ಅಡುಗೆಮನೆ ಮನೆಯ ಒಂದು ಮಹತ್ವದ ಭಾಗವಾಗಿರುತ್ತದೆ. ಅಲ್ಲಿನ ವ್ಯವಸ್ಥೆ ನೋಡಿಯೇ ನೀವೆಷ್ಟು ಅಚ್ಚುಕಟ್ಟಾದ ಗೃಹಿಣಿ ಎನ್ನುವುದು ತಿಳಿಯುತ್ತದೆ. ಒಂದು ವೇಳೆ ನೀವು ಉದ್ಯೋಗಸ್ಥೆಯಾಗಿದ್ದರೆ, ನಿಮ್ಮ ಜವಾಬ್ದಾರಿ ದ್ವಿಗುಣಗೊಳ್ಳುತ್ತದೆ. ಯಾವ ರೀತಿ ಆಫೀಸಿನಲ್ಲಿ ನಿಮ್ಮಿಂದ ಉತ್ತಮ ಕಾರ್ಯದ ಅಪೇಕ್ಷೆ ಮಾಡಲಾಗುತ್ತೋ, ಅದೇ ರೀತಿಯ ಕಾರ್ಯ ಕೌಶಲತೆಯನ್ನು ಕಿಚನ್ ಮ್ಯಾನೇಜ್‌ಮೆಂಟ್‌ನಲ್ಲೂ ಬಯಸುವುದು ಸಹಜವೇ ಆಗಿದೆ. ಉದ್ಯೋಗಸ್ಥ ಮಹಿಳೆಯರಿಗೆ ಸಮಯದ ಕೊರತೆ ಬಹುದೊಡ್ಡ ಸಮಸ್ಯೆಯೇ ಆಗಿರುತ್ತದೆ. ಅಂಥವರು ಇಲ್ಲಿ ಕೊಟ್ಟಿರುವ ಕೆಲವು ಸಲಹೆಗಳನ್ನು ಗಮನಿಸಿದರೆ ಅವರ ತೊಂದರೆಗಳು ಸಹಜವಾಗಿಯೇ ನಿವಾರಣೆಯಾಗುತ್ತವೆ :

ನಿಮ್ಮ ಕಿಚನ್‌ ಮಾಡ್ಯುಲರ್‌ ಅಥವಾ ಪಾರಂಪರಿಕ, ಆಗಿರಬಹುದು, ಅದನ್ನು ನಿರ್ಮಲವಾಗಿ, ವ್ಯವಸ್ಥಿತವಾಗಿ ಇಟ್ಟುಕೊಳ್ಳಿ.

ಸಾಮಗ್ರಿಗಳನ್ನು ಡಬ್ಬಗಳಲ್ಲಿ ವ್ಯವಸ್ಥಿತವಾಗಿ ಇಡಿ. ಪ್ರತಿಯೊಂದು ವಸ್ತುವಿಗೂ ಒಂದು ನಿಶ್ಚಿತ ಸ್ಥಳ ನಿಗದಿ ಮಾಡಿ.

ನೀವು ಯಾವ ಆಹಾರ ಪದಾರ್ಥಗಳ ಡಬ್ಬಿ ಅಥವಾ ಬಾಟಲ್ ತೆಗೆಯುತ್ತೀರೊ, ಅದನ್ನು ಉಪಯೋಗಿಸಿದ ಬಳಿಕ ಚೆನ್ನಾಗಿ ಒರೆಸಿ ಪುನಃ ಅದೇ ಜಾಗದಲ್ಲಿ ಇಡಿ.

ಧೂಳು ನಿವಾರಿಸಲು ಪೇಪರ್‌ ಕಿಚನ್‌ ನ್ಯಾಪ್‌ಕಿನ್ಸ್ ಉಪಯೋಗಿಸಿ. ಕಿಚನ್‌ ಟವೆಲ್‌ನ್ನು ಸ್ವಚ್ಛಗೊಳಿಸಿ ಒಣಹಾಕುವ ಕಿರಿಕಿರಿಯಿಂದ ನಿಮಗೆ ಮುಕ್ತಿ ದೊರಕುತ್ತದೆ.

ಅಡುಗೆಮನೆಯಲ್ಲಿ ಯಾವ ಯಾವ ವಸ್ತುಗಳು ಖಾಲಿಯಾಗುತ್ತವೋ, ತಕ್ಷಣವೇ ಪುಟ್ಟ ಡೈರಿಯಲ್ಲಿ ಅದನ್ನು ನಮೂದಿಸಿ. ಇದರಿಂದ ಮನೆಯ ಸಾಮಗ್ರಿ ತರಲು ಸುಲಭವಾಗುತ್ತದೆ.

ಬೇಳೆ, ಮಸಾಲೆ ಹಾಗೂ ಇತರ ವಸ್ತುಗಳಿಗಾಗಿ ಎಷ್ಟೇ ಡಬ್ಬಗಳನ್ನು ಇಟ್ಟಿದ್ದರೂ, ಒಮ್ಮೊಮ್ಮೆ ತಂದ ವಸ್ತುಗಳು ಹಾಗೆಯೇ ಉಳಿದುಬಿಡುತ್ತವೆ. ಇಂತಹ ಸಂದರ್ಭದಲ್ಲಿ ಎಲ್ಲ ಪ್ಯಾಕ್‌ಗಳನ್ನು ಚೆನ್ನಾಗಿ ಕಟ್ಟಿ ಒಂದೇ ಡಬ್ಬದಲ್ಲಿ ಹಾಕಿಡಿ. ಹೀಗಾಗಿ ಯಾವುದೇ ಪದಾರ್ಥ ಖಾಲಿಯಾದಾಗ ಹುಡುಕಾಡುವ ಸಮಸ್ಯೆ ಇರದು.

ಕೆಲವೊಂದು ಆಹಾರ ಪದಾರ್ಥಗಳನ್ನು ಹೆಚ್ಚಿನ ಪ್ರಮಾಣದಲ್ಲಿ ತಂದಿಟ್ಟುಕೊಳ್ಳಬೇಡಿ. ಅವು ಕೆಟ್ಟುಹೋಗುವ ಸಾಧ್ಯತೆ ಇರುತ್ತದೆ.

ರಜೆಯ ದಿನದಂದು ವಾರಪೂರ್ತಿ ಆಗುವಷ್ಟು ತರಕಾರಿಗಳನ್ನು ತಂದಿಟ್ಟುಕೊಳ್ಳಿ.

ಸುಲಭವಾಗಿ ಲಭ್ಯವಿರುವ ಫ್ರೋಜನ್‌ ಸ್ನ್ಯಾಕ್ಸ್ ನ ಕೆಲವು ಪ್ಯಾಕೇಟುಗಳನ್ನು ಅವಶ್ಯವಾಗಿ ತಂದಿಡಿ. ಹೊತ್ತಲ್ಲದ ಹೊತ್ತಿನಲ್ಲಿ ಬರುವ ಅತಿಥಿಗಳಿಗಾಗಿ ನೀವು ಕಡಿಮೆ ಸಮಯದಲ್ಲಿ  ಅಡುಗೆ ಮಾಡಲು ಅನುಕೂಲವಾಗುತ್ತದೆ.

ಮುಂಜಾನೆ ತಿಂಡಿಗಾಗಿ ಹಾಗೂ ಆಫೀಸಿಗೆ ಮಧ್ಯಾಹ್ನದ ಹೊತ್ತಿಗೆ ಏನು ತೆಗೆದುಕೊಂಡು ಹೋಗಬೇಕೆಂದು ಮೊದಲೇ ನಿರ್ಧರಿಸಿ. ಅದಕ್ಕಾಗಿ ಯಾವ ಸಾಮಗ್ರಿ ಅತ್ಯವಶ್ಯ, ಅದು ಮನೆಯಲ್ಲಿ ಇದೆಯೋ ಇಲ್ಲವೋ ಎನ್ನುವುದನ್ನು ಮೊದಲೇ ಗಮನಿಸಿರಬೇಕು.

ಪ್ರತಿದಿನ ಅಡುಗೆ ಮಾಡುವ ಮುಂಚೆ ಈರುಳ್ಳಿ, ಬೆಳ್ಳುಳ್ಳಿ, ಟೊಮೇಟೊ, ಹಸಿಶುಂಠಿ ಇವನ್ನು ಹೆಚ್ಚಿಕೊಳ್ಳುವ, ತುರಿದುಕೊಳ್ಳುವ ತಾಪತ್ರಯದಿಂದ ಪಾರಾಗಲು ಪ್ಯೂರಿಯನ್ನು ಉಪಯೋಗಿಸಿ. 250 ಗ್ರಾಂ ಬೆಳ್ಳುಳ್ಳಿ, 100 ಗ್ರಾಂ ಈರುಳ್ಳಿ, ಕಾಲು ಕಪ್‌ ವಿನಿಗರ್ ಮಿಶ್ರಣ ಮಾಡಿ ಚೆನ್ನಾಗಿ ಅರೆದುಕೊಳ್ಳಿ. ಈಗ ಪ್ಯೂರಿ ಸಿದ್ಧವಾದಂತೆ. ಟೊಮೇಟೊ ಪ್ಯೂರಿಗಾಗಿ 1 ಕಿಲೋ ಟೊಮೇಟೊ, 2 ದೊಡ್ಡ ಈರುಳ್ಳಿ, 8-10 ಎಸಳು ಬೆಳ್ಳುಳ್ಳಿ, ಒಂದಷ್ಟು ಲವಂಗ, ಏಲಕ್ಕಿ ಹಾಗೂ ಒಂದು ತುಂಡು ದಾಲ್ಚಿನ್ನಿಯನ್ನು ಮಿಶ್ರಣ ಮಾಡಿ ಕುಕ್ಕರ್‌ನಲ್ಲಿ ಚೆನ್ನಾಗಿ ಬೇಯಿಸಿ ಬಳಿಕ ಸೋಸಿ ಏರ್‌ ಟೈಟ್‌ ಬಾಟಲ್ ನಲ್ಲಿ ಹಾಕಿ ಫ್ರಿಜ್‌ನಲ್ಲಿಡಿ. ತರಕಾರಿ ಎಂಥದೇ ಇರಲಿ, ಇದರ ಜೊತೆ ಬಳಸಿ, ರುಚಿರುಚಿಯಾದ ಪಲ್ಯ ತಯಾರಾಗುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ