- ಎನ್‌. ಸುಮಲತಾ

ಪತಿಪತ್ನಿಯರ ಸಂಬಂಧ ಇಂದು ಸ್ನೇಹ, ಪ್ರೀತಿ ಮತ್ತು ಸಹಭಾಗಿತ್ವವಾಗಿದೆ. ಅದರಲ್ಲಿ ಪರಸ್ಪರರಿಗೆ ತಿಳಿಹೇಳುವ ಬದಲಾಗಿ ಪರಸ್ಪರರನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಬೇಕಾಗುತ್ತದೆ. ಆಗಲೇ ಒಂದು ಸುಖೀ ದಾಂಪತ್ಯ ಜೀವನವನ್ನು ಕಲ್ಪಿಸಿಕೊಳ್ಳಬಹುದು.

ಪತಿಪತ್ನಿಯರು ಯಾವ ವಯಸ್ಸಿನಲ್ಲಿ ಮದುವೆಯ ಹೊಸ್ತಿಲಿಗೆ ಅಡಿಯಿಡುತ್ತಾರೋ ಅದು ಮಹತ್ವದ ಹಂತವಾಗುತ್ತದೆ. ಆರಂಭದ ಕೆಲವು ವರ್ಷಗಳು ಅವರು ತಮ್ಮಲ್ಲಿ ಬದಲಾವಣೆ ತಂದುಕೊಳ್ಳಬೇಕು. ವೈವಾಹಿಕ ಸಂಬಂಧಗಳ ಕೆಲವು ವಿಶೇಷತೆಗಳನ್ನು ಕೆಳಗೆ ಕೊಡಲಾಗಿದೆ. ಅನ್ನುವ ಅಲ್ಲಗಳೆಯಲಾಗುವುದಿಲ್ಲ.

- ಇಬ್ಬರು ವಿಭಿನ್ನ ವ್ಯಕ್ತಿತ್ವದವರು ದಾಂಪತ್ಯ ಸೂತ್ರದಲ್ಲಿ ಬಂಧಿಸಲ್ಪಡುತ್ತಾರೆ. ಇಬ್ಬರೂ ತಮ್ಮ ಹಿಂದಿನದನ್ನು ಮರೆತು ಪರಸ್ಪರ ಹೊಂದಿಕೊಳ್ಳಬೇಕು. ಕೆಲವನ್ನು ಬಿಡಬೇಕಾಗುತ್ತದೆ, ಕೆಲವನ್ನು ತಮ್ಮದಾಗಿಸಿಕೊಳ್ಳಬೇಕು.

- ಪತಿ ಪತ್ನಿ ಇಬ್ಬರೂ ವಿಲಕ್ಷಣ ಹಾಗೂ ಅದ್ಭುತ ವ್ಯಕ್ತಿತ್ವ ಉಳ್ಳವರು. ಅವರಲ್ಲಿ ಅಗತ್ಯವಾದ ಬದಲಾವಣೆಗಳು ಮಂದಗತಿಯಲ್ಲಿ ನಡೆಯುತ್ತವೆ. ಇಬ್ಬರಲ್ಲೂ ತೀವ್ರಗತಿಯಲ್ಲಿ ಬದಲಾವಣೆ ಅಪೇಕ್ಷಿಸುವುದು ತಪ್ಪು.

- ಇಬ್ಬರಲ್ಲೂ ಕೆಲಸ ಮಾಡುವ ವಿಧಾನ ಹಾಗೂ ದಿನಚರಿ ಭಿನ್ನವಾಗಿರುವುದರಿಂದ ಅವರಿಗೆ ಹೊಸ ಪರಿಸರಕ್ಕೆ ಹೊಂದಿಕೊಳ್ಳಲು ಸ್ವಲ್ಪ ಸಮಯ ಕೊಡಬೇಕು. ಅದು ಅತ್ತೆ ಮನೆಯವರಿಗೆ ಪರೀಕ್ಷೆಯ ಸಮಯ. ಧೈರ್ಯವಾಗಿ ಈ ಒರೆಗಲ್ಲಿಗೆ ತಕ್ಕಂತೆ ನಡೆದುಕೊಂಡರೆ ಸಂಬಂಧ ಸಹಜರೂಪದಲ್ಲಿ ವಿಕಸಿತವಾಗುತ್ತದೆ ಮತ್ತು ಎಲ್ಲರಿಗೂ ಸಂಬಂಧಗಳಲ್ಲಿ ಸಂತೋಷ ಮತ್ತು ನೆಮ್ಮದಿ ಸಿಗುತ್ತದೆ.

- ನೂತನ ದಾಂಪತ್ಯದಲ್ಲಿ ಬೇರೆ ಬೇರೆ ಕೌಟುಂಬಿಕ ವಾತಾರಣ, ಸಂಸ್ಕಾರಗಳು ಮತ್ತು ಪರಂಪರೆಗಳ ಸಂಸ್ಕೃತಿಯಲ್ಲಿ ಬೆಳೆದಿರುತ್ತಾರೆ. ಆಗ ಪತಿಪತ್ನಿಯರಿಗೆ ಅಗತ್ಯವಾದ ಬದಲಾವಣೆಗಳನ್ನು ಸ್ವೀಕರಿಸುವುದು ಕಷ್ಟವಾಗುತ್ತದೆ. ಜವಾಬ್ದಾರಿ ಮತ್ತು ತಿಳಿವಳಿಕೆಯಿಂದ ನಿಮ್ಮ ವ್ಯಕ್ತಿತ್ವದಲ್ಲಿ ಈ ಬದಲಾವಣೆ ತಂದುಕೊಳ್ಳಿ.

ತಿಳಿವಳಿಕೆ ಅಗತ್ಯ

ನವ ವಧು ಅತ್ತೆ ಮನೆಗೆ ವ್ರವೇಶಿಸುತ್ತಿದ್ದಂತೆ ಎಲ್ಲರೂ ಅವಳಿಗೆ ಅವಳ ಜಾಬ್ದಾರಿಯ ಬಗ್ಗೆ ಹೇಳತೊಡಗುತ್ತಾರೆ. ಆದರೆ ಅವರು ಹೊಸ ಸೊಸೆಯ ಹಕ್ಕುಗಳ ಬಗ್ಗೆ ಜಾಗೃತರಾಗುವ ಅಗತ್ಯವಿದೆ. ಪತಿಪತ್ನಿಯರ ಹಕ್ಕುಗಳ ಸಂರಕ್ಷಣೆಯಂತೂ ಆಗಲೇಬೇಕು. ಏಕೆಂದರೆ ಅವರಿಗೆ ಸ್ಪೇಸ್‌ ಮತ್ತು ಸ್ವಾತಂತ್ರ್ಯ ಸಿಗಬೇಕು. ಪತ್ನಿಯನ್ನು ದಾಸಿ ಅಥವಾ ಗುಲಾಮಳೆಂದು ತಿಳಿಯುತ್ತಿದ್ದ ಕಾಲ ಹೋಯಿತು. ಇಂದಿನ ಪತ್ನಿಯರು ಶಿಕ್ಷಣ, ಪರಿಪಕ್ವತೆ ಮತ್ತು ಸಕಾರಾತ್ಮಕ ಗುಣಗಳಿಂದ ಪರಿಪೂರ್ಣರಾಗಿದ್ದಾರೆ. ಅವಳನ್ನು ಅತ್ತೆ ಮನೆಯವರು ಯಾವುದೇ ರೀತಿಯಲ್ಲೂ ಹಗುರವಾಗಿ ಕಾಣಲು ಸಾಧ್ಯವಿಲ್ಲ. ಇಂದಿನ ಆಧುನಿಕ ಸೊಸೆಯರು ಸುಶಿಕ್ಷಿತರೂ ಜಾಗರೂಕರೂ ಆಗಿದ್ದಾರೆ.

ಹಾವು ಸಾಯಬಾರದು, ಕೋಲೂ ಮುರಿಯಬಾರದು ಎನ್ನುವುದರಲ್ಲಿ ವ್ಯವಹಾರ ಕುಶಲತೆ ಇದೆ. ಯಾರ ಹಕ್ಕನ್ನು ಯಾರೂ ಕಿತ್ತುಕೊಳ್ಳಲಾಗುವುದಿಲ್ಲ. ಪತ್ನಿ ತನ್ನ ಹಕ್ಕುಗಳ ಸಂರಕ್ಷಣೆಯನ್ನು ತಿಳಿವಳಿಕೆಯಿಂದ ಮಾಡುತ್ತಾಳೆ. ಅವಳ ಕೆಲವು ಹಕ್ಕುಗಳು ಹೀಗಿವೆ :

- ಮದುವೆಯ ನಂತರ ಅವಳು ತನಗಿಷ್ಟಾದ ಉಡುಪನ್ನು ತೊಡಬಹುದು. ನೂತನ ಸೊಸೆಗೆ ಅದರ ಬಗ್ಗೆ ಸ್ವಾತಂತ್ರ್ಯ ಕೊಡುವ ಅತ್ತೆಯನ್ನು ಬಹಳ ಒಳ್ಳೆಯವರೆಂದು ಹೇಳಲಾಗುತ್ತದೆ.

- ಲತಾ ಸ್ಮಾರ್ಟ್‌ ಹುಡುಗಿ. ಅವಳ ಗಂಡನ ಬಳಿ ಅವಳಿಗೆ ಇಷ್ಟವಾಗುವ ಡ್ರೆಸ್‌ ಇರಲಿಲ್ಲ. ಹೀಗಾಗಿ ಲತಾ ಉಪಾಯದಿಂದ ಅದಕ್ಕೊಂದು ಪರಿಹಾರ ಹುಡುಕಿದಳು. ಒಂದು ದಿನ ಅವಳು ಶಾಪಿಂಗ್‌ಗೆ ಹೋದಾಗ, ಗಂಡನಿಗಾಗಿ ತನಗಿಷ್ಟವಾದ ಟೀ ಶರ್ಟ್‌  ಮತ್ತು ಜೀನ್ಸ್ ಪ್ಯಾಂಟ್‌ ಖರೀದಿಸಿದಳು. ಅತ್ತೆಗೂ ಸಹ ಒಂದು ಸೀರೆ ತಂದಳು. ಈ ವ್ಯವಹಾರ ಕುಶಲತೆಯ ಪರಿಣಾಮದಿಂದ ಅತ್ತೆಗೆ ಆ ಸೀರೆ ಬಹಳ ಇಷ್ಟವಾಯಿತು. ಗಂಡನಿಗೂ ಅವಳು ತಂದ ಶರ್ಟ್‌, ಪ್ಯಾಂಟ್‌ ಇಷ್ಟವಾಯಿತು. ಅತ್ತೆ ಒಳ್ಳೆಯ ಮೂಡ್‌ನಲ್ಲಿದ್ದರು. ಅವರು ಲತಾಗೆ, ``ಮುಂದಿನ ಸಾರಿ ಶಾಪಿಂಗ್‌ಗೆ ಹೋದಾಗ ನಿನಗಿಷ್ಟವಾಗುವ ಡ್ರೆಸ್‌ಗಳು, ಸೀರೆಗಳನ್ನು ತಗೋ. ನಿನಗೆ ಎರಡೂ ರೀತಿಯ ಡ್ರೆಸ್‌ಗಳು ಒಪ್ಪುತ್ತವೆ.  ದುಡ್ಡು ನಾನು ಕೊಡ್ತೀನಿ,'' ಎಂದರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ