ನನ್ನ ಮೈ ಬೆವರಿನಿಂದ ದುರ್ವಾಸನಾಯುಕ್ತವಾಗಿದೆ. ನಾನು ಅದಕ್ಕಾಗಿ ಸುಗಂಧ ದ್ರವ್ಯಗಳನ್ನು ಬಳಸುತ್ತೇನೆ. ಆದರೆ ಸ್ವಲ್ಪ ಹೊತ್ತಿನ ನಂತರ ಸುಗಂಧ ದ್ರವ್ಯದ ಸುವಾಸನೆ ಕಡಿಮೆಯಾಗುತ್ತದೆ. ಜೊತೆಗೆ ಅದನ್ನು ಸಿಂಪಡಿಸಿಕೊಂಡ ಜಾಗದಲ್ಲಿ ನವೆ ಉಂಟಾಗುತ್ತದೆ. ನನ್ನ ಸಮಸ್ಯೆಗೆ ಪರಿಹಾರ ತಿಳಿಸಿ.

ನೀವು ಪ್ರತಿದಿನ ಸ್ನಾನ ಮಾಡುವುದಕ್ಕೆ ಮೊದಲು ನೀರಿನ ಬಕೆಟ್‌ಗೆ ಕೆಲವು ಹನಿ ಯೂಡಿಕೊಲೋನ್‌ ಬೆರೆಸಿ, ಅನಂತರ ಸ್ನಾನ ಮಾಡಿ. ಸ್ನಾನದ ನಂತರ ಬೆವರು ಅಥವಾ ದುರ್ಗಂಧ ನಿವಾರಕ ಪೌಡರ್‌ ಸಿಂಪಡಿಸಿಕೊಳ್ಳಿ. ಬೆಲೆ ಹೆಚ್ಚಾದರೂ ಉತ್ತಮ ಗುಣಮಟ್ಟದ ಸೆಂಟ್‌ ಅಥವಾ ಸುಗಂಧ ದ್ರವ್ಯಗಳನ್ನು ಬಳಸಿ. ಕಳಪೆ ಗುಣಮಟ್ಟದವುಗಳನ್ನು ಕೊಳ್ಳಬೇಡಿ. ಉತ್ತಮ ದರ್ಜೆಯ ಸುಗಂಧ ದ್ರವ್ಯಗಳನ್ನು ಮಾತ್ರ ಬ್ರಾ ಮೇಲೆ ಸಿಂಪಡಿಸಿಕೊಳ್ಳಿ. ಮೊಣಕೈ ಮುಂಭಾಗ, ಕೈ ಹಿಡಿ, ಕಿವಿಯ ಹಿಂಭಾಗ ಮುಂತಾದ ಕಡೆ ವಿಶೇಷವಾಗಿ ಸಿಂಪಡಿಸಿ. ಬೇರೆ ಕಡೆ ಸಿಂಪಡಿಸಿಕೊಂಡ ಸುಗಂಧ ದ್ರವ್ಯ ಬೆವರಿನೊಂದಿಗೆ ಹರಿದುಹೋಗುತ್ತದೆ. ಕಂಕುಳನ್ನು ರೋಮ ರಹಿತವಾಗಿಡಿ. ಬೇಸಿಗೆಯ ದಿನಗಳಲ್ಲಿ ಅವಶ್ಯವಾಗಿ ಎರಡು ಬಾರಿ ಸ್ನಾನ ಮಾಡುವುದು ಅಗತ್ಯ.

 

ನಾನು 16 ವರ್ಷದ ಹುಡುಗ. ನಾನು ಇತ್ತೀಚೆಗಷ್ಟೆ ಶೇವಿಂಗ್ಮಾಡಲು ಶುರು ಮಾಡಿದೆ. ಆದರೆ ಶೇವಿಂಗ್ಮಾಡುವುದು ಏಕೋ ಬಲು ಕಷ್ಟ ಎನಿಸುತ್ತಿದೆ. ತೊಂದರೆ ದೂರಗೊಳಿಸಲು ನಾನು ಏನು ಮಾಡಬೇಕೆಂದು ತಿಳಿಸುವಿರಾ?

ಶೇವಿಂಗ್‌ ಮಾಡಿಕೊಳ್ಳುವುದಕ್ಕಾಗಿ ಯಾವಾಗಲೂ ಮಾಯಿಶ್ಚರೈಸಿಂಗ್‌ ಪ್ಲೇಮ್ ವುಳ್ಳ ಶೇವಿಂಗ್‌ ಕ್ರೀಮನ್ನೇ ಬಳಸಬೇಕು. ಇದು ನಿಮ್ಮ ಮುಖದ ಚರ್ಮವನ್ನು ಮೃದುವಾಗಿಡುತ್ತದೆ. ಆದ್ದರಿಂದ ಈ ಕ್ರೀಮನ್ನು ಹಚ್ಚಿಕೊಂಡು ಶೇವಿಂಗ್‌ ಶುರು ಮಾಡಿದರೆ ಕಷ್ಟ ಎನಿಸುವುದಿಲ್ಲ. ಶೇವಿಂಗ್‌ ನಂತರ ನಿಮಗೆ ಮುಖದ ಚರ್ಮ ಡ್ರೈ ಆಗಿದೆ ಅನಿಸಿದರೆ, ಅಗತ್ಯವಾಗಿ ಆಫ್ಟರ್‌ ಶೇವ್ ಲೋಶನ್ ಹಾಗೂ ಮಾಯಿಶ್ಚರೈಸರ್‌ ಬಳಸಿರಿ. ಶೇವಿಂಗ್‌ ಕ್ರೀಂ ಹಚ್ಚಿಕೊಳ್ಳುವ ಮೊದಲು, ಗಡ್ಡಕ್ಕೆ ಬ್ರಶ್‌ನಿಂದ ಬಿಸಿ ನೀರನ್ನು ಸವರಿಕೊಂಡರೆ ಒಳ್ಳೆಯದು.

 

ನನಗೆ 18 ವಯಸ್ಸು. ನಾನು ತಲೆಗೆ ಸ್ನಾನ ಮಾಡಿದ ನಂತರ, ಕೂದಲನ್ನು ಬಾಚಲು ಯತ್ನಿಸುತ್ತೇನೆ. ಆದರೆ ಬಹಳಷ್ಟು ಕೂದಲು ಉದುರುತ್ತದೆ. ನಾನು ಸರಿಯಾಗಿ ತಲೆ ಬಾಚಿಕೊಳ್ಳುತ್ತಿಲ್ಲ, ಅದಕ್ಕೆ ಹೀಗಾಗುತ್ತಿದೆ ಎಂದು ಅಮ್ಮ ಬೈಯುತ್ತಿರುತ್ತಾರೆ. ನಾನು ಕೂದಲನ್ನು ಯಾವ ರೀತಿ ಬಾಚಿದರೆ ಅದು ತುಂಡಾಗುವುದಿಲ್ಲ?

ಆದಷ್ಟೂ ಒದ್ದೆ ಕೂದಲನ್ನು ಬಾಚಲೇಬಾರದು. ಚೆನ್ನಾಗಿ ತಲೆ ಒರೆಸಿಕೊಂಡು, ಒಣಗಿಸಿದ ನಂತರವೇ ಕೂದಲನ್ನು ಬಾಚಬೇಕು. ಹಾಗೊಮ್ಮೆ ಅವಸರದಲ್ಲಿ ಒದ್ದೆ ಕೂದಲನ್ನು ಬಾಚಲೇ ಬೇಕಾದಾಗ, ಹೆಚ್ಚು ಸಂದುಗಳಿರುವ ದೊಡ್ಡ ಬಾಚಣಿಗೆ ಬಳಸಿ. ಅದು ನೆತ್ತಿಯ ಚರ್ಮವನ್ನು ಪರಪರ ಗೀರುವಂತಿರಬಾರದು. ಕೂದಲು ಸಿಕ್ಕಾಗಿದೆ ಅನಿಸಿದರೆ, ಮೊದಲು ಬೆರಳುಗಳಿಂದ ಅವನ್ನು ಬಿಡಿಸಲು ಯತ್ನಿಸಿ. ಆಮೇಲೆ ಕೂದಲನ್ನು ಬಾಚಬೇಕು. ಬಲವಂತವಾಗಿ ಬಾಚಣಿಗೆಯಿಂದ ಕೂದಲನ್ನು ಜಗ್ಗಿ ಎಳೆಯಬೇಡಿ, ಖಂಡಿತಾ ಅದು ತುಂಡರಿಸುವ ಸಾಧ್ಯತೆ ಹೆಚ್ಚು.

 

ನಾನು 19 ಕಪ್ಪು ಬಣ್ಣದ ತರುಣಿ. ಮುಖದಲ್ಲಿ ಯಾವುದೇ ತರಹದ ಕಾಂತಿ ಇಲ್ಲದ ಕಾರಣ ಬಹಳ ನೊಂದಿದ್ದೇನೆ. ನ್ಯಾಚುರಲ್ ಗ್ಲೋ ಬದಲು ನಾನೇನು ಮಾಡೇಕು? ದಯವಿಟ್ಟು ಮನೆಮದ್ದು ತಿಳಿಸಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ