ಮಕ್ಕಳಿಗೆ ಸ್ವಚ್ಛತೆ ಹಾಗೂ ಆರೋಗ್ಯಕ್ಕೆ ಸಂಬಂಧಪಟ್ಟ ಅಭ್ಯಾಸಗಳ ಬಗ್ಗೆ ತಿಳಿಸಿ ಹೇಳಬೇಕು. ಸ್ವಚ್ಛವಾಗಿರುವುದರಿಂದ ಅವರು ಆರೋಗ್ಯದಿಂದಿರುವುದಷ್ಟೇ ಅಲ್ಲ, ಆಕರ್ಷಕವಾಗಿ ಕಾಣುತ್ತಾರೆ. ಜೊತೆಗೆ ಅವರ ಆತ್ಮವಿಶ್ವಾಸ ಹೆಚ್ಚುತ್ತದೆ. ಬಾಲ್ಯದ ಅಭ್ಯಾಸಗಳು ಹಾಗೆಯೇ ಮುಂದುವರಿಯುತ್ತವೆ. ಹೀಗಾಗಿ ಅವರಿಗೆ ಬಾಲ್ಯದಿಂದಲೇ ನೈರ್ಮಲ್ಯದಿಂದಿರಲು ಕಲಿಸಿ.

ಬಾಯಿಯ ಸ್ವಚ್ಛತೆ

ಇದು ಪ್ರತಿಯೊಂದು ಮಗುವಿನ ದಿನಚರಿಯ ಒಂದು ಭಾಗವಾಗಬೇಕು. ಹೀಗೆ ಮಾಡುವುದರಿಂದ ಹಲ್ಲು ಹುಳುಕಾಗುವ, ಬಾಯಿ ದುರ್ವಾಸನೆ ಹಾಗೂ ಹೃದಯದ ಕಾಯಿಲೆಗಳಿಂದ ದೂರ ಇರಲು ಸಹಾಯವಾಗುತ್ತದೆ.

ಏನು ಮಾಡಬೇಕು?

ದಿನಕ್ಕೆ ಎರಡು ಸಲ ಹಲ್ಲುಜ್ಜಲು ತಿಳಿಸಿ. ಅದರಲ್ಲೂ ವಿಶೇಷವಾಗಿ ಆಹಾರ ಸೇವನೆಯ ಬಳಿಕ ಬಾಯಿ ಸ್ವಚ್ಛತೆ ಅತ್ಯಗತ್ಯ.

ಮಗುವಿಗೆ ಚಿಕ್ಕ ವಯಸ್ಸಿನಿಂದಲೇ ಬ್ರಶ್‌ ಮಾಡಲು ಹಾಗೂ ಬಾಯಿ ಮುಕ್ಕಳಿಸುವ ಅಭ್ಯಾಸ ರೂಢಿಸಿ.

ಟಂಗ್‌ ಕ್ಲೀನರ್‌ನಿಂದ ನಾಲಿಗೆ ಸ್ವಚ್ಛಗೊಳಿಸುವುದನ್ನು ಕಲಿಸಿ.

ಮಗುವಿನ ಹಲ್ಲುಗಳ ಪರೀಕ್ಷೆಯನ್ನು ನಿಯಮಿತವಾಗಿ ಮಾಡಿಸಿ.

ದೈಹಿಕ ನೈರ್ಮಲ್ಯ

ಮಗುವಿಗೆ ನಿತ್ಯ ಸ್ನಾನ ಮಾಡುವ ಅಭ್ಯಾಸ ರೂಢಿಸಿ. ದಿನ ಸ್ನಾನ ಮಾಡುವುದರಿಂದ ದೇಹವಂತೂ ಸ್ವಚ್ಛವಿರುತ್ತದೆ. ಜೊತೆಗೆ ಮೃತ ತ್ವಚೆಯೂ ಹೊರಟುಹೋಗುತ್ತದೆ.

ಕೈ ಕಾಲುಗಳು, ಉಗುರುಗಳು, ಕಂಕುಳ ಭಾಗ, ಹೊಕ್ಕಳು ಭಾಗ, ಮೊಣಕಾಲು ಮುಂತಾದವುಗಳನ್ನು ಚೆನ್ನಾಗಿ ಸ್ವಚ್ಛಗೊಳಿಸಿ.

ಅಂಡರ್‌ವೇರ್‌ನ್ನು ದಿನ ಬದಲಿಸಿ ಹಾಗೂ ಸ್ನಾನದ ಬಳಿಕ ಸ್ವಚ್ಛ ಬಟ್ಟೆ ಧರಿಸುವಂತೆ ಮಾಡಿ.

ಮಕ್ಕಳಿಗೆ ವಾರದಲ್ಲಿ 2 ಸಲ ಕೂದಲನ್ನು ಶ್ಯಾಂಪೂವಿನಿಂದ ಸ್ವಚ್ಛಗೊಳಿಸುವ ಅಭ್ಯಾಸ ರೂಢಿಸಿ. ಇದರಿಂದ ಕೂದಲಿನ ಜಿಡ್ಡುತನ ಹಾಗೂ ಕೊಳೆ ನಿವಾರಣೆಯಾಗುತ್ತದೆ ಎಂಬುದು ಅವರಿಗೆ ಗೊತ್ತಾಗಲಿ.

ಕೈಗಳ ನೈರ್ಮಲ್ಯ

ಮಕ್ಕಳಿಗೆ ಕೈ ತೊಳೆಯುವ ಅಭ್ಯಾಸ ರೂಢಿಸಿ. ಕೈಗಳನ್ನು ತೊಳೆಯುವುದರಿಂದ ನಾವು ರೋಗಾಣುಗಳಿಂದ ದೂರ ಇರಬಹುದು, ಅನಾರೋಗ್ಯ ಪೀಡಿತರಾಗುವುದನ್ನು ತಪ್ಪಿಸಬಹುದು ಎಂಬುದನ್ನು ಅವರಿಗೆ ಮನವರಿಕೆ ಮಾಡಿಕೊಡಿ.

ಊಟ ಮಾಡಿದ ಬಳಿಕ, ಕೆಮ್ಮಿದ ಬಳಿಕ, ಸೀನಿದ ಬಳಿಕ, ಆಟ ಆಡಿದ ಬಳಿಕ, ಮೂತ್ರ ವಿಸರ್ಜನೆ ಬಳಿಕ ತಕ್ಷಣವೇ ಕೈಯನ್ನು  ಚೆನ್ನಾಗಿ ಸ್ವಚ್ಛಗೊಳಿಸಲು ತಿಳಿಸಿ.

ಕೈ ತೊಳೆಯಲು ಸೋಪ್‌, ಹ್ಯಾಂಡ್‌ವಾಶ್‌ ಹಾಗೂ ನೀರನ್ನು ಸರಿಯಾಗಿ ಬಳಸಲು ಕಲಿಸಿ

ಕಾಲುಗಳ ನೈರ್ಮಲ್ಯ

ಕಾಲುಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ತುಂಬಾ ಅತ್ಯಗತ್ಯ ಎಂಬುದು ಮಕ್ಕಳಿಗೆ ಗೊತ್ತಿರಬೇಕು. ಕೊಳಕಾದ ಕಾಲುಗಳಿಂದ ಕೇವಲ ದುರ್ಗಂಧ ಅಷ್ಟೇ ಪಸರಿಸದು, ಕೆಲವು ಸಾಂಕ್ರಾಮಿಕ ರೋಗಗಳು ಕೂಡ ಬರುತ್ತವೆ.

ಮಕ್ಕಳಿಗೆ ದಿನಕ್ಕೆರಡು ಸಲ ಕಾಲುಗಳನ್ನು ಸ್ವಚ್ಛಗೊಳಿಸಲು ರೂಢಿ ಮಾಡಿಸಿ. ಬೆರಳುಗಳ ಸಂಧಿಯನ್ನು ಚೆನ್ನಾಗಿ ಸ್ವಚ್ಛಗೊಳಿಸಿ, ಒರೆಸಬೇಕು. ಅಲ್ಲಿ ಒದ್ದೆ ಹಾಗೆಯೇ ಇದ್ದರೆ ಫಂಗಸ್‌ ಉಂಟಾಗುವ ಸಾಧ್ಯತೆ ಇರುತ್ತದೆ.

ಟಾಯ್ಲೆಟ್‌ ಹೈಜೀನ್‌

ಮಕ್ಕಳಿಗೆ ಶೌಚದ ಬಳಿಕ ಸರಿಯಾಗಿ ಸ್ವಚ್ಛಗೊಳಿಸಲು  ಹೇಳಬೇಕು.

ಟಾಯ್ಲೆಟ್‌ಗೆ ಹೋಗಿ ಬಂದ ಬಳಿಕ ಫ್ಲಶ್‌ ಮಾಡುವ ಬಗೆಗೂ ಮಕ್ಕಳಿಗೆ ತಿಳಿಸಿ ಹೇಳಿ.

ಟಾಯ್ಲೆಟ್‌ನಿಂದ ಹೊರ ಬಂದ ಬಳಿಕ ಕೈಗಳನ್ನು ಚೆನ್ನಾಗಿ ಸ್ವಚ್ಛಗೊಳಿಸಲು ತಿಳಿಸಿ.

ಉಗುರುಗಳ ಸ್ವಚ್ಛತೆ

ಉಗುರುಗಳನ್ನು ಸ್ವಚ್ಛವಾಗಿಟ್ಟುಕೊಳ್ಳಲು ಮಕ್ಕಳಿಗೆ ಕಲಿಸಿ. ಕೊಳಕಾಗಿರುವ ಉಗುರುಗಳಿಂದ ರೋಗಾಣುಗಳು ಉತ್ಪತ್ತಿಯಾಗುತ್ತವೆ. ಅದರಿಂದ ನಾವು ರೋಗಪೀಡಿತರಾಗುತ್ತೇವೆ.

ಮಕ್ಕಳಿಗೆ ಉಗುರು ಕಚ್ಚುವ ಅಭ್ಯಾಸ ಇದ್ದರೆ ಅದನ್ನು ಬಿಡಿಸಲು ಪ್ರಯತ್ನಿಸಿ. ಉಗುರುಗಳಲ್ಲಿರುವ ಕೊಳೆ ಹಾಗೂ ರೋಗಾಣುಗಳು ಹೊಟ್ಟೆಗೆ ಪ್ರವೇಶಿಸಿ ನಮ್ಮನ್ನು ರೋಗಪೀಡಿತರಾಗಿಸುತ್ತವೆ ಎಂಬುದನ್ನು ತಿಳಿಹೇಳಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ