ಇತ್ತೀಚೆಗೆ ಮನೆಗಳನ್ನು ಅಲಂಕರಿಸಲು ಎಷ್ಟು ಹೊಸ ಹೊಸ ಸಾಮಗ್ರಿಗಳು ಬರುತ್ತಿವೆ ಎಂದರೆ, ಅಷ್ಟು ಹಿಂದೆಲ್ಲ ಇರಲೇ ಇಲ್ಲ. ಈಗ ನಡೆಯುತ್ತಿರುವ ಟ್ರೆಂಡ್‌ ಖಂಡಿತಾ ಮ್ಯಾಚಿಂಗ್‌ ಮ್ಯಾಚಿಂಗ್‌ ಮಾದರಿಯದಲ್ಲ. ನೀವು ಸಹ ನಿಮ್ಮ ಮನೆಯನ್ನು ಈ ರೀತಿ ಅಲಂಕರಿಸುವಾಗ ವಿಭಿನ್ನ ಬಗೆಯ ಸಾಮಗ್ರಿಗಳನ್ನು ಬಳಸಿಕೊಳ್ಳಲು ಹಿಂಜರಿಯದಿರಿ. ಮತ್ತೊಂದು ನೆನಪಿಡತಕ್ಕ ಅಂಶವೆಂದರೆ, ಮನೆ ಅತಿ ಪರ್ಫೆಕ್ಟ್ ಆಗಿಯೂ ಕಾಣಿಸಬಾರದು.

ಮನೆ ಅಲಂಕರಿಸುವಾಗ ಯಾವ ಟ್ರೆಂಡ್‌ ಚಾಲ್ತಿಯಲ್ಲಿದೆ ಎಂಬುದನ್ನು ತಿಳಿದಿರಬೇಕು. ನಿಮ್ಮ ಬಜೆಟ್‌ ಎಷ್ಟು? ಎಷ್ಟು ಸಮಯದೊಳಗೆ ನಿಮಗೆ ಮನೆ ರೆಡಿ ಆಗಬೇಕು ಎಂಬುದರ ಜೊತೆ ಜೊತೆಗೆ ನೀವು ಯಾವ ರೀತಿ ಮನೆಯಲ್ಲಿ ವಾಸಿಸಿದರೆ ಹೆಚ್ಚು ಕಂಫರ್ಟೆಬಲ್ ಆಗಿರಬಲ್ಲಿರಿ ನೋಡಿಕೊಳ್ಳಿ. ಟ್ರೆಂಡ್‌ ಜೊತೆಗೆ ನಿಮ್ಮ ಆಯ್ಕೆಯನ್ನೂ ಗಮನಿಸಿ. ಆಗ ನಿಮ್ಮ ಆಯ್ಕೆಗೆ ತಕ್ಕಂಥ ಮನೆ ಟ್ರೆಂಡಿಯಾಗಿ ಸಿದ್ಧವಾಗುತ್ತದೆ.

ಸಿಮೆಟ್ರಿಯ ಕಡೆ ಗಮನವಿರಲಿ

ಮನೆಯ ಅಲಂಕಾರಕ್ಕೆ ಜ್ಯಾಮಿತೀಯ ವಿನ್ಯಾಸ (ಸಿಮೆಟ್ರಿ) ಬಲು ಮುಖ್ಯ. ಇದರಿಂದ ಮನೆ ಸುಂದರವಾಗುತ್ತದೆ, ಬದಲಿಗೆ ಡೆಕೋರೇಟಿವ್ ‌ಪೀಸ್‌ಗಳ ಆಕರ್ಷಣೆ ಹೆಚ್ಚುತ್ತದೆ. ನೀವು ಎಷ್ಟೇ ಸುಂದರ ಹಾಗೂ ಕಲಾತ್ಮಕ ವಸ್ತುಗಳನ್ನು ಖರೀದಿಸಿರಲಿ, ನೀವು ಅವನ್ನು ವ್ಯವಸ್ಥಿತವಾಗಿ ಇಟ್ಟುಕೊಳ್ಳದಿದ್ದರೆ ಮನೆಯ ಲುಕ್ಸ್ ಹೆಚ್ಚಿಸುವ ಬದಲು ಕಡಿಮೆ ಆಗುತ್ತದೆ.

ಸರಳವಾಗಿ ಅಲಂಕರಿಸಿ

ಮನೆಯನ್ನು ಅಲಂಕರಿಸುವಾಗ ನಿಮಗೆ ಸರಳತೆಯಲ್ಲೇ ಸೌಂದರ್ಯ ಇರುವುದು ಗೊತ್ತಾಗುತ್ತದೆ. ನೀವು ತುಸು ವ್ಯಾವಹಾರಿಕವಾಗಿ ವರ್ತಿಸಿ, ಏನನ್ನೂ ಯೋಚಿಸದೆ ವ್ಯಾಪಾರ ಮಾಡಬೇಡಿ. ನೀವು ಬೇಕಾದಷ್ಟು ಆ್ಯಕ್ಸೆಸರೀಸ್‌ ಖರೀದಿಸಿರಬಹುದು. ಮೂರ್ತಿಗಳು, ಕ್ಯಾಂಡಲ್ ಹೋಲ್ಡರ್‌, ಆರ್ಟ್‌ ಪೀಸಸ್‌ ಇತ್ಯಾದಿ. ಯಾವಾಗ ಆ್ಯಂಟಿಕ್‌ ಪೀಸ್‌ ಖರೀದಿಸಿದರೂ, ಅದು ನಿಮ್ಮ ಇಂಟೀರಿಯರ್‌ಗೆ ಮ್ಯಾಚ್‌ ಆಗುತ್ತದೆಯೋ ಇಲ್ಲವೋ ನೋಡಿಕೊಳ್ಳಿ. ಕೋಣೆಯಲ್ಲಿ ಎಂದೂ ಹೆಚ್ಚಿನ ವಸ್ತುಗಳನ್ನು ತುರುಕಿಡಬೇಡಿ. ಈಗೆಲ್ಲ ಸಿಂಪಲ್ ಲುಕ್ಸ್ ಹೆಚ್ಚು ಚಾಲ್ತಿಯಲ್ಲಿದೆ.

ಪೇಂಟ್‌ : ಕಲರ್‌ ಥೆರಪಿಸ್ಟ್ ಹೇಳುವುದೆಂದರೆ, ಯಾವ ಬಣ್ಣವನ್ನು ನೀವು ಮನೆಯಲ್ಲಿ ಬಳಸುತ್ತೀರೋ ಅದು ನಿಮ್ಮ ಭಾವನಾತ್ಮಕ ಸ್ಥಿತಿಯ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಡಲ್ ಕಲರ್‌ ಮನೆಗೆ ಉದಾಸೀನತೆಯ ಲುಕ್‌ ನೀಡುತ್ತದೆ. ಗೋಡೆಗಳಿಗೆ ಬ್ರೈಟ್‌ಬಣ್ಣ ಹಚ್ಚಿಸಿ. ಈಗೆಲ್ಲ ಪಿಂಕ್‌ ಪರ್ಪಲ್ ಹೆಚ್ಚು ಚಾಲ್ತಿಯಲ್ಲಿದೆ. ನೀವು ಲೈಟ್‌ ಕಲರ್‌ ಥೀಮ್ ಕೂಡ ಇಟ್ಟುಕೊಳ್ಳಬಹುದು. ಆದರೆ ಅದರಲ್ಲಿ ತುಸು ಬ್ರೈಟ್‌ನೆಸ್‌ ಇರಬೇಕು. ಬ್ರೈಟ್‌ ಕಲರಿಂಗ್‌ ಹಾಗೂ ಉತ್ತಮ ಲೈಟಿಂಗ್‌ ಕೋಣೆಯಲ್ಲಿ ಪಾಸಿಟಿವಿಟಿ ಹೆಚ್ಚಿಸುತ್ತದೆ. ಕೋಣೆಯ ಒಂದು ಗೋಡೆಯನ್ನು ನಿಮ್ಮ ಮೆಚ್ಚಿನ ಬಣ್ಣದಿಂದ ಪೇಂಟ್‌ ಮಾಡಿ. ಇದನ್ನು ಪೇಕ್‌ ಪಾಯಿಂಟ್‌ ಮಾಡಿಕೊಂಡು, ಅದರ ಮೇಲೆ ಏನಾದರೂ ಆರ್ಟ್‌ ಪೀಸ್‌ ಮಾಡಿಸಿ.

ಫರ್ನೀಚರ್‌ : ವುಡನ್‌ ಫರ್ನೀಚರ್‌ಗಾಗಿ ವುಡ್ ಪಾಲಿಶ್‌ಗೆ ಬದಲಾಗಿ ಫ್ಯಾಬ್ರಿಕ್‌ನ ಬಳಕೆಯನ್ನು ಮಾಡಿ. ಇದನ್ನು ನೀವು ಹಳೆಯ ಮತ್ತು ಹೊಸತು, ಎರಡೂ ಬಗೆಯ ಫರ್ನೀಚರ್‌ಗೆ ಬಳಸಬಹುದು. ಫ್ಲೋರ್‌, ಪ್ಲೇನ್‌, ಜ್ಯಾಮಿಟ್ರಿಕ್‌ ಪ್ಯಾಟರ್ನ್‌ ಇತ್ಯಾದಿ ಯಾವುದು ನಿಮಗೆ ಇಷ್ಟವೋ ಅದನ್ನೇ ಅರಿಸಿ. ಎಷ್ಟೋ ಜನ ಕ್ಯಾನ್ವಾಸ್‌ ಸಹ ಬಳಸುತ್ತಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ