ಪ್ರ : 4 ವರ್ಷಗಳ ಹಿಂದೆ ನನ್ನ ಮದುವೆ ಬೆಂಗಳೂರಿನಲ್ಲಿ ಆಗಿತ್ತು. ನನ್ನ ಪತಿ ಉದ್ಯಮಿ. ಆರಂಭದಲ್ಲಿ ಗಂಡನ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದು ಕಷ್ಟ ಆಗಿತ್ತು. ಆದರೆ ಬಳಿಕ ಇಬ್ಬರೂ ಪರಸ್ಪರರನ್ನು ಅರ್ಥ ಮಾಡಿಕೊಂಡೆವು. ನಂತರ ಎಲ್ಲವೂ ಸರಿಹೋಯಿತು. ನಮ್ಮ ಮನೆಯ ಮೇಲ್ಬಾಗದಲ್ಲಿ ವಾಸಿಸುವ ನನ್ನ ಹಿರಿಯ ಮೈದುನನ ಪತ್ನಿ ಕೆಲವು ತಿಂಗಳುಗಳ ಹಿಂದೆ ತೀರಿಹೋದಳು. ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಅವರು ತಮ್ಮ ಕೆಲಸ ತಾವೇ ಮಾಡಿಕೊಳ್ಳುತ್ತಾರೆ.

ನನ್ನ ಹಿರಿಯ ಮೈದುನನಿಗೆ ಸಮೀಪದಲ್ಲಿ ಬಟ್ಟೆಯ ಅಂಗಡಿ ಇದೆ. ಅವರು ಆಗಾಗ ನಮ್ಮ ಮನೆಗೆ ಬರುತ್ತಿರುತ್ತಾರೆ. ಅವರ ಬಗ್ಗೆ ನಮಗೆ ಸಹಾನುಭೂತಿ ಇದೆ. ಆದರೆ ಅವರು ಯಾವಾಗಲೂ ನನ್ನ ಸಮೀಪ ಬರುವ ಪ್ರಯತ್ನ ಮಾಡುತ್ತಿರುತ್ತಾರೆ. ಒಂದು ದಿನವಂತೂ ಅವರು ತಮ್ಮೊಂದಿಗೆ ಸಹಕರಿಸುವಂತೆ ನನ್ನನ್ನು ಆಗ್ರಹಿಸತೊಡಗಿದರು. ದಿನ ನಾನು ಅವರನ್ನು ಹೇಗೊ ದೂರ ಸರಿಸಿದೆ. ಆದರೆ ಮತ್ತೆ ಯಾವಾಗ ಅವರು ನನಗೆ ಒತ್ತಡ ಹೇರುತ್ತಾರೋ ಎಂದು ಹೆದರಿಕೆ ಆಗುತ್ತದೆ. ನಾನು ವಿಷಯವನ್ನು ಗಂಡನ ಮುಂದೆ ಹೇಳಲು ಹಿಂಜರಿಯುತ್ತಿರುವೆ. ಏಕೆಂದರೆ ಅವರಿಗೆ ತಮ್ಮನ ಬಗ್ಗೆ ಅಪಾರ ವಿಶ್ವಾಸವಿದೆ. ನನ್ನ ಬಗ್ಗೆಯೇ ಅವರಿಗೆ ಅಪನಂಬಿಕೆ ಬರತ್ತದೆ ಎನಿಸುತ್ತಿದೆ. ಏನು ಮಾಡಲಿ?

ಉ : ಎಲ್ಲಕ್ಕೂ ಮೊದಲು ನೀನಿ ಯಾನಿದೇ ಹೆದರಿಕೆ ಇಲ್ಲದೆ ಈ ವಿಷಯದ ಕುರಿತಂತೆ ಪತಿಯ ಜೊತೆ ಮಾತುಕತೆ ನಡೆಸಬೇಕು. ಅನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಿಮ್ಮ ಹೆದರಿಕೆಯನ್ನು ತೋರ್ಪಡಿಸಿಕೊಳ್ಳಬೇಕು. ಅನರು ಅದಕ್ಕೆ ಒಪ್ಪಿಗೆ ಸೂಚಿಸದಿದ್ದರೆ, ಒಂದು ದಿನ ಅನಕಾಶ ನೋಡಿಕೊಂಡು ಯಾವುದಾದರೂ ಸಾಕ್ಷ್ಯ ಸಂಗ್ರಹಿಸಲು ಪ್ರಯತ್ನಿಸಿ. ನಿಮ್ಮ ಹಿರಿಯ ಮೈದುನ ಯಾವಾಗಲಾದರು ಬಾಗಿಲು ತಟ್ಟಿದರೆ ನಿಮ್ಮ ಮೊಬೈಲ್‌ನ ವಾಯ್ಸ್ ರೆಕಾರ್ಡರ್‌ ಆನ್‌ ಮಾಡಿ ಬಾಗಿಲು ತೆಗೆಯಿರಿ. ಮೈದುನ ಅಸಬಂದ್ಧವಾಗಿ ಮಾತನಾಡಿದರೆ ಎಲ್ಲವೂ ಅದರಲ್ಲಿ ರೆಕಾರ್ಡ್‌ ಆಗಿರುತ್ತದೆ. ಅದನ್ನು ನಿಮ್ಮ ಪತಿಗೆ ಕೇಳಿಸಿದರೆ ಅವರಿಗೆ ನಂಬಿಕೆ ಬರಬಹುದು.

ನೀವು ನಿಮ್ಮ ಪತಿಗೆ ಹೇಳಿ ಬೇರೆ ಕಡೆ ಮನೆ ಮಾಡಲು ತಿಳಿಸಿ ಅಥವಾ ನಿಮ್ಮ ಮೈದುನನಿಗೆ ಇನ್ನೊಂದು ಮದುವೆ ಮಾಡಲು ಪ್ರಯತ್ನಿಸಿ. ಅವರಿಗೆ ತಮ್ಮ ಪತ್ನಿಯ ಕೊರತೆ ಕಾಡುತ್ತಿದೆ. ಹಾಗಾಗಿ ಅವರು ನಿಮ್ಮತ್ತ ಆಕರ್ಷಿತರಾಗುತ್ತಿದ್ದಾರೆ. ಹೊಸ ಹೆಂಡತಿ ಬಂದರೆ ಅವರು ಸಾಮಾನ್ಯ ಸ್ಥಿತಿಗೆ ಬರಬಹುದು.

ಪ್ರ : ನನ್ನ ನಾದಿನಿ ಯಾವುದೊ ಒಬ್ಬ ಹುಡುಗನ ಜೊತೆ ಕಳೆದ 8 ವರ್ಷಗಳಿಂದ ರಿಲೇಶನ್ಶಿಪ್ನಲ್ಲಿದ್ದಾಳೆ. ತಾನು ಎಂದೂ ಗೌರವದ ಮಿತಿಯನ್ನು ಮೀರಿಲ್ಲ ಎಂದು ಆಕೆ ಹೇಳುತ್ತಿರುತ್ತಾಳೆ. ಆದರೂ ಆಕೆ ಯಾವುದಾದರೂ ತಪ್ಪು ನಿರ್ಧಾರ ಕೈಗೊಂಡಾಳು ಎಂದು ನನಗೆ ಭಯ ಆಗುತ್ತಿರುತ್ತದೆ. ಆಕೆ ವಿಷಯವನ್ನು ಪ್ರತಿಯೊಬ್ಬರಿಂದಲೂ ಬಚ್ಚಿಟ್ಟಿದ್ದಾಳೆನನಗೆ ವಿಷಯ ಅದ್ಹೇಗೊ ಗೊತ್ತಾಯಿತು. ಈಗ ನನಗೆ ವಿಷಯವನ್ನು ಗಂಡ ಹಾಗೂ ಮಾವನಿಗೆ ತಿಳಿಸಬೇಕು ಅನಿಸುತ್ತಿದೆ. ಆದರೆ ನಾದಿನಿ ನನ್ನ ಮೇಲೆ ಖಾಯಂ ಆಗಿ ಕೋಪಿಸಿಕೊಂಡರೆ ಏನು ಗತಿ ಅನ್ನಿಸುತ್ತಿದೆ. ಇದು ಸರಿಯಾದ ನಿರ್ಧಾರವೇ.....?

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ