- ಜಿ. ಸೀಮಾ, ಬೆಂಗಳೂರು.

ನಿಹಾರಿಕಾ ತನ್ನ ಗಂಡನಿಂದ ವಿಚ್ಛೇದನ ಬಯಸಿದ್ದಾಳೆ. ಗಂಡ ಚಂದ್ರಕಾಂತ ಇನ್ನೊಬ್ಬ ಮಹಿಳೆಯ ಜೊತೆ ಸಂಬಂಧ ಇಟ್ಟುಕೊಂಡಿರುವುದೇ ಇದಕ್ಕೆ ಕಾರಣ. ನಿಹಾರಿಕಾ 2 ವರ್ಷದ ಹಿಂದಷ್ಟೇ ಚಂದ್ರಕಾಂತನ ಕೈ ಹಿಡಿದಿದ್ದಳು. ಮದುವೆಯಾದ ಆರಂಭದಲ್ಲಿ ಎಲ್ಲ ಸರಿಯಾಗಿಯೇ ಇತ್ತು. ಆದರೆ ಅದೊಂದು ದಿನ ನಿಹಾರಿಕಾಗೆ ತಿಳಿದ ವಿಷಯವೇನೆಂದರೆ, ಗಂಡ ಆಫೀಸ್‌ ಮುಗಿಸಿಕೊಂಡು ಇನ್ನೊಬ್ಬ ಮಹಿಳೆಯ ಮನೆಗೆ ಹೋಗುತ್ತಾನೆಂದು ಕೇಳಿ ಆಘಾತವೇ ಆಯಿತು. ನಿಹಾರಿಕಾ ಇನ್ನೂ ತಾಯಿಯಾಗಿಲ್ಲ. ಹಾಗಾಗಿ ಚಂದ್ರಕಾಂತನಿಂದ ಪ್ರತ್ಯೇಕವಾಗಲು ಆಕೆಗೆ ಯಾವುದೇ ತೊಂದರೆಯಾಗಿಲ್ಲ. ಆದರೆ ಬಹಳಷ್ಟು ಮಹಿಳೆಯರು ಹೇಗಿದ್ದಾರೆಂದರೆ, ಎಲ್ಲ ಗೊತ್ತಿದ್ದೂ ಕುಟುಂಬ ಹಾಗೂ ಮಕ್ಕಳಿಗಾಗಿ ವಿಚ್ಛೇದನ ತೆಗೆದುಕೊಳ್ಳುವ ಯೋಚನೆ ಕೂಡ ಮಾಡಲು ಆಗದು.

ಒಂದು ನೈಜ ಸಂಗತಿಯೆಂದರೆ, ನಂಬಿಕೆದ್ರೋಹ ಮಾಡಿದ ಸಂಗಾತಿ ಎಂದೂ ಒಳ್ಳೆಯ ಸಂಗಾತಿ ಆಗಲಾರ. ಒಂದು ಸಲ ನಂಬಿಕೆ ಹೊರಟುಹೋದ ಬಳಿಕ ಸಂಬಂಧದಲ್ಲಿ ಯಾವುದೇ  ಸ್ವಾರಸ್ಯ ಉಳಿಯುವುದಿಲ್ಲ. ಗಮನಿಸಬೇಕಾದ ಒಂದು ಸಂಗತಿಯೆಂದರೆ ಗಂಡನ ನಂಬಿಕೆದ್ರೋಹವನ್ನು ಸಹಿಸಿಕೊಳ್ಳುವ ಹೆಣ್ಣು ಕೇವಲ ಹೆಂಡತಿ ಅಷ್ಟೇ ಆಗಿರುವುದಿಲ್ಲ, ತಾಯಿಯೂ ಕೂಡ ಆಗಿರುತ್ತಾಳೆ. ಗಂಡನೊಂದಿಗಿನ ಸಂಬಂಧ ಕೆಟ್ಟುಹೋದರೆ, ಅದರ ದುಷ್ಪರಿಣಾಮ ಮಕ್ಕಳ ಪಾಲನೆ ಪೋಷಣೆಯ ಮೇಲೂ ಆಗುತ್ತದೆ.

ನಂಬಿಕೆದ್ರೋಹ ಎಂತಹ ಮಹಿಳೆಯನ್ನಾದರೂ ಕಂಗೆಡಿಸುತ್ತದೆ. ಆ ವ್ಯಕ್ತಿಯ ವಯಸ್ಸು ಎಷ್ಟೇ ಆಗಿರಬಹುದು, ಅಂತಹ ವ್ಯಕ್ತಿಯ ಜೊತೆ ಹೇಗೆ ನಡೆದುಕೊಳ್ಳಬೇಕು ಎನ್ನುವುದನ್ನು ಯೋಚಿಸಿ, ವಿಚಾರ ವಿಮರ್ಶೆ ಮಾಡಿ ನಿರ್ಧಾರಕ್ಕೆ ಬರಬೇಕು.

ಸರಿಯಾದ ನಿರ್ಣಯ ತೆಗೆದುಕೊಳ್ಳಿ

ನಿಮ್ಮೊಂದಿಗೆ ನಂಬಿಕೆದ್ರೋಹ ಆಗುತ್ತಿದೆ ಎಂಬ ಅರಿವು ಉಂಟಾಗುತ್ತಿದ್ದಂತೆ, ಒಬ್ಬ ತಾಯಿಯಾಗಿ ನೀವು ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಾಗಿ ಬರುತ್ತದೆ. ನೀವು ಆತ್ಮವಿಶ್ವಾಸದ ವಾತಾವರಣದಲ್ಲಿ ಇರುವುದಕ್ಕಿಂತ ಪ್ರತ್ಯೇಕವಾಗಿರಲು ಇಚ್ಛಿಸುವಿರಿ ಹಾಗೂ ಸಂಬಂಧ ಮುರಿದುಕೊಳ್ಳಲು ಬಯಸುವಿರಿ. ಆದರೆ ನೀವು ನಿಮ್ಮ ಮಕ್ಕಳ ಎದುರಿಗೆ ವಿಫಲ ಸಂಬಂಧದ ಉದಾಹರಣೆಯನ್ನು ಇಡಲು ಇಚ್ಛಿಸುವುದಿಲ್ಲ. ಕುಟುಂಬದವರು ಕೂಡ ನೀವು ನಿಮ್ಮ ಸಂಬಂಧ ಕೊನೆಗೊಳಿಸುವುದನ್ನು ಇಷ್ಟಪಡುವುದಿಲ್ಲ. ನೀವು ಮನಸ್ಸಿನಲ್ಲಿಯೇ ಕೊರಗುತ್ತಿದ್ದಲ್ಲಿ ಖಿನ್ನತೆಗೆ ತುತ್ತಾಗಿದ್ದಲ್ಲಿ, ನಿಮ್ಮ ಜೀವನ ಅತ್ಯಂತ ಹೀನಾಯವಾಗಿದ್ದಲ್ಲಿ, ನಿಮಗೆ ನಿರ್ಧಾರ ತೆಗೆದುಕೊಳ್ಳುವ ಸಂದರ್ಭ ಬಂದಿದೆ ಎಂದರ್ಥ.

ಮಕ್ಕಳಿಗೆ ಭರವಸೆ ಕೊಡಿ

ನೀವು ನಿಮ್ಮ ಗಂಡನ ವರ್ತನೆಯಿಂದ ಬೇಸತ್ತು ಪ್ರತ್ಯೇಕವಾಗಲು ನಿರ್ಧಾರ ಕೈಗೊಂಡಿದ್ದಲ್ಲಿ, ನಿಮ್ಮ ಈ ನಿರ್ಧಾರ ಪರಸ್ಪರ ಒಪ್ಪಿಗೆಯಿಂದ ಆಗಬೇಕು. ಈ ಕುರಿತಂತೆ ಮಕ್ಕಳಿಗೆ ಈಗಿರುವುದಕ್ಕಿಂತ ಒಳ್ಳೆಯ ಜೀವನ ಕೊಡುವುದಾಗಿ, ವಿಚ್ಛೇದನ ನಿಮ್ಮ ಜೀವನಕ್ಕೆ ಯಾವುದೇ ರೀತಿಯಲ್ಲೂ ತೊಂದರೆಯಾಗುವುದಿಲ್ಲ ಎಂಬ ಭರವಸೆ ಕೊಡಬೇಕು.

ಒಂದು ಸಂಗತಿ ನೆನಪಿನಲ್ಲಿರಲಿ. ನಿಮ್ಮ ಸಂಬಂಧ ಮುರಿದುಹೋದ ಬಳಿಕ ಎಷ್ಟು ತೊಂದರೆ ನಿಮಗಾಗುತ್ತೊ, ಅದಕ್ಕೂ ಹೆಚ್ಚಿನ ತೊಂದರೆ ಮಕ್ಕಳಿಗೆ ಆಗತ್ತದೆ. ಒಂದು, ತಮ್ಮ ತಾಯಿಗೆ ವಿಚ್ಛೇದನವಾದ ನೋವು, ಇನ್ನೊಂದೆಡೆ ತಮ್ಮ ತಂದೆಯಿಂದ ದೂರಾದ ದುಃಖ ಅವರಿಗೆ ಇದ್ದೇ ಇರುತ್ತದೆ.

ಮಕ್ಕಳ ಪ್ರಶ್ನೆಗಳಿಗೆ ಸಿದ್ಧರಾಗಿ

ಒಂದು ಸಂಗತಿ ಗಮನದಲ್ಲಿರಲಿ, ತಂದೆ ಅಥವಾ ತಾಯಿಯಿಂದ ಬೇರ್ಪಟ್ಟ ಬಳಿಕ ತಮ್ಮ ಜೀವನದಲ್ಲಿ ಏನೇನು ಬದಲಾವಣೆಗಳಾಗಬಹುದು ಎಂಬ ಚಿಂತೆ ಮಕ್ಕಳನ್ನು ಸದಾ ಕಾಡುತ್ತಿರುತ್ತದೆ. ಹೀಗಾಗಿ ಅವರು ಕೇಳಬಹುದಾದ ಪ್ರಶ್ನೆಗಳಿಗೆ ಉತ್ತರಿಸಲು ಮುಂಚಿನಿಂದಲೇ ಸಿದ್ಧರಾಗಿ. ಮನೆ ಬಿಟ್ಟು ಯಾರು ಹೋಗುತ್ತಾರೆ? ನಮ್ಮ ರಜೆಗಳು ಹೇಗೆ ಕಳೆಯಬಹುದು? ಅಪ್ಪನ ಜಾಬ್ದಾರಿಗಳನ್ನು ಯಾರು ನಿಭಾಯಿಸುತ್ತಾರೆ? ಹೀಗೆ ಅವರ ಪ್ರಶ್ನೆಗಳು ಪುಂಖಾನುಪುಂಖವಾಗಿ ಬರಬಹುದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ