ನಾನು 27 ವರ್ಷದ ವಿವಾಹಿತೆ. ಕಳೆದ 2 ವರ್ಷಗಳಿಂದ ನಾನು ಮಾನಸಿಕ ತೊಂದರೆಯಿಂದ ಹೊರಬರಲು ಔಷಧಿ ಸೇವಿಸುತ್ತಿದ್ದೇನೆ. ವೈದ್ಯರ ಪ್ರಕಾರ, ನನಗೆ `ಡಿಪ್ರೆಸಿವ್ ಮ್ಯಾನಿಕ್ಡಿಸಾರ್ಡರ್‌' ಇದೆ. ನಾನೀಗ ಗರ್ಭಿಣಿ. ಇದರಿಂದ ನನ್ನ ರೋಗ ಹೆಚ್ಚಾಗಬಹುದೇ ಎಂಬ ಅಳುಕು ನನ್ನನ್ನು ಕಾಡುತ್ತಿರುತ್ತದೆ. ಹುಟ್ಟಲಿರುವ ಮಗುವಿಗೆ ಇದು ಯಾವ ರೀತಿಯ ಪರಿಣಾಮ ಬೀರಬಹುದು? ನಾನು ಯಾವುದಾದರೂ ಮುನ್ನೆಚ್ಚರಿಕೆ ವಹಿಸಬೇಕಾದ ಅಗತ್ಯವಿದೆಯೇ?

ನೀವು ಸ್ತ್ರೀರೋಗ ತಜ್ಞರ ಮೇಲ್ವಿಚಾರಣೆಯಲ್ಲಿರುವುದರ ಜೊತೆ ಜೊತೆಗೆ, ಮನೋಚಿಕಿತ್ಸಕರ ಸಲಹೆ ಕೂಡ ಪಡೆಯುತ್ತಿರಬೇಕು. ನಿಮಗೆ ಮನೋಚಿಕಿತ್ಸೆ ನೀಡುವ ವೈದ್ಯರಿಗೆ ನೀವು ಗರ್ಭಿಣಿಯಾಗಿರುವ ವಿಷಯ ತಿಳಿಸಿ. ಗರ್ಭಾವಸ್ಥೆಯಲ್ಲಿ ಹಾಗೂ ಹೆರಿಗೆಯ ಬಳಿಕ ಮಹಿಳೆಯ ಮೇಲೆ ಅನೇಕ ಹೊಸ ಜೈವಿಕ ಹಾಗೂ ಸಾಮಾಜಿಕ ಜವಾಬ್ದಾರಿಗಳು ಒಮ್ಮೆಲೇ ಬಂದುಬಿಡುತ್ತವೆ. ಇದರ ಪರಿಣಾಮವೆಂಬಂತೆ ಮನಸ್ಸು ಹಾಗೂ ಮೆದುಳಿನ ಮೇಲೆ ಒತ್ತಡ ಹೆಚ್ಚುತ್ತದೆ ಹಾಗೂ ಈ ರೋಗ ಮತ್ತಷ್ಟು ಉಗ್ರ ರೂಪ ತೆಗೆದುಕೊಳ್ಳುವ ಸಾಧ್ಯತೆ ಇರುತ್ತದೆ. ಬೈಪೋಲರ್‌ ಡಿಸಾರ್ಡರ್‌ನಲ್ಲಿ ನೀಡಲಾಗುವ ಕೆಲವು ಔಷಧಿಗಳು ಗರ್ಭದಲ್ಲಿ ಬೆಳೆಯುತ್ತಿರುವ ಭ್ರೂಣಕ್ಕೆ ಸುರಕ್ಷಿತವಾಗಿರುವುದಿಲ್ಲ. ಹೀಗಾಗಿ ಅವುಗಳಿಗೆ ಪರ್ಯಾಯ ಕಂಡುಕೊಳ್ಳಬೇಕಾದ ಅವಶ್ಯಕತೆ ಇರುತ್ತದೆ. ಯಾವ ಔಷಧಿ ಸೂಕ್ತ ಎಂಬ ನಿರ್ಣಯವನ್ನು ನಿಮ್ಮ ವೈದ್ಯರೇ ತೆಗೆದುಕೊಳ್ಳಬೇಕಾಗುತ್ತದೆ. ಒಮ್ಮೊಮ್ಮೆ ಔಷಧಿಯನ್ನು ಹೆಚ್ಚಿಸುವ, ಕಡಿಮೆ ಮಾಡುವ ಅವಶ್ಯಕತೆಯೂ ಉಂಟಾಗುತ್ತದೆ.

ಮನಸ್ಸನ್ನು ಯಾವಾಗಲೂ ಚೆನ್ನಾಗಿಟ್ಟುಕೊಳ್ಳಿ. ಸಕಾರಾತ್ಮಕ ಯೋಚನೆ, ನಿಯಮಿತ ಆರೈಕೆ ಹಾಗೂ ಆರೋಗ್ಯಕರ ಜೀವನಶೈಲಿ ಅನುಸರಿಸುವುದರಿಂದ ಎಲ್ಲ ಸಮಸ್ಯೆಗಳನ್ನು ನಿವಾರಿಸುವುದು ಸುಲಭವಾಗುತ್ತದೆ.

 

ನಾನು 49 ವರ್ಷದ ಮಹಿಳೆ. ಸುಮಾರು 3 ವರ್ಷಗಳಿಂದ ನನಗೆ ಋತುಚಕ್ರವೇ ಆಗುತ್ತಿಲ್ಲ. ನಾವು ವಯಸ್ಸಿನಲ್ಲಿ ಯಾವುದೇ ತೊಂದರೆ ತೆಗೆದುಕೊಳ್ಳಲು ಇಚ್ಛಿಸುತ್ತಿಲ್ಲ. ಗರ್ಭಧಾರಣೆ ಆಗದೇ ಇರಲು ಪತಿ ಕಾಂಡೋಮ್ ಬಳಸುತ್ತಾರೆ. ನಾವು ಎಚ್ಚರಿಕೆಯನ್ನು ಎಲ್ಲಿಯವರೆಗೆ ವಹಿಸುವ ಅಗತ್ಯವಿದೆ? ನನಗೆ ಗರ್ಭಧಾರಣೆ ಆಗುವುದೇ ಇಲ್ಲವೇ ಎಂದು ತಿಳಿದುಕೊಳ್ಳಲು ಯಾವುದಾದರೂ ಟೆಸ್ಟ್ ಗಳಿವೆಯೇ?

ಮುಟ್ಟಂತ್ಯ ತಲುಪಿದ ಯಾವುದೇ ಮಹಿಳೆಗೆ ಸತತ 2 ವರ್ಷಗಳ ಕಾಲ ಮುಟ್ಟು ಬರದೇ ಇದ್ದರೆ ಆಕೆಯ ಅಂಡಾಶಯದಲ್ಲಿ ಅಂಡಾಣುಗಳು ಉತ್ಪತ್ತಿ ಆಗುತ್ತಲೇ ಇಲ್ಲ ಎಂದು ಭಾವಿಸಲಾಗುತ್ತದೆ. ಈ ಕಾರಣದಿಂದ ಆಕೆಗೆ ಗರ್ಭಧಾರಣೆ ಆಗುವುದಿಲ್ಲ ಎಂದು ಖಚಿತವಾಗುತ್ತದೆ. ಆಕೆ ಗರ್ಭಧಾರಣೆಯಿಂದ ತನ್ನನ್ನು ರಕ್ಷಿಸಿಕೊಳ್ಳಲು ಯಾವುದೇ ಉಪಾಯ ಅನುಸರಿಸಬೇಕಾದ ಅಗತ್ಯವಿಲ್ಲ. ಅದಕ್ಕಾಗಿ ಯಾವುದೇ ಟೆಸ್ಟ್ ಮಾಡಿಸಿಕೊಳ್ಳಬೇಕಾದ ಅಗತ್ಯವೂ ಇಲ್ಲ. ನೀವೀಗ ಮನಸೋಕ್ತವಾಗಿ ಲೈಂಗಿಕ ಸುಖ ಅನುಭವಿಸಬಹುದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ