ಇತ್ತೀಚೆಗಷ್ಟೆ ಉಮ್ಮಿಡಿ ಬಂಗಾರು ಜ್ಯೂವೆಲರ್ಸ್‌ (ಖೇರಾ) ಒಂದು ಅಭೂತಪೂರ್ವ ವಿಶಿಷ್ಟ ಪ್ರತ್ಯೇಕ `ಪರ್ಶಿಯಾನಾ' ಬಂಗಾರದ ಒಡವೆಗಳ ಸಂಗ್ರಹವನ್ನು ಪರ್ಶಿಯಾ ಮೂಲದ ಕಲೆ ಮತ್ತು ವಾಸ್ತುಗಳ ಪ್ರೇರಣೆಯಿಂದ ಸ್ಛೂರ್ತಿ ಪಡೆದು ಮೊಟ್ಟ ಮೊದಲ ಬಾರಿಗೆ ವಿಶೇಷವಾಗಿ ಪ್ರಸ್ತುತಪಡಿಸುತ್ತಿದೆ.

ಈ ಅಮೋಘ ಸಂಗ್ರಹವನ್ನು ಖೇರಾದ ಮ್ಯಾನೇಜಿಂಗ್‌ ಡೈರೆಕ್ಟರ್‌ ಜಿತೇಂದ್ರ ಉಮ್ಮಿಡಿ ಚೆನ್ನೈನ ಶೋರೂಮಿನಲ್ಲಿ ಆಯ್ದ ಅತಿಥಿಗಳು ಹಾಗೂ ಬ್ರ್ಯಾಂಡ್‌ನ ವಿಶೇಷ ಗ್ರಾಹಕರ ಮುಂದೆ ಅನಾವರಣಗೊಳಿಸಿದರು.

ಪರ್ಶಿಯಾನಾ ರತ್ನಾಭರಣಗಳ ಸಂಗ್ರಹದ ಲಾಂಚ್‌ನಿಂದಾಗಿ ಗ್ರಾಹಕರಿಗೆ ಈ ಒಡವೆಗಳ ವಿಶಾಲ ಶ್ರೇಣಿಯನ್ನು ಸಮಗ್ರವಾಗಿ ಒಂದೇ ಕಡೆ ವೀಕ್ಷಿಸಿ, ಖರೀದಿಸುವ ಅಪೂರ್ವ ಸದವಕಾಶ ಲಭಿಸಿತು. ಈ ಒಡವೆಗಳ ಇಂಟ್ರಿಕೇಟ್‌ ಡಿಸೈನ್‌ಗಳನ್ನು ನೋಡಿಯೇ ತಣಿಯಬೇಕು. ಇಂಥ ಸಮಕಾಲೀನ ವಿನ್ಯಾಸ ಎಂದೂ ಔಟ್‌ ಆಫ್‌ ಸ್ಟೈಲ್ ಎನಿಸದು. ಇಲ್ಲಿನ ಸ್ಟನ್ನಿಂಗ್‌ ಕಲೆಕ್ಷನ್‌, ಪರ್ಶಿಯಾದ ಕಲೆ ವಾಸ್ತುಶಿಲ್ಪಗಳಿಂದ ಬಹಳ ಪ್ರಭಾವಿತಗೊಂಡು ಅಲ್ಲಿನ ಡೆಲಿಕೇಟ್‌ ಡಿಸೈನ್ಸ್ ನ್ನು ಅನುಸರಿಸಿದೆ. ಇಲ್ಲಿ ಬಳಕೆಗೊಂಡಿರುವ ಮೋಟಿಫ್ಸ್ ಪ್ಯಾಟರ್ನ್ಸ್, ಜ್ಯಾಮಿತೀಯ ವರ್ಣ ವಿನ್ಯಾಸಕ್ಕೆ ಕುಸುರಿ ಹಿಡಿದಿದೆ. ಇಲ್ಲಿನ ಪ್ರತಿ ಒಡವೆಯೂ ಸಹ ಉತ್ಕೃಷ್ಟ ಗುಣಮಟ್ಟದ ವಜ್ರಗಳು, ಅಪರೂಪದ ಮುತ್ತು, ರೋಸ್‌ ಗೋಲ್ಡ್ ನಲ್ಲಿ ಹುದುಗಿಸಲಾದ ಟ್ರ್ಯಾನ್ಸ್ ನೈಟ್‌ ಸ್ಟೋನ್ಸ್, ಅದನ್ನು  ಸುತ್ತುವರಿದ ಗ್ಲಾಸಿ ಎನಾಮಲ್ ಸೆಟಿಂಗ್‌, ಇದರ ಅದ್ಭುತ ಕೈಚಳಕಕ್ಕೆ ಕೈಗನ್ನಡಿಯಾಗಿದೆ. ಇದು ಅಪ್ಪಟ ಪರ್ಶಿಯನ್‌ ಡಿಸೈನ್ಸ್ ಎನ್ನುವುದಕ್ಕೆ ಅದರ ಡಿಗ್ನಿಟಿ ಮತ್ತು ನೊಬಿಲಿಟಿಯೇ ಸಾಕ್ಷಿ.

ಈ ಸ್ವರ್ಣಾಭರಣಗಳ ಸಂಗ್ರಹದ ಅನುಪಮ, ಅದ್ವೀತಿಯ ಗುಣಮಟ್ಟಕ್ಕೆ ಅದರಲ್ಲಿ ಬಳಕೆಯಾಗಿರುವ ಉತ್ಕೃಷ್ಟ. ಪರಿಪಕ್ವ ಪ್ಲೀಕ್ ಎಜೋರ್‌ ಎನಾಮೆಲಿಂಗ್‌ ಟೆಕ್ನಿಕ್‌ ಮೂಲಕಾರಣ. ಇದಂತೂ ಭಾರತದಲ್ಲಿ ಪ್ರಥಮ ಪ್ರಯೋಗವೇ ಸರಿ. ಈ ವೈಶಿಷ್ಟ್ಯಪೂರ್ಣ ಟೆಕ್ನಿಕ್‌ ಬೆಳಕನ್ನು ಒಡವೆಗಳ ಮೂಲಕ ಹಾದುಹೋಗುವಂತೆ ಮಾಡಿ, ಅಮೂಲ್ಯ ಹರಳುಗಳು ಫಳಫಳನೆ ಮಿಂಚಿ ಕಣ್ಣು ಕೋರೈಸುವಂತೆ ಮಾಡುತ್ತವೆ, ಹಾಗಿದೆ ಇದರ ಅದ್ಭುತ ಕೈಚಳಕ!

ಮುಖ್ಯವಾಗಿ ಇಲ್ಲಿನ ತಯಾರಿಕೆಯ ವಿಧಾನ ಒಂದು ಅತಿಸೂಕ್ಷ್ಮ `ಮೈಕ್ರೋಸ್ಕೋಪ್‌ ಸೆಟಿಂಗ್‌' ಟೆಕ್ನಿಕ್‌ನ್ನು ಅತ್ಯುತ್ತಮ ಗುಣಮಟ್ಟದ ವಜ್ರಗಳಲ್ಲಿ ಎನ್‌ಕ್ರಸ್ಟ್ ಪ್ಲೇಸ್‌ಮೆಂಟ್‌ ಪ್ಯಾಟರ್ನ್‌ನಲ್ಲಿ ಹುದುಗಿಸಿ, ಅತ್ಯುದ್ಭುತ ಸ್ಟನಿಂಗ್‌ ಗ್ಲಿಟರ್‌ ಗಳಿಸಿಕೊಡುವಲ್ಲಿ ಯಶಸ್ವಿಯಾಗಿದೆ. ಈ ಸಂಗ್ರಹದಲ್ಲಿ ಕಿವಿಯ ರಿಂಗ್ಸ್, ಓಲೆ, ಮಾಟ್ಲು ಮಾತ್ರವಲ್ಲದೆ, ವೈವಿಧ್ಯಮಯ ನೆಕ್ಲೇಸ್‌ಗಳು, ಮಾಟಿ ಜುಮಕಿ, ಕೈಗಳಿಗೆ ಬ್ರೇಸ್ಲೆಟ್‌, ವಿವಿಧ ಮೂಗುಬೊಟ್ಟುಗಳನ್ನೂ ಒಳಗೊಂಡಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಜಿತೇಂದ್ರ ಉಮ್ಮಿಡಿ, ``ಖೇರಾ ಪ್ರತಿಸಲ ತನ್ನ ಅಮೂಲ್ಯ ಗ್ರಾಹಕರಿಗಾಗಿ ಲೇಟೆಸ್ಟ್ ಟ್ರೆಂಡ್ಸ್ ಹಾಗೂ ಶ್ರೀಮಂತ ಸಾಂಪ್ರದಾಯಿಕ ಡಿಸೈನ್‌ಗಳ ಸಂಗಮವನ್ನು ಒದಗಿಸುತ್ತಲೇ ಬಂದಿದೆ. ಹೀಗಾಗಿ ಈ ವಿನೂತನ ಪರ್ಶಿಯಾನಾ ಸಂಗ್ರಹ ಮೊದಲಿಗೆ ಚೆನ್ನೈ ಗ್ರಾಹಕರಿಗೆ ದೊರಕಿ, ನಂತರ ನಮ್ಮ ಇತರ ಶಾಖೆಗಳನ್ನೂ ತಲುಪಲಿದೆ. ಇಲ್ಲಿನ ಪ್ಯಾಟರ್ನ್‌, ಡಿಸೈನ್ಸ್, ಪ್ಲೀಕ್‌ ಎಜೋರ್‌ ಎನಾಮೆಲಿಂಗ್‌ ಟೆಕ್ನಿಕಲ್ ಇತ್ಯಾದಿಗಳು ನಮ್ಮ ಗ್ರಾಹಕರಿಗೆ ಹೆಚ್ಚಿನ ಸಂತೃಪ್ತಿ ಒದಗಿಸಲಿದೆ ಎಂದು ನಮಗೆ ಖಾತ್ರಿ ಇದೆ. ಪರ್ಶಿಯಾದ ಶ್ರೀಮಂತ ಪರಂಪರೆ ನಮ್ಮ ಈ ಹೊಸ ಸಂಗ್ರಹಕ್ಕೆ ಹೆಚ್ಚಿನ ಕೊಡುಗೆ ನೀಡಲಿದೆ. ನಮ್ಮ ಕುಶಲಕರ್ಮಿಗಳ ಕೈಚಳಕ, ಪರಿಪಕ್ವತೆ ನಮ್ಮೆಲ್ಲ ಗ್ರಾಹಕರಿಗೂ ಹೆಚ್ಚಿನ ಹೆಮ್ಮೆ ತಂದುಕೊಡಬಲ್ಲದು ಎಂದು ಭರವಸೆ  ನೀಡುತ್ತೇವೆ,'' ಎಂದರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ