ನಾನು ಪಿ.ಯು.ಸಿ. ವಿದ್ಯಾರ್ಥಿನಿ ಆಗಿದ್ದಾಗ ನಡೆದ ಘಟನೆಯಿದು. ಬಾಲ್ಯದಲ್ಲಿ ಬಡತನದ ಬೇಗೆ ಹೆಚ್ಚಾಗಿತ್ತು. ತಂದೆಯವರ ಸೀಮಿತ ಆದಾಯದಲ್ಲಿ ಒಟ್ಟು 7 ಜನರ ಕುಟುಂಬ ನಡೆಯಬೇಕಿತ್ತು. ಈ ಕಾರಣದಿಂದ ಎಲ್ಲರೂ ಸದಾ ಸಿಡಿಮಿಡಿ ಎನ್ನುತ್ತಾ ಅಸಹನೆ ಕಾರುತ್ತಿದ್ದರು. ಅದರಲ್ಲೂ ನನಗೆ ಮೊದಲಿನಿಂದ ಕೋಪ ಹೆಚ್ಚು. ಯಾರೊಂದಿಗೂ ಸರಿಯಾಗಿ ಮಾತನಾಡುತ್ತಿರಲಿಲ್ಲ. ನನ್ನಾಸೆಗಳು ನೆರವೇರಬೇಕೆಂದು ಬಯಸುತ್ತಿದ್ದೆ.... ಅದೆಂದೂ ಕೈಗೂಡುತ್ತಿರಲಿಲ್ಲ.

ಒಂದು ದಿನ ನಮ್ಮ ಮನೆಗೆ ದೂರದ ನೆಂಟರು ಬಂದಿದ್ದರು. ಹೇಗೋ ಮಾಡಿ ಅವರಿಗೆ ಒಂದು ರವೆ ಗಂಜಿ, ಅನ್ನ ಸಾರು ಮಾಡಿ ಹವಣಿಸಿದ್ದಾಯಿತು. ಕೊನೆಯಲ್ಲಿ ಊಟ ಮಾಡಿದ ನನಗೂ, ಅಕ್ಕನಿಗೂ ಆ ಗಂಜಿ ಸಹ ಉಳಿಯಲಿಲ್ಲ. ಆಗ ನನಗೆ ಸಿಕ್ಕಾಪಟ್ಟೆ ಸಿಟ್ಟು ಬಂದು ಬಂದವರೆದುರಿಗೆ ಅಮ್ಮ ಅಪ್ಪ ಅಜ್ಜಿಯನ್ನೂ ಸೇರಿಸಿ, ಇಂಥ ಗತಿಗೇಡಿ ಬಡತನ ಬಿಟ್ಟರೆ ನಮಗೆ ಏನು ಬಳುವಳಿ ಕೊಟ್ಟಿದ್ದೀರಿ? ಇದಕ್ಕಾಗಿ ನಾವು ಬದುಕಿರಬೇಕೇ...? ಎಂದು ಕಾಲು ಅಪ್ಪಳಿಸುತ್ತಾ ಹೊರಗೆ ಹೊರಟುಹೋದೆ. ಅಲ್ಲಿದ್ದ ಹಿರಿಯರು ಏನು ಭಾವಿಸಿದರೋ ಎಂದೂ ಚಿಂತಿಸಲಿಲ್ಲ. ಅದಾಗಿ ನಾವು ಪಾತ್ರೆ ತೊಳೆದು, ಬಟ್ಟೆ ಒಗೆದು ಹಿತ್ತಲಲ್ಲಿ ಕುಳಿತಿದ್ದೆವು. ಅಲ್ಲಿಗೆ ಅಜ್ಜಿ ಬಂದು ನನಗೆ ``ನೋಡಮ್ಮ, ಹಿರಿಯರು ನಿನ್ನ ಆಸೆ ನೆರವೇರಿಸಲಿಲ್ಲವೆಂದು ಏಕೆ ಸೊರಗುವೆ? ನೀನೇ ಯಾವುದಾದರೂ ಕೆಲಸಕ್ಕೆ ಸೇರಿ ಅದನ್ನು ನೆರವೇರಿಸಿಕೊಳ್ಳಬಹುದಲ್ಲವೇ? ಬಂದವರ ಎದುರು ಮನೆಯವರ ಮಾನ ಕಳೆದರೆ, ಸಂತೆಯಲ್ಲಿ ನಿಂತು ಸೀರೆ ಬಿಚ್ಚಿದಂತಲ್ಲವೇ? ಅದರಿಂದ ಯಾರಿಗೆ ಅವಮಾನ? ಆದ್ದರಿಂದ ಮನೆ ಮರ್ಯಾದೆ ಕಾಪಾಡುವುದು ಹೆಣ್ಣುಮಕ್ಕಳ ಕರ್ತವ್ಯ ಅಂತ ತಿಳಿ. ಸಂಸಾರದ ಗುಟ್ಟು ವ್ಯಾಧಿ ರಟ್ಟು, ಅನ್ನೋದನ್ನು ಮರೆಯಬಾರದು,'' ಎಂದರು. ಅಜ್ಜಿಯ ಈ ಮಾತುಗಳು ನನ್ನ ಮನದಾಳ ಮುಟ್ಟಿ ನಾನು ಎಲ್ಲರ ಕ್ಷಮಾಪಣೆ ಬೇಡಿದೆ. ಅಂದಿನಿಂದ ನನ್ನ ಸ್ವಭಾವ ಬದಲಾಯಿಸಿಕೊಂಡೆ.

- ಸಿ. ಮೇಘನಾ, ಮಂಡ್ಯ.

ಕಳೆದ ವರ್ಷ ನಾವು ಬೇಸಿಗೆಯಲ್ಲಿ ಹೈದರಾಬಾದ್‌ ಪ್ರವಾಸಕ್ಕೆ ಹೊರಟಿದ್ದೆವು. ಅಲ್ಲಿನ ಪ್ರೇಕ್ಷಣೀಯ ಸ್ಥಳಗಳನ್ನು ನೋಡಿಕೊಂಡು ಬಂದು ಹೋಟೆಲ್‌ನಲ್ಲಿ ವಿಶ್ರಾಂತಿ ಪಡೆದೆವು. ಅಲ್ಲಿನ ಅತ್ಯಧಿಕ ಬಿಸಿಲು ನನ್ನ 8 ವರ್ಷದ ಮಗಳ ಮೇಲೆ ಹೆಚ್ಚಿನ ಪರಿಣಾಮ ಬೀರಿತು.

ಊಟ ಸಿಕ್ಕಾಪಟ್ಟೆ ಖಾರ ಎನಿಸಿತು. ಮಗಳು ಅದನ್ನು ತಿನ್ನಲಾಗದೆ ಡೆಸರ್ಟ್‌ನಲ್ಲಿದ್ದ ರಸಮಲಾಯಿ ಬೇಕೆಂದು ಮತ್ತೆ ಮತ್ತೆ ಸವಿದಳು. ಅದರಿಂದ ಅವಳಿಗೆ ವಿಪರೀತ ವಾಂತಿಭೇದಿ ಶುರುವಾಯಿತು.

ರಾತ್ರಿ ಆಗಿತ್ತು. ಮಗು ಜ್ಞಾನವಿಲ್ಲದೆ ಮಲಗಿದೆ. ಕಾಣದ ಊರಿನಲ್ಲಿ ಏನು ಮಾಡುವುದು? ಹೋಟೆಲ್‌ನಲ್ಲಿ ಹತ್ತಿರದ ಡಾಕ್ಟರ್ ಬಗ್ಗೆ ವಿಚಾರಿಸಿದಾಗ, ಪಕ್ಕದ ರಸ್ತೆಯಲ್ಲಿ ಒಬ್ಬರಿದ್ದಾರೆ, ದುಬಾರಿ ಫೀಸ್‌ ಕೇಳುತ್ತಾರೆ ಎಂದರು. ಹೇಗಾದರಾಗಲಿ ಎಂದು ಮೊದಲು ನನ್ನ ಪತಿಯನ್ನು ಅಲ್ಲಿಗೆ ಕಳುಹಿಸಿದೆ.

ಆಗಲೇ ರಾತ್ರಿ 8.30 ಆಗಿತ್ತು. ಪುಣ್ಯಕ್ಕೆ ಡಾಕ್ಟರ್‌ ಸಿಕ್ಕಿದರು. ಮಗುವನ್ನು ತಕ್ಷಣ ಕರೆತರುವಂತೆ ಹೇಳಿದರು. ಪರೀಕ್ಷಿಸಿದ ನಂತರ ಔಷಧಿ, ಮಾತ್ರೆ ಬರೆದುಕೊಟ್ಟು ತಿಳಿ ಮಜ್ಜಿಗೆಯಲ್ಲಿ ಅನ್ನ, ಹಗಲಲ್ಲಿ ಕಿಚಡಿ ಕೊಡುವಂತೆ ತಿಳಿಸಿದರು. ಆಗ ನಾವು ಮೈಸೂರಿನಿಂದ ಬಂದಿರುವ ವಿಷಯ ತಿಳಿಸಿ ಪಥ್ಯ ಸಾಧ್ಯವಾಗುತ್ತದೋ ಇಲ್ಲವೋ ಎಂದು ಸಂದೇಹಿಸಿದೆವು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ