ಸಾಮಾನ್ಯವಾಗಿ ಮದುವೆಯಾದ ಬಳಿಕ ತಂದೆತಾಯಿಯ ಮನೆಯನ್ನು ಬಿಟ್ಟುಹೋಗುವ ಯೋಚನೆ ಮಾಡಿಯೇ ಅನೇಕ ಹುಡುಗಿಯರ ನೆಮ್ಮದಿಗೆ ಭಂಗವುಂಟಾಗುತ್ತದೆ. ವಿದೇಶಿ ಹುಡುಗಿಯರಿಗಂತೂ ಇದು ಬಹಳ ದುಬಾರಿ ಎನಿಸುತ್ತದೆ. ಏಕೆಂದರೆ ಅವರು ತಮ್ಮ ಮನೆ ಗೆಳತಿಯರನ್ನಷ್ಟೇ ಬಿಟ್ಟು ಬರುವುದಿಲ್ಲ, ಸಂಸ್ಕೃತಿ, ಆಹಾರಪದ್ಧತಿ ಇವನ್ನೆಲ್ಲ ಬಿಟ್ಟು ಇನ್ನೊಂದು ದೇಶದ ಸಂಸ್ಕೃತಿಗೆ ತಮ್ಮನ್ನು ತಾವು ಒಗ್ಗಿಸಿಕೊಳ್ಳಬೇಕಾಗುತ್ತದೆ, ಎಂದೂ ನೋಡಿರದ ಆಹಾರವನ್ನು ಸೇವಿಸಬೇಕಾಗಿ ಬರುತ್ತದೆ.

ಇಷ್ಟೆಲ್ಲ ಆಗಿಯೂ ವಿದೇಶಿ ಸೊಸೆಯಂದಿರು ನಮ್ಮ ದೇಶವನ್ನು ಸದೃಢಗೊಳಿಸಲು ಬಹುಮೂಲ್ಯ ಪಾತ್ರ ವಹಿಸಿದ್ದಾರೆ. ಒಂದು ಸಂಗತಿ ಬಹಳಷ್ಟು ಜನರಿಗೆ ಗೊತ್ತೇ ಇಲ್ಲ. ಅದೇನೆಂದರೆ, ನಮ್ಮ ದೇಶದ ವೀರ ಸೈನಿಕರಿಗೆ ಕೊಡಲಾಗುವ ಪರಮವೀರ ಚಕ್ರದ ವಿನ್ಯಾಸ ಮಾಡಿದ್ದು ವಿದೇಶಿ ಸೊಸೆ ಇವಾಲೆನ್‌ ಲಿಂಡಾ ಡೆ ಮೆಡೊಸ್‌. ಅವರು ಸೈನ್ಯಾಧಿಕಾರಿ ವಿಕ್ರಂ ಖಾನೋಲ್ ಕರ್‌ ಅವರ ಪತ್ನಿ, ಪುಣೆಯಲ್ಲಿರುವ ಅವರ ಕುರಿತಂತೆ ಅವರ ಸಂಬಂಧಿಕರು, ಪರಿಚಿತರನ್ನು ಮಾತನಾಡಿಸಿದಾಗ, ಇವಾಲೇನ್‌ ಅವರ ದೇಶ ಪ್ರೇಮದ ಬಗ್ಗೆ ತಿಳಿದುಬಂತು.

ಇಂದಿರಾ ಗಾಂಧಿಯವರ ಸೊಸೆ ಸೋನಿಯಾ ಗಾಂಧಿ ಕಾಂಗ್ರೆಸ್‌ ಪಕ್ಷದ ನೇತೃತ್ವ ವಹಿಸಿದ್ದಾರೆ. ಸೋನಿಯಾ ವಿದೇಶಿಯಾಗಿದ್ದರೂ, ಇಂದಿರಾ ಗಾಂಧಿ ಅವರಿಗೆ ಸಾಕಷ್ಟು ಮಹತ್ವ ಕೊಟ್ಟಿದ್ದರು. ಹೀಗಾಗಿ ಅವರು ಶಿಸ್ತಿನ ಸೊಸೆ ಎನಿಸಿಕೊಂಡರು. ಅತ್ತೆಯ ಅತ್ಯಂತ ವ್ಯಸ್ತತೆಯ ಕೆಲಸ ಕಾರ್ಯಗಳಲ್ಲಿ ಅವರ ಉಡುಪುಗಳ ಬಗ್ಗೆ ಹೆಚ್ಚಿನ ಗಮನ ವಹಿಸುತ್ತಿದ್ದರು. ಬಟ್ಟೆಗಳನ್ನು ಇಸ್ತ್ರಿ ಮಾಡುವುದು, ಅವನ್ನು ಕಪಾಟಿನಲ್ಲಿ ಇಡುವ ಕೆಲಸ ಮಾಡುತ್ತಿದ್ದರು. ಆಗ ಅವರು ರಾಜಕೀಯದ ಬಗ್ಗೆ ಏನೇನೂ ಆಸಕ್ತಿ ವಹಿಸಿರಲಿಲ್ಲ. ಆದರೆ ಸಂದರ್ಭ ಬಂದಾಗ ಅತ್ತೆಯಿಂದ ಕಲಿತ ರಾಜಕೀಯದ ಚಾಣಾಕ್ಷ ನೀತಿಯನ್ನು ಸೂಕ್ತ ಸಮಯದಲ್ಲಿ ಬಳಸಿಕೊಳ್ಳಲು ಮರೆಯಲಿಲ್ಲ.

ಬಾಲಿವುಡ್‌ ನಟಿ ಕಲ್ಕಿ ಕೋಚಲೀನ್‌ ಕೂಡ ನಿರ್ದೇಶಕ ಅನುರಾಗ್‌ ಕಶ್ಯಪ್‌ರನ್ನು ಮದುವೆಯಾಗಿ ಭಾರತೀಯ ಸಂಸ್ಕೃತಿಯನ್ನು ಮೈಗೂಡಿಸಿಕೊಂಡಿದ್ದಾರೆ.

ಹಂಪಿ, ಬಾದಾಮಿ, ಬೇಲೂರು, ಹಳೆಬೀಡು, ಎಲ್ಲೋರಾ, ಗಯಾ, ಖಜುರಾಹೋ, ತಾಜಮಹಲ್ ಮುಂತಾದ ಸ್ಥಳಗಳಿಗೆ ಅನೇಕ ವಿದೇಶಿಯರು ಭೇಟಿ ಕೊಡುತ್ತಾರೆ. ಅಲ್ಲಿ ವಿದೇಶಿ ಯುವತಿಯರೊಂದಿಗೆ ಉಂಟಾದ ಪ್ರೀತಿ ಕ್ರಮೇಣ ಮದುವೆಯಲ್ಲಿ ಪರಿವರ್ತನೆಗೊಂಡ ಸಾಕಷ್ಟು ಉದಾಹರಣೆಗಳು ನಮ್ಮ ಮುಂದಿವೆ. ಇನ್ನೂ ಕೆಲವು ಭಾರತೀಯ ಯುವಕರು ಓದಿನ ನಿಮಿತ್ತ ಅಥವಾ ಉದ್ಯೋಗದ ಪ್ರಯುಕ್ತ ವಿದೇಶಗಳಿಗೆ ಹೋದಾಗ ಅಲ್ಲಿನ ಯುವತಿಯರ ಆಕರ್ಷಣೆಗೆ ಸಿಲುಕಿ ಮದುವೆ ಮಾಡಿಕೊಂಡು ಭಾರತಕ್ಕೆ ಕರೆತಂದಿದ್ದಾರೆ. ಭಾರತದ ಉದ್ದಗಲಕ್ಕೂ ಅಂತಹ ನೂರಾರು, ಸಾವಿರಾರು ವಿದೇಶಿ ಸೊಸೆಯರನ್ನು ಕಾಣಬಹುದು.

ಸಕಾರಾತ್ಮಕ ಯೋಚನೆಯುಳ್ಳವರು

ಶಶಿ (ಬದಲಿಸಲಾದ ಹೆಸರು) ಈ ಕುರಿತಂತೆ ಹೀಗೆ ಹೇಳುತ್ತಾರೆ, ``ಮಗ ಜರ್ಮನಿಯ ಹುಡುಗಿಯನ್ನು ಮನೆಗೆ ಸೊಸೆಯಾಗಿ ಕರೆದುಕೊಂಡು ಬಂದಾಗ ನಾನು ಆಕೆಯಲ್ಲಿ ಏನೇನೋ ಲೋಪಗಳನ್ನು ಹುಡುಕಲು ಆರಂಭಿಸಿದೆ. ಆದರೆ ಅದರಲ್ಲಿ ಯಶಸ್ವಿಯಾಗಲಿಲ್ಲ. ಅವಳು ಅತ್ಯಂತ ಮುಕ್ತ ಸ್ವಭಾವದವಳು. ನಾವು ಹೇಳಿಕೊಟ್ಟ ಪ್ರತಿಯೊಂದು ಸಂಗತಿಯನ್ನು ಚಾಚೂ ತಪ್ಪದೇ ಪಾಲಿಸುತ್ತಾಳೆ, ಏನೇ ಮಾಡಿದರೂ ಮನಸಾರೆ ಮಾಡುತ್ತಾಳೆ. ನನ್ನ ಮೊಮ್ಮಗಳ ಚಹರೆ ನನ್ನ ಹಾಗೆಯೇ ಇರುವುದನ್ನು ಕಂಡು ಆಕೆಗೆ ಖುಷಿಯೋ ಖುಷಿ. ಈ ಎಲ್ಲ ಕಾರಣಗಳಿಂದ ನಾವು ಆಕೆಯನ್ನು ಮನಸಾರೆ ಸೊಸೆಯೆಂದು ಒಪ್ಪಿಕೊಂಡಿದ್ದೇವೆ.''

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ