ನಿಮ್ಮ ಕೆಲಸ ಕಾರ್ಯಗಳನ್ನು ಸುಲಭಗೊಳಿಸಿಕೊಳ್ಳಲು ಮತ್ತು ಆಧುನಿಕ ಜೀನಶೈಲಿ ನಿಮ್ಮದಾಗಿಸಿಕೊಳ್ಳಲು ಆಧುನಿಕ ಗೃಹೋಪಯೋಗಿ ಉಪಕರಣಗಳನ್ನು ಮನೆಗೆ ತೆಗೆದುಕೊಂಡು ಬನ್ನಿ. ಏಕೆಂದರೆ ಇವುಗಳ ವಿನ್ಯಾಸ ಮತ್ತು ಸ್ಟೈಲ್ ಒಂದಕ್ಕಿಂತ ಒಂದು ಭಿನ್ನವಾಗಿರುತ್ತವೆ. ಇವುಗಳಲ್ಲಿ ಆಧುನಿಕ ತಂತ್ರಜ್ಞಾನನ್ನು ಅಳವಡಿಸಲಾಗಿರುತ್ತದೆ. ಇವು ಆರೋಗ್ಯಕರ ಜೀವನವನ್ನು ನೀಡುವುದರ ಜೊತೆ ಜೊತೆಗೆ ಆರೋಗ್ಯಕರ ಅಡುಗೆಮನೆಯನ್ನೂ ಕೊಡುತ್ತವೆ.

ಬಿಲ್ಟ್ ಇನ್‌ ರೆಫ್ರಿಜರೇಟರ್‌

ವಿಷಯ ಸಾಮಾನ್ಯ ದಿನಗಳದ್ದೇ ಆಗಿರಬಹುದು ಅಥವಾ ಹಬ್ಬದ ದಿನಗಳದ್ದು. ಸಿಹಿ ಪದಾರ್ಥಗಳನ್ನು ಯಾವುದೇ ದಿನಗಳಲ್ಲಾದರೂ ಮಾಡುತ್ತಾರೆ. ಇಂತಹದರಲ್ಲಿ ಅವನ್ನು ಸಂಗ್ರಹ ಮಾಡಿ ಇಡುವ ಅವಶ್ಯಕತೆ ಉಂಟಾಗುತ್ತದೆ. ಏಕೆಂದರೆ ಯಾವಾಗ ಬೇಕಾದಾಗ ಅವನ್ನು ತೆಗೆದು ಬಿಸಿ ಅಥವಾ ತಂಪು ಮಾಡಿ ಬಡಿಸಲು ಸಾಧ್ಯವಾಗಬೇಕು.

ಹಬ್ಬದ ಸಂದರ್ಭದಲ್ಲಿ ನೀವು ಸಿಹಿ ಪದಾರ್ಥ ತಯಾರಿಸುತ್ತಿದ್ದೀರಿ ಹಾಗೂ ಅದನ್ನು ಬಡಿಸುವ ಮುನ್ನ ಅದನ್ನು ತಂಪುಗೊಳಿಸುವ ಅಗತ್ಯ ಇರುತ್ತದೆ. ಅದಕ್ಕಾಗಿ ಸೂಕ್ತ ರೆಫ್ರಿಜರೇಟರ್‌ ಇದ್ದರೆ ಅದರ ರುಚಿ ಇನ್ನಷ್ಟು ಹೆಚ್ಚಿಸಲು ಸಾಧ್ಯವಾಗುತ್ತದೆ. ಹೀಗಾಗಿ ಮನೆಗೊಂದು ಒಳ್ಳೆಯ ರೆಫ್ರಿಜರೇಟರ್‌ ತೆಗೆದುಕೊಂಡು ಬನ್ನಿ.

ಬಿಲ್ಟ್ ಇನ್‌ ಹಾಬ್ಸ್

ಒಂದು ಒಳ್ಳೆಯ ಪೇಂಟಿಂಗ್‌ ಯಾವಾಗ ರೂಪುಗೊಳ್ಳುತ್ತದೆ ಎಂದರೆ, ಕಲ್ಪನೆಯಲ್ಲಲ್ಲ, ಕಾಗದದ ಮೇಲೆ ಸರಿಯಾಗಿ ಸೃಷ್ಟಿಸಿ ಅದಕ್ಕೆ ಅನುರೂಪ ಬಣ್ಣಗಳನ್ನು ತುಂಬಿದಾಗ ಮಾತ್ರ. ಅದೇ ರೀತಿ ಅಡುಗೆಮನೆಯಲ್ಲಿ ಅಡುಗೆಯು ರುಚಿಕಟ್ಟಾಗಿ ಆಗಬೇಕೆಂದರೆ, ಅಲ್ಲಿನ ವ್ಯವಸ್ಥೆಯೂ ಕೂಡ ಅಚ್ಚುಕಟ್ಟಾಗಿ ಇರಬೇಕು. ಈಗ ಅಡುಗೆಮನೆಗಾಗಿ ಎಂತಹ ಹಾಬ್ಸ್ ಬಂದಿವೆ ಎಂದರೆ ಅಡುಗೆಗಾಗಿ ಸೂಕ್ತ ತಾಪಮಾನ ಮತ್ತು ಉರಿಯನ್ನು ನೀಡುವುದರ ಮೂಲಕ ಆರೋಗ್ಯಕರ ಅಡುಗೆ ಮನೆಗೆ ಸಾಕಷ್ಟು ಮಟ್ಟಿಗೆ ನೆರವು ನೀಡುತ್ತವೆ. ಈ ಹಾಬ್ಸ್ ನ್ನು ಸ್ವಚ್ಛಗೊಳಿಸಲು ಕಷ್ಟಕರ ಎನಿಸುವುದಿಲ್ಲ.

ಒಂದು ವಿಶೇಷ ಸಂಗತಿಯೆಂದರೆ, ಈಗ 3-4 ಬರ್ನರ್‌ಗಳ ಹಾಬ್ಸ್ ಬಂದಿದ್ದು, ಅವು ಅತ್ಯುತ್ತಮ ಗುಣಮಟ್ಟದ ಗ್ರಿಲ್‌, ಕಪ್ಪು ವರ್ಣದ ಶಾಖ ಪಡೆದುಕೊಳ್ಳುವ ಗ್ಯಾಸ್‌ಗಳು ಮತ್ತು ಆಟೋ ಇಗ್ನಿಷನ್‌ ಸೌಲಭ್ಯ ಹೊಂದಿದ್ದು, ಗೃಹಿಣಿಯರ ಪ್ರೀತಿಗೆ ಪಾತ್ರವಾಗಿದೆ. ಇದೇ ಮಾದರಿಯ ಹಾಬ್ಸ್ ನಲ್ಲಿ  ನಿಮಗೆ ಬಗೆಬಗೆಯ ಡಿಸೈನ್‌ ಮತ್ತು ಪ್ಯಾಟರ್ನ್‌ ನೋಡಲು ಸಿಗುತ್ತವೆ.

ಬಿಲ್ಟ್ ಇನ್‌ ಮೈಕ್ರೋವೇವ್ಸ್

ಮೈಕ್ರೋವೇವ್‌ಗಳು ನಿಮ್ಮ ಅಡುಗೆಮನೆಗೆ ಆಧುನಿಕ ಲುಕ್‌ ಕೊಡಲು ನೆರವಾಗುತ್ತವೆ. ಮೈಕ್ರೋವೇವ್ಸ್ ನಲ್ಲಿ ಕೆಲವೇ ನಿಮಿಷದಲ್ಲಿ ವಿಶಿಷ್ಟ ಬಗೆಯ ತಿಂಡಿಗಳು ಸಿದ್ಧಗೊಳ್ಳುತ್ತವೆ. ಇವುಗಳಲ್ಲಿ ಅಡುಗೆ ತಯಾರಿಸುವುದು ಸುರಕ್ಷಿತ. ಏಕೆಂದರೆ ನಾವು ಅದರಲ್ಲಿ ಯಾವುದೇ ಡಿಶ್‌ ತಯಾರಿಸಬೇಕೆಂದರೂ ಟೈಮರ್‌ ಹಾಕುತ್ತೇವೆ. ನಿಗದಿತ ಸಮಯದ ಬಳಿಕ ಅದು ತಂತಾನೇ ಆಫ್ ಆಗುತ್ತದೆ. ಹೀಗಾಗಿ ಇದು ಸುರಕ್ಷಿತ ವಿಧಾನ. ಮೈಕ್ರೋವೇವ್‌ನಲ್ಲಿ ಅಡುಗೆ ಮಾಡಲು ಅದಕ್ಕೆ ಸೂಕ್ತವಾದಂತಹ ಸಲಕರಣೆಗಳನ್ನಷ್ಟೇ ಬಳಸಬೇಕು. ಈ ಕನ್‌ವೆಕ್ಷನ್‌ ಮತ್ತು ಗ್ರಿಲ್ ‌ಎರಡೂ ಬಗೆಯದ್ದಾಗಿರುತ್ತವೆ.

ಬಿಲ್ಟ್ ಇನ್‌ ಚಿಮನಿ

ಇಂದಿನದು ಆಧುನಿಕ ಅಡುಗೆಮನೆ ಯುಗ. ಅಲ್ಲಿ ಸ್ಟೋರೇಜ್‌ಗಾಗಿ ಕ್ಯಾಬಿನೆಟ್ಸ್ ಇರುತ್ತವೆ. ನಾವು ಅಡುಗೆ ತಯಾರಿಸುವಾಗ ಅದರಿಂದ ಹೊರಹೊಮ್ಮುವ ತೈಲ ಕ್ಯಾಬಿನೆಟ್‌ ಮೇಲೆ ಜಮೆಗೊಳ್ಳುತ್ತದೆ. ಅದು ಅಡುಗೆಮನೆಯನ್ನು ಕೆಟ್ಟದಾಗಿ ಕಾಣುವಂತೆ ಮಾಡುತ್ತದೆ ಹಾಗೂ ನಮಗೂ ತೊಂದರೆ ತಂದಿಡುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ