ಸುಂದರ ಹಾಗೂ ದೊಡ್ಡ ಮನೆಯ ಅಪೇಕ್ಷೆ ಎಂಥವರಿಗೂ ಇರುತ್ತದೆ. ಆದರೆ ಮಹಾನಗರಗಳಲ್ಲಿ ಇಂತಹ ಮನೆಯ ಅಪೇಕ್ಷೆಯನ್ನು ಈಡೇರಿಸಿಕೊಳ್ಳುವುದು ಸುಲಭದ ಮಾತಲ್ಲ. ಚಿಕ್ಕ ಮನೆಗಳಲ್ಲಿ ವಾಸಿಸುವುದು ಅನಿವಾರ್ಯವಾಗುತ್ತದೆ. ಆದರೆ ಒಂದಿಷ್ಟು ತಿಳಿವಳಿಕೆ ಹಾಗೂ ಅಲಂಕಾರದ ವಿಧಾನಗಳ ಮೇಲೊಮ್ಮೆ ಗಮನಹರಿಸಿದರೆ ಚಿಕ್ಕ ಮನೆಯಲ್ಲಿದ್ದೂ ದೊಡ್ಡ ಹಾಗೂ ಗಾಳಿ ಸಂಚರವಾಗುವ ಮನೆಯಲ್ಲಿರುವ ಅನುಭವ ಪಡೆದುಕೊಳ್ಳಬಹುದು.

ಮನೆ ವ್ಯವಸ್ಥಿತವಾಗಿಡಿ : ನೀವು ನಿಮ್ಮ ಮನೆಯನ್ನು ಎಷ್ಟೊಂದು ವ್ಯವಸ್ಥಿತ ಹಾಗೂ ಸ್ವಚ್ಛವಾಗಿಡಬೇಕೆಂದರೆ, ಕೋಣೆಗಳಲ್ಲಿ ಅಷ್ಟೇ ವಿಶಾಲ ವ್ಯಾಪ್ತಿ ಗೋಚರಿಸುತ್ತದೆ. ಸಾಮಾನುಗಳನ್ನು ವ್ಯವಸ್ಥಿತವಾಗಿಡಿ ಹಾಗೂ ವ್ಯರ್ಥ ಸಾಮಾನುಗಳನ್ನು ಹೊರಗೆ ಹಾಕಿ. ಆಗ ಜಾಗ ಮುಕ್ತವಾಗಿ ಕಂಡುಬರುತ್ತದೆ.

ಬಿಳಿ ಹಾಗೂ ತಿಳಿ ಬಣ್ಣಗಳನ್ನು ಬಳಸಿ : ಗಾಢ ವರ್ಣಗಳು ದೊಡ್ಡ ಜಾಗದ ಪ್ರಭಾವವನ್ನು ಕಡಿಮೆಗೊಳಿಸುತ್ತವೆ. ಹೀಗಾಗಿ ಮನೆ ಗೋಡೆಗಳ ಮೇಲೆ ಬಿಳಿ ಬಣ್ಣದ ಪೇಂಟ್‌ ಮಾಡಿ. ಪೀಠೋಪಕರಣಗಳ ಬಣ್ಣ ಗಾಢವಾಗಿರಬಾರದು. ಗೋಡೆಗಳಿಗೆ ಹಳದಿ, ಗುಲಾಬಿ ಹಾಗೂ ಆಕಾಶ ನೀಲಿ ಬಣ್ಣಗಳನ್ನು ಆಯ್ಕೆ ಮಾಡಿ. ಹೀಗೆ ಮಾಡಿದಾಗ ಕೋಣೆ ವಿಸ್ತಾರವಾಗಿರುವಂತೆ ಭಾಸವಾಗುತ್ತದೆ.

ಬೆಳಕಿನ ವ್ಯವಸ್ಥೆ : ಮನೆಯಲ್ಲಿ ಸಾಕಷ್ಟು ಬೆಳಕು ಬರುವಂತಿರಬೇಕು. ಆಗ ಕೋಣೆ ವಿಸ್ತಾರವಾಗಿರುವಂತೆ ಭಾಸವಾಗುತ್ತದೆ. ಮನೆಯಲ್ಲಿ ಬಣ್ಣಗಳ ಪ್ರಭಾವ ಗೋಚರಿಸಲು ಲ್ಯಾಂಪ್ಸ್ ಅಳವಡಿಸಿ. ಅದರಿಂದ ಮನೆಯು ಆಕರ್ಷಕವಾಗಿ ಕಂಡುಬರುತ್ತದೆ.

ಬಹೂಪಯೋಗಿ ಪೀಠೋಪಕರಣ ಬಳಸಿ : ನೀವು ಎಂತಹ ಪೀಠೋಪಕರಣಗಳ ಮೇಲೆ ಹೂಡಿಕೆ ಮಾಡಬೇಕೆಂದರೆ, ಅವು ಬಹೂಪಯೋಗಿ ಉದ್ದೇಶದ್ದಾಗಿರಬೇಕು. ಇಂತಹ ಪೀಠೋಪಕರಣಗಳು ಮನೆಯ ಶೋಭೆ ಹೆಚ್ಚಿಸುತ್ತವೆ ಹಾಗೂ ಜಾಗವನ್ನು ವಿಸ್ತಾರವಾಗಿರುವಂತೆ ಬಿಂಬಿಸುತ್ತವೆ. ಉದಾಹರಣೆಗೆ ಬಹು ಉದ್ದೇಶದ ಮೇಜುಗಳನ್ನು ಬಳಸಬಹುದಾಗಿದೆ. ಅದರಲ್ಲಿ ಸಾಕಷ್ಟು ಶೆಲ್ಫ್ ಗಳಿರಬೇಕು. ಇದರಲ್ಲಿ ನೀವು ನಿಮ್ಮ ಅಡುಗೆಮನೆಯ ಸಾಮಗ್ರಿಗಳ ಜೊತೆಗೆ ಬೇರೆ ಕೆಲವು ಸಾಮಾನುಗಳನ್ನು ಇಡಬಹುದಾಗಿದೆ.

ಮನೆಯಲ್ಲಿ ಕನ್ನಡಿಯ ಬಳಕೆ : ಕನ್ನಡಿಯ ಬಳಕೆಯಿಂದಲೂ ನೀವು ನಿಮ್ಮ ಕೋಣೆ ದೊಡ್ಡದಾಗಿರುವ ಅನುಭವ ಪಡೆಯಬಹುದಾಗಿದೆ. ಪೀಕ್‌ ಪಾಯಿಂಟ್‌ಗಳನ್ನು ಬಳಸಿ ಹಾಗೂ ಕನ್ನಡಿಯನ್ನು ಮನೆಯ ಕಿಟಕಿ ಎದುರಿಗಿನ ಗೋಡೆಯ ಮೇಲೆ ಕನ್ನಡಿಯನ್ನು ಹಾಕಿ. ಬೆಳಕಿನ ಪ್ರತಿಬಿಂಬದ ಕಾರಣದಿಂದ ಕೋಣೆಯ ವ್ಯಾಪ್ತಿ ದೊಡ್ಡದೆಂಬಂತೆ ಗೋಚರಿಸುತ್ತದೆ.

ಒಳಾಲಂಕಾರ : ಮನೆಯ ಡೆಕೋರೇಶನ್‌ನಲ್ಲಿ ಸಾಧಾರಣ ಬದಲಾವಣೆ ಮಾಡಿಕೊಂಡು ಮನೆಯ ಅಂದಚೆಂದವನ್ನು ಬದಲಿಸಬಹುದು. ಉದಾಹರಣೆಗಾಗಿ ಸ್ಟ್ರೈಪ್ಡ್ ಕಾರ್ಪೆಟ್ಸ್ ಕೋಣೆಯು ಉದ್ದವಾಗಿರುವ ಅನುಭವ ನೀಡುತ್ತದೆ. ಅದೇ ಮನೆಯ ಪರದೆ ಮುಂತಾದವುಗಳಲ್ಲಿ ಸ್ಟ್ರೈಪ್ಸ್ ಇರುವ ಡಿಸೈನ್ಸ್ ಮನೆಯನ್ನು ದೊಡ್ಡದೆಂಬಂತೆ ಗೋಚರಿಸುತ್ತವೆ.

ದಾರಿ ಬಂದ್‌ ಮಾಡಬೇಡಿ : ಮನೆಯ ಚಿಕ್ಕ ಪ್ರವೇಶ ದ್ವಾರಗಳನ್ನು, ಲಾಬಿಗಳು ಅಥವಾ ಹಾಲ್ ವೇನಲ್ಲಿ ಸಂಕೀರ್ಣ ಟೇಬಲ್‌ನ ಉಪಯೋಗದಿಂದ ಮನೆಯ ಪ್ರವೇಶ ಸ್ಥಳ ದೊಡ್ಡದೆಂಬಂತೆ ಭಾಸವಾಗುತ್ತದೆ. ನಡೆದಾಡಲು ತೊಂದರೆಯಾಗದ ಹಾಗೆ ಪ್ರವೇಶ ದ್ವಾರವನ್ನು ಕಿಷ್ಕಿಂದೆಯಾಗಿಸಬೇಡಿ.

- ಗಿರಿಜಾ

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ