ಇಂದಿನ ಯಾಂತ್ರಿಕ ಜೀವನದಲ್ಲಿ ನಗರದ ಬದುಕು ವಿಭಿನ್ನವಾಗಿದೆ. ಇಂತಹ ವ್ಯಸ್ತ ಜೀವನ ಶೈಲಿಯಲ್ಲಿ ಡೇಟಿಂಗ್ ಹೊರಡುವುದು ಸಹಜ, ಸಾಮಾನ್ಯ. ಇದರ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣವೇ…….?
ಇಂದಿನ ವ್ಯಸ್ತ ಜೀವನಶೈಲಿಯಲ್ಲಿ ಪ್ರೀತಿಯ ದಾರಿಯಲ್ಲಿ ಕಾಲಿಡುವ ಯುವಕಯುವತಿಯರು ಎಲ್ಲಕ್ಕೂ ಮುಂಚೆ ಪರಸ್ಪರರ ಬಗ್ಗೆ ತಿಳಿದು ಕೊಳ್ಳಲು ಉತ್ಸುಕರಾಗಿರುತ್ತಾರೆ. ಅದಕ್ಕಾಗಿ ಅವರು ಡೇಟ್‌ಗೆ ಹೋಗಲು ಯೋಜನೆ ಮಾಡುತ್ತಾರೆ. ಅಂದಹಾಗೆ ಯಾವುದೇ ಪ್ರೀತಿಭರಿತ ಸಂಬಂಧಗಳನ್ನು ಪೂರ್ತಿಗೊಳಿಸಲು ಕೆಲವು ಮಾತುಕತೆಗಳು ಅತ್ಯವಶ್ಯ. ಈ ಮಾತುಕತೆಗಳೇ ನಿಮ್ಮ ಮುಂದಿನ ಜೀವನ ಹೇಗಿರಬಹುದು ಎಂಬುದನ್ನು ನಿರ್ಧರಿಸಬಹುದು.
`ಲೈಫ್ ಇನ್ ಮೆಟ್ರೋ'ದ ನಾಯಕ ಇರ್ಫಾನ್ ಖಾನ್ ಮತ್ತು ಕೊಂಕಣಾ ಸೇನ್ ಪ್ಲಾನ್ ಮಾಡಿಕೊಂಡು ಮೊದಲ ಡೇಟ್‌ನಲ್ಲಿ ಭೇಟಿಯಾಗುತ್ತಾರೆ. ಆದರೆ ಆ ಭೇಟಿಯಲ್ಲಿ ಇರ್ಫಾನ್ ಖಾನ್ ದೃಷ್ಟಿ ಕೊಂಕಣಾ ಸೇನ್‌ಗಿಂತ ಹೆಚ್ಚಾಗಿ ಅವಳ ಬಟ್ಟೆ ಹಾಗೂ ಮೈಮಾಟದ ಮೇಲೆಯೇ ಇರುತ್ತದೆ. ಅದನ್ನು ಕಂಡು ಕೊಂಕಣಾಳ ಮೂಡ್ ಹಾಳಾಗಿ ಹೋಗುತ್ತದೆ. ಆಗಲೇ ಅವಳು ಅವನು ಹೇಗಿರಬಹುದು ಎಂದು ಯೋಚಿಸಲಾರಂಭಿಸುತ್ತಾಳೆ. ನನ್ನ ಬಟ್ಟೆ ಹಾಗೂ ಮೈಮಾಟದ ಬಗೆಗಷ್ಟೇ ಇವನ ಗಮನವಿದೆ. ಹೀಗಾಗಿ ಕೊಂಕಣಾಗೆ ಡೇಟ್ ಇಷ್ಟ ಆಗುವುದೇ ಇಲ್ಲ. ಇಂತಹದರಲ್ಲಿ ನಿಮ್ಮ ಡೇಟಿಂಗ್‌ನ್ನು ಸ್ಮರಣಾರ್ಹಗೊಳಿಸಿಕೊಳ್ಳಬೇಕೆಂದರೆ, ಕೆಲವು ಸಂಗತಿಗಳನ್ನು ಅರ್ಥ ಮಾಡಿಕೊಳ್ಳಿ. ಇವು ನಿಮ್ಮನ್ನು ಪ್ರೀತಿಯ ಉತ್ತುಂಗಕ್ಕೆ ಏರಿಸುತ್ತವೆ ಹಾಗೂ ಕೆಲವೇ ಸಲದ ಮಾತುಕತೆಯಲ್ಲಿ ನಿಕಟತೆಯೂ ಹೆಚ್ಚುವಂತೆ ಮಾಡುತ್ತದೆ.
ಡೇಟಿಂಗ್ ಏಕೆ ಅತ್ಯವಶ್ಯ?
ಮನೋಚಿಕಿತ್ಸಕಿ ಪ್ರಜ್ಞಾ ಹೀಗೆ ಹೇಳುತ್ತಾರೆ, ವಿರುದ್ಧ ಲಿಂಗದ ವ್ಯಕ್ತಿ ಜೊತೆ ಮಾತುಕತೆ ನಡೆಸುವುದೆಂದರೆ ಅದು ಯಾರಿಗೇ ಆದರೂ ರೋಮಾಂಚನ ಉಂಟುಮಾಡುತ್ತದೆ. ಡೇಟಿಂಗ್ ತನ್ನ ದೈನಂದಿನ ಕೆಲಸದಿಂದ ಹೊರಬಂದ ವ್ಯಕ್ತಿಯೊಬ್ಬನಿಗೆ ಜೀವನದಲ್ಲಿ ಸ್ಪಾರ್ಕ್‌ನ ರೀತಿಯಲ್ಲಿ ಕೆಲಸ ಮಾಡುತ್ತದೆ.
ಇದರಿಂದಲೇ ಒಳ್ಳೆಯ ಫೀಲಿಂಗ್ಸ್ ಬರಲಾರಂಭಿಸುತ್ತದೆ. ನೀವು ಕೇವಲ ನಿಮ್ಮ ಬಗೆಗಷ್ಟೇ ಗಮನ ಕೊಡುವುದಿಲ್ಲ. ನಿಮ್ಮ ಪೋಷಾಕು, ವರ್ತನೆಯ ಬಗೆಗೂ ಗಮನ ಕೊಡಲು ಶುರು ಮಾಡುವಿರಿ. ಅಂದಹಾಗೆ, ನಮ್ಮಲ್ಲೊಂದು ಸೆಕ್ಷುಯಲ್ ಎನರ್ಜಿ ಇರುತ್ತದೆ. ಅದು ಮೈಮನಸ್ಸಿನಲ್ಲಿ ರೋಮಾಂಚನವನ್ನು ಉಂಟು ಮಾಡುತ್ತದೆ. ನಾವು ಯಾರೊಂದಿಗಾದರೂ ಭೇಟಿ ಆಗಬೇಕೆಂದಿದ್ದರೆ, ಮನಸ್ಸಿನಲ್ಲಿ ಎಂತಹ ಭಾವನೆ ತುಂಬುತ್ತದೆ ಎಂದರೆ, ಅದನ್ನು ಶಬ್ದಗಳಲ್ಲಿ ವರ್ಣಿಸಲು ಆಗದು. ನಾನು ಇನ್ನೊಬ್ಬರಿಗೆ ಎಷ್ಟೊಂದು ಇಂಪಾರ್ಟೆಂಟ್ ಆಗಿರುವೆ, ಆ ಕಾರಣದಿಂದ ಅವರು ನನ್ನನ್ನು ಭೇಟಿಯಾಗಲು ಉತ್ಸುಕರಾಗಿದ್ದಾರೆ ಎಂದು ಅವರಿಗೆ ಅನಿಸತೊಡಗುತ್ತದೆ. ಡೇಟಿಂಗ್ ನಮಗೆ ಸಾಮಾಜಿಕ ಶಿಷ್ಟಾಚಾರಗಳನ್ನು ಕಲಿಸುತ್ತದೆ.
ಹುಮ್ಮಸ್ಸಿನಿಂದ ಡೇಟಿಂಗ್ ಮಾಡಿ
ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಲು ಡೇಟಿಂಗ್‌ಗೆ ಹೋಗುತ್ತಿರಬಹುದು, ಇಲ್ಲಿ ಫ್ರೆಂಡ್‌ಶಿಪ್‌ಗಾಗಿ ಡೇಟಿಂಗ್‌ಗೆ ಹೋಗುವುದು ಒಂದು ವಿಶಿಷ್ಟ ಅನುಭವ ನೀಡುತ್ತದೆ. ಇದರ ಮುಖಾಂತರ ಪರಸ್ಪರರನ್ನು ಅರಿತುಕೊಳ್ಳಲು ಸಹಾಯವಾಗುತ್ತದೆ.
ಮೊದಲ ಡೇಟ್
ಡೇಟ್‌ಗೆ ಹೋಗುವುದೆಂದರೆ ಅದೊಂದು ಬಹುದೊಡ್ಡ ಟಾಸ್ಕ್ ಗಿಂತ ಕಡಿಮೆ ಏನಿಲ್ಲ. ಅದು ಹುಡುಗ ಅಥವಾ ಹುಡುಗಿಗೆ ಮಹತ್ವದ ಕ್ಷಣವೇ ಆಗಿರುತ್ತದೆ. ಮೊದಲನೆ ಸಲ ಡೇಟ್‌ಗೆ ಹೋಗುವುದಾಗಿದ್ದರೆ, ಅದನ್ನು ಮತ್ತಷ್ಟು ಸ್ಮರಣಾರ್ಹವಾಗಿಸಲು ಅದು ಇನ್ನಷ್ಟು ಅತ್ಯವಶ್ಯವಾಗಿರುತ್ತದೆ. ನೀವು ಎಂತಹದೊಂದು ಪ್ರಭಾವ ಮೂಡಲು ಪ್ರಯತ್ನಿಸಬೇಕೆಂದರೆ, ಎದುರಿನ ವ್ಯಕ್ತಿ ನಿಮ್ಮನ್ನು ಮತ್ತೊಮ್ಮೆ ಭೇಟಿಯಾಗಲು ಕಾತುರನಾಗಿರಬೇಕು. ಕೆಲವು ಸಂಗತಿಗಳನ್ನು ಗಮನದಲ್ಲಿಟ್ಟುಕೊಳ್ಳಿ: