ಈಗಿನ ಕಾಲದಲ್ಲಿ ಒಂದು ಮದುವೆ ಆಗೋದೆ ಕಷ್ಟ. ಮದುವೆ ಆದ್ಮೇಲೆ ಮಡದಿ, ಮಕ್ಕಳನ್ನ ಸಾಕೋದಂತೂ ಇನ್ನೂ ಕಷ್ಟ. ಕೆಲವರಿಗಂತೂ ಜೀವನಾನೇ ಸಾಕಪ್ಪಾ ಅನ್ನಿಸಿಬಿಟ್ಟಿರುತ್ತೆ. ಅದರೆ ಇಲ್ಲೊಬ್ಬ ಮಹಾಶಯ ಬರೋಬ್ಬರಿ 20 ಮದುವೆ ಆಗಿದ್ದಾನೆ. 104 ಮಕ್ಕಳಿಗೆ ಅಪ್ಪ, 144 ಮೊಮ್ಮಕ್ಕಳಿಗೆ ತಾತ ಆಗಿದ್ದಾನೆ. ತಂದೆ ಮಾತನ್ನ ಸೀರಿಯಸ್ ಆಗಿ ತಗೊಂಡು ಹೆಂಡ್ತಿ, ಮಕ್ಕಳ ಸೈನ್ಯವನ್ನೇ ಕಟ್ಟಿದ್ದಾನೆ.
ಅತಿ ಹೆಚ್ಚು ಮಕ್ಕಳ ತಂದೆ ಯಾರು ಅಂದ್ರೆ ಮೊದಲು ನೆನಪಾಗೋದೆ ದ್ವಾಪರಯುಗದ ದೃತರಾಷ್ಟ್ರ. 100 ಗಂಡು ಮಕ್ಕಳು, ಒಂದು ಹೆಣ್ಣು ಮಗುವಿಗೆ ಜನ್ಮನೀಡಿದ್ದಾರೆ. ನಾವು ತೋರಿಸ್ತಿರೋ ಈ ಮಹಾನ್ ವ್ಯಕ್ತಿ ದೃತರಾಷ್ಟ್ರನನ್ನೂ ಮೀರಿಸಿದ್ದಾನೆ.
ಮಕ್ಕಳಿರಲವ್ವ ಮನೆ ತುಂಬ ಅನ್ನೋ ಮಾತನ್ನ ಕೇಳಿರ್ತೀರಾ ಅಲ್ವಾ..? ಈತ, ಮಕ್ಕಳಿರಲವ್ವ ಮನೆತುಂಬ ಅನ್ನೋ ಗಾದೆ ಮಾತನ್ನೇ ಚೇಂಜ್ ಮಾಡಿದ್ದಾನೆ. ಮನೆ ತುಂಬ ಮಕ್ಕಳೂ ಇರಲಿ, ಮಕ್ಕಳನ್ನ ಹೆರೋದಕ್ಕೆ ಮನೆ ತುಂಬ ಮಡದಿಯರೂ ಇರಲಿ ಅಂತ ಬರೋಬ್ಬರಿ 20 ಮದುವೆ ಆಗಿದ್ದಾನೆ. ವಿಶೇಷ ಏನಂದ್ರೆ 20 ಹೆಂಡತಿಯರ ಜೊತೆನೂ ವಿರಸ ಇಲ್ಲದೆ ಸಂಸಾರ ಸಾಗಿಸಿಕೊಂಡು ಹೋಗ್ತಿದ್ದಾನೆ.
ಈ ಕಾಲದಲ್ಲಿ ಒಂದು ಮದುವೆ ಅಗೋದೆ ಕಷ್ಟ. ಮದುವೆ ಆದ್ಮೇಲೆ ಸಂಸಾರ ಸಾಗಿಸೋದಂತೂ ಇನ್ನೂ ಕಷ್ಟ. ಮಕ್ಕಳ ಲೈಫ್ ಸೆಟಲ್ಡ್ ಮಾಡೋಷ್ಟ್ರಲ್ಲಿ ಹೆತ್ತವರು ಹೈರಾಣಾಗಿ ಹೋಗಿರ್ತಾರೆ. ಆದರೆ ಈ ವ್ಯಕ್ತಿಯ ಕಥೆಯೇ ಬೇರೆ. ಈತನ ಹೆಂಡ್ತಿಯರು, ಮಕ್ಕಳ ಕಥೆ ಹೇಳಿದ್ರೆ ನೀವು ಕನಸಲ್ಲೂ ಬೆಚ್ಚಿಬೀಳೋದು ಗ್ಯಾರಂಟಿ. ಅಂದ ಹಾಗೆ ಈತನ ಹೆಸರು ಜೀ ಎರ್ನಿಸ್ಟೋ ಮೌನುಚಿ ಕಪಿಂಗ ಅಂತ. ಈಗ 86 ವರ್ಷ. ಪೂರ್ವ ಆಫ್ರಿಕಾದ ಟಾಂಜಾನಿಯದ ಸಣ್ಣ ಹಳ್ಳಿಯಲ್ಲಿ ವಾಸ ಮಾಡ್ತಿದ್ದಾನೆ. ಈತ ಒಂದಲ್ಲಾ, ಎರಡಲ್ಲಾ, ಹತ್ತಲ್ಲಾ ಬರೋಬ್ಬರಿ 20 ಮದುವೆ ಆಗಿದ್ದಾನೆ. 20 ಪತ್ನಿಯರಲ್ಲಿ ನಾಲ್ವರು ಮೃತಪಟ್ಟಿದ್ದು, 16 ಮಡದಿಯರೊಂದಿಗೆ ಸುಖ ಸಂಸಾರ ನಡೆಸ್ತಿದ್ದಾನೆ.
ಈತನದ್ದೇ ಒಂದು ಹಳ್ಳಿ :
20 ಮದುವೆ ಆಗಿರೋ ಗಟ್ಟಿಗುಂಡಿಗೆ ಮಹಾಶಯನಿಗೆ ಮಕ್ಕಳೆಷ್ಟು ಗೊತ್ತಾ..? ಒಟ್ಟು 104 ಮಕ್ಕಳಿದ್ದಾರೆ. 144 ಮೊಮ್ಮಕ್ಕಳಿದ್ದಾರೆ. ಮರಿಮೊಮ್ಮಕ್ಕಳ ಲೆಕ್ಕವಂತೂ ಸದ್ಯಕ್ಕೆ ಸಿಕ್ಕಿಲ್ಲ. 16 ಪತ್ನಿಯರು, 104 ಮಕ್ಕಳು, 144 ಮೊಮ್ಮಕ್ಕಳು, ಮರಿಮೊಮ್ಮಕ್ಕಳ ಜೊತೆ ನೆಮ್ಮದಿಯಾಗಿದ್ದಾನೆ.
ಈತನ ಸಂಸಾರವೇ ಒಂದು ಸಣ್ಣ ಹಳ್ಳಿಯಾಗಿ ಬದಲಾಗಿದೆ. ಈತನ ಪತ್ನಿಯರು, ಮಕ್ಕಳು, ಮೊಮ್ಮಕ್ಕಳು ಎಲ್ರೂ ಕಿತ್ತಾಟವಿಲ್ಲದೆ, ಬಡಿದಾಟವಿಲ್ಲದೆ ಅನ್ಯೋನ್ಯದಿಂದ ಜೀವನ ಸಾಗಿಸ್ತಿದ್ದಾರೆ.
ದೊಡ್ಡ ಕುಟುಂಬಕ್ಕೆ ಅಪ್ಪನೇ ಪ್ರೇರಣೆ :
ಅಷ್ಟಕ್ಕೂ ಈತ 20 ಮದುವೆ ಆಗೋಕೆ ಒಂದು ಅಸಲಿ ಕಾರಣವಿದೆ. ಆ ಕಾರಣ ಬೇರೇನು ಅಲ್ಲ ಅವರ ತಂದೆ. ಹೌದು, 1961ರಲ್ಲಿ ಮೊದಲ ಮದುವೆ ಆಯ್ತು. ಒಂದಾದ್ರೆ ಸಾಲದು. ಸಾಕಷ್ಟು ಮದುವೆ ಆಗು. ವರದಕ್ಷಿಣೆ ಜಾಸ್ತಿ ಸಿಗುತ್ತೆ.
ನಮ್ಮ ಕುಟುಂಬವೂ ದೊಡ್ಡದಾಗುತ್ತೆ ಅಂತ ಕಪಿಂಗ್ ತಂದೆ ಕಿವಿ ಮಾತು ಹೇಳಿದ್ರಂತೆ. ತಂದೆ ಮಾತು ಮೀರದ ಮಗ ಮದುವೆ ಆಗೋದು, ಮಕ್ಕಳು ಮಾಡೋದನ್ನೆ ಕಾಯಕ ಮಾಡಿಕೊಂಡಿದ್ದಾನೆ. ಅದರ ಪ್ರತಿಫಲವೇ ಈ ಅತಿದೊಡ್ಡ ಸಂಸಾರ.. ದೊಡ್ಡ ಸಂಸಾರಸ್ಥ ಎನ್ನುವ ಬಿರುದು.