ಆನ್‌ಲೈನ್ ಶಾಪಿಂಗ್ ಸೈಟ್‌ನಿಂದ ನೀವು ಸುಮಾರು ಎಲ್ಲ ವಸ್ತುಗಳನ್ನೂ ಖರೀದಿಸಬಹುದು. ಹಬ್ಬಗಳ ಸೀಸನ್‌ನಲ್ಲಿ ಫ್ಲಿಪ್‌ಕಾರ್ಟ್, ಸ್ನ್ಯಾಪ್‌ಡೀಲ್, ಅಮೆಜಾನ್‌ನಂತಹ ವೆಬ್‌ಸೈಟ್‌ಗಳಲ್ಲಿ ಜನರಿಗೆ ಬಹಳಷ್ಟು ಆಫರ್‌ಗಳು ಸಿಗುತ್ತಿವೆ. ಉದಾ : ಕೆಲವು ವಸ್ತುಗಳನ್ನು ಖರೀದಿಸಿದರೆ ಬೋನಸ್ ಕೂಪನ್ ಕೊಡವುದು, ಡಿಸ್ಕೌಂಟ್ ಕೊಡುವುದು, ಕ್ಯಾಶ್ ಕೊಡುವುದು ಇತ್ಯಾದಿ. ಇದರ ಜೊತೆಗೆ ರೀಪ್ಲೇಸ್‌ಮೆಂಟ್ ವಾರಂಟಿಯೂ ಗ್ರಾಹಕರಿಗೆ ಸಿಗುತ್ತದೆ. ಒಂದು ವೇಳೆ ವಸ್ತು ಹಾಳಾಗಿದ್ದರೆ ಅದನ್ನು ಹಿಂತಿರುಗಿಸಬಹುದು. ಈ ಕಾರಣದಿಂದಾಗಿ ಜನ ಮಾರುಕಟ್ಟೆಗಳ ಬದಲು ಆನ್‌ಲೈನ್ ಶಾಪಿಂಗ್‌ಗೆ ಮಹತ್ವ ನೀಡುತ್ತಿದ್ದಾರೆ. ಈಗಂತೂ ಹಬ್ಬ ಶುರುವಾಗಿದೆ. ಅದರೊಂದಿಗೆ ಆನ್‌ಲೈನ್ ಸೇಲ್ಸ್ ಸೀಸನ್ ಕೂಡ ಶುರುವಾಗಿದೆ.
ಇತ್ತೀಚೆಗೆ ಅಸೋಚಿವ್ ಮತ್ತು ಗ್ರಾಂಟ್ ಥೋರಂಟನ್‌ನ ಸಹಯೋಗದಲ್ಲಿ ಮಾಡಿದ ಅಧ್ಯಯನದಲ್ಲಿ ಭಾರತದಲ್ಲಿ 2013ರಲ್ಲಿ ಆನ್‌ಲೈನ್ ಖರೀದಿ ಮಾಡುವವರ ಸಂಖ್ಯೆ 2 ಕೋಟಿ ಇದ್ದದ್ದು 2016ರಲ್ಲಿ ಅವರ ಸಂಖ್ಯೆ 4 ಕೋಟಿ ತಲುಪುವ ಸಂಭಾವ್ಯತೆ ಇದೆ. ಏಕೆಂದರೆ ಅಷ್ಟರಲ್ಲಿ 2 ಕೋಟಿಗಿಂತಲೂ ಹೆಚ್ಚು ಭಾರತೀಯರ ಬಳಿ ಇಂಟರ್‌ನೆಟ್‌ನ ಸೌಲಭ್ಯ ಇರುತ್ತದೆ. ಜೊತೆಗೆ ಭಾರತೀಯ ಇಕಾಮರ್ಸ್ ಮಾರುಕಟ್ಟೆಯೂ 2016ರಲ್ಲಿ ಹೆಚ್ಚಾಗಿ 8.5 ಬಿಲಿಯನ್ ಡಾಲರ್ ಆಗುತ್ತದೆ. ರಿಪೋರ್ಟ್‌ನ ಪ್ರಕಾರ 2015ರಲ್ಲಿ 40 ಮಿಲಿಯನ್ ಯೂಸರ್‌ಗಳು ಆನ್‌ಲೈನ್ ಶಾಪಿಂಗ್ ಮಾಡಿದ್ದಾರೆ. ಭಾರತದಲ್ಲಂತೂ ಆನ್‌ಲೈನ್ ಖರೀದಿ ಚೆನ್ನಾಗಿ ಆಗುತ್ತಿದೆ. ಆದರೆ ಆನ್‌ಲೈನ್ ಕಳ್ಳತನಗಳೂ ಹೆಚ್ಚಾಗುತ್ತಿವೆ. ಟ್ರ್ಯಾನ್ಸಾಕ್ಷನ್‌ನಿಂದ ಡೆಲಿವರಿವರೆಗೆ ಜನ ಮೋಸ ಹೋಗುತ್ತಿದ್ದಾರೆ. ಆನ್‌ಲೈನ್ ಶಾಪಿಂಗ್ ಮಾಡುವಾಗ ಯಾವ ವಿಷಯಗಳನ್ನು ಗಮನಿಸಬೇಕೆಂದು ಜನಕ್ಕೆ ಹೆಚ್ಚು ತಿಳಿದಿಲ್ಲ. ಆದ್ದರಿಂದ ಆನ್‌ಲೈನ್ ಶಾಪಿಂಗ್‌ಗೆ ಸಂಬಂಧಿಸಿದ ಮಹತ್ವಪೂರ್ಣ ಮಾಹಿತಿಗಳನ್ನು ತಿಳಿದುಕೊಳ್ಳಿ.
ಬೆಲೆ ಕಂಪೇರ್ ಮಾಡಿ : ಆನ್‌ಲೈನ್ ಶಾಪಿಂಗ್‌ನಲ್ಲಿ ಎಲ್ಲ ಸೈಟ್‌ಗಳಲ್ಲೂ ಬೆಲೆ ಒಂದೇ ಸಮ ಇರುವುದಿಲ್ಲ. ಆದ್ದರಿಂದ ನೀವು ಯಾವ ಪ್ರಾಡಕ್ಟ್ಸ್ ಖರೀದಿಸಲು ಬಯಸುತ್ತೀರೋ ಅದನ್ನು ಖರೀದಿಸುವ ಮೊದಲು ಹಲವು ವೆಬ್‌ಸೈಟ್‌ಗಳಲ್ಲಿ ಅದರ ಬೆಲೆಯನ್ನು ಹೋಲಿಸಿ. ಇನ್ನೊಂದು ಸೈಟ್‌ನಲ್ಲಿ ಅದೇ ವಸ್ತುವಿನ ಬೆಲೆ ಕಡಿಮೆ ಇರಬಹುದು.
ಬ್ರೌಸರ್ ಎಕ್ಸ್ಟೆನ್ಶನ್ ಡೌನ್‌ಲೋಡ್ ಮಾಡಿಕೊಳ್ಳಿ : ಹಲವಾರು ಆನ್‌ಲೈನ್ ಶಾಪಿಂಗ್ ಸೈಟ್‌ಗಳನ್ನು ಒಮ್ಮೆಗೇ ಮ್ಯಾನುಯೆಲ್ ಆಗಿ ಕಂಪೇರ್ ಮಾಡುವುದು ಕಷ್ಟ. ಆದರೆ ಒಂದು ಬ್ರೌಸರ್ ಎಕ್ಸ್ಟೆನ್ಶನ್ ಎಲ್ಲ ಆನ್‌ಲೈನ್ ಶಾಪಿಂಗ್ ಸೈಟ್‌ಗಳಲ್ಲಿ ಲೈವ್ ಕಂಪೇರ್ ಮಾಡಲು ಸೌಲಭ್ಯ ಒದಗಿಸುತ್ತದೆ. ಈ ಎಕ್ಸ್ಟೆನ್ಶನ್‌ನ್ನು ನೀವು ಡೌನ್‌ಲೋಡ್ ಮಾಡಬಹುದು. ಈ ಆನ್‌ಲೈನ್ ಶಾಪಿಂಗ್ ಮಾಡುವಾಗ ಎಲ್ಲ ಸೈಟ್‌ಗಳ ಡೀಲ್‌ನ್ನು ಲೈವ್ ತೋರಿಸುತ್ತದೆ. ಜೊತೆಗೆ ಯಾವ ವಸ್ತುವಿನ ಬೆಲೆ ಯಾವಾಗ ಕಡಿಮೆ ಇತ್ತು, ಯಾವಾಗ ಜಾಸ್ತಿಯಾಗಿತ್ತು ಎಂದೆಲ್ಲಾ ತಿಳಿಸುತ್ತದೆ. ಇದಲ್ಲದೆ ಹೋಲಿಸಿ ನೋಡಲು ಹಲವಾರು ಸೈಟ್‌ಗಳಿದ್ದು ಅವು ಬೆಲೆಯನ್ನು ಹೋಲಿಸಿ ತೋರಿಸುತ್ತವೆ.
ಆ್ಯಪ್ಸ್ ಯೂಸ್ ಮಾಡಿ : ಫ್ಲಿಪ್‌ಕಾರ್ಟ್, ಅಮೆಜಾನ್‌ನಂತಹ ದೊಡ್ಡ ದೊಡ್ಡ ವೆಬ್‌ಸ್ಟೋರ್‌ನ ಆ್ಯಪ್ಸ್ ಕೂಡ ಇದ್ದು ನೀವು ಒಳ್ಳೆಯ ಡೀಲ್ ತೆಗೆದುಕೊಳ್ಳಲು ಸಹಾಯ ಮಾಡುತ್ತದೆ. ಕೆಲಮೊಮ್ಮೆ ಅವರ ಆ್ಯಪ್ಸ್ ಇನ್‌ಸ್ಟಾಲ್ ಮಾಡಿಕೊಂಡರೆ, ಅವರು ಕೆಲವು ಪ್ರಾಡಕ್ಟ್ ಗಳನ್ನು ಕಡಿಮೆ ಬೆಲೆ ಆಫರ್ ಕೊಡುತ್ತಾರೆ. ಜೊತೆಗೆ ಇನ್ನಷ್ಟು ಒಳ್ಳೆಯ ಡೀಲ್ಗಳನ್ನು ಕೊಡುತ್ತಾರೆ.