ಆದರೆ ಯಾವುದೊ ಕಾರಣಗಳಿಂದ ಸಂಬಂಧದಲ್ಲಿ ಬಿರುಕು ಉಂಟಾಗಿಬಿಟ್ಟರೆ ಅದೇ ಮುಂದೆ ದೊಡ್ಡ ಕೊರಕಲಾಗಿ ಪರಿಣಮಿಸಿ ಮಕ್ಕಳ ಸಂಸ್ಕಾರಕ್ಕೆ ಪೆಟ್ಟು ನೀಡುತ್ತದೆ……..!

ನಿನ್ನೆ ಮೊನ್ನೆಯವರೆಗೆ ಲವ್ ಬರ್ಡ್‌ ಆಗಿ ತಿರುಗುತ್ತಿದ್ದರು, ಬಳಿಕ ಪರಸ್ಪರರನ್ನು ದ್ವೇಷಿಸತೊಡಗಿದರೆ ಆಗ ವಿಷಯ ಕೈ ಕೈ ಮಿಲಾಯಿಸುವ ಮಟ್ಟಿಗೆ ಕೂಡ ತಲುಪಬಹುದು.

ಗಂಡ-ಹೆಂಡತಿ ಪರಸ್ಪರರ ಮನಸ್ತಾಪವನ್ನು ಮಕ್ಕಳಾಗುವ ಮುಂಚೆಯೇ ಬಗೆಹರಿಸಿಕೊಳ್ಳಬೇಕು. ಹಾಗೊಮ್ಮೆ ವೈಚಾರಿಕ ಮತಭೇದ ಉಂಟಾದರೆ ಮಕ್ಕಳ ಅನುಪಸ್ಥಿತಿಯಲ್ಲಿಯೇ ಅದನ್ನು ದೂರಗೊಳಿಸಿಕೊಳ್ಳಬೇಕು. ಏಕೆಂದರೆ ಯಾವುದೇ ತೊಂದರೆಯಿಲ್ಲದೆ ಮಕ್ಕಳ ಬೆಳವಣಿಗೆ ಆಗಬೇಕು. ಚಿಕ್ಕಪುಟ್ಟ ಮಾತುಗಳಿಂದಲೇ ಜಗಳ ಶುರುವಾಗಿ ಬಳಿಕ ದೊಡ್ಡ ರೂಪ ಪಡೆದು ಕೊಳ್ಳುತ್ತದೆ. ಹೆಚ್ಚಿನ ಜಗಳಗಳು ಅಂತಸ್ತನ್ನು ಹೀಯಾಳಿಸುವ, ತಮ್ಮವರ ಬಗೆಗೆ ಬಳಸಿದ ಕೆಟ್ಟ ಶಬ್ದ, ಶೈಕ್ಷಣಿಕ ಅಸಮಾನತೆ, ಮಕ್ಕಳ ಪಾಲನೆಪೋಷಣೆಗೆ ಸಂಬಂಧಪಟ್ಟಂತೆ, ವೈಯಕ್ತಿಕ ವಸ್ತುಗಳನ್ನು ಕಿತ್ತುಕೊಳ್ಳುವ ಕುರಿತಂತೆ ಜಗಳಗಳಾಗುತ್ತವೆ. ಕೆಲವು ಮನೆಗಳಲ್ಲಿ ಸಂಬಂಧಿಕರು ಆಗಾಗ ಮನೆಗೆ ಬಂದುಹೋಗುವ ಕುರಿತಂತೆ ಜಗಳ ಆಗುತ್ತದೆ. ಅಂದರೆ ದಂಪತಿಗಳಲ್ಲಿ ಯಾರಿಗಾದರೂ ಒಬ್ಬರ ಮನಸ್ಸಿಗೆ ನೋವಾದರೆ ಸಾಕು, ಅವರ ಸ್ವಾಭಿಮಾನಕ್ಕೆ ಪೆಟ್ಟು ಬೀಳುತ್ತದೆ.

ಕಡೆಗಣಿಸಿ ಮಾತನಾಡುವುದು

ಗಂಡನೇ ಆಗಿರಬಹುದು ಅಥವಾ ಹೆಂಡತಿ, ಕಡೆಗಣಿಸಿ ಮಾತನಾಡುವುದು ಯಾರಿಗಾದರೂ ನೋವನ್ನುಂಟು ಮಾಡಬಹುದು. ನೀಲಾ ಹೀಗೆ ಹೇಳುತ್ತಾರೆ, ಗಂಡ ನಾನು ಮಧ್ಯಮ ವರ್ಗದ ಕುಟುಂಬದವಳಾಗಿರುವುದನ್ನೇ ಹೀಯಾಳಿಸಿ ಮಾತನಾಡುತ್ತಾರೆ. ಅದನ್ನು ಅವಳಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಅವಳು ಕೂಡ ಅವನನ್ನುದ್ದೇಶಿಸಿ ಮಾತುಗಳನ್ನಾಡುತ್ತಾಳೆ. ಅವಳ ಮಾತು ಕೇಳಿ ಅವನಿಗೆ ಉರಿ ಉರಿ ಅನಿಸುತ್ತದೆ. ನನ್ನ ಕುಟುಂಬದವರ ಬಗ್ಗೆ ಏನಾದರೂ ಮಾತನಾಡಿದರೆ ಎಚ್ಚರ ಎಂದು ಅವಳಿಗೆ ಪ್ರತಿಯಾಗಿ ಹೇಳಿದ.

ಆ ಮಾತಿಗೆ ನೀಲಾ ಕೂಡ, ``ಮಾತಾಡ್ತೀನ್ರಿ, ಅದಕ್ಕೆ ಅಂಜಬೇಕೇನ್ರಿ? ನನ್ನ ಬಡತನವನ್ನು ಹಂಗಿಸುವ ಮುಂಚೆ ನಿಮ್ಮ ಬಡತನವನ್ನು ನೋಡ್ರಿ,'' ಎಂದು ಅವನನ್ನು ಕೆಣಕುತ್ತಾಳೆ.

ಅವಳ ಮಾತಿನಿಂದ ಕೆಂಡಾಮಂಡಲನಾದ ಪತಿ ಅವಳ ಕೆನ್ನೆಗೊಂದು ಬಾರಿಸುತ್ತಾನೆ. ಕೆನ್ನೆಗೆ ಏಟು ಬೀಳುತ್ತಿದ್ದಂತೆ ಅವಳ ಕೋಪ ನೆತ್ತಿಗೇರಿ ಪಾತ್ರೆಗಳನ್ನು ಬಿಸಾಡಲು ಶುರು ಮಾಡುತ್ತಾಳೆ. ಈ ದೃಶ್ಯವನ್ನು ಅವಳ 5 ವರ್ಷದ ಮಗು ಬಾಗಿಲ ಸಂದಿನಿಂದ ಕದ್ದುಮುಚ್ಚಿ ನೋಡುತ್ತಿರುತ್ತದೆ. ಈ ರೀತಿಯಾಗಿ ಅದರ ಬಾಲಮನಸ್ಸಿನಲ್ಲಿ ಕೆಟ್ಟ ಸಂಸ್ಕಾರಗಳು ತುಂಬುತ್ತ ಹೋದವು. ಇನ್ನೊಬ್ಬರ ಅವಹೇಳನ, ಕಪಾಳಮೋಕ್ಷ ಮಾಡುವುದು, ಪಾತ್ರೆಗಳ ಎಸೆದಾಟ, ಕೂಗಾಟ ಕೋಪ ಇವೆಲ್ಲ ಮಕ್ಕಳ ಮನಸ್ಸನ್ನು ಗಲಿಬಿಲಿಗೊಳಿಸುತ್ತವೆ.

ಮಾತು ತುಂಡರಿಸುವಿಕೆಯ ನಿರ್ಲಕ್ಷ್ಯ

ಬ್ಯಾಂಕ್‌ ಉದ್ಯೋಗಿ ನಿರ್ಮಲಾ ತನ್ನ ವಿಮೆ ಉದ್ಯೋಗಿ ಪತಿ ವೀರೇಶ್‌ ಮಾತನ್ನು ಮಧ್ಯದಲ್ಲಿ ತುಂಡರಿಸಿ ಮಾತಾಡುತ್ತಾಳೆ. ಗಂಡ ಏನಾದರೂ ಹೇಳುತ್ತಿದ್ದಂತೆ ಆಕೆ ಅದರ ಬಗ್ಗೆ ಯೋಚನೆ ಕೂಡ ಮಾಡದೆ ಒಮ್ಮೆಲೆ, ``ಅದೆಲ್ಲ ಆಗೋಲ್ಲ. ನನಗೆ ಅದು ಸಾಧ್ಯವಿಲ್ಲ!'' ಎಂದು ಹೇಳಿಬಿಡುತ್ತಾಳೆ. ಅವಳ ಪತಿ ಅಪಮಾನ ಸಹಿಸಿಕೊಂಡು ಒಮ್ಮೆ ಸುಮ್ಮನಿದ್ದುಬಿಡುತ್ತಾನೆ. ಮತ್ತೊಮ್ಮೆ ಕೋಪಗೊಂಡು ಅವಳ ಮೇಲೆ ಕೈ ಎತ್ತುತ್ತಾನೆ. ಅವನ ಮಾತಿನ ಪೆಟ್ಟಿನಿಂದ ಅವಳು ತವರಿಗೆ ಹೋಗಿ ಕುಳಿತುಬಿಡುತ್ತಾಳೆ. ಇದರಿಂದಾಗಿ ಅವಳ ಪುಟ್ಟ ಮಗುವಿಗೆ ಶಾಲೆ ತಪ್ಪುತ್ತದೆ. ಇದರ ಬಗ್ಗೆ ಅವರಾರಿಗೂ ಕಾಳಜಿ ಇಲ್ಲ. ಗೃಹಿಣಿ ಛಾಯಾಳ ಸ್ಥಿತಿ ಇದಕ್ಕೆ  ತದ್ವಿರುದ್ಧ. ತನ್ನನ್ನು ತಾನು ಬುದ್ಧಿವಂತ ಎಂದು ಹೇಳಿಕೊಳ್ಳುವ ಅವಳ ಪತಿ ಸುರೇಶ್‌ ಸಾಧ್ಯವಿದ್ದಾಗೆಲ್ಲ ಪತ್ನಿಯ ಅವಮಾನ ಮಾಡುತ್ತಿರುತ್ತಾನೆ. ಅವಳ ಬುದ್ಧಿವಂತಿಕೆಯ ತಮಾಷೆ ಮಾಡಿ ಮಾತನಾಡುತ್ತಾನೆ. ಅವಳು ಎಷ್ಟೇ ಸರಿಯಾಗಿ ಮಾತನಾಡಿದರೂ ಅದನ್ನು ಅಲ್ಲಗಳೆಯುತ್ತಾನೆ. ಅವನ ವರ್ತನೆಯನ್ನು ಅಲ್ಲಗಳೆದರೆ ಕೈ ಎತ್ತುತ್ತಾನೆ. ಅದೊಂದು ದಿನ ಅವರ ನಡುವಿನ ಜಗಳ ವಿಕೋಪಕ್ಕೆ ಹೋಯಿತು. ಕೋಪಿಷ್ಠ ಗಂಡ ಅವಳ ಕೂದಲು ಜಗ್ಗುತ್ತಾ ಅಡುಗೆಮನೆಗೆ ಎಳೆದುಕೊಂಡು ಬಂದ. ಆಗ ಅವಳ ಗಮನ ಅಲ್ಲಿದ್ದ ಚಾಕುವಿನ ಮೇಲೆ ಹೋಯಿತು. ಅವಳು ಅದನ್ನು ಎತ್ತಿಕೊಂಡು, `ನನ್ನನ್ನು ಬಿಟ್ಟುಬಿಡಿ, ಇಲ್ಲದಿದ್ದರೆ ಚಾಕುವಿನಿಂದ ತಿವಿಯುತ್ತೇನೆ,' ಎಂದು ಕೂಗಿದಳು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ