ಮದುವೆಯ ನಂತರದ ನಿಮ್ಮ ಮೊದಲ ಟ್ರಿಪ್‌ನ್ನು ಸ್ಮರಣೀಯಗೊಳಿಸಲು ಹ್ಯಾಪಿ ಹನಿಮೂನ್‌ನ ಈ ಟಿಪ್ಸ್ ನಿಮ್ಮದಾಗಿಸಿಕೊಳ್ಳಿ.....

ಮದುವೆ ನಿಶ್ಚಯವಾಗುತ್ತಲೆ ವಿನಯ್‌ನ ಹನಿಮೂನ್‌ ಕಲ್ಪನೆ ಮುಗಿಲು ಮುಟ್ಟಿತು. ಮನದಲ್ಲೇ ಅನೇಕ ರೀತಿಯ ಪ್ಲ್ಯಾನ್‌ಗಳನ್ನು ಮಾಡತೊಡಗಿದ. ಕೊನೆಗೆ ಹೆಂಡತಿಯನ್ನು ಕರೆದುಕೊಂಡು ಹನಿಮೂನ್‌ಗೆ ಹೋಗುವ ದಿನ ಬಂತು.

ಆದರೆ ಇಬ್ಬರೂ ಬೇಗನೇ ಮನೆಗೆ ವಾಪಸ್ಸಾದರು. ಇಬ್ಬರೂ ತಮ್ಮ ಪ್ರೋಗ್ರಾಂನ ಮೊದಲೇ ಮನೆಗೆ ಹಿಂದಿರುಗುವಂಥದ್ದು ಏನಾಯಿತು? ಅಸಲಿಗೆ ಹನಿಮೂನ್‌ನಲ್ಲಿ ವಿನಯ್‌ನಿಂದ ಕೆಲವು ತಪ್ಪುಗಳಾದವು. ಅದರಿಂದ ಅವರ ಹನಿಮೂನ್‌ನ ಮೋಜು ಹಾಳಾಯಿತು.

ಮದುವೆ ನಿಶ್ಚಯವಾಗುತ್ತಲೇ ಜನ ಹನಿಮೂನ್‌ನ ಕನಸು ಕಾಣತೊಡಗುತ್ತಾರೆ. ಆದರೆ ಹನಿಮೂನ್‌ ಸಂದರ್ಭದಲ್ಲಿ ಕೆಲವು ತಪ್ಪುಗಳನ್ನು ಮಾಡುತ್ತಾರೆ. ಆದ್ದರಿಂದ ಹನಿಮೂನ್‌ ಸಂದರ್ಭದಲ್ಲಿ ಕೆಲವು ಅಗತ್ಯದ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ತಪ್ಪುಗಳಿಂದ ರಕ್ಷಿಸಿಕೊಳ್ಳಬಹುದು. ಉದಾಹರಣೆಗೆ : ಎಲ್ಲಿಗೆ ಹೋಗಬೇಕೆಂದು ಒಟ್ಟಿಗೆ ನಿರ್ಧರಿಸಿ : ಹನಿಮೂನ್‌ ಎಂದರೆ ಇಬ್ಬರೂ ಹೋಗಬೇಕಾಗುತ್ತದೆ. ಆದ್ದರಿಂದ ಅದರ ಬಗ್ಗೆ ಒಬ್ಬರೇ ನಿರ್ಧರಿಸಬೇಡಿ. ನೀವು ಹನಿಮೂನ್‌ಗೆ ಹೋಗುವ ಜಾಗ ನಿಮ್ಮ ಸಂಗಾತಿಗೆ ಇಷ್ಟವಾಗದಿರಬಹುದು. ವಾತಾವರಣಕ್ಕೆ ಅನುಗುಣವಾಗಿ ಆರಾಮದಾಯಕ, ಖುಷಿ ತರುವ ನೆಮ್ಮದಿಯ ತಾಣ ಹುಡುಕಿ.

ಮೊದಲು ಬಜೆಟ್‌ ತಯಾರಿಸಿ : ಹನಿಮೂನ್‌ಗೆ ಹೋಗುವ ಮೊದಲು ಬಜೆಟ್‌ ತಯಾರಿಸಿ. ಮುಂದೆ ನಿಮಗೆ ಸಮಸ್ಯೆ ಉಂಟಾಗಬಾರದು. ತೋರಿಕೆಗಾಗಿ ವಿದೇಶಕ್ಕೆ ಹೋಗುವುದು ಅಥವಾ ಹೈಫೈ ಜಾಗದಲ್ಲಿ ತಂಗುವ ಪ್ಲ್ಯಾನ್‌ ಮಾಡಬಾರದು. ನಿಮ್ಮ ಸಾಮರ್ಥ್ಯಕ್ಕಿಂತ ಹೆಚ್ಚಿನ ಬಜೆಟ್‌ ನಿಮ್ಮ ಹನಿಮೂನ್‌ನಲ್ಲಿ ತೊಂದರೆಯಾಗಬಹುದು. ನಿಮ್ಮ ಬಜೆಟ್‌ನಲ್ಲಿ ಮಾಡಿದ ಹನಿಮೂನ್‌ ಟೂರ್‌ ನಿಜವಾದ ಆನಂದ ತರುತ್ತದೆ.

ಅಡ್ವೆಂಚರ್‌ ಟೂರ್‌ ಮಾಡಬೇಡಿ : ಕೆಲವು ದಂಪತಿಗಳು ತಮ್ಮ ಹನಿಮೂನ್‌ ಟೂರ್‌ನ್ನು ಅಡ್ವೆಂಚರ್‌ ಟೂರ್‌ ಮಾಡಿಕೊಳ್ಳುತ್ತಾರೆ. ಅವರಿಗೆ ಎಷ್ಟು ಆಯಾಸವಾಗಿರುತ್ತದೆಂದರೆ ಹಾಸಿಗೆಗೆ ಹೋದ ಕೂಡಲೇ ನಿದ್ದೆ ಬಂದುಬಿಡುತ್ತದೆ. ಅದರಿಂದ ಹನಿಮೂನ್‌ನ ಮಜಾ ಹಾಳಾಗುತ್ತದೆ.

ವ್ಯರ್ಥ ಮಾತುಗಳು ಬೇಡ : ಸುತ್ತಾಡುವಾಗ ವ್ಯರ್ಥ ಮಾತುಗಳು ಬೇಡ. ಯಾವುದಾದರೂ ಗಾರ್ಡನ್‌ ಅಥವಾ ಶಾಂತ ಪ್ರದೇಶದಲ್ಲಿ ಕೂತು ರೊಮ್ಯಾಂಟಿಕ್‌ ಆಗಿ ಮಾತಾಡಿ ಅಥವಾ ಕಣ್ಣುಗಳಲ್ಲೇ ಮಾತಾಡಿ.

ಬೇರೆ ದಂಪತಿಗಳನ್ನು ನೋಡಬೇಡಿ : ಅನೇಕ ಹುಡುಗರು ಹನಿಮೂನ್‌ ಟೂರ್‌ನಲ್ಲಿ ಇತರ ಕಪಲ್ ಗಳನ್ನು ವಿಶೇಷವಾಗಿ ಹುಡುಗಿಯರನ್ನು ದುರುಗುಟ್ಟಿ ನೋಡುತ್ತಾರೆ. ಅಸಲಿಗೆ ಹುಡುಗಿಯರ ಮೇಲೆ ಕಣ್ಣು ಹಾಕುವುದು ಹುಡುಗರ ಸ್ವಭಾವ. ಆದರೆ ಅವರು ಬ್ಯಾಚುಲರ್‌ ಲೈಫ್‌ನಿಂದ ಮ್ಯಾರೇಜ್‌ ಲೈಫ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಹೀಗಿರುವಾಗ ಸಂಗಾತಿಗೆ ನಿಮ್ಮ ಈ ಅಭ್ಯಾಸ ಕೆಟ್ಟದೆನಿಸುತ್ತದೆ.

ಮೊಬೈಲ್ ಆಫ್‌ ಮಾಡಿ : ಈಗ ಹೆಚ್ಚು ಜನ ಮೊಬೈಲ್ ಕಾಲ್‌, ನೆಟ್‌ ಅಥವಾ ಗೇಮ್ ನಲ್ಲಿ ಬಿಜಿಯಾಗಿರುತ್ತಾರೆ. ಮೊಬೈಲ್ ನಲ್ಲಿ ವ್ಯಸ್ತರಾಗಿರುವಾಗ ಪರಸ್ಪರ ಗಮನ ದೂರವಾಗುತ್ತದೆ. ಹನಿಮೂನ್‌ ಸಂದರ್ಭದಲ್ಲಿ ಮೊಬೈಲ್‌ ಆಫ್‌ ಮಾಡಿ. ಮನೆಯವರೊಂದಿಗೆ ಮಾತಾಡಬೇಕಿದ್ದರೆ ಸ್ವಲ್ಪ ಹೊತ್ತು ಆನ್‌ ಮಾಡಿಕೊಳ್ಳಿ.

ಶೂಟ್‌ ಮಾಡಬೇಡಿ : ಕೆಲವು ದಂಪತಿಗಳು ಎಷ್ಟು ಎಕ್ಸೈಟೆಡ್‌ ಆಗಿರುತ್ತಾರೆಂದರೆ ತಮ್ಮ ಫಸ್ಟ್ ನೈಟ್‌ನ ಕಲಾಪಗಳನ್ನು ಶೂಟ್‌ ಮಾಡುತ್ತಾರೆ. ರೋಮಾಂಚಕ ಕ್ಷಣಗಳನ್ನು ಶೂಟ್‌ ಮಾಡುವುದು ಒಳ್ಳೆಯದಲ್ಲ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ