ಅನಿತಾಳ ಅತ್ತೆ ಮಾವಂದಿರು ಜೊತೆ ಜೊತೆಗಿದ್ದೂ ಕೂಡ ಅಪರಿಚಿತರಂತೆ ವರ್ತಿಸುತ್ತಿದ್ದರು. ಅನಿತಾ ಅದೆಷ್ಟೋ ಸಲ ಅವರನ್ನು ಸಮಾಧಾನಗೊಳಿಸಲು ಪ್ರಯತ್ನಿಸಿದರೂ ಅವರು ತಮ್ಮ ಮುನಿಸನ್ನು ಬಿಟ್ಟುಕೊಟ್ಟಿರಲಿಲ್ಲ.

ಒಂದು ವಾಸ್ತವ ಸಂಗತಿಯೆಂದರೆ, ಅತ್ತೆ ಮಾವಂದಿರ ಜೊತೆ ಸೊಸೆಯ ಸಂಬಂಧ ಎಷ್ಟೇ ಆತ್ಮೀಯತೆಯಿಂದ ಕೂಡಿದ್ದರೂ ಒಮ್ಮೊಮ್ಮೆ ಕಹಿ ಅನುಭವವನ್ನು ನೀಡುತ್ತದೆ. ಕುಟುಂಬದ ಅತ್ಯಂತ ಗಟ್ಟಿ ಕೊಂಡಿಗಳಂತಿರುವ ಅತ್ತೆ ಮಾವಂದಿರು ಸಣ್ಣಪುಟ್ಟ ವಿಷಯಗಳಿಗೆ ಸೊಸೆಯ ಬಗ್ಗೆ ಮುನಿಸಿಕೊಳ್ಳುತ್ತಾರೆ.

ಇಂತಹ ಸ್ಥಿತಿಯಲ್ಲಿ ನಿಮಗೆ ಸಂಬಂಧಗಳ ನಡುವೆ ಜಮೆಗೊಂಡಿರುವ ಮಂಜುಗಡ್ಡೆಯನ್ನು ಹೇಗೆ ಕರಗಿಸಬೇಕು ಹಾಗೂ ಮನೆಯ ವಾತಾವರಣವನ್ನು ಹೇಗೆ ಮಧುರಗೊಳಿಸಬೇಕು ಎಂಬುದು ಗೊತ್ತಾಗುವುದಿಲ್ಲ. ಒಂದು ವಿಷಯ ನೆನಪಿನಲ್ಲಿಟ್ಟುಕೊಳ್ಳಿ, ಅತ್ತೆ ಮಾವಂದಿರನ್ನು ಮನ್ನಿಸಲು ಹಬ್ಬಕ್ಕಿಂತ ಒಳ್ಳೆಯ ವಾತಾವರಣ ಮತ್ತೊಂದಿರಲಾರದು. ನಾವಿಲ್ಲಿ ನಿಮಗೆ ಮುನಿಸಿಕೊಂಡ ಅತ್ತೆ ಮಾವಂದಿರನ್ನು ಮನ್ನಿಸುವ ಕೆಲವು ಉಪಾಯಗಳನ್ನು ತಿಳಿಸುತ್ತಿದ್ದೇವೆ, ಅದರೊಂದಿಗೆ ಅವರೊಂದಿಗಿನ ಟೈಮಿಂಗ್‌ ಅತ್ಯಂತ ಪರ್ಫೆಕ್ಟ್ ಆಗುತ್ತದೆ.

ಸಾಕಷ್ಟು ಸಮಯ ಕೊಡಿ

ಸಂಬಂಧಗಳನ್ನು ಬೆಸೆಯಲು ಸಾಕಷ್ಟು ಸಮಯ ಬೇಕಾಗುತ್ತದೆ. ಅತ್ತೆ ಮಾವಂದಿರ ಜೊತೆಗೆ ಸ್ವಲ್ಪ ಹೊತ್ತು ಇದ್ದು ಅವರ ಜೊತೆ ಮಾತುಕತೆ ನಡೆಸಿದರೆ, ಅವರ ಮತ್ತು ನಿಮ್ಮ ನಡುವಿನ ಮುನಿಸು ಕೊನೆಗೊಳ್ಳುತ್ತದೆ. ನೀವು ಅವರೊಂದಿಗೆ ಸಮಯ ಕಳೆಯಲು ಆಧುನಿಕ ತಂತ್ರಜ್ಞಾನದ ನೆರವು ಪಡೆದುಕೊಳ್ಳಬಹುದು. ಅಂದರೆ ಅವರಿಗೆ ಲೇಟೆಸ್ಟ್ ಮೊಬೈಲ್ ‌ನಿರ್ವಹಣೆ ಮಾಡುವುದು ಹೇಗೆ ಎಂಬುದನ್ನು ತಿಳಿಸಿಕೊಡಬಹುದು. ಏಕೆಂದರೆ ಅವರು ಕಾಲಕ್ಕೆ ತಕ್ಕಂತೆ ಸ್ಮಾರ್ಟ್‌ ಆಗಲು ಅವಕಾಶ ಕೊಡಬಹುದು. ಅವರಿಗೆ ಇಷ್ಟವಾದಾಗ ನಿಮ್ಮೊಂದಿಗೆ ಮಾತನಾಡಲು ಇದರಿಂದ ಸಾಧ್ಯವಾಗುತ್ತದೆ.

ಅವರೊಂದಿಗೆ ನೀವು ಎಷ್ಟೆಷ್ಟು ಹೊತ್ತು ಸಮಯ ಕಳೆಯುತ್ತೀರೋ, ನಿಮ್ಮೊಂದಿಗಿನ ಬಂಧ ಸ್ಟ್ರಾಂಗ್‌ ಆಗುತ್ತದೆ. ಅವರೊಂದಿಗೆ ಸಮಯ ಕಳೆಯಲು ಅವರಿಗೆ ಇಷ್ಟವಾಗುವ ಟಿ.ವಿ. ಕಾರ್ಯಕ್ರಮಗಳನ್ನು ನೋಡಬಹುದು. ತೋಟದ ಕೆಲಸದಲ್ಲಿ ಮಗ್ನರಾಗಬಹುದು. ಅವರಲ್ಲಿರುವ ಕಲೆಯನ್ನು ಹೊರಹೊಮ್ಮಿಸಬಹುದು. ಪಾರ್ಕ್‌ಗೆ ಕರೆದುಕೊಂಡು ಹೋಗಬಹುದು. ನೀವು ಜಿಮ್ ಜಾಯಿನ್‌ಆಗಿದ್ದರೆ ಅವರಿಗೂ ಜಿಮ್ ಜಾಯಿನ್‌ ಆಗಲು ಪ್ರೇರೇಪಿಸಬಹುದು. ಏಕೆಂದರೆ ಅವರೂ ಫಿಟ್‌ ಆಗಿರುವುದು ಅತ್ಯವಶ್ಯ.

ಆಸಕ್ತಿ ಅನಾಸಕ್ತಿ ಗಮನಿಸಿ

ಮದುವೆಯಾದ ಬಳಿಕ ಹುಡುಗಿ ಗಂಡನ ಜೊತೆ ಜೊತೆಗೆ ಅತ್ತೆ ಮಾವನ ಆಸಕ್ತಿ ಅನಾಸಕ್ತಿಗಳ ಬಗೆಗೂ ಗಮನಿಸಬೇಕಾಗುತ್ತದೆ. ಅವರಿಗೆ ಸುತ್ತಾಡುವುದೇ ಇಷ್ಟವಾಗಿದ್ದರೆ, ಅವರನ್ನು ಫ್ಯಾಮಿಲಿ ಟ್ರಿಪ್‌ಗೆ ಕರೆದುಕೊಂಡು ಹೋಗಿ. ಅಂದಹಾಗೆ ಈ ತೆರನಾದ ಟ್ರಿಪ್‌ಗಳು ಸಂಬಂಧ ಸುಧಾರಣೆಯಲ್ಲಿ ಬಹಳ ನೆರವಾಗುತ್ತವೆ. ಹೊರಗಡೆ ಹೋದಾಗ ಅವರ ಊಟ ತಿಂಡಿಯ ಆಸಕ್ತಿ ಏನೆಂದು ಗುರುತಿಸಿ, ಅವರ ಮೆಚ್ಚಿನ ತಿಂಡಿಗಳನ್ನು ಕೊಡಿಸಿ ಅವರ ಪ್ರೀತಿಗೆ ಪಾತ್ರರಾಗಬಹುದು.

ವಿಶೇಷ ದಿನಗಳನ್ನು ವಿಶಿಷ್ಟವಾಗಿಸಿ

ಹುಟ್ಟುಹಬ್ಬ, ಮದುವೆ, ವಾರ್ಷಿಕೋತ್ಸವ, ಮದರ್ಸ್‌ ಡೇ, ಫಾದರ್ಸ್‌ ಡೇ ಮುಂತಾದ ವಿಶೇಷ ದಿನಗಳಂದು ಮನೆಯಲ್ಲಿರುವ ಅತ್ತೆ ಮಾವಂದಿರಿಗೆ ಏನಾದರೊಂದು ವಿಶೇಷ ಗಿಫ್ಟ್ ಕೊಟ್ಟು ಅವರಿಗೆ ಸ್ಪೆಷಲ್ ಫೀಲ್ ‌ಬರುವಂತೆ ಮಾಡಬಹುದು. ಅತ್ತೆ ಮಾವರನ್ನು ಶಾಪಿಂಗ್‌ಗೆ ಕರೆದುಕೊಂಡು ಹೋಗಬಹುದು. ಅವರು ಇಷ್ಟಪಡುವ ಬಟ್ಟೆಗಳು, ಅವರಿಗೆ ಹಿಡಿಸುವ ಸಲಕರಣೆಗಳನ್ನು ಕೊಡಿಸಿ. ಅವರು ಇಷ್ಟಪಟ್ಟರೆ ಅವರನ್ನು ಯೂನಿಸೆಕ್ಸ್ ಸಲೂನ್‌ಗೆ ಕರೆದುಕೊಂಡು ಹೋಗಿ ಹೇರ್‌ ಕಟ್‌, ಸ್ಪಾ ಮತ್ತು ಮಸಾಜ್‌ ಕೂಡ ಮಾಡಿಸಬಹುದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ