ಮದುವೆ ಎಂತಹ ಒಂದು ಕ್ಷಣವೆಂದರೆ ಬದುಕಿನ ರೀತಿ ಮಗ್ಗುಲು ಬದಲಾವಣೆಯ ಹೊಂಬಣ್ಣದ ಹೊದಿಕೆಯಲ್ಲಿ ಅಡಗಿಸಿಕೊಳ್ಳುತ್ತದೆ. ಸಾಧಾರಣವಾಗಿ ಹುಡುಗಿಯರಿಗೆ ಈ ಬದಲಾವಣೆ ಭಾವನಾತ್ಮಕ, ಶಾರೀರಿಕ ಹಾಗೂ ಮಾನಸಿಕದ ಜೊತೆ ಜೊತೆಗೆ ಭೌತಿಕ ಆಗಿರುತ್ತದೆ. ಏಕೆಂದರೆ ಅವಳು ತಾನು ಬೆಳೆದು ಬಂದ ಮನೆಯನ್ನು ತೊರೆದು ಗಂಡನ ಮನೆಯಲ್ಲಿ ನೆಲೆಸಬೇಕಾಗುತ್ತದೆ. ಹೀಗಿರುವಾಗ ಗಂಡನ ಮನೆಯ ಬಗ್ಗೆ ಎಲ್ಲ ಹುಡುಗಿಯರಿಗೂ ಕೆಲವು ಕನಸುಗಳಿರುತ್ತವೆ. ಗಂಡನ ಮನೆ ತನ್ನ ತವರು ಮನೆಯಂತೆ ಇರದಿದ್ದರೂ ಅಲ್ಲಿ ತನ್ನ ಕೋಣೆ ಹಾಗೂ ಅಡುಗೆಮನೆ ಒಂದು ಹಂತದವರೆಗಿನ ತನ್ನ ನಿರೀಕ್ಷೆಯಂತಿರಬೇಕು ಎಂದು ಯೋಚಿಸುತ್ತಾರೆ.
ಹೀಗಿರುವಾಗ ಪ್ರತಿ ಹುಡುಗನ ಜವಾಬ್ದಾರಿ ಏನೆಂದರೆ ಮನೆಗೆ ಹೆಂಡತಿಯನ್ನು ಕರೆತರುವ ಮೊದಲು ತನ್ನ ಬೆಡ್‌ರೂಮ್ ಹಾಗೂ ಅಡುಗೆಮನೆಗೆ ಬ್ಯಾಚುಲರ್ ಲುಕ್‌ನಿಂದ ನ್ಯೂಲಿ ವೆಡ್ ಲುಕ್‌ಗೆ ಬದಲಿಸಬೇಕು. ಒಂದು ವೇಳೆ ನಿಮ್ಮ ಕೋಣೆಯ ಇಂಟೀರಿಯರ್ ನಿರ್ಧರಿಸುವಲ್ಲಿ ಸಮಸ್ಯೆಯಾಗಿದ್ದರೆ ಕೆಳಗೆ ಕೊಟ್ಟಿರುವ ಟಿಪ್ಸ್ ನಿಮಗೆ ಸಹಾಯ ಮಾಡುತ್ತವೆ.
ಬೆಡ್‌ರೂಮ್ ಬಣ್ಣ : ಬೆಡ್‌ರೂಮ್ ಇಂಟೀರಿಯರ್‌ನ ಅತ್ಯಂತ ಮಹತ್ವಪೂರ್ಣ ಭಾಗ ಗೋಡೆಗಳಿಗೆ ಹೊಡೆಸಿದ ಪೇಂಟ್ ಆಗಿರುತ್ತದೆ. ಬನ್ನಿ, ಹೊಸದಾಗಿ ಮದುವೆಯಾದ ಜೋಡಿಗಳ ರೂಮಿನ ಬಣ್ಣ ಹೇಗಿರಬೇಕೆಂದು ತಿಳಿಯೋಣ.
- ಮದುವೆ ಸಂದರ್ಭದಲ್ಲಿ ಸಾಮಾನ್ಯವಾಗಿ ವೈಬ್ರೆಂಟ್ ಬಣ್ಣಗಳು ಕಂಡುಬರುತ್ತವೆ. ವಾರವಿಡೀ ವೈಬ್ರೆಂಟ್ ಬಣ್ಣಗಳನ್ನು ನೋಡೀ ನೋಡೀ ವಧುವಿನ ಮನಸ್ಸು ಅವುಗಳಲ್ಲೇ ಕಳೆದುಹೋಗುತ್ತದೆ. ಅವಳು ಆ ಬಣ್ಣಗಳೊಂದಿಗೆ ಭಾವನಾತ್ಮಕ ರೂಪದಲ್ಲಿ ಹೊಂದಿಕೊಳ್ಳುತ್ತಾಳೆ. ವಿಶೇಷವಾಗಿ ಕೆಂಪು, ಬದನೆ, ರಾಯಲ್ ಬ್ಲೂ, ಗೋಲ್ಡನ್ ಮತ್ತು ಮೆರೂನ್ ಬಣ್ಣಗಳೊಂದಿಗೆ ಅವಳಲ್ಲಿ ಒಲವು ಮೂಡುತ್ತದೆ. ಆದ್ದರಿಂದ ವಧುವಿನ ಕೋಣೆಯನ್ನು ಸಿಂಗರಿಸುವ ಸಮಯದಲ್ಲಿ ಕೋಣೆಯ ಗೋಡೆಯ ಬಣ್ಣವನ್ನು ಅದೇ ಬಣ್ಣಗಳಿಂದ ಪೇಂಟ್ ಮಾಡಿ.
- ಹೊಸ ಮದುವೆಯಲ್ಲಿ ರೊಮ್ಯಾನ್ಸ್ ಮತ್ತು ಎಲಿಗೆನ್ಸ್ ಗೆ ಬಹಳ ಮಹತ್ವ ನೀಡಲಾಗುತ್ತದೆ. ಗಾಢವಾದ ಬಣ್ಣ ಇವೆರಡರ ಪ್ರತೀಕವಾಗಿದೆ. ಈ ಬಣ್ಣಗಳ ಜೊತೆಗೆ ಗೋಲ್ಡನ್, ಬ್ರಾಂಝ್ ಮತ್ತು ಮೆಟ್ಯಾಲಿಕ್ ಕಾಂಬಿನೇಷನ್‌ನ ಡೀಪ್ ಜ್ಯೂವೆಲ್ ಬಣ್ಣಗಳು ವಧುವಿಗೆ ಇನ್ನೂ ಹೆಚ್ಚು ಸ್ಮೂದಿಂಗ್ ಫೀಲಿಂಗ್ ಕೊಡುತ್ತದೆ.
- ಯಾರಿಗೇ ಆಗಲಿ ತಮ್ಮ ಮನೆಗಿಂತ ಹೆಚ್ಚಾಗಿ ಆತ್ಮೀಯ ಭಾವನೆ ಎಲ್ಲಿ ಉಂಟಾಗುತ್ತದೆ? ಕೊಂಚ ಯೋಚಿಸಿ. ನಿಮ್ಮ ವಧು ನಿಮಗಾಗಿ ತನ್ನ ಮನೆ ಬಿಟ್ಟು ಬರುತ್ತಿದ್ದಾಳೆ. ಹೀಗಿರುವಾಗ ಅವಳಿಗೆ ಆ ಭಾವನೆ ನೀಡಲು ಈ ಡಾರ್ಕ್ ಕಲರ್ ಸಾಕಷ್ಟು ಸಹಾಯ ಮಾಡುತ್ತವೆ.
- ಒಂದು ವೇಳೆ ಕೋಣೆ ದೊಡ್ಡದಾಗಿದ್ದರೆ ಇಡೀ ಕೋಣೆಯಲ್ಲಿ ಗಾಢವಾದ ಬಣ್ಣ ಹೊಡೆಸಬಹುದು. ಒಂದುವೇಳೆ ಕೋಣೆ ಚಿಕ್ಕದಾಗಿದ್ದರೆ ಕೋಣೆಯ ಒಂದು ಗೋಡೆಯ ಮೇಲೆ ಮಾತ್ರ ಗಾಢ ಬಣ್ಣ ಹೊಡೆಸಿ. ಉಳಿದ ಗೋಡೆಗಳಲ್ಲಿ ಗಾಢ ಬಣ್ಣಕ್ಕೆ ಹೊಂದುವಂತಹ ತೆಳು ಬಣ್ಣಗಳನ್ನು ಹಾಕಿಸಬಹುದು.
ಫರ್ನೀಚರ್ : ಕೋಣೆಯಲ್ಲಿರುವ ಫರ್ನೀಚರ್‌ಗಳಿಂದ ಕೋಣೆಯ ಖಾಲಿತನ ಭರ್ತಿಯಾಗುತ್ತದೆ. ನಿಮ್ಮ ಪತ್ನಿಯೂ ನಿಮ್ಮ ಜೀವನದ ಖಾಲಿತನ ದೂರ ಮಾಡುತ್ತಾಳೆ. ಆದರೆ ಫರ್ನೀಚರ್ ಆಯ್ಕೆ ಮಾಡುವಾಗ ಕೆಲವು ವಿಷಯಗಳನ್ನು ಅಗತ್ಯವಾಗಿ ಗಮನಿಸಿ.