ನನ್ನ ಅಕ್ಕ, ಭಾವನಿಗಿಂತ ಮುಂಚೆಯೇ ಆಫೀಸ್‌ಗೆ ಹೊರಡುತ್ತಾಳೆ. ಹೀಗಾಗಿ ಮುಂಜಾನೆಯ ಉಪಾಹಾರದ ಸಿದ್ಧತೆ ಮಾಡುವುದು ಭಾವನ ಜವಾಬ್ದಾರಿ. ಅದೊಂದು ದಿನ ಅಡುಗೆಮನೆಯಲ್ಲಿ ಯಾವುದೋ ವಸ್ತು ಖಾಲಿಯಾಗಿತ್ತು. ಅದನ್ನು ತರಲೆಂದು ಅವರು ಕೆಳಗಿಳಿದು ಬಂದರು. ಅವರ ಕೈಗೆ ಒಂದಿಷ್ಟು ಹಿಟ್ಟು ಮೆತ್ತಿಕೊಂಡಿತ್ತು. ಅದನ್ನು ಕಂಡು ಪಕ್ಕದ ಮನೆಯವರು ಕೇಳಿಯೇ ಬಿಟ್ಟರು, ``ಏನ್ರಿ, ನೀವೇ ಚಪಾತಿ ಮಾಡ್ತಿದೀರಾ?''

ಅವರು ಮಾತನಾಡಿದ ಧಾಟಿ ಹೇಗಿತ್ತೆಂದರೆ, ಭಾವ ಯಾವುದೊ ದೊಡ್ಡ ತಪ್ಪು ಮಾಡಿದ್ದಾರೆ ಎನ್ನುವಂತ್ತಿತ್ತು. ಅಲ್ಲಿಯೇ ಅನೇಕ ಮಹಿಳೆಯರು ಇದ್ದರು. ಎಲ್ಲರಿಗೂ ಮಾತನಾಡಲು ಒಂದು ವಿಷಯ ದೊರೆತಂತಾಗಿತ್ತು. ಅದನ್ನು ಕಂಡು ಭಾವ ಕೂಡ ದ್ವಂದ್ವದಲ್ಲಿ ಸಿಲುಕಿದರು. ತಾನೇನಾದರೂ ತಪ್ಪು ಮಾಡುತ್ತಿದ್ದೀನಾ ಎಂದು ಅವರಿಗೆ ಅನಿಸತೊಡಗಿತು. ಅವರು ಮದುವೆಗೂ ಮುಂಚೆಯೇ ತಮ್ಮ ಕೆಲಸಗಳನ್ನು ತಾವೇ ಮಾಡಿಕೊಳ್ಳುತ್ತಿದ್ದರು. ಮದುವೆಯ ಬಳಿಕ ಅವರು ಅದನ್ನು ಮುಂದುರಿಸಿದ್ದರು.

ಅಕ್ಕಪಕ್ಕದ ಕೆಲವು ಪುರುಷರು ಸೇರಿಕೊಂಡು, ``ಹೆಂಗಸರು ಮಾಡಬೇಕಾದ ಕೆಲಸಗಳನ್ನು ನೀವೇಕೆ ಮಾಡುತ್ತಿರುವಿರಿ? ನಿಮ್ಮನ್ನು ನೋಡಿ ನಮ್ಮ ಮನೆಯವರು ಕೂಡ ನಮಗೆ ಕೆಲಸ ಮಾಡಿ ಎಂದು ದುಂಬಾಲು ಬಿದ್ದಿದ್ದಾರೆ. ಅಂದಹಾಗೆ, ಮತ್ತೊಂದು ವಿಷಯ. ನಿಮ್ಮಿಬ್ಬರ ನಡುವೆ ಸಂಬಂಧ ಸರಿಯಿಲ್ಲ ಎಂಬ ಬಗ್ಗೆ ನಮಗೆ ಸಂದೇಹ ಬರಲು ಶುರುವಾಗಿದೆ.''

ಕೆಲವು ಮಹಿಳೆಯರು ಸೇರಿಕೊಂಡು ಅಕ್ಕನಿಗೆ ಬುದ್ಧಿ ಸಹ ಹೇಳಿದರಂತೆ, ``ಗಂಡಸರ ಕೈಯಲ್ಲಿ ಹೆಂಗಸರು ಮಾಡಬೇಕಾದ ಕೆಲಸಗಳನ್ನು ಮಾಡಿಸಬಾರದು. ಅವರಿಗೆ ಗೌರವ ಕೊಡಲು ಕಲಿತುಕೊಳ್ಳಿ.''

ಅಕ್ಕ ಭಾವ ಇಬ್ಬರೂ ಸೇರಿ ಅವರಿಗೆ ತಿಳಿಸಿ ಹೇಳಲು ಪ್ರಯತ್ನಿಸಿದರು. ಗಂಡಹೆಂಡತಿ ಸೇರಿ ಕೆಲಸಗಳನ್ನು ಮಾಡಿದರೆ ತಪ್ಪೇನು? ಎಂದು ಪ್ರಶ್ನಿಸಿ ಅವರ ಮುಂದೆ ನಗೆಪಾಟಲಿಗೆ ಗುರಿಯಾದರು. ಅಕ್ಕನನ್ನು ಅವರು ಸಂಪಾದನೆ ಇಲ್ಲದ ಹೆಂಗಸು ಎಂದು ಬೈದದ್ದು ಉಂಟು.

ಯೋಚನೆ ಬದಲಾಗಬೇಕು

ಅಂದಹಾಗೆ, ಈ ಯೋಚನೆಯ ಹಿಂದೆ ಹಲವು ಕಾರಣಗಳಿವೆ. ಲಿಂಗ ಆಧಾರಿತ ಕೆಲಸಗಳ ವಿಭಜನೆ, ಮಹಿಳೆಯರು ಮಾಡುವ ಕೆಲಸಗಳನ್ನು ಕೀಳುದರ್ಜೆಯ ಕೆಲಸಗಳೆಂದು ಭಾವಿಸುವುದು ಇತ್ಯಾದಿ.... ಬದಲಾಗುತ್ತಿರುವ ಸನ್ನಿವೇಶದಲ್ಲಿ ಇಂಥ ಯೋಚನೆಯ ಧಾಟಿಯನ್ನು ಬದಲಿಸಿಕೊಳ್ಳದೇ ಇರುವುದು ಸರಿಯಲ್ಲ.

ಹೆಂಡತಿ ಉದ್ಯೋಗಸ್ಥೆಯಾಗಿದ್ದುಕೊಂಡು ಗಂಡನ ಕೆಲಸಕಾರ್ಯಗಳಲ್ಲಿ ನೆರವು ನೀಡಬಹುದು. ಆದರೆ ಗಂಡನಾದವನು ಹೆಂಡತಿಗೆ ನೆರವು ನೀಡಿದರೆ ಅದನ್ನು ತಪ್ಪು ಎಂದು ಭಾವಿಸಲಾಗುತ್ತದೆ. ಮನೆಯ ಸಂಪೂರ್ಣ ಜವಾಬ್ದಾರಿಗಳನ್ನು ಹೆಂಡತಿಯ ಹೆಗಲಿಗೆ ಹೊರಿಸುವುದು ಯಾವ ನ್ಯಾಯ?

ಜಗತ್ತು ಬದಲಾಗುತ್ತಿದೆ. ಈಗ ಮನೆಗಳಲ್ಲಿ ಗಂಡಂದಿರ ಹೊಣೆಗಾರಿಕೆಯೂ ಹೆಚ್ಚುತ್ತಿದೆ. ನೀವು ನಿಮ್ಮ ಗಂಡನಿಗೆ ಈ ಬಗ್ಗೆ ಪ್ರೇರೇಪಿಸಿ. ಅದರಿಂದಾಗಿ ನಿಮ್ಮ ಕೆಲಸದ ಒತ್ತಡ ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತದೆ. ನೀವು ನಿಮ್ಮ ಗಂಡನಿಂದ ಕೆಲಸ ಮಾಡಿಸಲು ಈ ವಿಧಾನ ಅನುಸರಿಸಿ:

ವಿವಾದದ ವಿಷಯ ಮಾಡಬೇಡಿ : ಗಂಡ ಮಾಡುವ ಕೆಲಸ ನಿಮಗೆ ವಿಚಿತ್ರ ಎನಿಸಬಹುದು. ಹೀಗಾಗಿ ಅದನ್ನು ವಿವಾದದ ವಿಷಯವಾಗಿಸಬೇಡಿ. ಮೊದಲು ಅವರಿಗೆ ಕೆಲಸ ಮಾಡಲು ರೂಢಿ ಮಾಡಿಸಿ. ಕ್ರಮೇಣ ಆ ಕೆಲಸದಲ್ಲಿ ಪರಿಪಕ್ವತೆ ಬರುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ