ದೀಪಾವಳಿ ದಿನ ಬೆಳಗ್ಗೆಯೇ ಕಮಲಮ್ಮ ತಿಂಡಿ ಕೊಡುವಾಗ ತಮ್ಮ ಸೊಸೆಗೆ ದೀಪಾವಳಿಯ ವಿಶೇಷ ಉಡುಗೊರೆ ಕೊಡುವುದಾಗಿ ಹೇಳಿದಾಗ ಮಗ ಸೊಸೆ ಇಬ್ಬರಿಗೂ ಆಶ್ಚರ್ಯವಾಯಿತು. ಸೊಸೆ ವೀಣಾ ಸಂಕೋಚಪಡುತ್ತಾ, ``ಬೇಡಮ್ಮಾ, ಗಿಫ್ಟ್ ಅಗತ್ಯ ಏನಿದೆ?'' ಎಂದಳು.

``ಅಗತ್ಯ ಇದೆ ವೀಣಾ. ನಮ್ಮ ಕುಟುಂಬ ಹಾಗೂ ನಿನ್ನ ಖುಷಿಗಾಗಿ ನಾನೊಂದು ತೀರ್ಮಾನ ತೆಗೆದುಕೊಂಡಿದ್ದೇನೆ. ಇದನ್ನು ನೀನು ದೀಪಾವಳಿ ಗಿಫ್ಟ್ ಎಂದುಕೊಳ್ಳಬೇಕು. ಅಂದಹಾಗೆ, ನಿನಗೆ ಜಾಬ್‌ಗೆ ಹೋಗಲು ಪರ್ಮೀಶನ್‌ ಕೊಡುತ್ತಿದ್ದೇನೆ. ನೀನು ಕಳೆದ 2-3 ವರ್ಷಗಳಿಂದ ಹಲವು ಬಾರಿ ಕೇಳಿದ್ದೆ. ಹೋದ ತಿಂಗಳೂ ಕೇಳಿದ್ದೆ.

``ಆದರೆ ನಾನು ಹಳೆಯ ಆಲೋಚನೆಗಳ ಪ್ರಭಾವದಿಂದ ಹೊರಬಂದಿರಲಿಲ್ಲ. ಆದರೆ 7-8 ದಿನಗಳ ಹಿಂದೆ ಲಕ್ಷ್ಮೀ ಅಕ್ಕ ನನ್ನ ಕಣ್ಣು ತೆರೆಸಿದರು. ತಮ್ಮ ಸೊಸೆ ನೌಕರಿ ಜೊತೆ ಮನೆಯನ್ನೂ ಬಹಳ ಚೆನ್ನಾಗಿ ಸಂಭಾಳಿಸುತ್ತಿದ್ದಾಳೆ ಎಂದಳು. ಹೀಗಾಗಿ ನಿನ್ನ ಪಾಲಿನ ಸಂತೋಷ ನಿನಗೆ ಸಿಗಬೇಕು. ಈ ಸಂತೋಷದ ಸುದ್ದಿಯನ್ನು ದೀಪಾವಳಿಯಂದೇ ಕೊಡಬೇಕು ಎಂದು ನಿರ್ಧರಿಸಿದೆ,'' ಎಂದರು.

ಇದನ್ನು ಕೇಳುತ್ತಲೇ ಸಂತೋಷದಿಂದ ಹಾಗೂ ಅತ್ತೆಯ ಬಗ್ಗೆ ಗೌರವದಿಂದ ವೀಣಾಳ ಮುಖ ಅರಳಿತು. ಅವಳು ಅತ್ತೆಯ ಕಾಲು ಮುಟ್ಟಿ ನಮಸ್ಕರಿಸಿದಳು. ಇದು ಅತ್ತೆ ಸೊಸೆಗೆ ಕೊಟ್ಟ ವಿಭಿನ್ನ ರೀತಿಯ ದೀಪಾವಳಿ ಗಿಫ್ಟ್. ಅವರು ತಮ್ಮ ಸಂಬಂಧಗಳನ್ನು ಪ್ರೀತಿ ಮತ್ತು ಆತ್ಮೀಯತೆಗಳಿಂದ ಹೆಚ್ಚು ಶೋಭಿಸುವಂತೆ ಮಾಡಿದರು. ನೀವು ದೀಪಾವಳಿಯಂದು ಎಂದೂ ಮಾಡಿರದಿದ್ದ ಕೆಲಸ ಮಾಡಿ. ನಿಮ್ಮವರಿಗೆ ಆ ಸಂತಸಗಳನ್ನು ನೀಡಿ. ಅವನ್ನು ಅವರೆಂದೂ ನಿರೀಕ್ಷಿಸಿರಬಾರದು. ನಂತರ ಅವರ ದೃಷ್ಟಿ ಹೇಗೆ ಬದಲಾಗುತ್ತದೆಂದು ನೋಡಿ.

ಸೊಸೆಗೆ ಮಮತೆಯ ನೆರಳು ನೀಡಿ

ದೀಪಾವಳಿಯಂದು ಸೊಸೆಯ ಮನೆಯವರಿಗೆ ಉಡುಗೊರೆ ಕಳಿಸಿ. ಮಾನಸಿಕವಾಗಿ ನಿಮ್ಮ ಸೊಸೆಯನ್ನು ಮಗಳೆಂದು ತಿಳಿಯಿರಿ. ಅವಳು ಎಷ್ಟು ಪರಿಶ್ರಮದಿಂದ ಮನೆಯ ಸ್ವಚ್ಛತೆ, ಅಲಂಕಾರಗಳಿಂದ ಹಿಡಿದು ಸಿಹಿ ತಿಂಡಿ ತಯಾರಿಸುವವರೆಗೆ ಕೆಲಸ ನಿಭಾಯಿಸುತ್ತಿದ್ದಾಳೆಂದು ಒಬ್ಬ ತಾಯಿಯ ದೃಷ್ಟಿಯಿಂದ ನೋಡಿ. ಮನಬಿಚ್ಚಿ ಅವಳನ್ನು ಹೊಗಳಿದರೆ ಅವಳೂ ನಿಮ್ಮನ್ನು ತಾಯಿಯಂತೆ ಕಾಣುತ್ತಾಳೆ. ಹೀಗೆ ದೀಪಾವಳಿಯಂದು ನಿಮ್ಮಿಬ್ಬರ ಮಧ್ಯೆ ಪ್ರೀತಿಯ ಸಂಬಂಧ ಶುರುವಾಗುತ್ತದೆ.

ಸೊಸೆಗೆ ದೀಪಾಳಿಯಂದು ಗಿಫ್ಟ್ ಕೊಡಲು ಮರೆಯಬೇಡಿ. ನೀವು ಅವಳಿಗೆ ಆಕರ್ಷಕ ಜ್ಯೂವೆಲರಿ, ಡ್ರೆಸ್‌ ಆ್ಯಕ್ಸೆಸರೀಸ್‌, ಪರ್ಸ್‌, ಮೊಬೈಲ್ ಇತ್ಯಾದಿ ಕೊಡಬಹುದು.

ಅಂದು ಸೊಸೆಗೆ ಇಷ್ಟವಾದ ಡ್ರೆಸ್‌ ಕೊಡಿ ಅಥವಾ ಅವಳು ತಂದುಕೊಟ್ಟ ಯಾವುದಾದರೂ ವಸ್ತ್ರವನ್ನು ಧರಿಸಿ. ತಾನು ತಂದುಕೊಟ್ಟ ವಸ್ತುವಿಗೆ ಅತ್ತೆ ಎಷ್ಟು ಮಹತ್ವ ಕೊಡುತ್ತಾರೆಂದು ಅವಳಿಗೂ ತಿಳಿಯುತ್ತದೆ.

ಸೊಸೆಯನ್ನು ಅವಳ ಮಕ್ಕಳ ಕೆಲಸಗಳಿಂದ ಮುಕ್ತಗೊಳಿಸಬಹುದು. ಅವಳಿಗೆ ನೂರಾರು ಕೆಲಸಗಳಿರುತ್ತವೆ. ದೀಪಾವಳಿಯ ಮರುದಿನ ಬೆಳಗ್ಗೆಯಿಂದಲೇ ಮಕ್ಕಳ ಜವಾಬ್ದಾರಿ ತೆಗೆದುಕೊಳ್ಳಿ. ಅವಳಿಗೆ ಬೇರೆ ಕೆಲಸ ಮಾಡಿಕೊಳ್ಳಲು ಅವಕಾಶ ಕೊಡಿ. ಅದರಿಂದ ಅವಳಿಗೆ ಬಹಳಷ್ಟು ನೆಮ್ಮದಿ ಸಿಗುತ್ತದೆ.

ಅಮ್ಮನಿಗೆ ಕೊಟ್ಟಂತೆ ಅತ್ತೆಗೂ ಪ್ರೀತಿ ಕೊಡಿ

ದೀಪಾವಳಿಯಂದು ಅತ್ತೆಯ ಜೊತೆ ವಿನಯದಿಂದ ನಡೆದುಕೊಳ್ಳಿ. ಅತ್ತೆ ಮಾಡಿದ ಅಡುಗೆ ಮತ್ತು ಇತರ ಕೆಲಸಗಳನ್ನು ಮನಸಾರೆ ಹೊಗಳಿ. ಇಬ್ಬರೂ ಸೇರಿ ಯಾವುದಾದರೂ ಕೆಲಸ ಮಾಡಿದರೆ ಪ್ರೀತಿಯೂ ಹೆಚ್ಚುತ್ತದೆ. ಮಾಡಿದ ಕೆಲಸ ಚೆನ್ನಾಗಿ ಆಗುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ