ಈ ಹರೆಯವೇ ಹೀಗೇ, ಯಾವುದೂ ಸ್ಪಷ್ಟವಿಲ್ಲ. ಏರಿಳಿತಗಳು ಅತಿ ಹೆಚ್ಚು, ಒಮ್ಮೆ ಇದ್ದಂತೆ ಮತ್ತೊಮ್ಮೆ ಇಲ್ಲ. ಎಲ್ಲ ವಿಪರೀತಗಳೇ, ಯಾವುದನ್ನೂ ನಂಬುವಂತಿಲ್ಲ.... ಯಾರೂ ಬೇಡಾ.... ಅವರಾಯಿತು, ಅವರ ಕನಸುಗಳಾಯಿತು. ಮೊಬೈಲ್ ಆಯಿತು, ಫೇಸ್ ಬುಕ್.... ಆಯಿತು,' ಅಂತಾರೆ ಹಿರಿಯರು.

ಆದರೆ ಈ ಕಿರಿಯರೇನಂತಾರೆ ಕೇಳಿ, `ಈ ದೊಡ್ಡವರೊಡನೆ ಮಾತುಕತೆಯಂತೂ ಬೋರೋ ಬೋರು! ಹೇಳಿದ್ದನ್ನೇ ಹೇಳ್ತಾರೆ, ಬರೀ ಉಪದೇಶ ನೀಡ್ತಾರೆ. 'ಇದೇಕೆ ಹೀಗೆ? ಅವರೇ ಕಾರಣರೇ ಅಥವಾ ಹಿರಿಯರೂ ಕಾರಣರೇ ಅಥವಾ ಮತ್ತೇನೆಂದು ಅವಲೋಕಿಸಿದಾಗ ದೊಡ್ಡವರ ನಡತೆಯ ವಿಪರ್ಯಾಸಗಳೂ ಹಲವು ಬಾರಿ ಕಾರಣವಾಗಬಹುದು. ಸಾಮಾನ್ಯವಾಗಿ ಹದಿನೆಂಟರ ವಯಸ್ಸಿನವರು ಜೀವನವನ್ನು ಎದುರಿಸಲು ಸಿದ್ಧರಾಗಿರಬೇಕು. ಅವರು ಎಲ್ಲರೊಡನೆ ಸುಲಲಿತವಾಗಿ ಮಾತನಾಡುವ ಚಾಕಚಾಕತ್ಯೆಯನ್ನು ಬೆಳೆಸಿಕೊಳ್ಳಬೇಕು. ತಮ್ಮ ಅಧ್ಯಾಪಕರೊಡನೆ, ಬ್ಯಾಂಕಿನ ಸಿಬ್ಬಂದಿಯೊಂದಿಗೆ, ಅಂಗಡಿಯಾತನೊಂದಿಗೆ, ಅನಾರೋಗ್ಯವಾದರೆ ವೈದ್ಯರೊಂದಿಗೆ ಈ ರೀತಿ ಎಲ್ಲರೊಡನೆ ವ್ಯವಹರಿಸುವ, ಮಾತನಾಡುವ ಜಾಣ್ಮೆಯನ್ನು ಬೆಳೆಸಿಕೊಳ್ಳಬೇಕು. ಈ ವಿಷಯ ಹಿರಿಯರಿಗೂ ಗೊತ್ತು.

ಆದರೆ ನಾವು ಮಕ್ಕಳಿಗೆ ಹೇಳುವುದು ಅಪರಿಚಿತರೊಂದಿಗೆ ಮಾತನಾಡಬೇಡ, ಯಾರೊಂದಿಗೂ ಬೆರೆಯಬೇಡ, ಈ ರೀತಿ ಎಲ್ಲಕ್ಕೂ ಬೇಡ ಬೇಡಾ ಎನ್ನುವ ಬದಲು, ದಿನನಿತ್ಯ ಹೊರಗೆ ಓಡಾಡುವ ಮಕ್ಕಳಿಗೆ ಯಾರೊಡನೆ, ಯಾವ ರೀತಿ ವ್ಯವಹರಿಸಬೇಕು ಎನ್ನುವುದನ್ನು ಅರ್ಥ ಮಾಡಿಸುವುದು ಒಳಿತು.

ಹದಿನೆಂಟರ ನಂತರ ಊರು ಬಿಡಬೇಕಾಗುತ್ತದೆ, ದೇಶದಿಂದ ಹೊರಗೂ ಹೋಗಬೇಕಾಗಬಹುದು. ಆದ್ದರಿಂದ ಅವರು ವಾಸಿಸುವ ಪರಿಸರ, ಊರು ಎಲ್ಲವನ್ನೂ ಪರಿಚಯ ಮಾಡಿಕೊಳ್ಳಬೇಕಾಗುತ್ತದೆ. ಆದರೆ ಸದಾ ಎಲ್ಲಕ್ಕೂ ಅವರ ನೆರಳಿನಂತೆ ಹೊರಗೆ ಹೋಗುವಾಗ, ಊರಿನಲ್ಲೂ ಬೈಸಿಕಲ್ಲಿನಲ್ಲೊ ಅಥವಾ ಕಾರಿನಲ್ಲೋ ಹೋಗುವಾಗ ಹಿಂದೆ ಹಿಂದೆ ಹೋಗುವ ಅಥವಾ ಜೊತೆಗೇ ಇದ್ದು ಅವರನ್ನು ಪರಾವಲಂಬಿಗಳನ್ನಾಗಿ ಮಾಡುವ ಅಗತ್ಯವಿಲ್ಲ. ಅವರು ತಮ್ಮ ದಾರಿಯನ್ನು ತಾವೇ ಹುಡುಕಿಕೊಳ್ಳುವಷ್ಟು ಬುದ್ಧಿವಂತರಾಗಲು ಬಿಡಬೇಕು. ಹದಿಹರೆಯದರು ಹೊರಗಿನ ಕೆಲಸವಲ್ಲದೆ ಮನೆಯ ಕೆಲಸಗಳಲ್ಲೂ ಸಹಕಾರ ನೀಡುವಂತೆ ನೋಡಿಕೊಳ್ಳಬೇಕು. ಮನೆಯ ಕೆಲಸವೆಂದರೆ ಪೂರ್ಣವಾಗಿ ಅಡುಗೆ ಮಾಡದಿದ್ದರೂ, ತಮ್ಮ ಕೆಲಸಗಳನ್ನು ತಾವೇ ಮಾಡಿಕೊಳ್ಳುವುದು, ಮನೆಯಲ್ಲಿ ಇತರರಿಗೆ ಗೌರವ ನೀಡುವುದು, ಜೊತೆಗೆ ಹಂಚಿ ತಿನ್ನುವುದನ್ನು ಕಲಿಸಬೇಕು. ಈಗಂತೂ ಮಕ್ಕಳು ವಿದೇಶಕ್ಕೆ ಓದಲು ಹೋಗುವುದು ಅಪರೂಪವೇನಲ್ಲ, ಹೀಗಿರುವಾಗ ಊರು ಮತ್ತು ದೇಶದಿಂದ ಹೊರಗಿದ್ದಾಗ ಬಿಸಿ ಬಿಸಿಯಾಗಿ ಅಡುಗೆ ಮಾಡಿ ಬಡಿಸಲು ತಾಯಿ ಇರುವುದಿಲ್ಲ. ಆದ್ದರಿಂದ ಸ್ವಲ್ಪ ಮಟ್ಟಿಗೆ ಗಂಡು ಮಕ್ಕಳಾಗಲೀ ಅಥವಾ ಹೆಣ್ಣುಮಕ್ಕಳಾಗಲೀ ಮನೆಯ ಕೆಲಸವನ್ನು ಅರಿತಿದ್ದರೆ ಅವರಿಗೇ ಸುಲಭ. ತಮ್ಮ ಸಮಸ್ಯೆಗಳನ್ನು ತಾವೇ ಪರಿಹರಿಸಿಕೊಳ್ಳಲು ಅನುವು ಮಾಡಿಕೊಡಬೇಕು. ಎಲ್ಲಕ್ಕೂ ಬೇರೆಯವವರು ಮೂಗು ತೂರಿಸುವುದು ಅವರಿಗೂ ಇಷ್ಟವಾಗದು. ಅಂತೆಯೇ ಅವರ ಸಾಮರ್ಥ್ಯಕ್ಕೂ ಅದು ಸವಾಲಾಗಬಹುದು ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕಾಗುತ್ತದೆ, ಆಗ ಮುಂದೆ ಬರುವ ಸಮಸ್ಯೆಗಳನ್ನು ಎದುರಿಸುವುದು ಕಷ್ಟವಾಗುವುದಿಲ್ಲ.

ಈಗಂತೂ ಇರುವುದು ಒಂದೋ ಎರಡೋ ಮಕ್ಕಳಾದ್ದರಿಂದ ಅವರ ಬಾಯಿಯಿಂದ ಬರುವ ಮೊದಲೇ ಎಲ್ಲ ಸಿದ್ಧವಾಗಿರುತ್ತದೆ. ಯಾರಿಗಾದರೂ ಅಷ್ಟೆ, ಕೇಳಿದ್ದನ್ನೆಲ್ಲಾ ಕೊಟ್ಟಾಗ ಅವುಗಳ ಬೆಲೆಯೇ ಇರದು. ಆದ್ದರಿಂದ ಅವರಿಗೆ ಆಗಾಗ `ಇಲ್ಲ, ಸಿಗುವುದಿಲ್ಲ' ಎನ್ನುವ ಪದಗಳ ಪರಿಚಯವನ್ನೂ ಮಾಡಿಸಬೇಕು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ