುವಾಗ ಎಲ್ಲಕ್ಕಿಂತ ಮೊದಲ ಆದ್ಯತೆ ಮನೆಯೊಡತಿಯ ವ್ಯಕ್ತಿತ್ವವನ್ನು ಪ್ರತಿಬಿಂಬಿಸುವ ಲಿವಿಂಗ್‌ ರೂಮ್ ಅರ್ಥಾತ್‌ ಪಡಸಾಲೆಯದಾಗುತ್ತದೆ.

ಆಕರ್ಷಣೆಯ ಜೊತೆ ಉಪಯುಕ್ತತೆ

ಮನೆಗೆ ಬಂದವರ ಮೊದಲ ನೋಟ ಬೀಳುವುದು ಪಡಸಾಲೆಗೇ, ನಂತರ ಮಿಕ್ಕ ಸ್ಥಳಗಳ ಕಡೆ ನೋಡುಗರ ಗಮನ ಹೋಗುತ್ತದೆ. ಆದ್ದರಿಂದ ಒಳಾಂಗಣ ಅಲಂಕಾರದ ಜಾಣ್ಮೆ ಪಡಸಾಲೆಯನ್ನು ಅಂದವಾಗಿ ರೂಪಿಸುವುದೇ ಆಗಿರುತ್ತದೆ. ಬರೀ ಚಂದವಾಗಿದ್ದರೆ ಸಾಕೇ? ಅದು ಉಪಯುಕ್ತ ಆಗಿರಬೇಕು. ಮನೆಯವರೆಲ್ಲರೂ ಒಟ್ಟಿಗೆ ಕುಳಿತು ಅವರ ದಿನದ ಹೆಚ್ಚು ಸಮಯವನ್ನು ಅಲ್ಲೇ ಕಳೆಯುವುದರಿಂದ ಮನೆಯ ಎಲ್ಲ ಸದಸ್ಯರಿಗೂ ಅನುಕೂಲಕರವಾಗಿರುವುದು ಬಹು ಮುಖ್ಯವಾಗುತ್ತದೆ. ಎಲ್ಲ ವಯಸ್ಸಿನವರೂ ಅಲ್ಲಿ ಆರಾಮವಾಗಿ ಕುಳಿತುಕೊಳ್ಳುವಂತೆ ಪೀಠೋಪಕರಣಗಳನ್ನು ಜೋಡಿಸಬೇಕಾಗುತ್ತದೆ. ಮನೆಯವರೆಲ್ಲರ ಮುಖ್ಯ ಆಕರ್ಷಣೆಯಾದ ಟಿ.ವಿ.ಯೂ ಪಡಸಾಲೆಯಲ್ಲೇ ಪ್ರತಿಷ್ಠಿತವಾಗಿರುವುದರಿಂದ ಎಲ್ಲರೂ ಅಲ್ಲಿ ತಮ್ಮ ಹೆಚ್ಚಿನ ಸಮಯವನ್ನು ಕಳೆಯುತ್ತಾರೆ. ಈಗಂತೂ ಅನೇಕ ಮನೆಗಳಲ್ಲಿ ಎಲ್ಲರ ಕೋಣೆಯಲ್ಲೂ ಟಿ.ವಿ. ಇರುತ್ತದೆ ಮತ್ತು ಹೋಮ್ ಥಿಯೇಟರ್‌ ಎಂದು ಪ್ರತ್ಯೇಕವಾಗಿ ಒಂದು ದೊಡ್ಡ ಸ್ಥಳವನ್ನೇ ರೂಪಿಸಲಾಗಿರುತ್ತದೆ. ಆದರೂ ನಮ್ಮ ಬಹಳಷ್ಟು ಮಧ್ಯಮ ವರ್ಗದ ಮನೆಗಳಲ್ಲಿ ಪಡಸಾಲೆಯಲ್ಲಿ ಕುಳಿತು ಟಿ.ವಿ. ನೋಡುವುದೇ ಹೆಚ್ಚು. ಆದ್ದರಿಂದ ಪಡಸಾಲೆಯ ಆಸನಗಳನ್ನು ರೂಪಿಸುವಾಗ ಈ ವಿಷಯವನ್ನು ಖಂಡಿತ ಗಮನದಲ್ಲಿ ಇರಿಸಿಕೊಳ್ಳಬೇಕಾಗುತ್ತದೆ.

ಎಲ್ಲರಿಗೂ ಹೊಂದಿಕೊಳ್ಳುವ ಪೀಠೋಪಕರಣ

 

ಪಡಸಾಲೆಯ ಅಂದವನ್ನು ಹೆಚ್ಚಿಸುವ ಸೋಫಾ ಸೆಟ್‌ ನ ಜೊತೆ ವಯಸ್ಸಾದವರು ಕುಳಿತುಕೊಳ್ಳಲು ಒಂದು ಆರಾಮ ಕರ್ಚಿ, ಹರೆಯದವರಿಗೆ ಒಳಗೆ ಹುದುಗಿಹೋಗುವಂತಹ ಬೀನ್‌ ಬ್ಯಾಗ್‌, ಪಡಸಾಲೆಯ ಅಂದವನ್ನು ಹೆಚ್ಚಿಸುವುದರ ಜೊತೆಗೆ ಕುಳಿತು ಆಡುವ ಪುಟಾಣಿಗಳಿಗಾಗಿ ಸೋಫಾ ಸೆಟ್‌ ನ ಮುಂದುಗಡೆ ಮೃದುವಾದ ಒಂದು ಸುಂದರ ರತ್ನಗಂಬಳಿ, ಮನೆಯಲ್ಲಿನ ಸಂಗೀತಪ್ರಿಯರಿಗಾಗಿ ಒಂದು ಮೂಲೆಯಲ್ಲಿ ಕ್ಯಾಸಿಯೋ ಹೀಗೆ.... ಎಲ್ಲದಕ್ಕೂ ಸ್ಥಳ ರೂಪಿಸಬೇಕಾಗುತ್ತದೆ.

ಪಡಸಾಲೆಯನ್ನು ಅಂದಗೊಳಿಸುವ ನಿಟ್ಟಿನಲ್ಲಿ ಕಂಡ ಕಂಡ ಸುಂದರ ವಸ್ತುಗಳೆಲ್ಲವನ್ನೂ ಅಲ್ಲಿಯೇ ಪೇರಿಸಬೇಕಾಗಿಲ್ಲ, ಯಾವುದೇ ಸ್ಥಳವಾದರೂ ಅಲ್ಲಿ ವಸ್ತುಗಳು ತುಂಬಿಕೊಂಡಂತೆ ಇದ್ದಾಗ ಸ್ಥಳ ಇಕ್ಕಟ್ಟೆನಿಸುತ್ತದೆ. ಆದ್ದರಿಂದ ಅತ್ಯಂತ ಕಡಿಮೆ ವಸ್ತುಗಳಿದ್ದಾಗ ಸ್ಥಳ ವಿಶಾಲವಾಗಿ ಸುಂದರ ನೋಟವನ್ನು ನೀಡುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ