ನಿಮ್ಮ ಮನೆ ನೈರ್ಮಲ್ಯದಿಂದ ಕೂಡಿರದಿದ್ದರೆ ದುರ್ಗಂಧ ಬರುವುದು ಸ್ವಾಭಾವಿಕವೇ ಹೌದು. ಅದಕ್ಕೆ ಕಾರಣಗಳೆಂದರೆ, ಹಳೆಯ ಕಾರ್ಪೆಟ್‌, ಫಂಗಸ್‌ ಮೆತ್ತಿಕೊಂಡ ಗೋಡೆಗಳು, ಸಾಕು ಪ್ರಾಣಿಗಳು, ಡಸ್ಟ್ ಬಿನ್‌ನ್ನು ಸರಿಯಾಗಿ ಸ್ವಚ್ಛಗೊಳಿಸಿದೆ ಇರುವುದು ಬಟ್ಟೆಗಳನ್ನು ಬಿಸಿಲಲ್ಲಿ ಸರಿಯಾಗಿ ಒಣಗಿಸದೆ ಇರುವುದು ಇವೇ ಮುಂತಾದವು. ತೇವಾಂಶ ಅಧಿಕವಾಗಿರುವ ದಿನಗಳಲ್ಲಿ ಈ ದುರ್ಗಂಧ ಮತ್ತಷ್ಟು ಹೆಚ್ಚುತ್ತದೆ.

ಎಷ್ಟೋ ಸಲ ಮನೆಯೇನೊ ನೈರ್ಮಲ್ಯದಿಂದ ಕೂಡಿರುತ್ತದೆ. ಆದರೆ ಅಲ್ಲಿನ ದುರ್ಗಂಧ ನಿಮಗೆ ಕಿರಿಕಿರಿ ಉಂಟು ಮಾಡುತ್ತಿರುತ್ತದೆ. ಇಂತಹ ಸ್ಥಿತಿಯಲ್ಲಿ ಆ್ಯರೋಮಾಯುಕ್ತ ಕ್ಯಾಂಡಲ್, ಧೂಪ ಮತ್ತು ಗಂಧದ ಕಡ್ಡಿಗಳನ್ನು ಉರಿಸುವುದರ ಮೂಲಕ ದುರ್ಗಂಧದಿಂದ ಮುಕ್ತಿ ಕಂಡುಕೊಳ್ಳಬಹುದು. ಇತ್ತೀಚೆಗೆ ಮಾರುಕಟ್ಟೆಯಲ್ಲಿ ಬಗೆ ಬಗೆಯ ಸ್ಪ್ರೇಗಳು ಕೂಡ ಲಭಿಸುತ್ತವೆ. ಆದರೆ ಇವುಗಳ ನಿಯಮಿತ ಉಪಯೋಗ ಸೂಕ್ತವಲ್ಲ. ಇಂತಹದರಲ್ಲಿ ನೈಸರ್ಗಿಕ ಆ್ಯರೋಮಾಯುಕ್ತ ಕ್ಯಾಂಡಲ್ ಅಥವಾ ಧೂಪ ದುರ್ಗಂಧ ನಿವಾರಿಸಲು ನೆರವಾಗುತ್ತದೆ.

ಈ ಕುರಿತಂತೆ ಡಿಸೈನರ್‌ ಸ್ವಪ್ನಾ ಹೀಗೆ ಹೇಳುತ್ತಾರೆ, ``ಮೊದಲು ಇಂಟೀರಿಯರ್‌ಗೆ ವುಡನ್‌ ಫರ್ನೀಚರ್‌ಗಳ ಟ್ರೆಂಡ್‌ ಇತ್ತು. ಅವನ್ನು ಕೆಲವು ವರ್ಷಗಳ ಬಳಿಕ ಪಾಲಿಶ್‌ ಮಾಡಬೇಕಾಗುತ್ತಿತ್ತು. ಆದರೆ ಇತ್ತೀಚೆಗೆ ಲ್ಯಾಮಿನೇಟ್‌ ಫರ್ನೀಚರ್‌ಗಳ ಟ್ರೆಂಡ್‌ಶುರುವಾಗಿದೆ. ಅವುಗಳನ್ನು ಸ್ವಚ್ಛಗೊಳಿಸುವುದು ಸುಲಭ. ಅವುಗಳಲ್ಲಿ ತೇವಾಂಶ ಕೂಡ ಜಮೆಗೊಳ್ಳುವುದಿಲ್ಲ. ಹಾಗಾಗಿ ಅವುಗಳಿಂದ ಯಾವುದೇ ದುರ್ವಾಸನೆ ಹೊರಹೊಮ್ಮುವುದಿಲ್ಲ.

ದುರ್ವಾಸನೆ ನಿವಾರಿಸಲು ಉಪಾಯಗಳು

ದುರ್ವಾಸನೆ ನಿವಾರಿಸುವ ಕೆಲವು ಟಿಪ್ಸ್ ಇಲ್ಲಿವೆ :

ಎಲ್ಲಕ್ಕೂ ಮೊದಲು ನಿಮ್ಮ ಮನೆಯಲ್ಲಿ ವೆಂಟಿಲೇಶನ್‌ ಅಂದರೆ ಕಿಟಕಿಗಳ ವ್ಯವಸ್ಥೆ ಸರಿಯಾಗಿರಬೇಕು.

ಸುಗಂಧಯುಕ್ತ ಗಂಧದ ಕಡ್ಡಿಗಳು, ಪಾಟ್‌ಪೊರಿ, ಸ್ಪ್ರೇ ಮುಂತಾದವುಗಳ ಬಳಕೆಯನ್ನು ಕೋಣೆಯಲ್ಲಷ್ಟೇ ಮಾಡಿ. ಇವನ್ನು ಅಡುಗೆ ಕೋಣೆಗಳಲ್ಲಿ ಬಳಸಬೇಡಿ.

ಕಾರ್ಪೆಟ್‌ನ್ನು ಫ್ರೆಶ್‌ ಮಾಡಲು ಅದರ ಮೇಲೆ ದೈನಂದಿನ ಬಳಕೆಯ ಪೌಡರ್‌ನ್ನು ಸಿಂಪಡಿಸಿ, ವ್ಯಾಕ್ಯೂಮ್ ಕ್ಲೀನರ್‌ನಿಂದ ಸ್ವಚ್ಛಗೊಳಿಸಿ. ಇದರಿಂದ ಕಾರ್ಪೆಟ್‌ ಸ್ವಚ್ಛವಾಗುವುದರ ಜೊತೆ ಜೊತೆಗೆ ಅದು ಪರಿಮಳ ಸೂಸುತ್ತದೆ.

ಬಟ್ಟೆಗಳ ದುರ್ಗಂಧ ನಿವಾರಿಸಲು ಅವನ್ನು ಸ್ವಚ್ಛಗೊಳಿಸಿದ ಬಳಿಕ ಫ್ಯಾಬ್ರಿಕ್‌ ರಿಫ್ರೆಶನರ್‌ನ ಬಳಕೆ ಮಾಡಿ. ಹೀಗೆ ಮಾಡುವುದರಿಂದ ಬಟ್ಟೆಗಳು ಮೃದುವಾಗುವುದರ ಜೊತೆಗೆ ಸುವಾಸನೆ ಹೊರಹೊಮ್ಮಿಸುತ್ತವೆ.

ಪೀಠೋಪಕರಣಗಳು ತೇವಾಂಶದಿಂದ ದುರ್ವಾಸನೆ ಹೊರಹೊಮ್ಮಿಸುತ್ತವೆ. ಅದನ್ನು ನಿವಾರಿಸಲು ಮೇಲಿಂದ ಮೇಲೆ ಪಾಲಿಶ್‌ಮಾಡಿ.

ಹಾಸಿಗೆ, ಬಟ್ಟೆಗಳು, ಬಾಥ್‌ ರೂಮ್ ಮುಂತಾದ ಕಡೆ ಫಿನೈಲ್‌ನ ಮಾತ್ರೆಗಳನ್ನು ಬಳಸುವುದರಿಂದ ದುರ್ವಾಸನೆ ಅಷ್ಟಿಷ್ಟು ಕಡಿಮೆಯಾಗುತ್ತದೆ.

ಮನೆಗಾಗಿ ತೆಗೆದುಕೊಳ್ಳಬೇಕಾದ ಫ್ರ್ಯಾಗ್ರೆನ್ಸ್ ಗಳೆಂದರೆ ಲ್ಯಾವೆಂಡರ್‌, ಲೆಮನ್‌, ಕ್ಲೋವ್ ಮುಂತಾದವು. ಅವುಗಳಿಂದ ದುರ್ವಾಸನೆ ಸುಲಭವಾಗಿ ನಿವಾರಣೆಯಾಗುತ್ತದೆ.

ಮನೆ ಉಪಾಯಗಳು

ಮನೆಯಲ್ಲಿನ ದುರ್ವಾಸನೆ ನಿವಾರಿಸಲು ಕೆಲವು ಸುಲಭ ಉಪಾಯಗಳನ್ನು ಅನುಸರಿಸಬಹುದು. ಆ ಉಪಾಯಗಳೇನು?

ಕಪಾಟಿನಲ್ಲಿ ಬೇವಿನ ಎಲೆಗಳನ್ನು ಇಡುವುದರಿಂದ ಬಟ್ಟೆಗಳಲ್ಲಿನ ಫಂಗಸ್‌ನ ದುರ್ವಾಸನೆ ಹೊರಟು ಹೋಗುತ್ತದೆ.

ನಿಂಬೆಹಣ್ಣು ಕತ್ತರಿಸಿ ಒಂದು ಅಗಲವಾದ ಪಾತ್ರೆಯಲ್ಲಿ ಹಾಕಿ ಮನೆ ಮೂಲೆಯಲ್ಲಿ ಇಡಿ.

ಒಂದೆರಡು ಕರ್ಪೂರದ ತುಂಡುಗಳನ್ನು ಪಾತ್ರೆಯಲ್ಲಿರಿಸಿ ಸುಡಬೇಕು. ಆಗ ಮನೆಯ ಕಿಟಕಿ ಬಾಗಿಲು ಮುಚ್ಚಬೇಕು. ಕರ್ಪೂರ ಪೂರ್ಣ ಸುಟ್ಟ ಮೇಲೆ ಬಾಗಿಲು ಕಿಟಕಿ ತೆರೆಯಬೇಕು.

ಮನೆಯಲ್ಲಿಯೇ ಪಾಟ್‌ ಪೊರಿ ಸಿದ್ಧಪಡಿಸಲು ನಿಮಗೆ ಇಷ್ಟವಾದ ಯಾವುದಾದರೂ ಹೂವಿನ ಎಸಳುಗಳನ್ನು ನೀರಿನಲ್ಲಿ ಕುದಿಸಿ. ಆಗ ಅದರ ಪರಿಮಳ ಇಡೀ ಮನೆಯಲ್ಲಿ ಪಸರಿಸುತ್ತದೆ. ಹೂಗಳ ಹೊರತಾಗಿ ಕಿತ್ತಳೆಯ ಸಿಪ್ಪೆ, ದಾಲ್ಚಿನ್ನಿಯ ತುಂಡು, ಲವಂಗದ ತುಂಡುಗಳನ್ನೂ ಬಳಸಬಹುದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ