`ಹನಿಮೂನ್‌' ಹೆಸರು ಕೇಳುತ್ತಿದ್ದಂತೆ ಮನಸ್ಸಿನಲ್ಲಿ ರೋಮಾಂಚನ ಉಂಟಾಗುತ್ತದೆ. ಯುವಕ ಯುವತಿಯರು ಆ ಕ್ಷಣಕ್ಕಾಗಿ ಕಾತುರದಿಂದ ಕಾಯುತ್ತಿರುತ್ತಾರೆ. ಹೋಟೆಲ್ ಹಾಗೂ ಟೂರ್‌ ಮತ್ತು ಟ್ರಾವೆಲ್ ‌ಏಜೆನ್ಸಿಯರು ಹನಿಮೂನ್‌ಗಾಗಿ ಬೇರೆ ಬೇರೆ ಪ್ಲ್ಯಾನ್‌ಗಳನ್ನು ಮಾಡುತ್ತಿರುತ್ತಾರೆ.

ಹನಿಮೂನ್‌ಗಾಗಿ ಜೋಡಿಗಳು ಸಾಮಾನ್ಯವಾಗಿ ಶಾಂತ ಮತ್ತು ನೈಸರ್ಗಿಕ ಸ್ಥಳಗಳಿಗೆ ಹೋಗಲು ಇಚ್ಛಿಸುತ್ತಾರೆ. ಅಲ್ಲಿ ಅವರು ತಮ್ಮ ಸಂಗಾತಿಯೊಂದಿಗೆ ಏಕಾಂತದಲ್ಲಿ ಖಾಸಗಿ ಕ್ಷಣಗಳನ್ನು ಕಳೆಯಲು ಮತ್ತು ಆ ಕ್ಷಣಗಳನ್ನು ಸ್ಮರಣಾರ್ಹಗೊಳಿಸಲು ಬಯಸುತ್ತಾರೆ. ಬೆಂಗಳೂರಿನ ಹೋಟೆಲೊಂದರ ಮಾಲೀಕರು ಹೇಳುವ ಪ್ರಕಾರ, ಹನಿಮೂನ್‌ ಜೋಡಿಗಳಿಗಾಗಿ ಹೋಟೆಲ್‌ಗಳಲ್ಲಿ ವಿಶೇಷ ವ್ಯವಸ್ಥೆ ಮಾಡಲಾಗಿರುತ್ತದೆ. ಕೋಣೆಗಳನ್ನು ವಿಶೇಷವಾಗಿ ಅಲಂಕರಿಸಲಾಗಿರುತ್ತದೆ. ನವಜೋಡಿಗಳನ್ನು ವಿಶಿಷ್ಟವಾಗಿ ಸ್ವಾಗತಿಸುವ ಪರಂಪರೆಯೂ ಇದೆ. ಸಾಮಾನ್ಯವಾಗಿ ಜೋಡಿಗಳು ಹನಿಮೂನ್‌ಗಾಗಿ ಊಟಿ, ಕೊಡೈಕೆನಾಲ್‌, ಮಡಿಕೇರಿ, ಮೈಸೂರು ಹಾಗೂ ಇತರೆ ಗಿರಿಪ್ರದೇಶಗಳನ್ನು ಆಯ್ದುಕೊಳ್ಳುತ್ತಾರೆ. ಮಾರ್ಚ್‌-ಮೇ ತನಕ ಮದುವೆಯಾಗುವ ಜೋಡಿಗಳು ಸಾಮಾನ್ಯವಾಗಿ ತಂಪು ಪ್ರದೇಶಗಳಲ್ಲಿ ಹನಿಮೂನ್‌ ಆಚರಿಸಲು ಇಚ್ಛಿಸುತ್ತಾರೆ. ಜೂನ್‌-ಜುಲೈನಲ್ಲಿ ಮದುವೆಯಾಗುವ ಜೋಡಿಗಳು ಯಾವುದಾದರೂ ಹೋಟೆಲ್‌ನಲ್ಲಿಯೇ ಹನಿಮೂನ್‌ ಆಚರಿಸಲು ಇಷ್ಟಪಡುತ್ತಾರೆ.

ಹನಿಮೂನ್‌ಗೆ ಹೋಗುವ ಜೋಡಿಗಳು ಕೆಲವು ಟಿಪ್ಸ್ ಅನುಸರಿಸಿದರೆ ಯಾವುದೇ ತೊಂದರೆ ಆಗುವುದಿಲ್ಲ.

ಹನಿಮೂನ್‌ ಟ್ರಿಪ್‌ಗಾಗಿ

ಹನಿಮೂನ್‌ ಟೂರ್‌ಗಾಗಿ ಹೊರಡುವ ಮುಂಚೆ ಕ್ಯಾಮೆರಾ ಹಾಗೂ ಐಪಾಡ್‌ಗಳನ್ನು ನಿಮ್ಮೊದಿಗೆ ಅವಶ್ಯವಾಗಿ ಜೊತೆಗಿಟ್ಟುಕೊಳ್ಳಿ.

ಕ್ಯಾಮೆರಾ ನಿಮ್ಮ ಸ್ಮರಣಾರ್ಹ ಕ್ಷಣಗಳನ್ನು ಸದಾ ಕಾಲಕ್ಕೂ ಸುರಕ್ಷಿತವಾಗಿಡುತ್ತದೆ. ಐಪಾಡ್‌ ನಿಮಗೆ ಬಿಡುವಿನ ವೇಳೆಯಲ್ಲಿ ಹಾಡು ಕೇಳಲು ನೆರವಾಗುತ್ತದೆ.

ನಿಮ್ಮ ಬಜೆಟ್‌ಗನುಗುಣವಾಗಿ ಹನಿಮೂನ್‌ ಟ್ರಿಪ್‌ನ್ನು ಯೋಜಿಸಿ. ಉತ್ಸಾಹದಲ್ಲಿ ಬಜೆಟ್‌ ಮಿತಿಮೀರದಂತೆ ನೋಡಿಕೊಳ್ಳಿ. ಬಜೆಟ್ ಮಿತಿಮೀರಿ ನಿಮ್ಮ ಹನಿಮೂನ್‌ ಮಜವೇ ಹೊರಟುಹೋಗುವಂತಾಗಬಾರದು.

ಹನಿಮೂನ್‌ನಿಂದ ವಾಪಸ್ಸಾಗುವಾಗ ಮನೆಯ ಕಿರಿಯ ಹಿರಿಯ ಸದಸ್ಯರಿಗೆ ಏನಾದರೂ ಗಿಫ್ಟ್ ಗಳನ್ನು ತೆಗೆದುಕೊಂಡು ಬನ್ನಿ.

ಮದುವೆಯಾದ ಒಂದು ತಿಂಗಳಲ್ಲಿಯೇ ಹನಿಮೂನ್‌ ಟೂರ್‌ ಪ್ಲ್ಯಾನ್‌ ಮಾಡಿ.

ಹನಿಮೂನ್‌ಗಾಗಿ ಧಾರ್ಮಿಕ ಸ್ಥಳಗಳನ್ನು ಆಯ್ದುಕೊಳ್ಳಬೇಡಿ. ಅಲ್ಲಿ ನಿಮಗೆ ನೆಮ್ಮದಿ ಸಿಗಲಾರದು. ಏಕೆಂದರೆ ಅಲ್ಲಿ ಜನದಟ್ಟಣೆ ಅಧಿಕವಾಗಿರುತ್ತದೆ.

ಅಂತರಂಗದ ಕ್ಷಣಗಳಿಗಾಗಿ

ಹನಿಮೂನ್‌ನ್ನು ನೇರವಾಗಿ ಸೆಕ್ಸ್ ನೊಂದಿಗೆ ಜೋಡಿಸಿಕೊಂಡು ನೋಡಬೇಡಿ. ಮೊದಲು ಪರಸ್ಪರರ ವಿಶ್ವಾಸ ಗಳಿಸಿಕೊಳ್ಳಿ.

ಕ್ರಮೇಣ ರೊಮ್ಯಾನ್ಸ್ ಆರಂಭಿಸಿ.

ಪರಸ್ಪರರನ್ನು ಅಷ್ಟಿಷ್ಟು ಛೇಡಿಸುವುದು ಪ್ರೀತಿ ಮತ್ತು ಸೆಕ್ಸ್ ನ ಕ್ಷಣಗಳನ್ನು ಮತ್ತಷ್ಟು ಆನಂದದಾಯಕಗೊಳಿಸುತ್ತದೆ.

ಹೊಟೇಲ್‌ನಲ್ಲಿ ಹೆಂಡತಿಯನ್ನು ಏಕಾಂಗಿಯಾಗಿ ಬಿಟ್ಟು ಅದು ಇದೂ ತರಲೆಂದು ಹೊರಗೆ ಹೋಗಬೇಡಿ. 1-2 ಬಟ್ಟೆಗಳನ್ನು ನಿಮ್ಮೊಂದಿಗೆ ಹೆಚ್ಚಿಗೆ ಇಟ್ಟುಕೊಳ್ಳಿ.

ಕೆಲವು ತುಂಟ ಆಟಗಳನ್ನು ಆಡಬಹುದು. ಗೆದ್ದವರಿಗೆ ಯಾವುದಾದರೂ ಬಹುಮಾನ ಕೊಡಬಹುದು.

ಆರೋಗ್ಯದ ಬಗ್ಗೆ ಗಮನವಿರಲಿ

ಮಹಿಳಾ ರೋಗತಜ್ಞೆ ಡಾ. ಸಂಧ್ಯಾ ಈ ಕುರಿತಂತೆ ಹೀಗೆ ಹೇಳುತ್ತಾರೆ, ಹನಿಮೂನ್‌ ಸಂದರ್ಭಧಲ್ಲಿ ಗರ್ಭದಾರಣೆಯಾಗದಂತೆ ನೋಡಿಕೊಳ್ಳಿ. ಅದಕ್ಕಾಗಿ ನೀವು ಕೆಲವು ಎಚ್ಚರಿಕೆಗಳನ್ನು ವಹಿಸಬೇಕಾಗುತ್ತದೆ. ಆರೋಗ್ಯಕ್ಕೆ ಸಂಬಂಧಪಟ್ಟ ಈ ಸಂಗತಿಗಳನ್ನು ಗಮನಿಸಿದರೆ ನೀವು ಯಥೇಚ್ಛವಾ ಸೆಕ್ಸ್ ಸುಖ ಅನುಭವಿಸಬಹುದು.

ಹನಿಮೂನ್‌ಗೆ ಹೋಗುವ ಮುಂಚೆ ಋತುಚಕ್ರದ ದಿನಾಂಕದ ಮೇಲೂ ಗಮನವಿರಲಿ. ನೀವು ಹನಿಮೂನ್‌ಗೆ ಹೋಗುವ ಸಮಯದಲ್ಲಿಯೇ ಋತುಚಕ್ರ ಬರುವ ಸೂಚನೆ ಇದ್ದಲ್ಲಿ, ಅದನ್ನು ಮುಂದೂಡಲು ವೈದ್ಯರ ಸಲಹೆಯ ಮೇರೆಗೆ ಮಾತ್ರೆಗಳನ್ನು ಸೇವಿಸಬಹುದು. ಅದರಿಂದಾಗಿ ಋತುಚಕ್ರ ಕೆಲವು ದಿನ ಮುಂದೆ ಹೋಗಬಹುದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ