ಯಾವ ಸಂದರ್ಭದಲ್ಲಿ ಯಾವ ಡ್ರೆಸ್‌ ಜೊತೆ ಎಂಥ ಇಯರ್‌ರಿಂಗ್ಸ್ ಧರಿಸಬಹುದು?

ಜ್ಯೂವೆಲರಿ ಬಾಕ್ಸಿನಲ್ಲಿ ನೆಕ್‌ಪೀಸ್‌ನಿಂದ ಫಿಂಗರ್‌ರಿಂಗ್ಸ್ ವರೆಗೂ ವಿಶಿಷ್ಟ ಸ್ಥಾನವಿದೆ. ಆದರೆ ಇಯರ್‌ರಿಂಗ್ಸ್ ವಿಷಯವೇ ಬೇರೆ. ನೀವು ಎಷ್ಟೇ ಜ್ಯೂವೆಲರಿ ಧರಿಸಿದ್ದರೂ, ಇಯರ್‌ರಿಂಗ್ಸ್ ಧರಿಸದಿದ್ದರೆ ನಿಮ್ಮ ಅಲಂಕಾರ ಅಪೂರ್ಣ ಎನಿಸುತ್ತದೆ. ಇತ್ತೀಚೆಗೆ ಎಂಥ ಇಯರ್‌ರಿಂಗ್ಸ್ ಫ್ಯಾಷನ್‌ನಲ್ಲಿ ಇನ್‌ ಎಂದು ತಿಳಿಯೋಣವೇ?

ಚಂದ್ರಾಕಾರದ ಇಯರ್‌ರಿಂಗ್ಸ್

`ರಾಮಲೀಲಾ' ಚಿತ್ರದ ನಂತರ ಈ ಬಗೆಯ ಚಂದ್ರಾಕಾರದ ರಿಂಗ್ಸ್ ದಿನೇದಿನೇ ಜನಪ್ರಿಯವಾಗುತ್ತಿವೆ. ಇದನ್ನು ನಮ್ಮ ಸಾಂಪ್ರದಾಯಿಕ ಸೀರೆ, ಸಲ್ವಾರ್‌ ಸೂಟ್‌, ಲಹಂಗಾ ಚೋಲಿ ಜೊತೆ ಜೊತೆಯಲ್ಲೇ ಇಂಡೋವೆಸ್ಟರ್ನ್‌ ವೇರ್‌ಗಳಾದ ಸ್ಯಾರಿ ಗೌನ್‌, ಸ್ಕರ್ಟ್‌, ಪ್ಲಾಜೋ ಇತ್ಯಾದಿಗಳ ಜೊತೆಯೂ ಧರಿಸಬಹುದು. ಹಾಫ್‌ ಜೊತೆ ಫುಲ್ ಚಂದ್ರಾಕಾರಗಳೂ ಉಂಟು. ಇದರಲ್ಲಿ ಅನೇಕ ವೆರೈಟಿಗಳಿವೆ. ಕಲರ್ಸ್‌ ಜೊತೆ ಜೊತೆಯಲ್ಲೇ ಮೆಟೀರಿಯಲ್‌ನಲ್ಲೂ ವ್ಯತ್ಯಾಸ ಇರುತ್ತದೆ. ನೀವು ಇಂಥ ಚಂದ್ರಾಕಾರದ ಇಯರ್‌ರಿಂಗ್ಸ್ ಧರಿಸಿ ಮಿಂಚಲು ಬಯಸಿದರೆ, ಕೂದಲನ್ನು ಓಪನ್‌ ಬಿಡುವ ಬದಲು, ಅಪ್ಪರ್‌ ಯಾ ಲೋಯರ್‌ ಬನ್‌ ಸ್ಟೈಲ್ ಮಾಡಿ.

ಶಾಂಡ್ಲಿಯರ್‌ ಇಯರ್‌ರಿಂಗ್ಸ್

ನೀವು ಈಗಾಗಲೇ ಹೂಜಾ ಇಯರ್‌ರಿಂಗ್ಸ್ ಧರಿಸುತ್ತಿದ್ದರೆ, ಈ ಶಾಂಡ್ಲಿಯರ್‌ (ಜೂಮರ್‌) ಇಯರ್‌ರಿಂಗ್ಸ್ ನ್ನು ನಿಮ್ಮ ಜ್ಯೂವೆಲರಿ ಬಾಕ್ಸಿಗೆ ಸೇರಿಸಿ. ಇದು ಮೇಲಿನಿಂದ ಟಾಪ್ಸ್ ತರಹ, ಕೆಳಗಿನಿಂದ ಲೋಲಾಕಿನ ತರಹ 2 ಇನ್‌ ಆಗಿದೆ. ಈ ಕಾರಣಕ್ಕೆ ಇಂಥ ಹೆಸರು ಬಂದಿದೆ. ಇದನ್ನು ನೀವು ಇಂಡಿಯನ್‌, ವೆಸ್ಟರ್ನ್‌, ಇಂಡೋವೆಸ್ಟರ್ನ್‌ ಯಾವುದೇ ಉಡುಗೆ ಜೊತೆ ಧರಿಸಬಹುದು. ಅದಕ್ಕಾಗಿ ಗೋಲ್ಡ್ ಸಿಲ್ವರ್‌, ಕಾಪರ್‌, ಡೈಮಂಡ್‌ ಅಥವಾ ಪರ್ಲ್ ನ ಶಾಂಡ್ಲಿಯರ್‌ ಇಯರ್‌ರಿಂಗ್ಸ್ ಖರೀದಿಸಲು ಮರೆಯದಿರಿ. ಆಯಾ ಉಡುಗೆಗಳಿಗೆ ತಕ್ಕಂತೆ ಬದಲಾಯಿಸಿ ಈ ಒಡವೆಗಳನ್ನು ಧರಿಸುತ್ತಿರಿ.

ಟ್ಯಾಸ್‌ ಇಯರ್‌ರಿಂಗ್ಸ್

ಈ ಗೊಂಚಲಿನ ಇಯರ್‌ರಿಂಗ್ಸ್ ಮೇಲ್ಭಾಗದಿಂದ ಟಾಪ್ಸ್ (ಹುಕ್‌ ತರಹ) ಆಕಾರ ಹಾಗೂ ಕೆಳಭಾಗದಿಂದ ಗೊಂಚಲಿನಂತೆ ವಿವಿಧ ಎಳೆಗಳ ಜೋಡಣೆ ಆಗಿರುತ್ತದೆ. ಹೀಗಾಗಿ ಇದನ್ನು ಟ್ಯಾಸ್‌ ಇಯರ್‌ರಿಂಗ್ಸ್ ಎನ್ನುತ್ತಾರೆ. ಇದು ಮುಖ್ಯವಾಗಿ ವೆಸ್ಟರ್ನ್‌ ವೇರ್‌ಗೆ ಚೆನ್ನಾಗಿ ಹೊಂದುತ್ತದೆ. ಆದರೆ ಇಂಡಿಯನ್‌ ವೇರ್‌ಗೆಂದೇ ವಿಶೇಷವಾಗಿ ರೂಪಿಸಲಾದ ಗೋಲ್ಡ್ ಪ್ಲೇಟೆಡ್‌ ಟ್ಯಾಸ್‌ ಇಯರ್‌ರಿಂಗ್ಸ್ ಇದೀಗ ಹೆಚ್ಚು ಜನಪ್ರಿಯವಾಗುತ್ತಿದೆ. ಜುಮಕಿ ಮತ್ತು ಶಾಂಡ್ಲಿಯರ್‌ ಇಯರ್‌ರಿಂಗ್ಸ್ ಗೆ ಹೋಲಿಸಿದಾಗ ಇವು ಸಾಕಷ್ಟು ಹಗುರ ಎನಿಸುತ್ತವೆ. ವಿಶೇಷ ದಿನಗಳಿಗಾಗಿ ಮಾತ್ರವಲ್ಲದೆ ಇವನ್ನು ಸಾಧಾರಣ ದಿನಗಳಿಗೂ ಬಳಸಬಹುದು.

ಸ್ಟಡ್‌ ಇಯರ್‌ರಿಂಗ್ಸ್

ಕುಂದಣ, ಪೋಲ್ಕಿ, ಜೆಮ್ ಸ್ಟೋನ್‌, ಪರ್ಲ್, ಡೈಮಂಡ್‌ ಮುಂತಾದ ಮೆಟೀರಿಯಲ್‌ಗಳಿಂದ ತಯಾರಾಗುವ ಸ್ಟಡ್‌ ಇಯರ್‌ರಿಂಗ್ಸ್ ನ್ನು ನೀವು ಇಂಡಿಯನ್‌ ವೇರ್‌ ಜೊತೆಯಲ್ಲೇ ವೆಸ್ಟರ್ನ್‌ ವೇರ್‌ಗೂ ಧರಿಸಬಹುದು. ಇವು ಸ್ಮಾಲ್ ಸೈಜ್‌ನಿಂದ ಹ್ಯೂಜ್‌ವರೆಗೂ, ಹೆವಿಯಿಂದ ಲೈಟ್‌ ವೆಯ್ಟ್ ವರೆಗೂ ಲಭ್ಯ. ಸಿಂಪಲ್ ಸೊಫೆಸ್ಟಿಕೇಟೆಡ್‌ ಲುಕ್ಸ್ ಗಾಗಿ ಸ್ಮಾಲ್ ಸೈಜ್‌ನ ಪರ್ಲ್, ಜೆಮ್ ಸ್ಟೋನ್‌, ಡೈಮಂಡ್‌ನ ಸ್ಟಡ್‌ ಇಯರ್‌ರಿಂಗ್ಸ್ ಖರೀದಿಸಿ. ಬೋಲ್ಡ್ ಬ್ಯೂಟಿಫುಲ್ ಲುಕ್ಸ್ಗಾಗಿ ಹ್ಯೂಜ್‌ ಸೈಜ್‌ನ ಗೋಲ್ಡನ್‌, ಕಾಪರ್, ಕುಂದಣ ಯಾ ಪೋಲ್ಕಿ ಸ್ಟಡ್‌ ಇಯರ್‌ರಿಂಗ್ಸ್ ನಿಮ್ಮ ಮೊದಲ ಆಯ್ಕೆ ಆಗಿರಲಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ