ಒಮ್ಮೊಮ್ಮೆ ಡಿಜಿಟಲ್ ಸಂಬಂಧಗಳ ಜಾಲದಲ್ಲಿ ಜನರು ಅದ್ಹೇಗೆ ಸಿಲುಕಿಬಿಡುತ್ತಾರೆಂದರೆ, ಅವರಿಗೆ ಸಂಬಂಧಗಳ ಬಗೆಗೇ ವಿಶ್ವಾಸ ಹೊರಟು ಹೋಗುತ್ತದೆ. 3 ವರ್ಷಗಳ ಹಿಂದೆ ಒಂದು ಮ್ಯಾಚ್‌ಮೇಕಿಂಗ್‌ ಸೈಟ್‌ ಮೇರೆಗೆ  ಬೆಂಗಳೂರಿನ ಶಶಿಕಲಾ ರವಿಕಾಂತ್‌ ಎಂಬ ವ್ಯಕ್ತಿಯನ್ನು ಆನ್‌ಲೈನ್‌ನಲ್ಲಿ ಪರಿಚಯಿಸಿಕೊಂಡರು. ಇಬ್ಬರ ವಿಚಾರಗಳು ಪರಸ್ಪರರಿಗೆ ಇಷ್ಟವಾದಾಗ ಮಾತು ಮುಂದುವರಿಯಿತು. 2-3 ಸಲದ ಭೇಟಿಯ ಬಳಿಕ ರವಿಕಾಂತ್‌ ಬಿಝಿ ಶೆಡ್ಯೂಲ್‌, ನೆಪ ಹೇಳತೊಡಗಿದ. `ನಾನು ಮೀಟಿಂಗ್‌ನಲ್ಲಿ ಇದ್ದೇನೆ, ನಾನು ನಗರದಿಂದ ಬಹುದೂರ ಇದ್ದೇನೆ, ಶೀಘ್ರ ಭೇಟಿ ಮಾಡುವೆ...' ಎಂದು ಸಬೂಬು ಹೇಳತೊಡಗಿದ. ಶಶಿಕಲಾ ಕೂಡ ಅವನ ಮಾತುಗಳ ಮೇಲೆ ವಿಶ್ವಾಸವಿರಿಸಿದಳು. ಆದರೆ ಶಶಿಕಲಾ ಅದೊಂದು ದಿನ ಬೇರೊಂದು ಸೈಟ್‌ನಲ್ಲಿ ಅವನನ್ನು ನೋಡಿದಳು. ಬಹಳಷ್ಟು ಪರಿಶೀಲನೆ ನಡೆಸಿದಾಗ ರವಿಕಾಂತ್‌ ಬೇರೆಲ್ಲೂ ವ್ಯಸ್ತನಾಗಿರುವುದಿಲ್ಲ. ಅವನು ಈಗಾಗಲೇ 7 ವವರ್ಷಗಳ ವೈವಾಹಿಕ ಜೀವನ ನಡೆಸಿದ್ದ. ಅವನ ಹೆಂಡತಿಯ ಹೇಳಿಕೆಯ ಪ್ರಕಾರ, ಅವನು ಮ್ಯಾಟ್ರಿಮೋನಿಯಲ್ ಸೈಟ್‌ಗಳಲ್ಲಿ ಸುಳ್ಳು ಪ್ರೊಫೈಲ್‌ ಹಾಕಿ ಹಲವು ಹುಡುಗಿಯರ ಜೊತೆ ಸಂಬಂಧ ಬೆಳೆಸುತ್ತಿದ್ದ. ಅವನ ಉದ್ದೇಶ ಲೈಂಗಿಕ ಫ್ಯಾಂಟೆಸಿ ಈಡೇರಿಸಿಕೊಳ್ಳುವುದಾಗಿತ್ತು. ಇತ್ತೀಚಿನ ದಿನಗಳಲ್ಲಿ ಮ್ಯಾಟ್ರಿಮೋನಿಯಲ್ ಹಾಗೂ ಡೇಟಿಂಗ್‌ ಸೈಟ್‌ಗಳು ರವಿಕಾಂತ್‌ನಂತಹ ದುರುದ್ದೇಶ ಹೊಂದಿರುವ ವ್ಯಕ್ತಿಗಳಿಗೆ ಪರ್ಯಾಯ ಉಪಾಯಗಳಾಗಿಬಿಟ್ಟಿವೆ. ಅಂತಾರಾಷ್ಟ್ರೀಯ ಡೇಟಿಂಗ್‌ ಅಪ್ಲಿಕೇಶನ್‌ ಹಿಂಜ್‌ ಪ್ರಕಾರ, ಡೇಟಿಂಗ್‌ನ ವಿಶ್ವ ದಿನದಿಂದ ದಿನಕ್ಕೆ ಕ್ರೂರವಾಗುತ್ತ ಸಾಗಿದೆ. ಇಂತಹದರಲ್ಲಿ ಆನ್‌ಲೈನ್‌ ರಿಲೇಶನ್‌ನಲ್ಲಿ ಘೋಸ್ಟಿಂಗ್‌, ಮೂನಿಂಗ್‌ ಮತ್ತು ಬ್ರೆಡ್‌ ಕ್ರಂಬಿಂಗ್‌ ಮುಂತಾದ ಅಪಾಯಕಾರಿ ವಿಧಾನಗಳ ಬಳಿಕ `ಕಿಟನ್‌ಫಿಶಿಂಗ್‌' ಎಂಬ ಹೊಸ ಪದವೊಂದು ಸೃಷ್ಟಿಯಾಗಿದೆ. ಅದರಿಂದ ನೀವು ಎಚ್ಚರದಿಂದಿರಬೇಕಾದ ಅಗತ್ಯವಿದೆ.

ಏನಿದು ಕಿಟನ್‌ಫಿಶಿಂಗ್‌?

ಕಿಟನ್‌ ಫಿಶಿಂಗ್‌ ಇದು ಆನ್‌ಲೈನ್‌ ಡೇಟಿಂಗ್‌ನಲ್ಲಿ ಹೊಸದಾಗಿ ಪ್ರತ್ಯಕ್ಷವಾದ ಒಂದು ಹೊಸ ರೂಪವಾಗಿದೆ. ಒಬ್ಬ ವ್ಯಕ್ತಿ ತನ್ನ ವಾಸ್ತವ ರೂಪವನ್ನು ಮರೆಮಾಚಿ ಭ್ರಾಮಕ ಲೋಕವೊಂದನ್ನು ಸೃಷ್ಟಿ ಮಾಡುತ್ತಾರೆ. ಇಲ್ಲಿ ಕಿಟನ್‌ ಫಿಶರ್ಸ್‌ ತನ್ನ ಹಳೆಯ ಹಾಗೂ ಭ್ರಾಮಕ ಫೋಟೋವೊಂದನ್ನು ಹಾಕಿ ಅದರ ಮುಖಾಂತರ ತನ್ನ ಅವಾಸ್ತವ ರೂಪವನ್ನು ಪ್ರಸ್ತುತಪಡಿಸಿ ಎದುರಿಗಿನ ವ್ಯಕ್ತಿಯನ್ನು ಆಕರ್ಷಿಸಲು ಎಷ್ಟು ಸಾಧ್ಯವೋ ಅಷ್ಟು ಪ್ರಯತ್ನ ಮಾಡುತ್ತಾರೆ. ಉದಾಹರಣೆಗೆ ತನ್ನ ವಯಸ್ಸು, ಎತ್ತರ, ಆಸಕ್ತಿ ಮುಂತಾದವುಗಳ ಬಗ್ಗೆ ತಪ್ಪು ಮಾಹಿತಿ ಕೊಟ್ಟು ತನ್ನತ್ತ ಆಕರ್ಷಿಸಿಕೊಳ್ಳಲು ಪ್ರಯತ್ನಿಸುತ್ತಾನೆ.

ವಾಸ್ತವ ಜೀವನದಲ್ಲೂ ಕಿಟನ್‌ಫಿಶಿಂಗ್‌

ಕಿಟನ್‌ಫಿಶಿಂಗ್‌ ಯಾವುದೇ ಹೊಸ ಟ್ರೆಂಡ್‌ ಏನಲ್ಲ. ಆನ್‌ಲೈನ್‌ ಸಂಬಂಧ ಇಟ್ಟುಕೊಳ್ಳುವವರಿಗೆ ಮಾತ್ರ ಈ ತೆರನಾದ ಮೋಸ ಆಗುತ್ತದೆಂದಲ್ಲ. ನಮ್ಮ ಆಸುಪಾಸಿನಲ್ಲಿ ಎಂತಹ ಕೆಲವು ಜನರಿದ್ದಾರೆಂದರೆ, ಅವರು ತಮ್ಮ ಬಗ್ಗೆ ಅದೆಷ್ಟೋ ಭ್ರಾಮಕ ಕಲ್ಪನೆ ಉಂಟು ಮಾಡಿ ಹುಡುಗಿಯರನ್ನು ತಮ್ಮ ಬುಟ್ಟಿಗೆ ಹಾಕಿಕೊಳ್ಳಲು ಪ್ರಯತ್ನಿಸುತ್ತಾರೆ. ಒಂದು ಕಂಪನಿಯಲ್ಲಿ ಕಾರ್ಯನಿರ್ವಹಿಸುವ ಪ್ರತಿಭಾ ಹೀಗೆ ಹೇಳುತ್ತಾರೆ, ನಾನೊಬ್ಬ ಹುಡುಗನ ಜೊತೆ ಡೇಟಿಂಗ್‌ನಲ್ಲಿದ್ದೆ. ಆತ ತನಗೆ ಸ್ವಂತ ಮನೆಯಿದೆ. ತಾನು ಕಟ್ಟಡ ನಿರ್ಮಾಣ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದುದಾಗಿ ಹೇಳಿಕೊಂಡಿದ್ದ. ಕೆಲವು ತಿಂಗಳುಗಳ ಬಳಿಕ, ಆ ಹುಡುಗ ಯಾವ ಮನೆಯಲ್ಲಿ ವಾಸಿಸುತ್ತಿದ್ದನೊ, ಆ ಮನೆ ಅವನ ಕಸಿನ್‌ನದಾಗಿತ್ತು. ಆತ ದುಬೈನಲ್ಲಿ ವಾಸಿಸಿದ್ದ. ಆ ಬಳಿಕ ಪ್ರತಿಭಾ ಅವನ ಜೊತೆಗಿನ ಸಂಬಂಧವನ್ನು ಕಡಿದು ಹಾಕಿದಳು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ