ಭಾರತೀಯ ಅಡುಗೆಮನೆಯಲ್ಲಿ ಒಗ್ಗರಣೆಗೆ ಹೆಚ್ಚಿನ ಪ್ರಾಶಸ್ತ್ಯ ಕೊಡಲಾಗತ್ತದೆ. ಅದರ ಹೊರತಾಗಿ ಕರಿಯುವುದು, ಗ್ರಿಲ್ ಮಾಡುವುದು, ಬೇಯಿಸುವುದು, ಅಡುಗೆಗಳಲ್ಲಿ ಮಸಾಲೆಗಳನ್ನು ಬಳಸುವುದು ಇದ್ದೇ ಇರುತ್ತದೆ. ಇಂತಹ ಸ್ಥಿತಿಯಲ್ಲಿ ಸೂಕ್ತ ಚಿಮಣಿ ಮಾತ್ರ ಅಡುಗೆಮನೆಯನ್ನು ಹೊಗೆ ಹಾಗೂ ತೀಕ್ಷ್ಣ ವಾಸನೆಯಿಂದ ಮುಕ್ತಿಗೊಳಿಸುತ್ತದೆ.

ಇತ್ತೀಚಿನ ವರ್ಷಗಳಲ್ಲಿ ಮಾರುಕಟ್ಟೆಯಲ್ಲಿ ಹಲವು ಬಗೆಯ ಚಿಮಣಿಗಳು ಮಾರಾಟವಾಗುತ್ತಿವೆ. ಅವುಗಳಲ್ಲಿ ನಿಮಗೆ ಸೂಕ್ತ ಆಯ್ಕೆ ಮಾಡಿಕೊಳ್ಳುವುದು ಕಷ್ಟವಾಗುತ್ತದೆ. ಈ ಕುರಿತಂತೆ ಚಿಮಣಿ ವಹಿವಾಟಿನಲ್ಲಿ ಒಂದು ದಶಕ ಕಾಲ ಮಾರುಕಟ್ಟೆಯಲ್ಲಿರುವ ಚಿಮಣಿ ಡೀಲರ್‌ ಲಕ್ಷ್ಮಣ್‌ ಪುರೋಹಿತ್‌ ಹೀಗೆ ಹೇಳುತ್ತಾರೆ, ``ಚಿಮಣಿಯ ಮಾದರಿಗಳಲ್ಲಿ ಮೊದಲಿಗಿಂತ ಸಾಕಷ್ಟು ಬದಲಾಗಿದೆ. ಇದರ ಹೊರತಾಗಿ 2 ಪರ್ಯಾಯ ಆಯ್ಕೆಗಳ ವಿಶೇಷಗಳು ಗ್ರಾಹಕರನ್ನು ಹೆಚ್ಚಾಗಿ ಆಕರ್ಷಿಸುತ್ತದೆ. ಆ ಪರ್ಯಾಯಗಳ ವಿಶೇಷತೆಗಳು ಈ ರೀತಿ ಇವೆ :

ಮೊದಲನೇ ಪರ್ಯಾಯ ಉಪಾಯದಲ್ಲಿ ಹೊಗೆಯನ್ನು ಹೊರಗೆ ಹಾಕಲು ಪೈಪ್‌ನ ಬಳಕೆ ಮಾಡಲಾಗುತ್ತದೆ.

ಎರಡನೇ ಪರ್ಯಾಯದಲ್ಲಿ ಚಿಮಣಿಯನ್ನು ಡಕ್‌ ಜೊತೆಗೆ ಜೋಡಿಸುವ ಅಗತ್ಯ ಉಂಟಾಗುವುದಿಲ್ಲ. ಅವುಗಳ ಒಳಗೆ ಅಳವಡಿಸಲಾಗಿರುವ ಕಾರ್ಬನ್‌ ಫಿಲ್ಟರ್‌ ಹೊಗೆ, ಎಣ್ಣೆ ವಾಸನೆ ಮತ್ತು ಇತರೆ ಪದಾರ್ಥಗಳ ವಾಸನೆಯನ್ನು ಹೀರಿಕೊಳ್ಳುತ್ತದೆ ಮತ್ತು ಶುದ್ಧ ಗಾಳಿಯನ್ನು ವಾಪಸ್‌ ಅಡುಗೆಮನೆಗೆ ಬಿಡುತ್ತದೆ. ಇದರಲ್ಲಿರುವ ಸಮಸ್ಯೆ ಎಂದರೆ ಕಾರ್ಬನ್‌ನಲ್ಲಿ ತೈಲ ಬಹುಬೇಗ ಅಂಟಿಕೊಳ್ಳುತ್ತದೆ ಮತ್ತು ಅದನ್ನು ಮೇಲಿಂದ ಮೇಲೆ ಸ್ವಚ್ಛಗೊಳಿಸಬೇಕಾಗುತ್ತದೆ.

ಎರಡೂ ಪ್ರಕಾರದ ಚಿಮಣಿಗಳನ್ನು ಬಳಸಬಹುದು. ಆದರೆ ಡಕ್ಟ್ ಹೊಂದಿರುವ ಚಿಮಣಿ ಹೆಚ್ಚು ಸೂಕ್ತವಾಗಿರುತ್ತದೆ. ಇದರಲ್ಲಿ ಡಕ್ಟ್ ನ ಪೈಪ್‌ ಹೆಚ್ಚು ವಾಲಿದ್ದರೆ ಅಥವಾ ಉದ್ದವಾಗಿದ್ದರೆ ಚಿಮಣಿಯಿಂದ ಗಾಳಿ ಹೊರಗೆ ಹೋಗಲು ಹೆಚ್ಚು ಸಮಯ ತಗುಲುತ್ತದೆ. ಡಕ್ಟ್ ಗಾಗಿ ಹೆಚ್ಚಿನ ಸ್ಥಳಾವಕಾಶ ಬೇಕಾಗುತ್ತದೆ. ಹೀಗಾಗಿ ನಿಮ್ಮ ಅಡುಗೆಮನೆಯಲ್ಲಿ ಜಾಗದ ಕೊರತೆ ಇರದಿದ್ದರೆ ಡಕ್ಟ್ ಇರುವ ಚಿಮಣಿ ಅಳವಡಿಸಿ. ಜಾಗದ ಕೊರತೆ ಇದ್ದರೆ ಕಾರ್ಬನ್‌ ಫಿಲ್ಟರ್‌ ಇರುವ ಚಿಮಣಿ ಸೂಕ್ತ ಆಗುತ್ತದೆ.

ಆಧುನಿಕ ಚಿಮಣಿ

ಮೊದಲು ಚಿಮಣಿಯ ಆಕಾರ ವಿಭಿನ್ನವಾಗಿರುತ್ತಿತ್ತು. ಆಗ ಹೆಚ್ಚಿನ ಚಿಮಣಿಗಳು ಪುಶ್‌ ಬಟನ್‌ ಮತ್ತು ಡೈರೆಕ್ಟ್ ಬಟನ್‌ಮುಖಾಂತರ ಚಲಾಯಿಸಲ್ಪಡುತ್ತಿದ್ದವು. ಆದರೆ ಈಚೆಗೆ ಮಾರುಕಟ್ಟೆಯಲ್ಲಿ ಡಿಜಿಟಲ್ ಗ್ಯಾಸ್‌ ಸೆನ್ಸರ್‌ ಇರುವ ಚಿಮಣಿಗಳು ಕೂಡ ಬಂದಿವೆ. ಯಾವುದೋ ಕಾರಣದಿಂದ ಗ್ಯಾಸ್‌ ಲೀಕ್‌ ಆದಾಗ ಇದು ಸ್ವಯಂಚಾಲಿತವಾಗಿ ಆನ್‌ ಆಗಿ ಗ್ಯಾಸ್‌ನ್ನು ಹೊರಹಾಕುತ್ತದೆ. ಗ್ಯಾಸ್‌ ಹೊರಟು ಹೋದ ಬಳಿಕ ಪುನಃ ಆಫ್‌ ಆಗುತ್ತದೆ. ಈ ರೀತಿಯ ಚಿಮಣಿ ಇತ್ತೀಚಿನ ದಿನಗಳಲ್ಲಿ ಹೆಚ್ಚೆಚ್ಚು ಬಳಸಲಾಗುತ್ತಿದೆ.

ಇದರ ಹೊರತಾಗಿ ಚಿಮಣಿಯ ಸಕ್ಶನ್‌ ಪವರ್‌ ಬಗೆಗೂ ಗಮನಹರಿಸಿ. ಏಕೆಂದರೆ ಅದು ಎಷ್ಟು ಹೆಚ್ಚಿನ ಪ್ರಮಾಣದಲ್ಲಿ ಇರುತ್ತೋ, ಅದು ಅಡುಗೆಮನೆಯನ್ನು ಹೊಗೆ ಮತ್ತು ವಾಸನೆ ರಹಿತ ಮಾಡುತ್ತದೆ. ಈ ಸಾಮರ್ಥ್ಯ ಚಿಮಣಿಯಲ್ಲಿ 500 ಮೀ. ಕ್ಯೂಬಿಕ್‌ ಪ್ರತಿ ಗಂಟೆಯಿಂದ ಹಿಡಿದು 1200 ಮೀ. ಕ್ಯೂಬಿಕ್‌ ಪ್ರತಿ ಗಂಟೆಗೆ ಇರುತ್ತದೆ. ಇದರಲ್ಲಿ 900 ಮೀ. ಕ್ಯೂಬಿಕ್‌ ಪ್ರತಿ ಗಂಟೆಗೆ ಸಕ್ಶನ್‌ ಪವರ್‌ ಇರುವ ಚಿಮಣಿಗಳಿವೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ