ನಿಮ್ಮ ಬಳಿಯೂ ಸ್ಮಾರ್ಟ್‌ಫೋನ್‌ ಇದ್ದು ಅದರ ಬೇಸಿಕ್‌ ಫೀಚರ್‌ಗಳನ್ನು ಬಿಟ್ಟು ನಿಮಗೆ ಹೆಚ್ಚು ತಿಳಿದಿಲ್ಲದಿದ್ದರೆ ಹಾಗೂ ನಿಮ್ಮ ಮೊಬೈಲ್ ಫೋನ್‌ನ ದೀರ್ಘ ಬಾಳಿಕೆಗೆ ಈ ವಿಷಯಗಳ ಬಗ್ಗೆ ಅಗತ್ಯವಾಗಿ ತಿಳಿದುಕೊಳ್ಳಿ…….

ಇಂದು ಸ್ಮಾರ್ಟ್‌ಫೋನ್‌ ಎಲ್ಲರಿಗೂ ಒಂದು ದೊಡ್ಡ ಅಗತ್ಯವಾಗಿ ಬಿಟ್ಟಿದೆ. ಹೌಸ್‌ವೈಫ್‌ನಿಂದ ಹಿಡಿದು ದೊಡ್ಡ ದೊಡ್ಡ ಬಿಸ್‌ನೆಸ್‌ಮೆನ್‌ ಗಳವರೆಗೆ ಸ್ಮಾರ್ಟ್‌ಫೋನ್‌ ಇಲ್ಲದಿದ್ದರೆ ಅನೇಕ ಕೆಲಸಗಳನ್ನು ಮಾಡಲು ತೊಂದರೆಯಾಗುತ್ತದೆ. ಆದರೆ ಸ್ಮಾರ್ಟ್‌ಫೋನ್‌ ಇಟ್ಟುಕೊಂಡವರಲ್ಲಿ ಹೆಚ್ಚಿನ ಜನಕ್ಕೆ ಅದರ ಬೇಸಿಕ್‌ ಫೀಚರ್ಸ್ ಬಿಟ್ಟು ಹೆಚ್ಚಿನದೇನೂ ಗೊತ್ತಿಲ್ಲದಿದ್ದರೆ ಅಥವಾ ಅವರು ತಿಳಿದುಕೊಳ್ಳಲು ಇಚ್ಛಿಸದಿದ್ದರೆ ತೊಂದರೆಯಾಗುತ್ತದೆ. ಬೇಸಿಕ್‌ ಫೀಚರ್ಸ್ನಿಂದಲೇ ತಮ್ಮ ಅಗತ್ಯ ಪೂರೈಸಿಕೊಳ್ಳಬಹುದು ಎಂದು ಅವರು ತಿಳಿದಿರುತ್ತಾರೆ. ಸ್ಮಾರ್ಟ್‌ಫೋನ್‌ನ ಕೆಲವು ಫೀಚರ್ಸ್ ಹೇಗಿರುತ್ತವೆಯೆಂದರೆ, ಅವುಗಳ ಮಾಹಿತಿಯಿಂದ ಫೋನ್‌ ಹ್ಯಾಂಗ್‌ ಆಗುವುದರಿಂದ, ವೈರಸ್‌ ಅಟ್ಯಾಕ್‌ನಂತಹ ದೊಡ್ಡ ತೊಂದರೆಗಳಿಂದ ಪಾರಾಗಬಹುದು.

ಕೊಂಚ ಯೋಚಿಸಿ. ನೀವು ನಿಮ್ಮ  ಕ್ಲೈಂಟ್‌ಗೆ ಅರ್ಜೆಂಟಾಗಿ ಮೇಲ್‌ ಕಳಿಸುತ್ತಿದ್ದೀರಿ. ಆಗ ಫೋನ್‌ ಹ್ಯಾಂಗ್‌ ಆದರೆ ಅಥವಾ ಯಾವುದೋ ಮೆಸೇಜ್‌ ಓದಲು ಪ್ರಯತ್ನಿಸುತ್ತಿದ್ದೀರಿ. ಆದರೆ ಮೆಸೇಜ್‌ ಬಾಕ್ಸ್ ಓಪನ್‌ ಆಗುತ್ತಿಲ್ಲ. ಆಗ ಕೆಲಸಕ್ಕೆ ತೊಂದರೆಯಾಗುತ್ತದೆ. ಅದರ ಜೊತೆಗೆ ಇರಿಟೇಷನ್‌ನಿಂದಾಗಿ ಬ್ಲಡ್‌ಪ್ರೆಷರ್‌ ಹೆಚ್ಚಾಗುತ್ತದೆ. ನಿಮಗೆ ಆಶ್ಚರ್ಯವಾಗಬಹುದು. ಇಂಟರ್‌ನೆಟ್‌ನಲ್ಲಿ ಪ್ರತಿ ಸೆಕೆಂಡ್‌ ಹೊಸ ವೈರಸ್‌ ಹುಟ್ಟುತ್ತದೆ. ಈ ವೈರಸ್‌ ನಿಮ್ಮ ಮೊಬೈಲ್‌ಗೆ ನುಗ್ಗಿ ಅದರ ಸ್ಪೀಡ್‌ ಕಡಿಮೆ ಮಾಡುತ್ತದೆ. ಅದರಿಂದ ಫೋನ್‌ ಹ್ಯಾಂಗ್‌ ಆಗತೊಡಗುತ್ತದೆ. ಆದ್ದರಿಂದ ಈ ವಿಷಯಗಳನ್ನು ಗಮನದಲ್ಲಿಟ್ಟು ನಿಮ್ಮ ಫೋನ್‌ನ್ನು ವೈರಸ್‌ನಿಂದ ರಕ್ಷಿಸಬಹುದು.

ಸಿಸ್ಟಮ್ ಅಪ್‌ಡೇಟ್‌

ನಿಮ್ಮ ಫೋನ್‌ನಲ್ಲಿ ಎಂದಾದರೂ ಆಪರೇಟಿಂಗ್‌ ಸಿಸ್ಟಮ್ ಅಪ್‌ಡೇಟ್‌ನ ಡೈಲಾಗ್‌ ಬಾಕ್ಸ್ ಕಾಣಿಸಿದರೆ ಅದನ್ನು ಅಲಕ್ಷ್ಯ ಮಾಡಬೇಡಿ. ಸೆಟಿಂಗ್‌ನಲ್ಲಿ ಸಿಸ್ಟಮ್ ಅಪ್‌ಡೇಟ್‌ಗೆ ಹೋಗಿ ನಿಮ್ಮ ಸ್ಮಾರ್ಟ್‌ಫೋನ್‌ಗೆ ಯಾವುದಾದರೂ ಹೊಸ ಸಿಸ್ಟಮ್ ಸಾಫ್ಟ್ ವೇರ್‌ ಇದೆಯೇ ಎಂದು ನೋಡಿ. ಇದ್ದರೆ ಅದರಲ್ಲಿ ಲೆಟರ್‌ ಅಥವಾ ಬೋಟ್‌ನ ಬಟನ್‌ ಕೊಟ್ಟಿರುತ್ತದೆ. ನೀವು ಬೋಟ್‌ನ ಬಟನ್‌ ಒತ್ತಬೇಕು. ನೀವು ಬಯಸಿದರೆ ಅಪ್‌ಡೇಟ್‌ ಹೈಲೈಟ್ಸ್ ನ್ನೂ ಓದಬಹುದು. ಈ ಹೊಸ ಸಾಫ್ಟ್ ವೇರ್‌ನಿಂದ ನಿಮ್ಮ ಫೋನ್‌ಗೆ ಯಾವ ಲಾಭಗಳಿವೆ ಎಂದು ನೀವು ತಿಳಿಯಬಹುದು. ಅಂದಹಾಗೆ ಹಳೆಯ ಓಎಸ್‌ನಲ್ಲಿ ಪ್ಯಾಚ್‌ ಆಗದಿರುವುದರಿಂದ ವೈರಸ್‌ ಹೆಚ್ಚು ಅಟ್ಯಾಕ್‌ ಮಾಡುತ್ತದೆ.

ಅನ್‌ನೋನ್‌ ಸೋರ್ಸ್‌ನ ಆ್ಯಪ್‌ನ್ನು ಆಫ್‌ ಮಾಡಿ

ನಿಮ್ಮ ಸ್ಮಾರ್ಟ್‌ಫೋನ್‌ನ ಸೆಟಿಂಗ್‌ಗೆ ಹೋಗಿ ಸೆಕ್ಯೂರಿಟಿ ಸೆಟಿಂಗ್‌ ಕ್ಲಿಕ್‌ ಮಾಡಿ. ಅದರಲ್ಲಿ ಡಿವೈಸ್‌ ಅಡ್ಮಿನಿಸ್ಟ್ರೇಷನ್‌ನ ಆಯ್ಕೆ ಇರುತ್ತದೆ. ಅದರಿಂದ ಅನ್‌ನೋನ್‌ ಸೋರ್ಸ್‌ನ ಆಪ್ಶನ್‌ ಸಿಗುತ್ತದೆ. ಒಂದುವೇಳೆ ನಿಮ್ಮ ಫೋನ್‌ನಲ್ಲಿ ಅನ್‌ನೋನ್‌ ಸೋರ್ಸ್‌ನ ಬಟನ್‌ ಆನ್‌ ಆಗಿದ್ದರೆ ನಿಮ್ಮ ಫೋನ್‌ನಲ್ಲಿ ಯಾವುದೇ ಮಾಹಿತಿಯಿಲ್ಲದೆ ತಾನಾಗಿ ಹಲವಾರು ಆ್ಯಪ್ಸ್ ಡೌನ್‌ಲೋಡ್‌ ಆಗುತ್ತವೆ. ಆದ್ದರಿಂದ ಈ ಬಟನ್‌ ಆಫ್‌ ಮಾಡಿಬಿಡಿ. ಅದನ್ನು ದೂರ ಮಾಡಿ ನಿಮ್ಮ ಫೋನ್‌ನಲ್ಲಿ ವೆರಿಫೈಡ್‌ ಆಗದ ಆ್ಯಪ್ಸ್ ಇನ್‌ಸ್ಟಾಲ್ ಆಗುವುದಿಲ್ಲ.

ಸ್ಕ್ರೀನ್‌ ಲಾಕ್‌ ಉಪಯೋಗಿಸಿ

ಸಾಧಾರಣ ಮೊಬೈಲ್ ಫೋನ್‌ನಂತೆ ಸ್ಮಾರ್ಟ್‌ಫೋನ್‌ನಲ್ಲೂ ಸ್ಕ್ರೀನ್‌ಲಾಕ್‌ ಸಿಸ್ಟಮ್ ಅಲ್ಲದೆ ಹಲವಾರು ಲಾಕ್‌ ಸಿಸ್ಟಮ್ ಗಳು ಇರುತ್ತವೆ. ಉದಾಹರಣೆಗೆ ಪ್ಯಾಟರ್ನ್‌ ಲಾಕ್‌, ಪಿನ್‌ ಲಾಕ್‌, ಡ್ರ್ಯಾಗ್‌ ಸ್ಕ್ರೀನ್‌ಲಾಕ್‌ ಇತ್ಯಾದಿ. ಯಾವುದೇ  ಆಯ್ಕೆ ಉಪಯೋಗಿಸಿ. ಮೊಬೈಲ್‌ ಸ್ಕ್ರೀನ್‌ನ್ನು ಲಾಕ್‌ ಮಾಡಬಹುದು. ಅದಕ್ಕೆ ಸೆಟಿಂಗ್‌ಗೆ ಹೋಗಿ ಸ್ಮಾರ್ಟ್‌ಫೋನ್‌ನಲ್ಲಿ ಕೊಟ್ಟಿರುವ ಸ್ಕ್ರೀನ್‌ಲಾಕ್‌ನ್ನು ಎನೇಬಲ್ ಮಾಡಿ.

ಆ್ಯಂಟಿ ವೈರಸ್‌ ಇನ್‌ಸ್ಟಾಲ್ ಮಾಡಿ

ಕಂಪ್ಯೂಟರ್‌ ಮತ್ತು ಲ್ಯಾಪ್‌ಟಾಪ್‌ ನಂತೆಯೇ ಸ್ಮಾರ್ಟ್‌ಫೋನ್‌ಗೆ ಕೂಡ ಆ್ಯಂಟಿವೈರಸ್‌ ಬರುತ್ತದೆ. ನಿಮ್ಮ ಸ್ಮಾರ್ಟ್‌ಫೋನ್‌ನ ಗೂಗಲ್ ಪ್ಲೇಸ್ಟೋರ್‌ನಲ್ಲಿ ನಿಮಗೆ ಫ್ರೀ ಆ್ಯಂಟಿವೈರಸ್‌ ಸಿಗುತ್ತದೆ. ನೀವು ಅವುಗಳಲ್ಲಿ ವೆರಿಫೈಡ್‌ ಆಗಿರುವಂತಹ ಮತ್ತು ಒಳ್ಳೆಯ ರಿವ್ಯೂ ಇರುವಂತಹ ಆ್ಯಂಟಿವೈರಸ್‌ ಡೌನ್‌ಲೋಡ್‌ ಮಾಡಿಕೊಳ್ಳಿ. ರಿವ್ಯೂ ನೋಡಲು ಆ್ಯಪ್‌ಗೆ ಕೊಟ್ಟಿರುವ ಸ್ಟಾರ್ಸ್‌ ನೋಡಿ. ಹೆಚ್ಚು ಸ್ಟಾರ್ಸ್‌ ಸಿಕ್ಕಿರುವಂತಹ ಆ್ಯಂಟಿವೈರಸ್‌ನ್ನೇ ಆರಿಸಿಕೊಳ್ಳಿ. ಆ್ಯಂಟಿವೈರಸ್‌ನಿಂದ ಕಾಲಕಾಲಕ್ಕೆ ನಿಮ್ಮ ಫೋನ್‌ನ್ನು ಸ್ಕ್ಯಾನ್‌ ಮಾಡುತ್ತಿರಿ. ಇದರಿಂದ ವೈರಸ್‌ ಆದರೂ ಡಿಲೀಟ್‌ ಆಗುತ್ತದೆ.

ಬ್ಲೂಟೂಥ್‌ ಆಫ್‌ ಮಾಡಿ

ಬ್ಲೂಟೂಥ್‌ ಒಂದು ಒಳ್ಳೆಯ ಸೌಲಭ್ಯವಾಗಿದೆ. ಆದರೆ ಅದನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಬೇಕು. ಇಲ್ಲದಿದ್ದರೆ ಇದು ಅತ್ಯಂತ ಅಪಾಯಕಾರಿಯಾಗುತ್ತದೆ. ಆಗಾಗ್ಗೆ ಜನ ಇನ್ನೊಬ್ಬರ ಫೋನ್‌ನಿಂದ ಫೋಟೋ ಮ್ಯಾಟರ್‌ ಪಡೆಯಲು ಇದನ್ನು ಆನ್‌ ಮಾಡುತ್ತಾರೆ. ಆದರೆ ಆಫ್‌ ಮಾಡಲು ಮರೆಯುತ್ತಾರೆ. ಈ ಮರೆ ಅತ್ಯಂತ ಘಾತಕವಾಗುತ್ತದೆ. ಏಕೆಂದರೆ ಬ್ಲೂಟೂಥ್‌ ಮೂಲಕ ತಮ್ಮ ಮೊಬೈಲ್‌ನಿಂದ ಯಾರಾದರೂ ನಿಮ್ಮ ಮೊಬೈಲ್‌ಗೆ ನುಗ್ಗಿ ಯಾವುದೇ ಮಾಹಿತಿ ಪಡೆಯಬಹುದು. ಇಷ್ಟೇ ಅಲ್ಲ, ನಿಮ್ಮ ಖಾಸಗಿ ಚಿತ್ರಗಳು, ಬ್ಯಾಂಕ್‌ ಅಕೌಂಟ್‌ ವಿವರಗಳು, ನಿಮ್ಮ ಸೋಶಿಯಲ್ ನೆಟ್‌ವರ್ಕ್‌ ಅಕೌಂಟ್‌ನ್ನೂ ಹ್ಯಾಕ್‌ ಮಾಡಬಹುದು. ಬ್ಲೂಟೂಥ್‌ ಮೂಲಕ ನಿಮ್ಮ ಫೋನ್‌ನಲ್ಲಿ ಹಾನಿಕಾರಕ ಕಳಿಸಬಹುದು.

ಓಪನ್‌ ವೈಫೈ ಹಾಟ್‌ಸ್ಪಾಟ್‌ ಉಪಯೋಗಿಸಬೇಡಿ

ಈಗೀಗ ಎಲ್ಲ ಕಡೆ ವೈಫೈ ಸೌಲಭ್ಯ ಸಿಗುತ್ತಿದೆ. ಒಮ್ಮೊಮ್ಮೆ ಪಾಸ್‌ವರ್ಡ್‌ ಕೂಡ ಕೇಳದೆ ವೈಫೈ ಕನೆಕ್ಟ್ ಆಗುತ್ತದೆ. ಎಂದಿಗೂ ಫ್ರೀ ಇಂಟರ್‌ನೆಟ್‌ನ ದುರಾಸೆಗೆ ಒಳಗಾಗಬಾರದು. ಎಂದಿಗೂ ಮುಕ್ತ ವೈಫೈ ಹಾಟ್‌ಸ್ಪಾಟ್‌ನಿಂದ ನಿಮ್ಮ ಫೋನ್‌ ಕನೆಕ್ಟ್ ಮಾಡಬಾರದು. ಹಾಗೆ ಮಾಡಿದರೆ ನಿಮ್ಮ ಫೋನ್‌ಗೆ ವೈರಸ್‌ ದಾಳಿ ಮಾಡುತ್ತದೆ, ಫೋನ್‌ ಹ್ಯಾಕ್‌ ಕೂಡ ಆಗುತ್ತದೆ.

ಪಾಪ್‌ಅಪ್‌ ಆಪ್ಶನ್‌ನ್ನು ಬ್ಲಾಕ್‌ ಮಾಡಿ

ಒಮ್ಮೊಮ್ಮೆ ಇಂಟರ್‌ನೆಟ್‌ ಉಪಯೋಗಿಸುವಾಗ ಕ್ಲಿಕ್‌ ಮಾಡಿದಾಗ ಪಾಪ್‌ಅಪ್‌ ತೆರೆದು ಕೊಳ್ಳುತ್ತದೆ. ಆಕಸ್ಮಿಕ ತಪ್ಪಿನಿಂದ ಅದರ ಮೇಲೂ ಕ್ಲಿಕ್‌ ಆಗುತ್ತದೆ. ಅದರಿಂದ ವೈರಸ್‌ ಸುಲಭವಾಗಿ ಫೋನ್‌ನಲ್ಲಿ ನುಗ್ಗುತ್ತದೆ. ಆದ್ದರಿಂದ ನಿಮ್ಮ ಸ್ಮಾರ್ಟ್‌ಫೋನ್‌ನ ಬ್ರೌಸರ್‌ನ ಸೆಟಿಂಗ್‌ಗೆ ಹೋಗಿ. ಅಲ್ಲಿ ನಿಮಗೆ ಸೈಟ್‌ ಸೆಟಿಂಗ್‌ನ ಆಪ್ಶನ್‌ ಸಿಗುತ್ತದೆ. ಅಲ್ಲಿಂದ ಪಾಪ್‌ಅಪ್‌ನ್ನು ಬ್ಲಾಕ್‌ ಮಾಡಿ. ಜೊತೆಗೆ ಕ್ಯಾಮೆರಾ ಮತ್ತು ಮೈಕ್ರೋಫೋನ್‌ ಆಪ್ಶನ್‌ನ್ನು ಆ್ಯಸ್ಕ್ ಫಾರ್ ಇಟ್ ಮಾಡಿಬಿಡಿ. ಏಕೆಂದರೆ ವೆಬ್‌ಸೈಟ್‌ಗಳು ನಿಮ್ಮ ಕ್ಯಾಮೆರಾ ಮತ್ತು ಮೈಕ್ರೋಫೋನ್‌ನ್ನು ಉಪಯೋಗಿಸುವಂತಾಗಬಾರದು.

ಇಮೇಲ್‌ ಅಟ್ಯಾಚ್‌ಮೆಂಟ್‌ ತೆರೆಯಬೇಡಿ

ನಮ್ಮೆಲ್ಲರಿಗೂ ಮೇಲ್ ಬಾಕ್ಸ್ ನಲ್ಲಿ ಅನೇಕ ಸ್ಪ್ಯಾಮ್ ಮೇಲ್‌ಗಳು ಬರುತ್ತವೆ. ಅನೇಕ ಬಾರಿ ನಾವು ತಿಳಿದುಕೊಳ್ಳದೆ ಅವನ್ನು ಓಪನ್‌ ಮಾಡಿಬಿಡುತ್ತೇವೆ. ಈ ಮೇಲ್‌ಗಳಲ್ಲಿ ಅನೇಕ ಬಾರಿ ಅಟ್ಯಾಚ್‌ಮೆಂಟ್‌ ಫೈಲ್ಸ್ ಕೂಡ ಕೊಟ್ಟಿರುತ್ತಾರೆ. ಅವುಗಳಲ್ಲಿ ಅನೇಕ ಆಕರ್ಷಕ ಆಫರ್‌ಗಳು ಇರುತ್ತವೆ. ಆದರೆ ವಾಸ್ತವದಲ್ಲಿ ಅವೆಲ್ಲ ಸುಳ್ಳಾಗಿರುತ್ತವೆ. ಅವನ್ನು ತೆರೆದಾಗ ವೈರಸ್‌ ಅಟ್ಯಾಕ್‌ ಆಗಬಹುದು. ಆದ್ದರಿಂದ ಯಾವುದೇ ತಿಳಿಯದ ಇಮೇಲ್‌ನ ಅಟ್ಯಾಚ್‌ಮೆಂಟ್‌ ಓಪನ್‌ ಮಾಡಬೇಡಿ. ಹೆಚ್ಚಿನ ವೈರಸ್‌ ಇಮೇಲ್‌ ಅಟ್ಯಾಚ್‌ಮೆಂಟ್‌ ಮೂಲಕವೇ ಬರುತ್ತವೆ. ಇಮೇಲ್‌ ನಿಮಗೆ ಪರಿಚಿತರಿಂದಲೇ ಬಂದಿರುವುದು ಎಂದು ವಿಶ್ವಾಸ ಬರುವವರೆಗೆ ಯಾವುದೇ ಅಟ್ಯಾಚ್‌ಮೆಂಟ್‌ನ್ನು ತೆರೆಯಬೇಡಿ.

– ಜಿ. ದಿವ್ಯಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ