- ಜಿ.ಕೆ. ತಾರಾ

ನಿಮ್ಮ ಒಳ್ಳೆಯ ವರ್ತನೆ ಮತ್ತು ಪ್ರೀತಿಯಿಂದ ಎಂಥವರ ಹೃದಯವನ್ನಾದರೂ ಗೆಲ್ಲಬಹುದು. ಅವರನ್ನು ನಿಮಗೆ ತಕ್ಕಂತೆ ಪರಿವರ್ತಿಸಿಕೊಳ್ಳಬಹುದು. ಅದಕ್ಕಾಗಿ ನಿಮ್ಮನ್ನು ನೀವು ಅವಲೋಕಿಸಿಕೊಳ್ಳಬೇಕು. ನನ್ನಲ್ಲಿ ಯಾವುದೇ ಲೋಪ ಇಲ್ಲ ತಾನೇ? ಚಿಕ್ಕಪುಟ್ಟ ಮಾತುಗಳಿಗೆ ನಾನು ಜಗಳವಾಡುತ್ತೇನಾ? ಈ ಸಂಗತಿಗಳ ಬಗ್ಗೆ ನೀವು ಗಮನಹರಿಸಿದರೆ ಜಗಳ, ಕೋಪ, ಮನಸ್ತಾಪ ಎಲ್ಲದಕ್ಕೂ ಪೂರ್ಣ ವಿರಾಮ ಹಾಕಬಹುದು.

ಅಂದಹಾಗೆ ಇದು ಎಲ್ಲರ ಕಥೆಯೂ ಹೌದು. ಎಷ್ಟೇ ಓದಿದವರಾಗಿದ್ದರೂ ಕೋಪದ ಮೇಲೆ ನಿಯಂತ್ರಣ ಹೇರಲು ಮಾತ್ರ ಆಗುವುದಿಲ್ಲ. ಗೊತ್ತಿದ್ದೊ, ಗೊತ್ತಿಲ್ಲದೆಯೋ ನಾಲಿಗೆ ತನ್ನ ಹಿಡಿತ ಕಳೆದುಕೊಳ್ಳುತ್ತದೆ. ಎದುರಿಗಿನ ವ್ಯಕ್ತಿಯ ಬಗ್ಗೆ ಮನಸ್ಸಿನಲ್ಲಿ ಯಾವುದೇ ದ್ವೇಷ ಅಸೂಯೆ ಇಲ್ಲ, ಆದರೆ ಬಾಯಲ್ಲಿ ಹೃದಯವನ್ನು ತಲ್ಲಣಗೊಳಿಸುವಂತಹ ಮಾತುಗಳು ಏಕೆ ಬರುತ್ತವೆ? ಇಂಥವೇ ಮಾತುಗಳು ಸಂಬಂಧದಲ್ಲಿ ಬಿರುಕು ಮೂಡಿಸುತ್ತವೆ. ಆ ಸಂಬಂಧವನ್ನು ಪುನಃ ಜೋಡಿಸುವುದು ಕಷ್ಟ.

ನಮ್ಮ ನೆರೆಮನೆಯ ನವವಧು ರಾಗಿಣಿ ಕೆಲವು ದಿನಗಳಿಂದ ಗಂಭೀರವಾಗಿದ್ದುದನ್ನು ಕಂಡೆ. ಸದಾ ನಗು, ಚಂಚಲ ಸ್ವಭಾವದ ಆಕೆ ಗಂಭೀರವಾಗಿರುವುದನ್ನು ನೋಡಲಾಗಲಿಲ್ಲ. ಅವಳ ಮನವೊಲಿಸಿ ಕೇಳಿದಾಗ ಗಂಡನೊಂದಿಗೆ ಮನಸ್ತಾಪ ಉಂಟಾಗಿ ಮಾತು ನಿಂತಿದೆ ಎಂದು ಆಕೆ ಹೇಳಿದಳು. `ಪ್ರೀತಿಯೇ ದೈವ, ಪ್ರೀತಿಯೇ ಎಲ್ಲ,' ಎಂದುಕೊಂಡು ಮನೆಯವರನ್ನು ಬಿಟ್ಟು ಮದುವೆ ಬಂಧನಕ್ಕೊಳಗಾದ ಈ ಜೋಡಿ 3 ತಿಂಗಳಲ್ಲಿಯೇ ಮದುವೆ ಮುರಿದುಕೊಳ್ಳುವ ಸ್ಥಿತಿಗೆ ಬಂದಿದ್ದು ಆಶ್ಚರ್ಯವನ್ನುಂಟು ಮಾಡಿತು. ಅವರ ಅಪ್ಪಟ ಪ್ರೀತಿ ಈ ರೀತಿ ದುರಂತ ಸ್ಥಿತಿಗೆ ತಲುಪಬಾರದೆಂದು ನಾನು ಅವರಿಬ್ಬರನ್ನು ಮನೆ ಸಮೀಪವೇ ಇದ್ದ ಕೌನ್ಸೆಲರ್‌ ಒಬ್ಪರ ಬಳಿ ಕರೆದುಕೊಂಡು ಹೋದೆ.

ವೈವಾಹಿಕ ಸಲಹೆಗಾರ ರಾಜೇಂದ್ರ ಅವರಿಬ್ಬರನ್ನು ಕೂರಿಸಿಕೊಂಡು ಬಹಳಷ್ಟು ಸಂಗತಿಗಳ ಬಗ್ಗೆ ಚರ್ಚಿಸಿದಾಗ, ಅವರಿಗೆ ತಮ್ಮ ತಪ್ಪಿನ ಅರಿವಾಯಿತು. ಈಗ ಅವರು ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ.

ಯೋಚಿಸಿ ಮಾತನಾಡಿ

ರಾಜೇಂದ್ರ ಹೀಗೆ ಹೇಳುತ್ತಾರೆ, ``ಬಿಲ್ಲಿನಿಂದ ಹೊರಟ ಬಾಣ ಬಾಯಿಯಿಂದ ಹೊರಟ ಮಾತು ಮತ್ತೊಮ್ಮೆ ವಾಪಸ್‌ ಬರದು. ಹೀಗಾಗಿ ಏನೇ ಮಾತಾಡಿ, ಯೋಚಿಸಿ ಮಾತನಾಡಿ.``ಗಂಡ-ಹೆಂಡತಿ ನಡುವೆ ನಾನು ನೀನು ಎಂದು ಕಿತ್ತಾಡುವುದು ಅಸಾಮಾನ್ಯ ಸಂಗತಿಯೇನಲ್ಲ. ಅವರ ನಡುವೆ ಅಷ್ಟಿಷ್ಟು ಮನಸ್ತಾಪ, ಜಗಳ ಸಾಮಾನ್ಯ. ಅವರ ಪ್ರೀತಿಯನ್ನು ಮತ್ತಷ್ಟು ಗಟ್ಟಿಗೊಳಿಸಲು ಒಮ್ಮೊಮ್ಮೆ ಅಷ್ಟಿಷ್ಟು ಮುನಿಸು ಕೋಪ ಅಗತ್ಯ. ಕೋಪ, ಮುನಿಸು ಒಂದು ಹಂತದತನಕ ಸರಿ, ಅದು ಮೇರೆ ಮೀರಿದರೆ ವಿವಾಹ ಬಂಧನವನ್ನೇ ಅಲ್ಲಾಡಿಸಿಬಿಡುತ್ತದೆ.

''ಜಗಳಗಳಾಗುವುದು ಏಕೆ? ಇದಕ್ಕೆ ಮುಖ್ಯ ಕಾರಣ ಏನು? ಒಮ್ಮೊಮ್ಮೆ ಜಗಳಗಳಾಗಲು ಗಂಡ ಕಾರಣನೊ, ಹೆಂಡತಿ ಕಾರಣವೋ ಒಂದೂ ಗೊತ್ತಾಗುವುದಿಲ್ಲ. ತನ್ನ ಯಾವ ಮಾತು ಮುನಿಸಿಕೊಳ್ಳಲು ಕಾರಣವಾಯಿತು ಎಂದು ಗಂಡನಿಗೆ ಹೊಳೆಯುವುದೇ ಇಲ್ಲ. ಅದೇ ರೀತಿ ತನ್ನ ಯಾವ ಮಾತಿಗೆ ಗಂಡ ಕೋಪಿಸಿಕೊಂಡರು ಎಂದು ಹೆಂಡತಿಯ ನೆನಪಿಗೆ ಬರುವುದೇ ಇಲ್ಲ.

ಕೆಲವೊಂದು ಮಾತುಗಳಿಗೆ ಮೌನವಹಿಸುವುದು, ಗಂಡಹೆಂಡತಿ ಇಬ್ಬರಿಗೂ ಒಳ್ಳೆಯದು. ನೀವಾಡುವ ಒಂದು ಚುಚ್ಚುಮಾತು ಜೀವನವಿಡೀ ನೆನಪು ಉಳಿಯುಂತೆ ಮಾಡಬಹುದು. ಸಂಬಂಧದಲ್ಲಿ ನಿರಾಸಕ್ತಿ ಉಂಟಾಗದಿರಲು ಕೆಲವು ಸಂಗತಿಗಳಿಂದ ದೂರ ಉಳಿಯುವುದು ಹಾಗೂ ಕೆಲವು ಸಂಗತಿಗಳ ಬಗ್ಗ ಎಚ್ಚರ ವಹಿಸುವುದು ಅವಶ್ಯಕ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ