`ಮಹಾಪರ್ವ' ಧಾರಾವಾಹಿ ನೋಡುವವರಿಗೆ `ಮುಖ್ಯಮಂತ್ರಿ ಮಾಧವಿ ಪ್ರಿಯದರ್ಶಿನಿ' ಈ ಹೆಸರು ಚಿರಪರಿಚಿತ. ವಯಸ್ಸಿಗೆ ಮೀರಿದ ಆ ಪಾತ್ರ ಪೋಷಣೆ ಮಾಡುತ್ತಿರುವವರು ಅಶ್ವಿನಿ ಗೌಡ. ಅವರಿಗೆ ಧಾರಾವಾಹಿಯಲ್ಲಿ 25 ವಯಸ್ಸಿನ ಮಗಳ ತಾಯಿಯ ಪಾತ್ರ. ಆದರೆ ವಾಸ್ತವದಲ್ಲಿ ಅವರಿಗೆ 9 ವಯಸ್ಸಿನ ಮಗನಿದ್ದಾನೆ. ಧಾರಾವಾಹಿ ಸಿನಿಮಾಗಳ ವ್ಯವಸ್ತತೆಯ ನಡುವೆಯೂ ಕುಟುಂಬ ಹಾಗೂ ಮಗನ ಜೊತೆ ಅವರು ಹೇಗೆ ಸಮಯ ಕಳೆಯುತ್ತಾರೆ ಎಂಬುದನ್ನು ಅವರ ಮಾತಿನಲ್ಲಿಯೇ ಕೇಳಿ....    ನಿಮ್ಮ ಹಾಗೂ ಮಗನ ಸಂಬಂಧ ಯಾವ ರೀತಿ ಇದೆ?

ಚಿಕ್ಕವನಿದ್ದಾಗ ಮಗ ಪವನ್‌ ಕೀರ್ತಿಯ ಬಗ್ಗೆ ನನಗೆ ಅಷ್ಟೊಂದು ಚಿಂತೆಯಿರಲಿಲ್ಲ. ಆದರೆ ಅವನು ದೊಡ್ಡವನಾಗುತ್ತ ಹೋದಂತೆ ಜವಾಬ್ದಾರಿ ಹೆಚ್ಚಿದೆ. ನನ್ನ ಮತ್ತು ಅವನ ನಡುವಿನ ಅನ್ಯೋನ್ಯತೆ ಎಷ್ಟಿದೆಯೆಂದರೆ, ನಾನು ಬರುವುದು ಸ್ವಲ್ಪ ತಡವಾದರೂ ಅವನೇ ನನಗೆ ಪೋನ್‌ ಮಾಡಿ `ಎಲ್ಲಿದೀರಾ? ಯಾವಾಗ ಬರ್ತೀರಾ?' ಎಂದು ವಿಚಾರಿಸಿಕೊಳ್ತಾನೆ. ಜೊತೆಗೆ ಏನೇನು ತರಬೇಕು ಎನ್ನುವುದರ ಬಗ್ಗೆ ಪಟ್ಟಿ ಕೂಡ ಕೊಡ್ತಾನೆ. ಕೆಲವು ಬಾಬತ್ತಿನಲ್ಲಿ ಅವನು ನನಗೆ ಬಾಸ್‌. ನಾನು ಏನೇ ಹೊಸ ಪ್ರಾಜೆಕ್ಟ್ ಒಪ್ಪಿಕೊಳ್ಳುವ ಮುಂಚೆ ಮಗನ ಜೊತೆ ಈ ಬಗ್ಗೆ ಚರ್ಚಿಸಬೇಕು. ಅವನು `ಓಕೆ' ಅಂದ್ರೆ ಮಾತ್ರ ನಾನು ಡೈರೆಕ್ಟರ್‌ಗೆ `ಎಸ್‌' ಅಂತ ಹೇಳ್ತೀನಿ. ಮಗ ನನಗೆ ಒಂದು ರೀತಿಯಲ್ಲಿ ಗೈಡ್‌ ಇದ್ದ ಹಾಗೆ.

ಮಗನನ್ನು `ಫ್ರೆಂಡ್‌' ಥರಾ ಟ್ರೀಟ್‌ ಮಾಡ್ತೀರಾ?

ನಾನು ಅವನನ್ನು ಮಗ ಅನ್ನುವುದಕ್ಕಿಂತ ಹೆಚ್ಚಾಗಿ ಸ್ನೇಹಿತನ ರೀತಿಯಲ್ಲಿಯೇ ನೋಡ್ತೀನಿ. ಆದರೆ ಅಮ್ಮ ತನ್ನನ್ನು ಹೆಚ್ಚು ಪ್ರೀತಿಸ್ತಾಳೆ ಅಂತಾ ನನ್ನನ್ನು ಎಮೋಶನಲಿ ಬ್ಲ್ಯಾಕ್‌ ಮೇಲ್ ಮಾಡಲು ಪ್ರಯತ್ನ ಮಾಡ್ತಾನೆ. ನನಗೆ ಅವನ ಮನಸ್ಸು ಅರ್ಥವಾಗಿ `ಹಾಗಲ್ಲ, ಹೀಗೆ,' ಎಂದು ತಿಳಿಹೇಳ್ತೀನಿ. ಆಗ ಅವನೇ ಸರಿ ಅಂತ ಒಪ್ಕೋಳ್ತಾನೆ.

ಅವನ ಹೋಂವರ್ಕ್‌, ಶಾಲಾ ಚಟುವಟಿಕೆಗಳ ಬಗ್ಗೆ ಎಷ್ಟರಮಟ್ಟಿಗೆ ಗಮನಹರಿಸ್ತೀರಾ?

ಶೂಟಿಂಗ್‌ನಿಂದಾಗಿ ನನಗೆ ಹೆಚ್ಚು ಸಮಯ ಸಿಗೋದಿಲ್ಲ. ಹೀಗಾಗಿ ಮನೆಯಲ್ಲಿಯೇ ಒಬ್ಬ ಟ್ಯೂಟರ್‌ ವ್ಯವಸ್ಥೆ ಮಾಡಿರುವೆ. ಹಾಗಂತ ನಾನು ನಿಶ್ಚಿಂತೆಯಿಂದ ಇರುವುದಿಲ್ಲ. ಅವನು ಹೇಗೆ ಓದ್ತಿದಾನೆ, ಬೇರೆಯವರ ಜೊತೆ ಹೇಗಿರ್ತಾನೆ ಎಂದೆಲ್ಲದರ ಬಗ್ಗೆ ಶಿಕ್ಷಕರ ಬಳಿ ಕೇಳಿ ತಿಳಿದುಕೊಳ್ತಾ ಇರ್ತೀನಿ.

ಮಗನ ವ್ಯಕ್ತಿತ್ವ ವಿಕಾಸಕ್ಕೆ ಸಂಬಂಧಪಟ್ಟಂತೆ ನೀವು ಏನೇನು ಪ್ರಯತ್ನ ಮಾಡ್ತೀರಾ

ಅವನು ಟಿ.ವಿ., ಕಂಪ್ಯೂಟರ್‌ಗೆ ಹೆಚ್ಚು ಅಂಟಿಕೊಂಡಿರಲು ಬಿಡೋಲ್ಲ. ಅವನನ್ನು ಮನೆಯಿಂದ ಹೊರಗೆ, ಬೀದಿಯಲ್ಲಿ ಇತರ ಮಕ್ಕಳ ಜೊತೆ ಆಡಲು, ಬೆರೆಯಲು ಹೆಚ್ಚೆಚ್ಚು ಅವಕಾಶ ಕೊಡ್ತೀನಿ. ಬೇರೆಯವರು ಹೇಗಿರ್ತಾರೆ, ಅವರಿಂದ ಸಹಬಾಳ್ವೆಯ ಕುರಿತು ಕಲಿತುಕೊಳ್ಳಬೇಕು ಎಂದೆಲ್ಲ ನಾನು ಅವನಿಗೆ ತಿಳಿಸಿಕೊಡ್ತೀನಿ. ಬರೀ ಓದು ಓದು ಅಂತ ಒಳಗಡೆಯೇ ಮಕ್ಕಳನ್ನು ಕೂಡಿ ಹಾಕಿಬಿಟ್ಟರೆ ಅವರು ಬಹಳಷ್ಟನ್ನು ಕಲಿತುಕೊಳ್ಳುವ ಅವಕಾಶದಿಂದ ವಂಚಿತರಾಗುತ್ತಾರೆ. ನಾನು ಸಮಯ ಸಿಕ್ಕಾಗೆಲ್ಲ ಶೂಟಿಂಗ್ ನಡೆಯುವ ಜಾಗಕ್ಕೂ ಅವನನ್ನು ಕರೆದುಕೊಂಡು ಹೋಗಿ ನಾನೆಷ್ಟು ಕಷ್ಟಪಡ್ತೀನಿ ಎನ್ನುವುದನ್ನು ಅವನಿಗೆ ಈ ಮೂಲಕ ತೋರಿಸಿಕೊಡ್ತೀನಿ. ಬೇರೆ ರಾಜ್ಯಗಳಿಗೆ ಶೂಟಿಂಗ್‌ಗೆಂದು ಹೋದಾಗ ಅಲ್ಲಿನ ನೋಡಬೇಕಾದ ಸ್ಥಳಗಳನ್ನೆಲ್ಲ ಅವನಿಗೆ ತೋರಿಸ್ತೀನಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ