ನಿಮ್ಮ ಅಡುಗೆಮನೆ ಎಲ್ ಶೇಪ್‌ ಆಗಿರಬಹುದು ಅಥವಾ ಯೂ ಶೇಪ್‌. ಮಾಡ್ಯುಲರ್‌ ಇರಬಹುದು ಇಲ್ಲವೇ ಟ್ರಾಂಸಿಶನ್‌. ಎಲ್ಲಿಯವರೆಗೆ ನೀವು ನಿಮ್ಮ ಅಡುಗೆಮನೆಯಿಂದ ಟ್ರೆಡಿಶನಲ್ ಕುಕ್‌ವೇರ್‌ಗಳನ್ನು ತೆಗೆದು ಮಾಡರ್ನ್‌ ಅಪ್ಲಯೆನ್ಸಸ್‌ ಹಾಗೂ ಗ್ಯಾಜೆಟ್ಸ್ಗಳಿಗೆ ಅವಕಾಶ ಕೊಡುವುದಿಲ್ಲವೋ ಅಲ್ಲಿಯವರೆಗೆ ನಿಮ್ಮ ಅಡುಗೆಮನೆ ಸ್ಮಾರ್ಟ್‌ ಆಗಿ ಗೋಚರಿಸುವುದಿಲ್ಲ. ಅಷ್ಟೇ ಅಲ್ಲ, ಹೊಸ ತಂತ್ರಜ್ಞಾನದಿಂದ ತಯಾರಿಸಲಾದ ಈ ಕಿಚನ್‌ ಗ್ಯಾಜೆಟ್ಸ್ ಗಳಿಂದ ನೀವು ಕೆಲಸವನ್ನು ಅತ್ಯಂತ ವೇಗವಾಗಿ ಮುಗಿಸಬಹುದಾಗಿದೆ.

ಮಾಡರ್ನ್‌ ಕಿಚನ್‌ ಅಪ್ಲಯೆನ್ಸಸ್‌ ಕುರಿತು ಒಂದಿಷ್ಟು ಮಾಹಿತಿ :

ಫುಡ್‌ ಪ್ರೊಸೆಸರ್‌

ನಿಮ್ಮ ಅಡುಗೆಮನೆಗೆ ಮಾಡರ್ನ್‌ ಲುಕ್‌ ನೀಡಲು ಮಿಕ್ಸರ್‌ನ್ನು ಹೊರತೆಗೆದು, ಅದರ ಸ್ಥಾನದಲ್ಲಿ ಫುಡ್‌ ಪ್ರೊಸೆಸರ್‌ನ್ನು ತನ್ನಿ. ಹಲವು ಬಗೆಯ ಬ್ಲೇಡ್‌ಗಳ ಜೊತೆಗೆ ದೊರೆಯುವ ಫುಡ್‌ ಪ್ರೊಸೆಸರ್‌ನಿಂದ ನೀವು ಪುಡಿ ಮಾಡುವ ಕೆಲಸವನ್ನಷ್ಟೇ ಅಲ್ಲ, ಆಹಾರ ಸಾಮಗ್ರಿಗಳಿಗೆ ನಿಮಗಿಷ್ಟವಾದ ಆಕಾರ ಕೊಡಬಹುದು. ಒಂದೇ ಉಪಕರಣದಿಂದ ಹಲವು ಬಗೆಯ ಕೆಲಸ ಮಾಡಿಸಿಕೊಳ್ಳಬಹುದು. ಫುಡ್‌ ಪ್ರೊಸೆಸರ್‌ನ ಬೆಲೆ 3,000 ರೂ. ದಿಂದ ಶುರುವಾಗುತ್ತದೆ. ನೀವು ಎಂತಹ ಫುಡ್‌ ಪ್ರೊಸೆಸರ್‌ನ್ನು ಖರೀದಿಸಬೇಕೆಂದರೆ, ಅದನ್ನು ಸ್ವಚ್ಛಗೊಳಿಸಲು ಮತ್ತು ನಿರ್ವಹಿಸಲು ಕಷ್ಟ ಆಗಬಾರದು.

ಸೆಲ್ಛೀ ಟೋಸ್ಟರ್

ಸೆಲ್ಛಿಯ ಇಂದಿನ ಯುಗದಲ್ಲಿ ಸಿಂಪಲ್ ಲುಕ್‌ ಇರುವ ಟೋಸ್ಟರ್‌ನ್ನು ಇನ್ನೂ ನಿಮ್ಮ ಅಡುಗೆಮನೆಯಲ್ಲಿ ಇಟ್ಟಿದ್ದೀರಾ? ಹಾಗೊಂದು ವೇಳೆ ಇಟ್ಟಿದ್ದರೆ ನೀವು ಈಗಲೇ ಅದನ್ನು ಬದಲಿಸಿ ಸೆಲ್ಛೀ ಟೋಸ್ಟರ್‌ ತೆಗೆದುಕೊಂಡು ಬನ್ನಿ. ಅದರಿಂದ ನೀವು ಬೇರೆ ಬೇರೆ ರೀತಿಯ ಪ್ರಿಂಟೆಡ್‌ ಫೇಸ್‌ಗಳ ಟೋಸ್ಟ್ ಮಾಡಿಕೊಡಬಹುದು. ಸೆಲ್ಛೀ ಟೋಸ್ಟರ್‌ನ ಜೊತೆ ಪ್ರಿಂಟೆಡ್‌ ಫೇಸಸ್‌ ಸೆಟ್‌ನ ರೂಪದಲ್ಲಿ ದೊರಕುತ್ತದೆ. ಅದನ್ನು ಸೆಟ್‌ ಮಾಡಿದ ಬಳಿಕ ನೀವು ಅದೇ ರೀತಿಯ ಪ್ರಿಂಟೆಡ್‌ ಬ್ರೆಡ್‌ನ್ನು ಪಡೆದುಕೊಳ್ಳಬಹುದು. ಅದರ ಬೆಲೆ 5,000-10,000/ದ ನಡುವೆ ಇರುತ್ತದೆ. ಆನ್‌ಲೈನ್‌ನಲ್ಲೂ ಇದನ್ನು ಖರೀದಿಸಬಹುದು.

ಎಗ್‌ ಕುಕ್ಕರ್‌

ಪ್ರತಿದಿನ ಮುಂಜಾನೆ ಏಳುತ್ತಲೇ ಪಾತ್ರೆಯಲ್ಲಿ ನೀರು ತುಂಬಿ ಮೊಟ್ಟೆ ಬೇಯಿಸುವುದು ನಿಮಗೆ ಬೋರ್‌ ಅನಿಸುವ ಕೆಲಸವಾಗಿದ್ದರೆ, ನೀವು ಈಗಲೇ ಒಂದು ಎಗ್‌ ಕುಕ್ಕರ್‌ ತೆಗೆದುಕೊಂಡು ಬನ್ನಿ. ನಿಮ್ಮ ಕೆಲಸವನ್ನು ಮತ್ತಷ್ಟು ಸುಲಭ ಮಾಡಿಕೊಳ್ಳಿ. ಎಲೆಕ್ಟ್ರಿಕ್‌ ಕುಕ್ಕರ್‌ನ ಸಹಾಯದಿಂದ ಕೇವಲ 2-3 ನಿಮಿಷದಲ್ಲಿ ಅರ್ಧ ಡಜನ್‌ನಷ್ಟು ಮೊಟ್ಟೆಗಳನ್ನು ಬೇಯಿಸಬಹುದಾಗಿದೆ. ಅದರ ಬೆಲೆ ಅತ್ಯಂತ ಕಡಿಮೆ ಅಂದರೆ 300-1000/ ರೂ. ರೇಂಜ್‌ನಲ್ಲಿ ಬರುತ್ತದೆ.

ಡೀಪ್‌ ಫ್ರಯರ್‌

ಫ್ರೆಂಚ್‌ ಫ್ರೈನಿಂದ ಹಿಡಿದು ಬಜ್ಜಿ ಬೋಂಡಾಗಳನ್ನು ಕರಿಯಲು ನೀವು ಈಗಲೂ ಕಡಾಯಿಯನ್ನು ಬಳಸುತ್ತೀರಾ? ಕರಿದ ಬಳಿಕ ಹೆಚ್ಚುವರಿ ಎಣ್ಣೆಯನ್ನು ಹೊರತೆಗೆಯಲು ಟಿಶ್ಯೂ ಪೇಪರ್‌ನ್ನು ಉಪಯೋಗಿಸುತ್ತಿದ್ದೀರಾ? ಅದರ ಹೊರತಾಗಿ ನೆಲದ ಮೇಲೆ ಬಿದ್ದಿರುವ ಎಣ್ಣೆಯ ಕಲೆಗಳನ್ನು ನಿವಾರಿಸಲು ಸಾಕಷ್ಟು ಹೆಣಗಾಡಬೇಕಾಗುತ್ತದೆ. ಇದೆಲ್ಲದರಿಂದ ಮುಕ್ತಿ ಕಂಡುಕೊಳ್ಳಲು ಇಂದೇ ಡೀಪ್‌ ಫ್ರಯರ್‌ ತೆಗೆದುಕೊಂಡು ಬನ್ನಿ. ಇದರಿಂದ ಕರಿಯುವಾಗ ಬಜ್ಜಿ ಬೋಂಡಾಗಳು ಸೀದು ಹೋಗುವ ಭಯ ಇರುವುದಿಲ್ಲ ಮತ್ತು ಹೆಚ್ಚುವರಿ ಎಣ್ಣೆ ಹೀರಿಕೊಳ್ಳುವ ಭಯ ಇರುವುದಿಲ್ಲ. ಎಲ್ಲಕ್ಕೂ ಒಳ್ಳೆಯ ಸಂಗತಿಯೆಂದರೆ ನೀವು ಎಣ್ಣೆಯ ಕಲೆಗಳನ್ನು ಬಿಡಿಸುವ ಅಗತ್ಯವಿರುವುದಿಲ್ಲ. ಮಾರುಕಟ್ಟೆಯಲ್ಲಿ ಇದರ ಬಹುದೊಡ್ಡ ರೇಂಜ್‌ ಇದೆ. ಅದು 2,500-6,000/ ರೂ. ತನಕ ಸಿಗುತ್ತದೆ.

ಬಾರ್ಬೆಕ್ಯೂ ಗ್ರಿಲ್ಸ್

ನಿಮಗೆ ಡೀಪ್‌ ಫ್ರೈಡ್‌ನ ಬದಲು ತಂದೂರಿ ಫುಡ್‌ ತಿನ್ನಲು ಇಷ್ಟವಾಗುತ್ತದೆ ಎಂದಾದರೆ, ರೆಸ್ಟೋರೆಂಟ್‌ಗೆ ಹೋಗಿ ತಂದೂರಿ ರೋಟಿಯಿಂದ ಹಿಡಿದು ತಂದೂರಿ ಚಿಕನ್‌, ಪನೀರ್‌ ತಂದೂರಿ, ಚಿಕನ್‌ ಟಿಕ್ಕಾ, ಗೋಭಿ ಟಿಕ್ಕಾದಂತಹ ಡಿಶೆಸ್‌ ಆರ್ಡರ್‌ ಮಾಡುವ ಬದಲು ಬಾರ್ಬೆಕ್ಯೂ ಗ್ರಿಲ್ಸ್ ಮನೆಗೆ ತಂದು ನಿಮಗಿಷ್ಟವಾಗುವ ತಂದೂರಿ ರೆಪಿಸೀಸ್‌ ನೀವೇ ತಯಾರಿಸಿಕೊಳ್ಳಿ. ಈ ಗ್ರಿಲ್‌ನ ಲುಕ್‌ಸಾಕಷ್ಟು ಮಾಡರ್ನ್‌ ಆಗಿದೆ. ಇದರಿಂದ ನಿಮ್ಮ ಅಡುಗೆಮನೆಗೆ ಸ್ಟೈಲಿಶ್‌ ಲುಕ್‌ ದೊರೆಯುತ್ತದೆ. ಮಾರುಕಟ್ಟೆಯಲ್ಲಿ ಇದು ನಿಮಗೆ 900-5,000/ ರೂ. ತನಕ ದೊರೆಯುತ್ತದೆ.

ಕಾಫಿ ಮೇಕರ್

ನೀವು ಕಾಫಿ ಕುಡಿಯುವ ಅಭ್ಯಾಸ ಹೊಂದಿದವರಾಗಿದ್ದಲ್ಲಿ, ಬೆಳಗ್ಗೆ, ಸಂಜೆ ಕಾಫಿ ತಯಾರಿಸುವ ಕಿರಿಕಿರಿಯಿಂದ ಮುಕ್ತರಾಗಲು ಕಾಫಿ ಮೇಕರ್‌ನ ಸಹಾಯ ಪಡೆಯಿರಿ. ಮಾರುಕಟ್ಟೆಯಲ್ಲಿ ಹಲವು ಬಗೆಯ ಕಾಫಿ ಮೇಕರ್‌ಗಳಿವೆ. 500/ ರೂ.ನಿಂದ ಶುರುವಾಗುವ ಇವು 2000/ ರೂ. ತನಕ ಲಭಿಸುತ್ತವೆ.

ಸ್ಯಾಂಡ್‌ವಿಚ್‌ ಮೇಕರ್‌

ವೆಜ್‌ ಸ್ಯಾಂಡ್‌ವಿಚ್‌, ಗ್ರಿಲ್ಸ್ ‌ಸ್ಯಾಂಡ್‌ವಿಚ್‌, ಟೋಸ್ಟ್ ಸ್ಯಾಂಡ್‌ವಿಚ್‌, ಚೀಸ್‌ ಸ್ಯಾಂಡ್‌ವಿಚ್‌ ಹೀಗೆ ಬಗೆಬಗೆಯ ಸ್ಯಾಂಡ್‌ವಿಚ್‌ಗಳನ್ನು ನಿಮ್ಮ ಮನೆಯ ಇತರೆ ಸದಸ್ಯರಿಗೂ ಮಾಡಿ ಬಡಿಸಲು ಉತ್ಸುಕರಾಗಿದ್ದಲ್ಲಿ ಸ್ಯಾಂಡ್‌ವಿಚ್‌ ಮೇಕರ್‌ನ್ನು ನಿಮ್ಮ ಮನೆಗೆ ತೆಗೆದುಕೊಂಡು ಬನ್ನಿ. 700-2000/ ರೂ.ತನಕ ದೊರೆಯುವ ಇದರಲ್ಲಿ ಸ್ಯಾಂಡ್‌ವಿಚ್‌ ಜೊತೆಗೆ ಆಮ್ಲೆಟ್‌, ಪ್ಯಾನ್‌ ಕೇಕ್‌, ಟಿಕ್ಕಿ ಮುಂತಾದವುಗಳನ್ನು ಕೂಡ ತಯಾರಿಸಬಹುದು.

ನೂಡಲ್ಸ್ ಮೆಶೀನ್

ನಿಮ್ಮ ಮಕ್ಕಳಿಗೆ ನೂಡಲ್ಸ್ ತಿನ್ನುವ ಆಸೆ ಇದ್ದಲ್ಲಿ, ನೀವು ಅವರ ಆರೋಗ್ಯದ ಬಗ್ಗೆ ಗಮನಹರಿಸಿ ಅವರು ಅದನ್ನು ತಿನ್ನುವುದರಿಂದ ತಡೆಯುತ್ತಿದ್ದೀರಾ? ಈಗ ಹಾಗೆ ಮಾಡಬೇಡಿ. ನೂಡಲ್ಸ್ ಮೆಶೀನ್‌ ಮನೆಗೆ ತಂದು ನಿಮ್ಮ ಕೈಯಾರೆ ಅವರಿಗೆ ಹೆಲ್ದೀ, ಟೇಸ್ಟಿ ನೂಡಲ್ಸ್ ಮಾಡಿಕೊಡಿ. 1,000-3,000/ ರೂ.ಗಳ ರೇಂಜ್‌ನಲ್ಲಿ ದೊರೆಯುವ ನೂಡಲ್ಸ್ ಮೆಶೀನ್‌ನಿಂದ ಕೆಲವೇ ಗಂಟೆಗಳಲ್ಲಿ ನೂಡಲ್ಸ್ ತಯಾರಿಸಬಹುದು.

ಐಸ್‌ಕ್ರೀಮ್ ಮೇಕರ್‌

ಬೇಸಿಗೆ ಕಾಲದಲ್ಲಿ ಕುಟುಂಬದವರ ಜೊತೆ, ಸ್ನೇಹಿತರ ಜೊತೆ ಐಸ್‌ಕ್ರೀಮ್ ಪಾರ್ಲರ್‌ಗೆ ಹೋಗುವ ಬದಲು ಮನೆಗೆ ಐಸ್‌ಕ್ರೀಮ್ ಮೇಕರ್‌ ತೆಗೆದುಕೊಂಡು ಬನ್ನಿ. ನೀವೇ ಸ್ವತಃ ಬೇರೆ ಬೇರೆ ಫ್ಲೇವರ್‌ನ ಐಸ್‌ಕ್ರೀಮ್ ಗಳನ್ನು ಮಾಡಿಕೊಟ್ಟು ಮಕ್ಕಳಿಂದ ಹಾಗೂ ಮನೆಯವರಿಂದ ಪ್ರಶಂಸೆ ಗಿಟ್ಟಿಸಿಕೊಳ್ಳಿ. ಇತ್ತೀಚಿನ ವರ್ಷಗಳಲ್ಲಿ ಮಾರುಕಟ್ಟೆಗೆ ಬಂದಿರುವ ಐಸ್‌ಕ್ರೀಮ್ ಮೇಕರ್‌ಗಳಿಂದ ಐಸ್‌ಕ್ರೀಮ್ ತಯಾರಿಸುವುದು ತುಂಬಾ ಸುಲಭ. ಕೇವಲ 30 ನಿಮಿಷಗಳ ಅವಧಿಯಲ್ಲಿ ನೀವು ನಿಮ್ಮ ಮನೆ ಮಂದಿಗೆಲ್ಲ ಇಷ್ಟವಾಗುವ ಐಸ್‌ಕ್ರೀಂನ್ನು ತಯಾರಿಸಿಕೊಡಬಹುದು. 2,000-20,000/ ರೂ.ಗಳ ರೇಂಜಿನಲ್ಲಿ ಈ ಐಸ್‌ ಕ್ರೀಮ್ ಮೇಕರ್‌ಗಳು ದೊರೆಯುತ್ತವೆ.

ಡಿಶ್‌ ವಾಶರ್‌

ಮನೆಗೆ ಬಂದ ಅತಿಥಿಗಳಿಗೆ ಬಗೆಬಗೆಯ ಊಟತಿಂಡಿ ಮಾಡಿ ಬಡಿಸುವುದು ಅಷ್ಟೇನೂ ಕಷ್ಟಕರ ಎನಿಸುವುದಿಲ್ಲ. ಆದರೆ ಆ ಬಳಿಕ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ನಿಜಕ್ಕೂ ಕಷ್ಟದ ಕೆಲಸವೇ ಹೌದು. ಅದಕ್ಕಾಗಿ ಮನೆಗೆಲಸದವರ ಸಹಾಯ ತೆಗೆದುಕೊಳ್ಳಬೇಕು. ಮನೆಗೆಲಸದವರು ಸಿಗದೇ ಇದ್ದಾಗ, ಸಿಕ್ಕರೂ ನಿಮ್ಮ ಸಮಯಕ್ಕೆ ಆಗದೇ ಇದ್ದರೆ ಏನು ಪ್ರಯೋಜನ? ಅದಕ್ಕಾಗಿ ನೀವು ಮನೆಗೆ ಡಿಶ್‌ ವಾಶರ್‌ ತೆಗೆದುಕೊಂಡು ಬನ್ನಿ. ವಿದ್ಯುತ್‌ ಚಾಲಿತ  ಈ ಯಂತ್ರದ ಬೆಲೆ 25,000-40,000/ ರೂ. ರೇಂಜ್‌ನಲ್ಲಿದೆ.

– ಅನುಪಮಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ