ದಕ್ಷಿಣ ಭಾರತದ ನಿರ್ದೇಶಕರಲ್ಲಿ ದಿಗ್ಗಜರೆನಿಸಿದ ಎಸ್‌.ಎಸ್‌. ರಾಜ್‌ಮೌಳಿ, ಎಸ್‌. ಶಂಕರ್‌ ಅಭೂತಪೂರ್ವ ಎನಿಸುವಂಥ ಬಾಹುಬಲಿ, ರೋಬೋ ಮಾದರಿಯ ಚಿತ್ರ ಮಾಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿ, ಖ್ಯಾತಿ ಗಳಿಸುತ್ತಾರೆ. ಇಂಥವರು `ಸಂತೆ ಹೊತ್ತಿಗೆ 3 ಮೊಳ' ಎಂಬಂತೆ ಚಿತ್ರಗಳನ್ನು ಹೊಸೆಯುವುದಿಲ್ಲ. ಹೀಗಾಗಿಯೇ ಇವರ ಚಿತ್ರಗಳಲ್ಲಿ ಪರಿಪಕ್ವತೆ ಕಂಡುಬರುತ್ತದೆ. ಅದೇ ತರಹ ಆಮೀರ್‌ ಖಾನ್‌, ದಬಂಗ್‌ ತಾರೇ ಜಮೀನ್‌ ಪರ್‌ ತರಹದ ಚಿತ್ರಗಳಿಂದ ಬಾಕ್ಸ್ ಆಫೀಸ್ ರೆಕಾರ್ಡ್‌ ಸೃಷ್ಟಿಸುತ್ತಾರೆ. ಅದರಲ್ಲಿ ಅವರ ಅಪಾರ ಪರಿಶ್ರಮ, ಪರ್ಫೆಕ್ಷನ್‌ ಕಂಡುಬರುತ್ತದೆ. ವರ್ಷಕ್ಕೆ 4-5 ಚಿತ್ರ ಹೊಸೆಯುವ ಬದಲು ಒಂದೇ ಚಿತ್ರ ಮಾಡುತ್ತಾರೆ. ಸೀನ್‌ ನಿಮಿಷದ್ದಿರಲಿ ಅಥವಾ 10 ನಿಮಿಷ ಅದರಲ್ಲಿ ವಾಸ್ತವಿಕತೆ ತೋರುವಲ್ಲಿ ಈ ಮಹಾನ್ ನಿರ್ದೇಶಕರಾರೂ ಹಿಂದೆ ಬೀಳುವುದಿಲ್ಲ. ಸೂಕ್ಷ್ಮಾತಿಸೂಕ್ಷ್ಮ ವಿಚಾರಗಳ ಬಗ್ಗೆಯೂ ಅಷ್ಟೆಲ್ಲ ತಲೆ ಕೆಡಿಸಿಕೊಳ್ಳುವುದರಿಂದಲೇ ಇವರ ಚಿತ್ರಗಳಿಗೆ ಈ ಮಟ್ಟದ ಹೆಸರು ಬರಲು ಸಾಧ್ಯ.

ಇಂದಿನ ಯುವಜನತೆ ಇಂಥ ಪರ್ಫೆಕ್ಷನಿಸ್ಟ್ ಗಳಿಂದ ಕಲಿಯಬೇಕಾದುದು ಬಹಳಷ್ಟಿದೆ. ಇಂದಿನ ಯುವಜನತೆಗೆ ತುಸು ಧೈರ್ಯದ ಕೊರತೆ ಇದೆ. ಅವರಿಗೆ ಎಲ್ಲಾ ಕೆಲಸದಲ್ಲೂ ಅವಸರವೇ ಪ್ರಧಾನ. ಊಟತಿಂಡಿ ಸೇವಿಸುವಾಗ ಅರ್ಜೆಂಟ್‌, ಎಲ್ಲಿಗಾದರೂ ಹೊರಡಬೇಕೆಂದರೆ ಅವಸರ, ರಸ್ತೆ ಮೇಲೆ ಗಾಡಿ ಓಡಿಸುವಾಗ ಅತಿ ವೇಗ, ಗರ್ಲ್/ಬಾಯ್‌ಫ್ರೆಂಡ್‌ಗಳನ್ನು ಮಾಡಿಕೊಳ್ಳುವುದರಲ್ಲೂ ಫಾಸ್ಟ್ ನೆಸ್‌, ಅಷ್ಟೇ ವೇಗವಾಗಿ ಬ್ರೇಕ್‌ ಅಪ್‌ನಲ್ಲೂ ತರಾತುರಿ.... ಈ ಪಟ್ಟಿಗೇ ಕೊನೆಯೇ ಇಲ್ಲ.

ಇವರು ಕೆಲಸಗಳಿಗೆ ತಂತಮ್ಮ ಸಂಪೂರ್ಣ ಸಮಯ ನೀಡಿ ಅದನ್ನು ಅಚ್ಚುಕಟ್ಟು ಮಾಡಿಕೊಳ್ಳುವ ಬದಲು, ಫಟಾಫಟ್‌ ಅದನ್ನು ಮಾಡಿ ಮುಗಿಸಿ ಕೈ ತೊಳೆದು ಕೊಳ್ಳುತ್ತಾರೆ. ಗೂಗಲ್‌ನಲ್ಲಿ ಒಂದು ಕ್ಲಿಕ್‌ನಿಂದ ಎಲ್ಲಾ ಕಠಿಣ ಪ್ರಶ್ನೆಗಳಿಗೂ ಉತ್ತರ ಸಿಗುವ ಹಾಗೆ, ಅದೇ ತರಹ ನಿಜ ಜೀವನದಲ್ಲೂ ಪ್ರತಿ ಕೆಲಸವನ್ನೂ ಅತಿ ತರಾತುರಿಯಿಂದ ಮಾಡಿ ಮುಗಿಸಿ, ಉಳಿದ ಸಮಯ ಎಂಜಾಯ್ ಮಾಡಬೇಕೆಂಬುದು ಉದ್ದೇಶ. ನಿಧಾನವಾಗಿ ಯೋಚಿಸಿ, ವಿಚಾರ ವಿಮರ್ಶೆ ಮಾಡಿ, ಕಾರ್ಯಗಳನ್ನು ಒಂದು ಯೋಜನಾಬದ್ಧವಾಗಿ ಮಾಡುವುದು ಹಳೆ ಕಾಲದ ಗೊಡ್ಡು ಕೆಲಸ. ಇವರುಗಳಂತೂ ಈಗಿನ ಯಂಗ್‌ ಜನರೇಶನ್‌, ಬಿಸಿ ರಕ್ತದ ಕುದಿ ಉಕ್ಕುತ್ತಿರುತ್ತದೆ. ಯಾವುದೇ ವಿಚಾರವಾಗಿ ಪೋಷಕರು ಒಂದಿಷ್ಟು ಸಲಹೆ ನೀಡಿದರೂ, `ಅಯ್ಯೋ ಹೋಗಮ್ಮ.... ಯಾರ ಹತ್ತಿರ ಅಷ್ಟೊಂದು ಸಮಯವಿದೆ, ನಿಧಾನವಾಗಿ ಯೋಚಿಸಿ ಮಾಡಲು ಯಾರಿಗೆ ವ್ಯವಧಾನವಿದೆ,' ಎನ್ನುತ್ತಾರೆ. ಬೇಗ ಬೇಗ ಮಾಡಿದರೆ ಮಾತ್ರ ಪ್ರಗತಿ ಸಾಧ್ಯ ಎಂಬುದು ಅವರ ವಾದ. ಅವಸರದಲ್ಲಿ ಯುವಜನತೆ ಕೆಲಸವನ್ನೇನೋ ಬೇಗ ಮುಗಿಸುತ್ತಾರೆ, ಆದರೆ ತರಾತುರಿಯ ಕೆಲಸ ಕುಂದುಕೊರತೆಗಳಿಂದ ಕೂಡಿರುತ್ತದೆ ಎಂಬುದನ್ನು ಅವರು ಒಪ್ಪುವುದಿಲ್ಲ.

ಬನ್ನಿ, ಈ ರೀತಿ ಅವಸರದ ಕೆಲಸ ಎಂಥ ತೊಂದರೆಗಳಿಗೆ ಆಹ್ವಾನ ನೀಡುತ್ತದೆ ಎಂದು ತಿಳಿಯೋಣ :

ಅವಸರದಿಂದ ಕನ್‌ಫ್ಯೂಷನ್ಸ್ ಹೆಚ್ಚು : ಯಾರು ಅತಿ ವೇಗವಾಗಿ ಕೆಲಸ ಮಾಡುತ್ತಾರೋ, ಅವರು ಅಷ್ಟೇ ವೇಗವಾಗಿ ಬಡಬಡಿಸಿ ಮಾತನಾಡುತ್ತಾರೆ. ಎದುರಿಗೆ ಮಾತನಾಡುತ್ತಿರುವವರಿಗೆ ಉತ್ತರ ನೀಡಲು ಅವಕಾಶ ಕೊಡುವುದಿಲ್ಲ, ಮಧ್ಯೆ ಮಧ್ಯೆ ಏನಾದರೂ ಮಾತನಾಡಿಬಿಡುತ್ತಾರೆ. ಯಾರ ಮಾತನ್ನೂ ಗಮನವಿಟ್ಟು ಕೇಳಿಸಿಕೊಳ್ಳುವುದಿಲ್ಲ. ಇವರಿಗೆ ಯಾವುದಾದರೂ ತುರ್ತು ಕೆಲಸ ಬಂದಾಗ ಅದನ್ನು ಸಮರ್ಪಕವಾಗಿ ನಿರ್ವಹಿಸಲಾರರು. ಏನನ್ನು ಮಾಡುವುದು, ಬಿಡುವುದು ಎಂಬ ಕನ್‌ಫ್ಯೂಷನ್‌ ಇವರಿಗೆ ತಪ್ಪದು. ಎಷ್ಟೋ ಸಲ ಎದುರಿನವರ ಮಾತಿಗೆ ತಲೆದೂಗುತ್ತಾರೆ, ನಂತರ ಯಾಕಾದರೂ ಅದನ್ನು ಒಪ್ಪಿಕೊಂಡೆನೋ ಎಂದು ಪಶ್ಚಾತ್ತಾಪ ಪಡುತ್ತಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ