ಕೋಣೆಯ ನೆಲ ಅಲ್ಲಿನ ಒಳಾಂಗಣ ಸೌಂದರ್ಯವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹೀಗಾಗಿ ಈಗ ಜನರು ಕೋಣೆಯ ಸೀಲಿಂಗ್‌, ಗೋಡೆ ಮತ್ತು ಇತರೆ ಅಲಂಕಾರಿಕ ಸಲಕರಣೆಗಳ ಜೊತೆ ಜೊತೆಗೆ ನೆಲದ ಅಲಂಕಾರದ ಬಗೆಗೂ ಗಮನ ಕೊಡುತ್ತಿದ್ದಾರೆ. ಅವರ ಈ ಗಮನ ಕೇವಲ ನೆಲದ ಸೌಂದರ್ಯವನ್ನಷ್ಟೇ ಹೆಚ್ಚಿಸುವುದಾಗಿರುವುದಿಲ್ಲ ಅದರ ಸ್ವಚ್ಛತೆ ಮತ್ತು ತಮ್ಮ ಆರೋಗ್ಯದ ಬಗೆಗೂ ಕಾಳಜಿ ಹೊಂದಿರುವುದಾಗಿರುತ್ತದೆ.

ಅಂದಹಾಗೆ, ನೆಲ ಕೋಣೆಯ ಎಂತಹ ಒಂದು ಭಾಗವಾಗಿರುತ್ತದೆ ಎಂದರೆ, ಅದು ಬಹುಬೇಗ ಕೊಳೆಯಾಗುತ್ತದೆ. ಅದರ ಸ್ವಚ್ಛತೆಯ ಬಗ್ಗೆ ಗಮನ ಕೊಡದೇ ಇದ್ದರೆ, ಕೋಣೆಯ ಸೌಂದರ್ಯಕ್ಕೆ ಕುಂದು ಉಂಟಾಗುತ್ತದೆ. ಆದರೆ ಅತ್ಯಂತ ವ್ಯಸ್ತ ಜೀವನಶೈಲಿಯಲ್ಲಿ ಸೌಂದರ್ಯ ಮತ್ತು ಸ್ವಚ್ಛತೆಯ ನಡುವೆ ಹೊಂದಾಣಿಕೆ ಸಾಧಿಸುವುದು ಕಷ್ಟಕರ ಕೆಲಸ. ಇಂತಹ ಸ್ಥಿತಿಯಲ್ಲಿ ಸರಿಯಾದ ಟೈಲ್ಸ್ ಆಯ್ಕೆ ಅತ್ಯಂತ ಮಹತ್ವದ್ದಾಗಿರುತ್ತದೆ. ಮಾರುಕಟ್ಟೆಯಲ್ಲಿ ಡನ್‌, ಲ್ಯಾಮಿನೇಟೆಡ್‌, ಕಾರ್ಪೆಟ್‌ ಟೈಲ್ಸ್ ಸಹಿತ ಹಲವು ಉಪಾಯಗಳು ಟೈಲ್ಸ್ ಕಾಂತಿ ಹೆಚ್ಚಿಸಲು ಲಭ್ಯವಿವೆ. ಇವುಗಳಲ್ಲಿ ಟೈಲ್ಸ್ ಎಂತಹ ಒಂದು ಉಪಾಯವಾಗಿದೆ ಎಂದರೆ, ಅದರ ಸ್ವಚ್ಛತೆ, ಸೌಂದರ್ಯ ಮತ್ತು ಆರೋಗ್ಯ ಈ ಮೂರಕ್ಕೂ ಸರಿಯಾದ ರೀತಿಯಲ್ಲಿ ಹೊಂದಾಣಿಕೆ ಸಾಧಿಸುವುದಾಗಿದೆ.

ಟೈಲ್ಸ್ ಫ್ಲೋರಿಂಗ್‌ನಿಂದ ಆಗುವ ಲಾಭಗಳ ಬಗ್ಗೆ ತಿಳಿದುಕೊಳ್ಳೋಣ....

- ಸಿಮೆಂಟ್‌ ಅಥವಾ ಮಾರ್ಬಲ್ ಇರುವ ನೆಲ ಬಹುಬೇಗ ಕೊಳೆಯಾಗುತ್ತದೆ. ಸಿಮೆಂಟ್‌ ಫ್ಲೋರಿಂಗ್‌ನಲ್ಲಿ ಬಿರುಕುಗಳು ಬೀಳಬಹುದು. ಅದೇ ರೀತಿ ಮಾರ್ಬಲ್ ಫ್ಲೋರ್‌ನಲ್ಲಿ ಬಹುಬೇಗ ಕಲೆಗಳು ಉಂಟಾಗಬಹುದು. ಟೈಲ್ಸ್ ನೆಲಕ್ಕೆ ಗಟ್ಟಿಯಾದ ಆಧಾರ ಕೊಡುತ್ತದೆ.

- ಮಾರುಕಟ್ಟೆಯಲ್ಲಿ ಟೈಲ್ಸ್ ನ ಎರಡು ಪರ್ಯಾಯಗಳಿವೆ. ಮೊದಲನೆಯದು, ಸಿರಾಮಿಕ್‌ ಮತ್ತು ಎರಡನೆಯದು, ಪೋರ್ಸೆಲೀನ್‌. ಒಂದು ವೇಳೆ ಇವನ್ನು ನೆಲದ ಮೇಲೆ ಸರಿಯಾದ ರೀತಿಯಲ್ಲಿ ಅಳವಡಿಸಿದರೆ ಹಾಗೂ ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಿದರೆ, ಫ್ಲೋರ್‌ನ ಸೌಂದರ್ಯವನ್ನು ದೀರ್ಘ ಕಾಲದವರೆಗೆ ಕಾಯ್ದುಕೊಂಡು ಹೋಗಬಹುದು.

- ಬೇರೆ ಫ್ಲೋರಿಂಗ್‌ ಪರ್ಯಾಯಗಳಿಗೆ ಹೋಲಿಸಿದರೆ, ಟೈಲ್ಸ್ ಫ್ಲೋರಿಂಗ್‌ ಆರೋಗ್ಯದ ದೃಷ್ಟಿಯಿಂದಲೂ ಒಳ್ಳೆಯದು. ಟೈಲ್ಸ್ ನ್ನು ಒಳ್ಳೆಯ ರೀತಿಯಲ್ಲಿ ಸ್ವಚ್ಛಗೊಳಿಸಿದರೆ, ಅವುಗಳಲ್ಲಿ ರೋಗಾಣು ಉದ್ಭವಿಸುವ ಸಾಧ್ಯತೆ ಕೊನೆಗೊಳ್ಳುತ್ತದೆ. ಟೈಲ್ಸ್ ಫ್ಲೋರ್‌ ಕೋಣೆಯ ವಾಯುವಿನ ಗುಣಮಟ್ಟವನ್ನು ಕಾಯ್ದುಕೊಂಡು ಹೋಗಲು ಕೂಡ ನೆರವಾಗುತ್ತದೆ. ಇದರ ಹೊರತಾಗಿ ಫರ್ನೆಸ್‌ನಲ್ಲಿ ಟೈಲ್ಸ್ ನ್ನು ಉನ್ನತ ತಾಪಮಾನದಲ್ಲಿ ಸುಡಲಾಗುತ್ತದೆ.

- ಟೈಲ್ಸ್ ನ ಮೂರನೇ ಅತಿದೊಡ್ಡ ವಿಶೇಷತೆಯೆಂದರೆ, ಅದರ ಮೇಲೆ ಕಲೆಗಳು ಕುಳಿತುಕೊಳ್ಳುವುದಿಲ್ಲ. ಕಲೆಗಳನ್ನು ಹೋಗಲಾಡಿಸಲು ನಾನ್‌ ಅಬ್ರೆಸಿವ್‌, ನಾನ್‌ ಅಸಿಡಿಕ್‌ ಉತ್ಪನ್ನಗಳನ್ನು ಬಳಸಲಾಗುತ್ತದೆ. ಟೈಲ್ಸ್ ನ್ನು ಸ್ವಚ್ಛಗೊಳಿಸುವ ಸುಲಭ ವಿಧಾನವೆಂದರೆ ಸೋಪ್‌ ನೀರಿನಿಂದ ತೊಳೆಯಬೇಕು.

- ಡಿಸೈನರ್‌ ಫ್ಲೋರ್‌ಗೆ ಹೋಲಿಸಿದರೆ ನೆಲದ ಮೇಲೆ ಟೈಲ್ಸ್ ಅಳವಡಿಸುವ ಖರ್ಚು ಅತ್ಯಂತ ಕಡಿಮೆ. ಟೈಲ್ಸ್ ಒಡೆಯುವ ಹಾಗೂ ಹಾಳಾಗುವ ಭಯ ಇರುವುದಿಲ್ಲ. ಹಾಗಾಗಿ ಸಾಧ್ಯವಿದ್ದಷ್ಟು ವರ್ಷಗಳ ತನಕ ಅವನ್ನು ನೆಲದ ಮೇಲೆ ಹಾಗೆಯೇ ಅಳವಡಿಸಲಾಗಿರುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ