ಸ್ನೇಹಾಳ ಮದುವೆಯಾದಾಗಿನಿಂದ ಅವಳು ತನ್ನ ಪತಿಯನ್ನು ಯಾರ ಜೊತೆಗೂ ಹೋಗಲು ಅವಕಾಶ ಕೊಡುವುದಿಲ್ಲ. ಪತಿ ಸತೀಶ್‌ ಯಾರ ಜೊತೆಗಾದರೂ ಮಾತನಾಡಿದರೆ ಸಾಕು, ಅವಳಿಗೆ ಬೇಸರವಾಗುತ್ತದೆ. ನನ್ನ ಮೇಲೆ ನಿನಗೆ ಈ ರೀತಿಯ ಸಂದೇಹ ಏಕೆ ಬರುತ್ತದೆ ಎಂದು ಕೇಳಿದರೆ, ``ನಾನು ನಿಮ್ಮನ್ನು ಅತಿಯಾಗಿ ಪ್ರೀತಿಸುತ್ತೇನೆ. ಆ ಕಾರಣದಿಂದ ನೀವು ಯಾರ ಜೊತೆಗೆ ಮಾತನಾಡಿದರೂ ನನಗೆ ಸಹಿಸಿಕೊಳ್ಳೋಕೆ ಆಗುವುದಿಲ್ಲ,''  ಎಂಬ ಉತ್ತರ ಬರುತ್ತದೆ. ಕೆಲವು ದಿನಗಳ ಬಳಿಕ ಪರಿಸ್ಥಿತಿ ಹೇಗಾಗಿ ಬಿಟ್ಟಿತೆಂದರೆ, ಪ್ರತಿ ಅರ್ಧರ್ಧ ಗಂಟೆಗೊಮ್ಮೆ ಪತಿಗೆ ಏನು ಮಾಡುತ್ತಿದ್ದೀರಿ ಎಂದು ಕೇಳುತ್ತಾಳೆ. ಮತ್ತೊಮ್ಮೆ ಬರುವಾಗ ನನಗೆ ಏನಾದರೂ ತೆಗೆದುಕೊಂಡು ಬನ್ನಿ ಎನ್ನುತ್ತಾಳೆ. ಹಾಗೊಮ್ಮೆ ಪತಿ ಹೇಳಿದ್ದನ್ನು ತಂದರೆ ಅವನ ಬಗ್ಗೆ ಸಂದೇಹ. ಇದನ್ನು ತರಲು ನಿಮ್ಮ ಜೊತೆಗೆ ಯಾರು ಬಂದಿದ್ದರು ಎಂದು ಕೇಳುತ್ತಾಳೆ. ಈಗಂತೂ ಅವನ ಬಗ್ಗೆ ಪತ್ತೇದಾರಿಕೆ ಮಾಡುವುದೇ ಅವಳ ಮುಖ್ಯ ಕೆಲಸ ಆಗಿಬಿಟ್ಟಿದೆ. ಈ ಕಾರಣದಿಂದಾಗಿ ಸತೀಶನ ಮನೆಯವರಿಗೆಲ್ಲ ನೆಮ್ಮದಿ ಭಂಗ ಆಗುತ್ತಿದೆ. ಈ ಕಾರಣದಿಂದ ಸತೀಶ್‌ ತನ್ನ ಕೆಲಸ ಸರಿಯಾಗಿ ಮಾಡಲು ಆಗುತ್ತಿಲ್ಲ. ಅನೇಕ ವರ್ಷಗಳಿಂದ ನಡೆಸಿಕೊಂಡು ಬಂದಿದ್ದ ವ್ಯಾಪಾರ ಈಗ ಕುಂಟುತ್ತ ನಡೆಯುತ್ತಿದೆ. ಕ್ರಮೇಣ ಅವನು ತನ್ನ ಗೆಳೆಯರಿಂದಲೂ ದೂರವಾಗುತ್ತ ಬಂದ. ಸ್ನೇಹಾಳಿಂದಾಗಿ ಅವನೀಗ ಮನೆಯಿಂದ ಹೊರಗೆ ಕುಟುಂಬದವರನ್ನು ಕೂಡ ಭೇಟಿ ಆಗುತ್ತಿಲ್ಲ.

ತನ್ನ ಪ್ರೀತಿಯನ್ನು ಕಾಪಾಡಿಕೊಳ್ಳಲು ಸ್ನೇಹಾಳ ಹುಚ್ಚು ವ್ಯಾಮೋಹದಿಂದ ಎರಡು ಕುಟುಂಬಗಳ ಜೀವನ ನರಕಮಯವಾಗಿ ಬಿಟ್ಟಿತು. ಕೊನೆಗೊಮ್ಮೆ ಸತೀಶ್‌ ಸ್ನೇಹಾಳಿಂದ ದೂರವಾಗಿಬಿಟ್ಟ. ಇದಕ್ಕಿಂತ ಬೇರೆ ಪರ್ಯಾಯ ಉಪಾಯವೇ ಅವನಿಗೆ ಹೊಳೆಯಲಿಲ್ಲ. ಅವಳ ಅದೆಂಥ ಪ್ರೀತಿ, ಹುಚ್ಚು ಹೊಳೆಯಲ್ಲಿ ಕೊಚ್ಚಿಹೋಗಲು ಕಾರಣವಾಯಿತು?

ಹೊಸ ಸಂಬಂಧಗಳ ಕಗ್ಗಂಟು

ಸಂಶೋಧನೆಗಳು ಹೇಳುವುದೇನೆಂದರೆ, ಇಬ್ಬರು ವ್ಯಕ್ತಿಗಳು ಹೊಸ ಸಂಬಂಧದಲ್ಲಿ ಬಂಧಿಗಳಾದಾಗ, ಆರಂಭದಲ್ಲಿ ಅವರಿಗೆ ಹೊಂದಾಣಿಕೆ ಮಾಡಿಕೊಳ್ಳುವುದು ಕಷ್ಟವಾಗುತ್ತದೆ. ಒಂದು ವೇಳೆ ಅವರ ಹೊಂದಾಣಿಕೆ ಕಷ್ಟವಾಗಿಬಿಟ್ಟರೆ ವಿಚ್ಛೇದನದ ಪರಿಸ್ಥಿತಿ ಕೂಡ ಉದ್ಭವಿಸಬಹುದು. ಆದರೆ ಅಷ್ಟೊಂದು ವರ್ಷ ಸಂಸಾರ ನಡೆಸಿ ಇಳಿ ವಯಸ್ಸಿನಲ್ಲಿ ವಿಚ್ಛೇದನ ಪಡೆಯುವುದು ನಿಜಕ್ಕೂ ಅಚ್ಚರಿ ಹಾಗೂ ಆಘಾತಕಾರಿ ಎನಿಸುತ್ತದೆ. ರಾಘವ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಉನ್ನತ ಸ್ಥಾನದಲ್ಲಿರುವ ವ್ಯಕ್ತಿ. ಎಲ್ಲರ ಜೊತೆ ಬೆರೆಯುವುದು ಅವನಿಗೆ ಖುಷಿ ಕೊಡುತ್ತದೆ. ಮನೆಯಲ್ಲಿ ಆತನ ಮದುವೆ ಮಾತುಕತೆಗಳು ಶುರುವಾದಾಗ ಮಂಜುಳಾ ಬಗ್ಗೆ ಅವನಿಗೆ ವಿಶೇಷ ಆಸಕ್ತಿ ಏನೂ ಇರಲಿಲ್ಲ. ಆದರೆ ಮನೆಯವರ ಒತ್ತಾಯಕ್ಕೆ ಮಣಿದು `ಹ್ಞೂಂ' ಎಂದು ಹೇಳಿದ. ಮನೆಯವರು ಅವನಿಗೆ ಒಪ್ಪುವಂತಹ ಸುಂದರ ಹುಡುಗಿಯನ್ನು ಆಯ್ಕೆ ಮಾಡಿದ್ದರು. ಮನೆಗೆಲಸದಲ್ಲೂ ಆಕೆ ನೆರವಾಗಬೇಕು ಎನ್ನುವುದು ಅವರ ಯೋಚನೆಯಾಗಿತ್ತು.

ಮಂಜುಳಾಗೆ ತಮ್ಮ ಬಂಧುಬಳಗದವರೊಂದಿಗೆ ಭೇಟಿ ಮಾಡುವುದು ಬಹಳ ಖುಷಿ ಕೊಡುತ್ತಿತ್ತು. ಆದರೆ ರಾಘವನಿಗೆ ಇದು ಇಷ್ಟ ಇರಲಿಲ್ಲ. ಬಳಿಕ ಅವಳು ರಾಘವನನ್ನು ಮಾತುಮಾತಿಗೆ ಟೀಕೆ ಮಾಡತೊಡಗಿದಳು. ಅವನು ಜೋರಾಗಿ ನಕ್ಕರೆ `ಇಷ್ಟೊಂದು ಗಲಾಟೆ ಮಾಡುವ ಅಗತ್ಯವಿದೆಯೇ?' ಎಂದು ಪ್ರಶ್ನಿಸತೊಡಗಿದಳು. ಯಾರಾದರೂ ಮಹಿಳೆಯ ಕಡೆ ನೋಡಿದರೆ ಅವಳನ್ನು ನೋಡಿ ಜೊಲ್ಲು ಸುರಿಸುತ್ತಿದ್ದೀರಾ ಎಂದು ಪ್ರಶ್ನಿಸುತ್ತಾಳೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ