ಹೆಂಡತಿ ಉದ್ಯೋಗಸ್ಥೆ ಹಾಗೂ ಗಂಡ ನಿರುದ್ಯೋಗಿ ಇಂತಹ ಉದಾಹರಣೆಗಳು ಮೊದಲು ಅಪರೂಪಕ್ಕೆಂಬಂತೆ ಕಂಡುಬರುತ್ತಿದ್ದವು. ಆದರೆ ಕಳೆದ 10-12 ವರ್ಷಗಳಲ್ಲಿ ಇಂತಹ ಪ್ರಕರಣಗಳ ಸಂಖ್ಯೆ ಹೆಚ್ಚಿದೆ. ಇಂತಹ ಸಂದರ್ಭದಲ್ಲಿ ಪರಸ್ಪರ ಹೊಂದಾಣಿಕೆ ಎನ್ನುವುದು ಕಷ್ಟವಾಗುತ್ತದೆ. ಹೀಗಾಗಿ ಗಳಿಸುವ ಸೊಸೆಯನ್ನು ಗೌರವಿಸುವ ಹಾಗೂ ಆಕೆಯ ಜೊತೆ ಹೊಂದಾಣಿಕೆ ಮಾಡಿಕೊಳ್ಳಲು ಆರಂಭಿಸಬೇಕು. ಇದು ಇಂದಿನ ಅನಿವಾರ್ಯತೆ. ಗಂಡ ಕೂಡ ಹೆಂಡತಿಯೊಂದಿಗೆ ಹೊಂದಾಣಿಕೆಯಿಂದ ಹೋಗಬೇಕು. ಆಗಲೇ ಕುಟುಂಬದ ಗಾಡಿ ಸಹಜವಾಗಿ ಚಲಿಸುತ್ತದೆ.

ಧಾರವಾಡದ ಸ್ನೇಹಾಳ ಮದುವೆ ಅವಳ ಸಹಪಾಠಿ ಚಂದ್ರಕಾಂತ್‌ ಜೊತೆ ಆಯಿತು. ಮದುವೆಯ ಸಮಯದಿಂದಲೇ ಇಬ್ಬರೂ ಉದ್ಯೋಗಕ್ಕಾಗಿ ಹಲವು ಕಡೆ ಅರ್ಜಿ ಹಾಕುತ್ತಿದ್ದರು. ಪರೀಕ್ಷೆ ಬರೆಯುತ್ತಿದ್ದರು. ಇಂಟರ್‌ವ್ಯೂಗೆ ಹೋಗುತ್ತಿದ್ದರು. ಆದರೆ ಇಲ್ಲೆಲ್ಲ ಹೆಚ್ಚು ಮಿಂಚುತ್ತಿದ್ದದ್ದು ಸ್ನೇಹಾ. ಚಂದ್ರಕಾಂತ್‌ ಮಾತ್ರ ಯಾವುದರಲ್ಲೂ ಹೇಳಿಕೊಳ್ಳುವಂತಹ ಸಾಧನೆ ತೋರಿಸುತ್ತಿರಲಿಲ್ಲ. ಸ್ನೇಹಾ ಕೊನೆಗೊಮ್ಮೆ ಒಂದು ದೊಡ್ಡ ಹುದ್ದೆಗೆ ಆಯ್ಕೆಯಾದಳು. ಚಂದ್ರಕಾಂತ್‌ ಆ ಬಳಿಕ ಅನೇಕ ಪರೀಕ್ಷೆಗೆ ಕುಳಿತ. ಆದರೆ ಒಂದರಲ್ಲಿಯೂ ಪಾಸಾಗಲಿಲ್ಲ. ಹೀಗಾಗಿ ಅವನು ಅದರ ಉಸಾಬರಿ ಬಿಟ್ಟು ವ್ಯಾಪಾರ ಶುರು ಮಾಡಿದ.

ಮದುವೆಯಾದ ಕೆಲ ವರ್ಷಗಳ ತನಕ ಇಬ್ಬರಲ್ಲೂ ಹೊಂದಾಣಿಕೆ ಇತ್ತು. ಆದರೆ ಬಳಿಕ ಇಬ್ಬರಲ್ಲೂ ಕಲಹ ಶುರುವಾಯಿತು. ಸ್ನೇಹಾಳಿಗೆ ಸಮಾಜದಲ್ಲಿ ಸಿಗುತ್ತಿದ್ದ ಗೌರವ, ಪ್ರತಿಷ್ಠೆ ಚಂದ್ರಕಾಂತನಿಗೆ ಇರುಸು ಮುರುಸು ಉಂಟು ಮಾಡಿತು. ಅವನು ಕೀಳರಿಮೆಗೆ ತುತ್ತಾದ. ಕ್ರಮೇಣ ಜಗಳ ದಿನದಿನ ನಡೆಯತೊಡಗಿತು. 4 ವರ್ಷದ ಅವರ ವೈವಾಹಿಕ ಜೀವನ ವಿಚ್ಛೇದನದಲ್ಲಿ ಕೊನೆಗೊಂಡಿತು.

ಕಳೆದ 10 ವರ್ಷಗಳ ಬದಲಾವಣೆಯನ್ನು ಗಮನಿಸಿದರೆ ತಿಳಿದುಬರುವ ಸಂಗತಿಯೆಂದರೆ, ಹುಡುಗರಿಗಿಂತ ಹೆಚ್ಚಾಗಿ ಹುಡುಗಿಯರೇ ಒಳ್ಳೆಯ ಶೈಕ್ಷಣಿಕ ಸಾಧನೆ ತೋರಿಸಿ, ಉದ್ಯೋಗದ ಮಾರುಕಟ್ಟೆಯಲ್ಲೂ ಅವರೇ ಮುಂಚೂಣಿಯಲ್ಲಿದ್ದಾರೆ.

ಮೊದಲು ಮದುವೆಯ ಬಳಿಕ ಹುಡುಗಿಗೆ ಉದ್ಯೋಗ ಬಿಟ್ಟು ಬಿಡಲು ಹೇಳಲಾಗುತ್ತಿತ್ತು. ಸರ್ಕಾರಿ ನೌಕರಿಯಲ್ಲಿ ಒಳ್ಳೆಯ ಸೌಲಭ್ಯಗಳು ದೊರಕುತ್ತಿರುವುದರಿಂದಾಗಿ ಈಗ ಯಾವುದೇ ಯುವತಿಯರು ಸರ್ಕಾರಿ ನೌಕರಿ ಬಿಟ್ಟುಕೊಡಲು ಸಿದ್ಧರಿಲ್ಲ. ಹೀಗಾಗಿ ಅಂತಹ ಪ್ರಕರಣಗಳಲ್ಲಿ ಅಷ್ಟಿಷ್ಟು ಒತ್ತಡದ ಸ್ಥಿತಿ ಉಂಟಾಗುತ್ತದೆ. ಹೆಂಡತಿ ಒಳ್ಳೆಯ ನೌಕರಿಯಲ್ಲಿದ್ದು, ಗಂಡ ಸಾಧಾರಣ ಉದ್ಯೋಗದಲ್ಲಿದ್ದರೆ ಅವನ ಅಭಿಮಾನಕ್ಕೆ ಪೆಟ್ಟು ಬೀಳುತ್ತದೆ.

ಸಾಮಾಜಿಕ ಬದಲಾವಣೆಗಳು

ಮೊದಲು ಬಹಳಷ್ಟು ಕಡಿಮೆ ಪ್ರಕರಣಗಳಲ್ಲಿ ಮದುವೆಯಾದ ಬಳಿಕ ಹುಡುಗಿಯರು ನೌಕರಿಯಲ್ಲಿ ಮುಂದುವರಿಯುತ್ತಿದ್ದರೆ, ಈಗ ಬಹಳ ಕಡಿಮೆ ಪ್ರಕರಣಗಳಲ್ಲಿ ಹುಡುಗಿಯರು ನೌಕರಿ ತೊರೆಯುತ್ತಾರೆ. ಇದರ ಎಲ್ಲಕ್ಕೂ ಮುಖ್ಯ ಕಾರಣವೆಂದರೆ, ಜನರ ಸಾಮಾಜಿಕ ಯೋಚನೆಯಲ್ಲಾದ ಬದಲಾವಣೆಯಾಗಿದೆ. ಈಗ ಮದುವೆಯಾದ ಬಳಿಕ ಮಹಿಳೆ ಕೆಲಸ ಮಾಡಬಾರದು ಎಂದು ಯಾರೂ ಯಾವುದೇ ಒತ್ತಡ ಹೇರುವ ಸಂದರ್ಭ ಉದ್ಭವಿಸುವುದಿಲ್ಲ.

ನಗರಗಳಲ್ಲಿ ವಾಸ, ಮಕ್ಕಳಿಗೆ ಓದಿಸುವುದು ಹಾಗೂ ಸಾಮಾಜಿಕ ರೀತಿನೀತಿಯ ಕಾರಣದಿಂದಾಗಿ ಆರ್ಥಿಕ ಹೊಂದಾಣಿಕೆ ಎನ್ನುವುದು ಕಷ್ಟಕರವಾಗುತ್ತ ಸಾಗಿದೆ. ಹೀಗಾಗಿ ಗಂಡನಷ್ಟೆ ಅಲ್ಲ, ಗಂಡನ ಕುಟುಂಬದವರು ಕೂಡ ಹೆಂಡತಿ ಕೂಡ ಯಾವುದಾದರೊಂದು ಉದ್ಯೋಗ ಮಾಡಬೇಕೆಂದು ಬಯಸುತ್ತಾರೆ. ಕೇವಲ ನೌಕರಿಯಲ್ಲಷ್ಟೇ ಅಲ್ಲ, ಬಿಸ್‌ನೆಸ್‌ನಲ್ಲೂ ಕೂಡ ಹೀಗಾಗುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ