ಪ್ರ : ನನ್ನ ವಯಸ್ಸು 38. ಇತ್ತೀಚೆಗೆ ನನ್ನ ಸೊಂಟದಲ್ಲಿ ಸಿಕ್ಕಾಪಟ್ಟೆ ನೋವು ಕಾಣಿಸಿಕೊಂಡಿದೆ. ನನ್ನ ತೂಕ ಕೂಡ ಹೆಚ್ಚಿಗೆ ಇದೆ. ಬೊಜ್ಜು ಹಾಗೂ ಸೊಂಟನೋವಿಗೆ ಏನು ಸಂಬಂಧ ಎನ್ನುವುದು ನನ್ನ ಪ್ರಶ್ನೆ.

ಉ : ಬೊಜ್ಜು ಸಾಮಾನ್ಯವಾಗಿ ಸೊಂಟನೋವಿಗೆ ಕಾರಣವಾಗುವುದಿಲ್ಲ. ಒಂದು ವೇಳೆ ಸ್ಥೂಲದೇಹಿಗೆ ಸೊಂಟನೋವು ಕಾಣಿಸಿಕೊಂಡರೆ ನೋವು ಅಧಿಕವಾಗುತ್ತದೆ. ಚಿಕಿತ್ಸೆಯ ಪರಿಣಾಮ ಕೂಡ ಮಂದವಾಗಿರುತ್ತದೆ. ದೇಹದ ಮಧ್ಯಭಾಗದಲ್ಲಿ ಹೆಚ್ಚುವರಿ ತೂಕ ಇದ್ದರೆ ಕಿಬ್ಬೊಟ್ಟೆಯನ್ನು ಮುಂಭಾಗದತ್ತ ಎಳೆಯುತ್ತದೆ. ಇದರಿಂದಾಗಿ ಸೊಂಟದ ಕೆಳಭಾಗದ ಮೇಲೆ ಒತ್ತಡ ಬೀಳುತ್ತದೆ. ಈ ಹೆಚ್ಚುವರಿ ಭಾರವನ್ನು ನಿರ್ವಹಿಸಲು ಸೊಂಟ ಮುಂಭಾಗದತ್ತ ವಾಲುತ್ತದೆ. ತೂಕ ಹೆಚ್ಚುವುರಿಂದ ಬೆನ್ನು ಮೂಳೆಯ ಚಿಕ್ಕ ಚಿಕ್ಕ ಕೀಲುಗಳ ಮೇಲೆ ಒತ್ತಡ ಬೀಳುತ್ತದೆ. ಅದರಿಂದ ಡಿಸ್ಕ್ ಗೂ ತೊಂದರೆಯಾಗುತ್ತದೆ. ಫಿಸಿಯೊಥೆರಪಿ ಹಾಗೂ ಶಸ್ತ್ರಚಿಕಿತ್ಸೆಯಿಂದಲೂ ಸ್ಥೂಲದೇಹಿಯ ಸೊಂಟನೋವಿಗೆ ಮುಕ್ತಿ ಕೊಡಿಸುವುದು ಕಷ್ಟಕರ. ಹಾಗಾಗಿ ನೀವು ತೂಕ ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸಿ.

ಪ್ರ : ನಾನು 29 ವರ್ಷದ ಯುವಕ. ನನ್ನ ಕಿಡ್ನಿ ಟ್ರಾನ್ಸ್ ಪ್ಲಾಂಟ್ಆಪರೇಷನ್ಸಕ್ಸಸ್ಆಯಿತು. ಅದಾಗಿ ವರ್ಷದಲ್ಲಿ ನನ್ನ ಮದುವೆ ಫಿಕ್ಸ್ ಆಗಿದೆ. ಎಲ್ಲರಂತೆ ನಾನು ಯಶಸ್ವೀ ದಾಂಪತ್ಯ ಜೀವನ ನಡೆಸಲು ಸಾಧ್ಯವೇ? ದೈಹಿಕ ಸಮಾಗಮದಿಂದ  ನನ್ನ ಕಿಡ್ನಿಗೆ ಮತ್ತೆ ಸಮಸ್ಯೆ ಆಗಬಹುದೇ?

ಉ : ನೀವು ಕಿಡ್ನಿ ಟ್ರಾನ್ಸ್ ಪ್ಲಾಂಟ್‌ ಆಪರೇಷನ್‌ ನಂತರ 1 ವರ್ಷದ ಬಿಡುವು ಕೊಟ್ಟು ಆಮೇಲೆ ಮದುವೆಯಾಗುತ್ತಿರುವುದು ಒಳ್ಳೆಯ ಸಂಗತಿ. ಇದರಿಂದ ಕಿಡ್ನಿ ಆರೋಗ್ಯಕರವಾಗಿ ಕೆಲಸ ಮಾಡುತ್ತದೆ, ತೊಂದರೆ ಇಲ್ಲ. ಆಪರೇಷನ್‌ ನಂತರ ಸೂಕ್ತ ವಿಶ್ರಾಂತಿ ಪಡೆದು ನೀವು ಯಶಸ್ವಿಯಾಗಿ ದೈನಂದಿನ ಕೆಲಸ ನಿರ್ವಹಿಸುತ್ತಿರುವುದೇ ಇದಕ್ಕೆ ಸಾಕ್ಷಿ. ವೈದ್ಯರ ಸಲಹೆಯಂತೆ ಅವರು ಹೇಳುವವರೆಗೂ ಔಷಧಿ, ಪಥ್ಯ ಮುಂದುವರಿಸಿ. ಹಾಗೆಯೇ ಸಕಾಲಕ್ಕೆ ಹೋಗಿ ತಪಾಸಣೆ ಮಾಡಿಸಲು ಮರೆಯಬೇಡಿ.

ಇದುವರೆಗೂ ನಿಮ್ಮ ವೈದ್ಯರು ಆ ಬಗ್ಗೆ ಆಕ್ಷೇಪಣೆ ಹೇಳದೆ ಇರುವುದು, ನಿಮ್ಮ ಕೇಸ್‌ ಹಿಸ್ಟರಿ ನೋಡಿದರೆ, ನೀವು ಮದುವೆಯಾಗಿ ಸುಖೀ ದಾಂಪತ್ಯ ನಡೆಸುವುದರಲ್ಲಿ ಸಂದೇಹವಿಲ್ಲ, ಗೋ ಅಹೆಡ್‌!

ಕಿಡ್ನಿ ಟ್ರಾನ್ಸ್ ಪ್ಲಾಂಟ್‌ ಮಾಡಿಸಿಕೊಂಡ ಗಂಡಸರು ಇತರರಂತೆ ಸುಖೀ ದಾಂಪತ್ಯ ನಡೆಸುವುದರಲ್ಲಿ ಯಾವುದೇ ಸಂದೇಹವಿಲ್ಲ. ನಿಮ್ಮ ಲೈಂಗಿಕ ಸಾಮರ್ಥ್ಯ ಸಾಮಾನ್ಯವಾಗಿದ್ದು, ನಿಮ್ಮ ಹೃದಯ ಕಿಡ್ನಿ ಎಂದಿನಂತೆ ಕೆಲಸ ನಿರ್ವಹಿಸುತ್ತಿದ್ದರೆ, ಬಿಪಿ ಸಹ ನಾರ್ಮಲ್ ಆಗಿದ್ದರೆ, ಆಗ ನೀವು ಸಂಗಾತಿಯ ಜೊತೆ ಸುಖೀ ಲೈಂಗಿಕ ಜೀವನ ನಡೆಸುವುದು ಅಸಾಧ್ಯವೇನಲ್ಲ.

ಲೈಂಗಿಕ ತೃಪ್ತಿಗೆ ಆಸನಗಳ ಪ್ರಶ್ನೆ ಕಷ್ಟವಾದರೆ, ನಿಮ್ಮಿಬ್ಬರಿಗೂ ಒಪ್ಪಿಗೆ ಆಗುವ ಯಾವುದೇ ಸುಖಕರ, ಸುಲಭದ ಆಸನ ನಿಮ್ಮದಾಗಿಸಿಕೊಳ್ಳಿ. ವೈದ್ಯರ ಎಲ್ಲಾ ಸಲಹೆ ಅನುಸರಿಸುತ್ತಾ, ನಿಯಮಿತವಾಗಿ ಔಷಧಿ, ವ್ಯಾಯಾಮ ಮುಂದುವರಿಸುತ್ತಿದ್ದರೆ, ಟ್ರಾನ್ಸ್ ಪ್ಲಾಂಟೆಡ್‌ ಕಿಡ್ನಿ ನಿಮಗೆಂದೂ ತೊಂದರೆ ನೀಡದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ