``ಹೇಗಿದ್ದೀಯಾ ಪೂರ್ಣಿಮಾ? ಈಗ ನಿನ್ನ ಆರೋಗ್ಯ ಹೇಗಿದೆ? ನಾನು ನಿನಗೆ ಇಷ್ಟವಾದ ಆಲೂಗಡ್ಡೆ ಪಲ್ಯ ಮಾಡಿಕೊಂಡು ಬಂದಿರುವೆ,'' ಎಂದು ಪಕ್ಕದ್ಮನೆಯ ಚಂದ್ರಿಕಾ ಹೇಳಿದಳು.

``ನೀನು ಎಷ್ಟು ದಿನ ನನ್ನ ಇಷ್ಟದ ಪದಾರ್ಥಗಳನ್ನು ಮಾಡಿಕೊಂಡು ಬರ್ತಾ ಇರ್ತೀಯಾ? ನಾನೀಗ ಅಷ್ಟಿಷ್ಟು ಆರಾಮವಾಗಿದ್ದೇನೆ. ಈಗ ಅಡುಗೆ ಸಹ ಮಾಡಬಲ್ಲೆ. ನೀನೀಗ ನನ್ನ ಬಗ್ಗೆ ಕಾಳಜಿ ವಹಿಸುವುದನ್ನು ಕಡಿಮೆ ಮಾಡಬೇಕು,'' ಪೂರ್ಣಿಮಾ ಹಾಸಿಗೆಯಿಂದ ಮುಗುಳ್ನಗೆ ಸೂಸುತ್ತ ಎದ್ದಳು.

``ಚಂದ್ರಿಕಾ, ನಿಮ್ಮ ಗೆಳತಿ ಮಾಡಿದ ಅಡುಗೆ ತಿಂದು ತಿಂದು ನನಗೆ ಬೋರ್‌ ಆಗಿದೆ. ನೀವು ಇನ್ನೊಂದೆರಡು ದಿನ ಹೀಗೆಯೇ ಅಡುಗೆ ತಂದು ಕೊಡ್ತಾ ಇರಿ. ಪೂರ್ಣಿಗೆ ಈ ರೀತಿ ಒಂದಿಷ್ಟು ವಿಶ್ರಾಂತಿ ದೊರೆಯುತ್ತದೆ,'' ಚಂದ್ರಿಕಾಗೆ ಕುಳಿತುಕೊಳ್ಳಲು ಸನ್ನೆ ಮಾಡುತ್ತಾ ಪೂರ್ಣಿಮಾಳ ಪತಿ ಸತ್ಯರಾಜು ಹೇಳಿದ.

``ಎಂಥ ಮಾತು ಅಂತ ಆಡ್ತೀರಾ ಸತ್ಯರಾಜು, ನಾನಂತೂ ಇವರ ಕೈರುಚಿ ಸವಿದಿಲ್ಲ. ಕಿಟಿ ಪಾರ್ಟಿಯಲ್ಲಿ ಇವರ ಕೈ ರುಚಿಯ ಬಗ್ಗೆ ಎಲ್ಲರೂ ಹೊಗಳುತ್ತಾ ಇರುತ್ತಾರೆ.''

ಆ ಮಾತು ಕೇಳುತ್ತಿದ್ದಂತೆ  ಸತ್ಯರಾಜು ಜೋರಾಗಿ ನಕ್ಕುಬಿಟ್ಟ. ಅದೇ ಸಮಯದಲ್ಲಿ ಚಂದ್ರಿಕಾ ಪೂರ್ಣಿಮಾಳ ಮುಖದಲ್ಲಾಗುತ್ತಿದ್ದ ಭಾವನೆಗಳನ್ನು ಗಮನಿಸುತ್ತಿದ್ದಳು. ಸತ್ಯರಾಜು ಈ ರೀತಿ ಹೆಂಡತಿಯನ್ನು ನಗಿಸಲು ಪ್ರಯತ್ನಿಸಿದಾಗ ಅವಳ ಮುಖದಲ್ಲಿ ನಗು ಚಿಮ್ಮುತ್ತಿರಲಿಲ್ಲ, ಚಿಂತೆ ಕಾಣುತ್ತಿತ್ತು. ಕಳೆದ 10 ದಿನಗಳಲ್ಲಿ ಸತ್ಯರಾಜು ವರ್ತನೆಯಿಂದ ಪೂರ್ಣಿಮಾ ತನ್ನನ್ನು ತಾನು ಅಸುರಕ್ಷಿತೆ ಎಂದು ಭಾವಿಸಿದಂತೆ ಕಾಣುತ್ತಿತ್ತು.

ಸ್ವಲ್ಪ ಹೊತ್ತು ಆ ಕಡೆ ಈ ಕಡೆಯ ಮಾತುಗಳು ಆದವು. ಆ ಬಳಿಕ ಚಂದ್ರಿಕಾ ತನ್ನ ಮನೆಯ ಕಡೆ ಹೊರಟುಹೋದಳು. ಅವಳು ಪೂರ್ಣಿಮಾಳ ಮುಖವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಅವಳ ಮುಖದಲ್ಲೀಗ ಮಂದಹಾಸ ವಾಪಸ್ಸಾಗಿತ್ತು. ಈಗ ಅವಳು ಅಷ್ಟಿಷ್ಟು ಅಡುಗೆ ಮಾಡುವ ಸಾಮರ್ಥ್ಯ ಪಡೆದಿದ್ದಳು. ಇನ್ನು ನಾಳೆಯಿಂದ ಅಡುಗೆ ಮಾಡದೇ ಇರುವುದು ಒಳ್ಳೆಯದು ಎಂದು ಅವಳು ಭಾವಿಸಿದಳು.

ಚಂದ್ರಿಕಾ ಅತ್ತ ಕಡೆ ಹೋಗುತ್ತಿದ್ದಂತೆ ಪೂರ್ಣಿಮಾ ಪತಿಯನ್ನು ತರಾಟೆಗೆ ತೆಗೆದುಕೊಳ್ಳುತ್ತಾ, ``ನನ್ನ ಅನಾರೋಗ್ಯದ  ದುರ್ಲಾಭ ಪಡೆದುಕೊಂಡು ಗೆಳತಿಯನ್ನು ಫ್ಲರ್ಟ್‌ ಮಾಡಲು ಪ್ರಯತ್ನಿಸುತ್ತಿದ್ದೀರಾ?''

``ಛೇ....ಛೇ..... ನನ್ನ ಮಾತನ್ನು ನೀನು ತಪ್ಪಾಗಿ ಅರ್ಥ ಮಾಡಿಕೊಂಡೆ. ನೀನು ಇನ್ನೊಂದೆರಡು ದಿನ ವಿಶ್ರಾಂತಿ ಪಡೆಯಲೆಂದು ನಾನು ಅವರನ್ನು ಈ ರೀತಿ ಹೊಗಳಿದೆ. ನಿನ್ನ ಯೋಚನೆ ಅದೆಷ್ಟು ಸಂಕೀರ್ಣ, ಮಹಿಳೆಯರ ಅಸೂಯೆಯ ವರ್ತನೆಗೆ ನಾನೇನು ಹೇಳಲು ಸಾಧ್ಯ?''

ಪೂರ್ಣಿಮಾಳ ವರ್ತನೆ ಮಾತುಗಳಿಂದ ಅವನ ಮನಸ್ಸು ಕಹಿಯಾಯಿತು.

ಮರುದಿನ ಚಂದ್ರಿಕಾ ಊಟತಿಂಡಿ ತೆಗೆದುಕೊಂಡು ಪೂರ್ಣಿಮಾಳ ಮನೆಗೆ ಬರಲೇ ಇಲ್ಲ. ಅದು ಪೂರ್ಣಿಮಾಳಿಗೆ ತುಸು ನೆಮ್ಮದಿಯನ್ನುಂಟು ಮಾಡಿತು. ಆದರೆ ಸತ್ಯರಾಜು ಅರ್ಥ ಮಾಡಿಕೊಂಡಿದ್ದು ಬೇರೆ. ಪೂರ್ಣಿಮಾಳ ದುರ್ವರ್ತನೆಯಿಂದಲೇ ಚಂದ್ರಿಕಾ ತಮ್ಮ ಮನೆಗೆ ಬರುವುದನ್ನು ನಿಲ್ಲಿಸಿದಳು ಎಂದು ತಿಳಿದುಕೊಂಡ. ಆದರೆ ಆತ ಪೂರ್ಣಿಮಾಳಿಗೆ ಬೇರೇನೂ ಕೇಳಲು ಹೋಗಲಿಲ್ಲ. ಹಾಗೇನಾದರೂ ಕೇಳಿದ್ರೆ ಮತ್ತೇನೋ ಹೇಳಿ ಅವಳು ಅವನ ಮನಸ್ಸನ್ನು ನೋಯಿಸಿಬಿಡುತ್ತಿದ್ದಳು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ