ಭಾರತೀಯ ಹಬ್ಬಗಳೇ ಆಗಿರಬಹುದು ಅಥವಾ ಮದುವೆಗಳು ಇಲ್ಲೆಲ್ಲ ವಿಧಿವಿಧಾನ, ಸಂಪ್ರದಾಯಗಳನ್ನು ಅಚ್ಚುಕಟ್ಟಾಗಿ ನೆರವೇರಿಸಲಾಗುತ್ತದೆ. ಅತಿಥಿಗಳು ಬರುವುದು ನಮಗೆ ಖುಷಿ ಕೊಡುತ್ತದೆ. ಆದರೆ ಅತಿಥಿಗಳಿಗೆ ಊಟ, ತಿಂಡಿ ಹಾಗೂ ವಾಸದ ವ್ಯವಸ್ಥೆಯನ್ನು ಸಮರ್ಪಕವಾಗಿ ಮಾಡಬೇಕು. ಅವರು ವಾಪಸ್‌ ಹೋದ ಬಳಿಕ ನಿಮ್ಮ ಆತಿಥ್ಯ ಬಹಳ ಚೆನ್ನಾಗಿತ್ತು ಎಂದು ಹೇಳಬೇಕು. ಅತಿಥಿಗಳಿಗೆ ನಿಮ್ಮ ಆತಿಥ್ಯ ಹೇಗಿರಬೇಕು ಎಂಬುದಕ್ಕೆ ಇಲ್ಲಿವೆ ಕೆಲವು ಟಿಪ್ಸ್ :

ವಾಸದ ವ್ಯವಸ್ಥೆ

ಎಲ್ಲಕ್ಕೂ ಮುಂಚೆ ನೀವು ಬರಲಿರುವ ಅತಿಥಿಗಳ ಒಂದು ಪಟ್ಟಿ ಸಿದ್ಧಪಡಿಸಿ. ಬರುವ ಅತಿಥಿಗಳಲ್ಲಿ ಎಷ್ಟು ಜನ ಹಿರಿಯ ನಾಗರಿಕರು ಹಾಗೂ ಎಷ್ಟು ಜನ ಯಂಗ್‌ಸ್ಟರ್‌ ಆಗಿದ್ದಾರೆಂದು ತಿಳಿದುಕೊಳ್ಳಿ. ಹಿರಿಯ ವಯಸ್ಸಿನವರಿಗಾಗಿ ಮಲಗಲು ಬೆಡ್‌ ಹಾಗೂ ಕುಳಿತುಕೊಳ್ಳಲು ಕುರ್ಚಿ ವ್ಯವಸ್ಥೆ ಆಗಬೇಕು. ಅವರಿಗೆ ತಮ್ಮ ಸಾಮಾನುಗಳನ್ನು ಇಡಲು ಒಂದು ಪುಟ್ಟ ಟೇಬಲ್ ಕೂಡ ಇರಬೇಕು. ಅವರಿಗೆ ಪ್ರತಿಯೊಂದು ಸಾಮಾನು ತೆಗೆದುಕೊಳ್ಳಲು ಬಗ್ಗುವಂತಾಗಬಾರದು. ಮಲಗುವ ವ್ಯವಸ್ಥೆ ಮೇಲ್ಮಹಡಿಯಲ್ಲಿ ಇದ್ದು ಲಿಫ್ಟ್ ವ್ಯವಸ್ಥೆ ಇಲ್ಲದಿದ್ದರೆ, ಹಿರಿಯರಿಗೆ ಹತ್ತುವುದು, ಇಳಿಯುವುದು ಕಷ್ಟವಾಗುತ್ತದೆ. ಹಾಗಾಗಿ ಅವರಿಗೆ ನೆಲಮಹಡಿಯಲ್ಲಿಯೇ ವ್ಯವಸ್ಥೆ ಮಾಡಿ. ಟಾಯ್ಲೆಟ್‌ ಕೂಡ ಹತ್ತಿರ ಇರಬೇಕು.

ಬೇಸಿಗೆಯ ಸೀಸನ್‌ ಆಗಿದ್ದರೆ, ಮನೆಯಲ್ಲಿ ಕೂಲರ್‌ ಇರದಿದ್ದರೆ, ಬಾಡಿಗೆಗಾದರೂ ಏರ್‌ಕಂಡೀಶನರ್‌ ಅಥವಾ ಕೂಲರ್‌ ತಂದು ಅವರಿಗೆ ಅನುಕೂಲ ಕಲ್ಪಿಸಬೇಕು.

ಊಟ ತಿಂಡಿಯ ವ್ಯವಸ್ಥೆ

ಮನೆಗೆ ಬಂದವರ ವ್ಯವಸ್ಥೆ ಚಹಾ/ಕಾಫಿಯಿಂದ ಆರಂಭವಾಗುತ್ತದೆ. ಹೀಗಾಗಿ ಶುಗರ್‌ ಅಥವಾ ಶುಗರ್‌ ಲೆಸ್‌ ಚಹಾ/ಕಾಫಿ ಕೊಡಿ. ಜೊತೆಗೆ ಒಂದಷ್ಟು ಬಿಸ್ಕತ್ತುಗಳು ಕೂಡ ಇರಲಿ. ಮನೆಗೆ ಬಂದವರ ಮಕ್ಕಳು ಚಿಕ್ಕವರಿದ್ದರೆ, ಅವು ಹಾಲು ಕುಡಿಯುತ್ತಿದ್ದರೆ, ಅವರಿಗೆ ಬಾದಾಮಿ ಹಾಲು ಮಾಡಿಕೊಡಿ. ಇವೆಲ್ಲದರ ಜೊತೆಗೆ ಬಾದಾಮಿ ಪಾನಕ, ಬಿಸಿ ನೀರಿನ ವ್ಯವಸ್ಥೆ ಕೂಡ ಆಗಬೇಕು. ಸ್ನ್ಯಾಕ್ಸ್ ನಲ್ಲಿ ಡೀಪ್‌ ಫ್ರೈ, ಕಚೋರಿ, ಉದ್ದಿನ ವಡೆ ಮುಂತಾದವು ಇದ್ದರೆ ಅವುಗಳ ಜೊತೆ ಅವಲಕ್ಕಿ, ಉಪ್ಪಿಟ್ಟು, ಸ್ಯಾಂಡ್ವಿಚ್‌ಇವುಗಳಲ್ಲಿ ಯಾವುದಾದರೊಂದರ ವ್ಯವಸ್ಥೆ ಮಾಡಿ. ಎಣ್ಣೆ ಪದಾರ್ಥ ಇಷ್ಟಪಡದಿದ್ದರೆ ಅವರು ಅವಲಕ್ಕಿ ಉಪ್ಪಿಟ್ಟು ಸೇವಿಸಬಹುದು.

ಅದೇ ರೀತಿ ಮಧ್ಯಾಹ್ನ ಊಟ ಹಾಗೂ ರಾತ್ರಿ ಊಟಕ್ಕೂ ವ್ಯವಸ್ಥೆ ಮಾಡಿ.

ಅಡುಗೆ ಹೆಚ್ಚು ಮಸಾಲೆಯುಕ್ತ ಆಗದಂತೆ ನೋಡಿಕೊಳ್ಳಿ. ನಿಮ್ಮ ಕುಟುಂಬದ ಅತಿಥಿಗಳ ಬಗ್ಗೆ ತಿಳಿದಿರುವ ನೀವು ಅವರ ಆಸಕ್ತಿಯ ಒಂದೆರಡು ತರಕಾರಿಗಳನ್ನು ಹೆಚ್ಚಿಗೆ ಮಾಡಿಡಿ. ಬೇಯಿಸಿದ ಆಲೂಗೆಡ್ಡೆ, ಮೊಸರು, ಸಲಾಡ್‌ ಫ್ರಿಜ್‌ನಲ್ಲಿ ಅವಶ್ಯವಾಗಿ ಕಾಯ್ದಿಡಿ. ಮೊಸರು ಹೆಚ್ಚು ಹುಳಿಯಾಗಿರಬಾರದು. ಮಜ್ಜಿಗೆ, ಎಳನೀರಿನ ವ್ಯವಸ್ಥೆ ಕೂಡ ಇಟ್ಟುಕೊಳ್ಳಿ.

ಯಾರಾದರೂ ಅತಿಥಿಗಳು ಬರುತ್ತಿದ್ದಂತೆ ನೀರಿನ ಜೊತೆ ಸ್ವಲ್ಪ ಸಿಹಿ ತಿಂಡಿ ಕೂಡ ಕೊಡಿ. ಎಲ್ಲರನ್ನೂ ಭೇಟಿಯಾಗಿ ಹಾಗೂ ಪರಸ್ಪರರನ್ನು ಪರಿಚಯ ಮಾಡಿಕೊಡಿ. ಏಕೆಂದರೆ ಅತಿಥಿಗಳು ಪರಸ್ಪರ ಬೆರೆಯಬೇಕು.

ಸ್ಪರ್ಧೆಯ ಏರ್ಪಾಡು

ಹಬ್ಬ ಅಥವಾ ಮದುವೆ ಸಮಾರಂಭದಲ್ಲಿ ಕೇವಲ ಮಾತುಕತೆ ಅಷ್ಟೇ ನಡೆಯಬಾರದು. ಹಬ್ಬ ಅಥವಾ ಮದುವೆಯನ್ನು ಸ್ಮರಣಾರ್ಹವಾಗಿಸಲು ಯುವ ಜನತೆ ಹಾಗೂ ಹಿರಿಯ ನಾಗರಿಕರ ನಡುವೆ ಅಂತ್ಯಾಕ್ಷರಿ ಹಾಗೂ ಇತರೆ ಸ್ಪರ್ಧೆಗಳನ್ನು ಏರ್ಪಡಿಸಿ. ಪುರುಷರಿಗೆ ಸೀರೆ ಯಾರು ಬೇಗ ಮಡಿಸುತ್ತಾರೆ ಎಂಬಂತಹ ಸ್ಪರ್ಧೆ ಹಾಗೂ ಮಹಿಳೆಯರಿಗೆ ಯಾರು ಸೀರೆ ಬೇಗ ಉಡುತ್ತಾರೆ ಎಂಬಂತಹ ಸ್ಪರ್ಧೆ ನಡೆಸಬಹುದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ