ಮನೆ ಎಂತಹ ಒಂದು ಸ್ಥಳವೆಂದರೆ, ಅಲ್ಲಿ ಮನೆಯ ಪ್ರತಿಯೊಬ್ಬ ಸದಸ್ಯ ತನ್ನ ಚಿಂತೆಗಳನ್ನು, ತೊಂದರೆಗಳನ್ನು ಮರೆತು ನೆಮ್ಮದಿಯಿಂದ ಇರಲು ಪ್ರಯತ್ನಿಸುತ್ತಾನೆ. ಆದರೆ ನೆಮ್ಮದಿ ಎನ್ನುವುದು ನಿಮಗೆ ಸುಲಭವಾಗಿ ಲಭಿಸುವುದು, ನೀವು ಆ ಮನೆಯನ್ನು ಸೌಲಭ್ಯಕಾರಕ ಹಾಗೂ ಡಿಸೈನರ್‌ ಆಗಿ ರೂಪಿಸಿದಾಗ ಮಾತ್ರ.

ಡಿಸೈನರ್‌ ಹಾಗೂ ವಾಸ್ತುಶಿಲ್ಪಿ ಸಿಂಧು ಕೃಷ್ಣಕುಮಾರ್‌ ಹೀಗೆ ಹೇಳುತ್ತಾರೆ, “ಇಂದು ಪ್ರತಿಯೊಂದು ಮನೆಯೂ ಡಿಸೈನರ್‌ ಮನೆಗಳಾಗಿವೆ. ಮನೆಯಲ್ಲಿ ಡಿಸೈನರ್‌ ಫ್ಯಾಕ್ಟರ್‌ ಅಸಲಿ ಆಗುತ್ತಿವೆ.”

ಪರಿಸರಸ್ನೇಹಿ ಮನೆಗಳ ಕ್ರೇಜ್

ಕೇರಳ ಯಾವಾಗಲೂ ಇಕೊಫ್ರೆಂಡ್ಲಿ ಆರ್ಕಿಟೆಕ್ಚರ್‌ಗೆ ಪ್ರಸಿದ್ಧವಾಗಿದೆ. ಆದರೆ ಇತ್ತೀಚೆಗೆ ಇಕೊಫ್ರೆಂಡ್ಲಿ ಆರ್ಕಿಟೆಕ್ಚರ್‌ನ್ನು ಹಿಂದೂಡಿ ವೆಸ್ಟರ್ನ್‌ ಸ್ಟೈಲ್‌ನ ಆರ್ಕಿಟೆಕ್ಚರ್‌ನ್ನು ನಕಲು ಮಾಡಲಾಗುತ್ತಿದೆ. ಇಂತಹ ನಿರ್ಮಾಣ ಮಾಡುವ ಮುನ್ನ ಭೂಮಿಯ ಮೇಲೆ ಯಾವುದೇ ರೀತಿಯ ದುಷ್ಪರಿಣಾಮ ಉಂಟಾಗದಂತೆ ಎಚ್ಚರ ವಹಿಸಲಾಗುತ್ತದೆ. ಈಗ ಬಹಳಷ್ಟು ಜನರು ಹಳೆಯ ಮತ್ತು ಹೊಸದರ ಸಂಗಮ `ಫ್ಯಾಷನ್‌ ಮನೆ’ಗಳನ್ನು ನಿರ್ಮಿಸುತ್ತಿದ್ದಾರೆ. ಎಲ್ಲಕ್ಕೂ ಮಹತ್ವದ ಸಂಗತಿ ಎಂದರೆ, ಇತ್ತೀಚಿನ ವರ್ಷಗಳಲ್ಲಿ ಬಹಳಷ್ಟು ಜನರು, ಎಂತಹ ಮನೆಗಳ ಮೇಲೆ ಹೂಡಿಕೆ ಮಾಡುತ್ತಿದ್ದಾರೆಂದರೆ, ಅವು ಪರಿಸರದ ದೃಷ್ಟಿಯಿಂದಲೂ ಸುರಕ್ಷಿತವಾಗಿರಬೇಕು.

ಕೋಚ್ಚಿಯ ವಾಸ್ತುಶಿಲ್ಪಿ ಶಿಂಟೊ ವರ್ಗೀಸ್‌ ಹೀಗೆ ಹೇಳುತ್ತಾರೆ, ಸಮಕಾಲೀನ ಶೈಲಿ ಈಗ ಕೇರಳವನ್ನೂ ತಲುಪಿದೆ, ದ. ಭಾರತದಲ್ಲಿ ಎಲ್ಲೆಡೆ ಹರಡುತ್ತಿದೆ. ಈ ಶೈಲಿ ಈಗ ಹಣ ಹಾಗೂ ಸಮಯ ಉಳಿತಾಯಲ್ಲಿ ಸಾಕಷ್ಟು ಪ್ರಭಾವಶಾಲಿಯಾಗಿದೆ.

ಯಾವ ಡಿಸೈನ್‌ಗಳಲ್ಲಿ ಹೆಚ್ಚು ಶಕ್ತಿ ಅಥವಾ ಇಂಧನ ಉಳಿತಾಯದ ಪರ್ಯಾಯ ಇದೆಯೋ ಹಾಗೂ ಯಾವುದು ಪರಿಸರಸ್ನೇಹಿ ಪರಿಕರಗಳಿಂದ ನಿರ್ಮಾಣವಾಗಿರುತ್ತದೊ ಅದಕ್ಕೆ ಹೆಚ್ಚು ಬೇಡಿಕೆ ಇದೆ. ಯಾವುದೇ ಒಂದು ಭಾಗದ ಆರ್ಕಿಟೆಕ್ಚರ್‌ ಆ ಭಾಗದ ಸಾಂಸ್ಕೃತಿಕ, ರಾಜಕೀಯ, ಆರ್ಥಿಕ ಪ್ರಭಾವವನ್ನು ಬಿಂಬಿಸುತ್ತದೆ. ಕೇರಳದಲ್ಲಿ ಎನ್‌ಆರ್‌ಐನ ಹಣವೇ ಅಲ್ಲಿನ ಸ್ಟೈಲ್‌ನ ನಿರ್ಧಾರ ಮಾಡುತ್ತಿದೆ.

ಮೂಢನಂಬಿಕೆ ಮುಕ್ತ ಮನೆ

ಇತ್ತೀಚೆಗೆ ಜನರು 100 ಚದರಡಿ ಮನೆಯಲ್ಲಿ ವಾಸಿಸುವುದರ ಮೂಲಕ ಖುಷಿಯಿಂದಿದ್ದಾರೆ. ಏಕೆಂದರೆ ಅಲ್ಲಿ ಆಧುನಿಕ ಯುಗದ ಸಕಲ ಸೌಲಭ್ಯಗಳೂ ಲಭ್ಯವಿವೆ. ಇಂತಹ ಮನೆಗಳು ಭಾರತದ ಇತರೆಡೆ ಕೂಡ ಬಹಳ ಜನಪ್ರಿಯವಾಗುತ್ತಿವೆ.

ವರ್ಗೀಸ್‌ ಹೀಗೂ ಹೇಳುತ್ತಾರೆ, “ಇತ್ತೀಚೆಗೆ ಕೆಲವರು ಮನೆ ನಿರ್ಮಿಸುವಾಗ ವಾಸ್ತು ಕುರಿತಾಗಿಯೂ ಸಾಕಷ್ಟು ಗಮನಹರಿಸುತ್ತಾರೆ. ವಾಸ್ತುವಿನ ಮೂರ್ಖತನ ಅದೆಷ್ಟು ಮೇರೆ ಮೀರಿದೆ ಎಂದರೆ, ಅದು ಧರ್ಮವನ್ನೂ ಮೀರಿ ಬೆಳೆದಿದೆ. ಜನರು ಅದರ ಬಗ್ಗೆ ಅಪಾರ ನಂಬಿಕೆ ಇಟ್ಟಿದ್ದಾರೆ. ಈಗ ಅದು ಸಹ ಒಂದು ಬಗೆಯ ಮೂಢನಂಬಿಕೆಯಾಗುತ್ತಿದೆ.”

ಈ ರೀತಿಯ ಪೊಳ್ಳು ನಂಬಿಕೆಗಳ ಮೇಲೆ ವಿಶ್ವಾಸ ಇಡುವುದಕ್ಕಿಂತ ಮನೆಯನ್ನು ಮತ್ತಷ್ಟು ಸುಂದರ ಹಾಗೂ ಸೌಲಭ್ಯದಾಯಕ ಆಗಿಸುವುದರಲ್ಲಿಯೇ ನಿಜವಾದ ಜಾಣತನವಿದೆ.

–  ಎಂ.ಕೆ. ಗೀತಾ 

ಇತ್ತೀಚಿನ ದಿನಗಳಲ್ಲಿ ಪರಿಸರಸ್ನೇಹಿ ಮತ್ತು ಎನರ್ಜಿ ಫ್ರೆಂಡ್ಲಿ ಮನೆಗಳ ಜನಪ್ರಿಯತೆ ಹೆಚ್ಚುತ್ತಿದೆ. ರೇನ್‌ ವಾಟರ್‌ ಹಾರ್ವೆಸ್ಟ್ ಸ್ಟ್ರಕ್ಚರ್‌, ಸೋಲಾರ್‌ ವಾಟರ್‌ ಹೀಟರ್‌ ಸಿಸ್ಟಮ್ ಮತ್ತು ಸೂರ್ಯನ ಬೆಳಕು ಹೆಚ್ಚಿನ ಪ್ರಮಾಣದಲ್ಲಿ ಒಳಗೆ ಬರುವ ಕಿಟಕಿಗಳ ವ್ಯವಸ್ಥೆಯುಳ್ಳ ತಂತ್ರಜ್ಞಾನದ ಬಗ್ಗೆ ಹಚ್ಚಿನ ಒತ್ತು ಕೊಡುತ್ತಿದ್ದಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ