ಉಡುಗೊರೆಗಳ ಕೊಡುವ ತೆಗೆದುಕೊಳ್ಳುವಿಕೆ ಕುಟುಂಬಗಳ ನಡುವೆ ಇರಬಹುದು, ಸಂಬಂಧಿಕರ ಮಧ್ಯೆ ಆಗಿರಬಹುದು ಅಥವಾ ಅಕ್ಕಪಕ್ಕದವರಿಗೆ ಇರಬಹುದು. ಇದು ಒಂದು ರೀತಿಯಲ್ಲಿ ಸಂಬಂಧ ಬೆಸೆಯುವಲ್ಲಿ ಸಹಾಯಕವಾಗಿದೆ. ಆದರೆ ನಿಮ್ಮ ಸ್ನೇಹ ಮತ್ತು ಪ್ರೀತಿಯನ್ನು ಪ್ರದರ್ಶಿಸಲು ನೀವು ದುಬಾರಿ ಉಡುಗೊರೆಯನ್ನೇ ಕೊಡಬೇಕೆಂದೇನಿಲ್ಲ. ಅತ್ಯಂತ ಬೆಲೆ ಬಾಳುವ ಉಡುಗೊರೆ ಕೊಟ್ಟು ನೀವು ಬೇರೆಯವರನ್ನು ಕೃತಜ್ಞರನ್ನಾಗಿಸಬಹುದು. ಆದರೆ ಅದೇ ವ್ಯಕ್ತಿ ನಿಮಗೆ ಉಡುಗೊರೆ ಕೊಡಬೇಕಾಗಿ ಬಂದಾಗ ಅವರು ಅಷ್ಟು ದುಬಾರಿ ಉಡುಗೊರೆ ಕೊಡಲಾಗದೆ ಪರಿತಪಿಸುವಂತಾಗುತ್ತದೆ. ದುಬಾರಿ ಉಡುಗೊರೆ ಕೊಟ್ಟು ನಿಮ್ಮ ಹಕ್ಕನ್ನು ಪ್ರತಿಪಾದಿಸಬೇಡಿ.

ಉಡುಗೊರೆ ಕೊಡುವ ಉದ್ದೇಶ ಸೌಹಾರ್ದತೆ ಬಿಂಬಿಸುವುದಾಗಿರಬೇಕೇ ಹೊರತು, ಇತರರನ್ನು ಇಕ್ಕಟ್ಟಿಗೆ ಸಿಲುಕಿಸುವಂತೆ ಆಗಬಾರದು. ಇದರ ಜೊತೆ ಜೊತೆಗೆ ಉಡುಗೊರೆ ಸ್ವೀಕರಿಸುವ ವ್ಯಕ್ತಿ ಅದು ದುಬಾರಿ ಅಥವಾ ಕಡಿಮೆ ಬೆಲೆಯದ್ದು ಎಂಬುದರ ಕಡೆ ಗಮನ ಕೊಡದೆ, ನಿಮ್ಮ ಪ್ರೀತಿ ವಿಶ್ವಾಸವನ್ನಷ್ಟೇ ಗಮನಿಸುವಂತಾಗಬೇಕು. ಏಕೆಂದರೆ ನೀವು ಉಡುಗೊರೆಯ ಮುಖಾಂತರ ಅವರನ್ನು ಗೌರವಿಸುತ್ತಿರುವಿರಿ, ಪ್ರೀತಿಯನ್ನು ಹಂಚುತ್ತಿರುವಿರಿ. ನಿಮ್ಮ ಉಡುಗೊರೆ ಕಡಿಮೆ ಬೆಲೆಯದ್ದಾಗಿದ್ದರೂ ಸರಿ, ಆದರೆ ಅದು ಅವರಿಗೆ ಉಪಯುಕ್ತ ಎನಿಸುವಂತಾಗಿರಬೇಕು. ನಿಮ್ಮ  ಜೊತೆಗಿನ ನಿಕಟತೆಯನ್ನು ಆ ಉಡುಗೊರೆ ಸದಾ ನೆನಪಿಗೆ ತರುವಂತಿರಬೇಕು.

ಏನು ಉಡುಗೊರೆ ಕೊಡಬೇಕು?

ನಾವು ಈ ಸಲ ದುಬಾರಿ ಉಡುಗೊರೆ ಕೊಡೋದು ಬೇಡ. 100 ರೂ.ನಿಂದ ಹಿಡಿದು 500 ರೂ. ಬೆಲೆ ಬಾಳುವ ಉಡುಗೊರೆ ಖರೀದಿಸಿ ಕೊಡೋಣ. ತೆಗೆದುಕೊಳ್ಳುವ ವ್ಯಕ್ತಿ  ನಿಮ್ಮ ತಿಳಿವಳಿಕೆ ನೋಡಿ ಹೊಗಳದೆ ಇರಲಾರರು. ಒಂದು ವೇಳೆ ನೀವು ಆನ್‌ಲೈನ್‌ ಶಾಪಿಂಗ್‌ ಮಾಡಲು ಇಷ್ಟಪಡುವಿರಾದರೆ, ಅಂತಹ ಕೆಲವು ವಸ್ತುಗಳಿದ್ದು, ನೀವು ಮನೆಯಲ್ಲೇ ಕುಳಿತು ಆರ್ಡರ್‌ಮಾಡಬಹುದು. ಈಗ ಕ್ಯಾಂಡಲ್ಸ್ ನ ಬಹಳಷ್ಟು ವೆರೈಟಿ ಇದ್ದು, ನೀವು ಬಗೆಬಗೆಯ ಕ್ಯಾಂಡಲ್ಸ್ ಅಥವಾ ದೀಪಗಳ ಒಂದು ಹ್ಯಾಂಪರ್‌ ಸಿದ್ಧಪಡಿಸಿ ಅವರಿಗೆ ಉಡುಗೊರೆ ಕೊಡಬಹುದು.

ಇದರ ಹೊರತಾಗಿ ಗೃಹ ಬಳಕೆ ವಸ್ತುಗಳಾದ ಲ್ಯಾಂಪ್‌ ಶೇಡ್‌, ಪುಟ್ಟ ಎಮಲ್ಶನ್‌ ರಾಡ್‌, ಬುಕ್‌ ಸ್ಟ್ಯಾಂಡ್‌, ಚೈನೀಸ್‌ ಕೆಟಲ್ ಮತ್ತು ಕಾಫಿ ಮಗ್‌ ಕೂಡ ಒಳ್ಳೆಯ ಪರ್ಯಾಯ ಉಡುಗೊರೆಗಳಾಗಿವೆ. ಇದರಿಂದ ಪರ್ಸ್‌ಗೆ ಹೆಚ್ಚಿನ ಹೊರೆ ಅನಿಸದು. ಟೈಮ್ ಪೀಸ್‌, ಫೋಟೋ ಫ್ರೇಮ್, ಗಾಜಿನ ಅಲಂಕಾರಿಕ ವಸ್ತುಗಳು, ಅಡುಗೆಮನೆಯಲ್ಲಿ ಬಳಸುವ ಪರಿಕರಗಳನ್ನು ಕೊಡಬಹುದು. ಬಿಸ್ಕತ್ತು ಹಾಗೂ ಜ್ಯೂಸ್‌ ಪ್ಯಾಕ್‌ಗಳನ್ನು ಕೊಡಬಹುದು.

ಕುತೂಹಲಕಾರಿ ಉಡುಗೊರೆಗಳು

ಮಕ್ಕಳಿಗೆ ಉಡುಗೊರೆ ಕೊಡಬೇಕೆಂದರೆ ಏನು ಖರೀದಿಸಬೇಕೆಂದು ಹಲವು ಸಲ ಯೋಚಿಸಬೇಕಾಗುತ್ತದೆ. ಎಜುಕೇಶನಲ್ ಡಿವಿಡಿ, ಪ್ರೇರಣಾದಾಯಕ ಸಿನಿಮಾದ ವಿಡಿಯೋಗಳು ಒಳ್ಳೆಯ ಪುಸ್ತಕಗಳನ್ನು ಕೊಡಬಹುದು. ವೃದ್ಧರಿಗೆ ಏನಾದರೂ ಕೊಡಬೇಕಿದ್ದರೆ ಪುಸ್ತಕಗಳು, ಸ್ವೆಟರ್‌, ಶಾಲು, ನಿಯತಕಾಲಿಕೆಗಳು ಹಾಗೂ ಹಳೆಯ ಸಿನಿಮಾಗಳ ಡಿವಿಡಿಗಳನ್ನು ಕೊಡಬಹುದು. ಸಂಬಂಧಿಕರಿಗೆ, ಸ್ನೇಹಿತರಿಗೆ ಚಿಕ್ಕ ಗಿಫ್ಟ್ ಬ್ಯಾಸ್ಕೆಟ್‌ಗಳನ್ನು ಕೊಡಬಹುದು. ಎಲ್ಲಕ್ಕೂ ಒಳ್ಳೆಯ ಉಡುಗೊರೆಯೆಂದರೆ ಹಸಿರು ಸಸಿಯನ್ನು ಕೊಡುವುದಾಗಿದೆ. ಮಹಿಳೆಯರಿಗೆ ಸೌಂದರ್ಯ ಪ್ರಸಾಧನಗಳ ಉಡುಗೊರೆ ಕೊಡಬಹುದು. ವುಡನ್‌ ಡೆಕೋರೇಶನ್‌ ಪೀಸ್‌ಗಳು ಕೂಡ ನಿಮಗೆ  ಕಡಿಮೆ ಬೆಲೆಯಲ್ಲಿ ಲಭಿಸುತ್ತವೆ. ವಾಲ್ ‌ಹ್ಯಾಂಗಿಂಗ್‌ ಮತ್ತು ರಂಗೋಲಿಯ ಸ್ಟಿಕರ್‌ನ ಪ್ಯಾಕ್‌ನ್ನೂ ಕೊಡಬಹುದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ